Breaking News

ಗುಡೂರುsc ಗ್ರಾಮದ ಢಾಬಾಗಳಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ಕೊನೆ ಎಂದು? ಹಳ್ಳಿ ಹಳ್ಳಿಗಳಲ್ಲಿ ಮದ್ಯದ ಹೊಳೆ ,,,,,,,!

ಗುಡೂರು:
ಇಲಕಲ್ಲ ತಾಲೂಕಿನ ಗುಡೂರು sc ಗ್ರಾಮದ ಸುತ್ತ ಕೆಲೂರು, ಇಲಾಳ ಹಾಗೂ ಕಟಾಪೂರು ಕ್ರಾಸ್ ನಿಂದ ಭೀನಮಗಡ ಗುಡೂರು ಹಾಗೂ ಭೀಮನಗಡ/ ಕಟಾಪೂರ ಮಾರ್ಗದಲ್ಲಿ ಬರುವ ಡಾಭಾ ಹಾಗೂ ಖಾನಾವಳಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಜೋರಾಗಿ ನಡೆಯುತ್ತಿದೆ

ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಾದ ಅಧಿಕಾರಿಗಳೇ ಈ ಅಕ್ರಮ ಮಾರಾಟಕ್ಕೆ ಬೆಂಗಾವಲಾಗಿ ನಿಂತಿರುವುದು ಬೇಸರದ ಸಂಗತಿ, ಪ್ರತಿಯೊಬ್ಬರು ಬಹಳ ಸುಲಭವಾಗಿ ಈ ತರ ಒಂದು ಡಾಭಾ ಪ್ರಾರಂಭ ಮಾಡಿ ಅಲ್ಲಿ ಮಾಂಸಹಾರಿ ಮತ್ತು ಸಸ್ಯಹಾರಿ ಹೋಟೆಲ್ ಪ್ರಾರಂಭಮಾಡಿ ಕೆಲವರಿಗೆ ಪ್ರತಿ ವಾರ ಗಿಂಬಳ ಕೊಟ್ಟರೆ ಸಾಕು ಬಹಳ ಸುಲಭವಾಗಿ ಯಾರ ಮುಲಾಜು ಇಲ್ಲದೇ ಅಕ್ರಮ ಬಾರ್ & ರೆಸ್ಟೋರೆಂಟ್ ಪ್ರಾರಂಭ ಮಾಡಿ ಲಕ್ಷ ಲಕ್ಷ ಹಣ ಸಂಪಾದಿಸಬಹುದು ಎಂಬುದಕ್ಕೆ ಗುಡೂರಿನ ಸುತ್ತ ಇರುವ ಕೆಲವು ಅಕ್ರಮ ಖಾನಾವಳಿಗಳೇ ಉದಾಹರಣೆಯಾಗಿವೆ. ಚಿಕನಾಳ ವ್ಯಾಪ್ತಿಯಲ್ಲಿ ಬರುವ ನಿಲುಗಲ್ಲು ಕ್ರಾಸ್ ನಲ್ಲಿ ಅವ್ಯವತವಾಗಿ ಅಕ್ರಮ ಮದ್ಯ ಮಾರಾಟ ಹಾಗೂ ಅನಧಿಕೃತ ಹೋಟೆಲ್ ತಲೆ ಎತ್ತಿದ್ದು ಈ ಬಗ್ಗೆ ಮಾಲೀಕರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಾಮಾಜಿಕ ಹೋರಾಟಗಾರರು,ಪ್ರಜ್ಞಾವಂತ ನಾಗರಿಕರು ಪ್ರತಿಕ್ರಿಯೆ ನೀಡಿದ್ದಾರೆ. ಅಬಕಾರಿ ಇಲಾಖೆ ಹಾಗೂ ಪೋಲಿಸ್ ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸದಿದ್ದರೆ ಈ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವವಹಿಸು ಅಬಕಾರಿ ಅಧಿಕಾರಿ ಹಾಗೂ ಪೋಲಿಸ್ ಸಿಬ್ಬಂದಿಗಳ ಮೇಲೆ ಸೂಕ್ತ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಸಾಕ್ಷೆ ಸಮೇತ ವರದಿ ನೀಡಿ ಕ್ರಮ ಕೈಗೊಳ್ಳಲು ನಮ್ಮ ಪತ್ರಿಕೆ ಹೋರಾಟ ಮಾಡುತ್ತದೆ.

ಯಾಕೆಂದರೆ ಕಡ್ಡಾಯವಾಗಿ ೧೮ ವರ್ಷ, ಮೆಲ್ಪಟ್ಟ ಯುವಕರು ಮದ್ಯಪಾನ ಮಾಡಿ ಅವರ ಆರೋಗ್ಯ ಹಾಳಾದರೆ ಅದು ಅವರ ಕರ್ಮ ,ಇಲ್ಲಿನ ಡಾಭಾಗಳಲ್ಲಿ ವಯಸ್ಸಿನ ಮಿತಿ ಇಲ್ಲದವರು ಕೇವಲ 14 ರಿಂದ ೧೬/೧೭/ ರ ಆಸುಪಾಸಿನ ಯುವಕರು ಬಹಳ ಸುಲಭವಾಗಿ ಅಕ್ರಮ ಮಧ್ಯ ವ್ಯಸನಕ್ಕೆ ದಾಸರಾಗಿ ಹಾಳಾಗುತ್ತಿದ್ದಾರೆ. ಪ್ರತಿ ಹೋಟೆಲ್ಗಳು ಬಾರ್ ಗಳಾಗಿವೆ ಕಾರಣ ಕೇಳಿದರೆ ! ಉತ್ತರ ಇಲ್ಲ ಈ ಬಗ್ಗೆ ಅಧಿಕೃತ ಏನಾದರು ಅನುಮತಿ ಹೊಂದಿರುವಿರಾ? ಎಂದು ಕೇಳಿದರೆ ಉತ್ತರ ಇಲ್ಲ , ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ತಕ್ಷಣ ಈ ಬಗ್ಗೆ ಸೂಕ್ತ ತನಿಖೆ ಮಾಡಿ ಇದಕ್ಕೆ ಸಂಭಂದಿಸಿದ ಡಾಭಾ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲು ನಮ್ಮ ಪತ್ರಿಕೆ ಆಗ್ರಹಿಸುತ್ತದೆ‌ .ಇದಕ್ಕೆ ಏನಾದರೂ ಸಾಕ್ಷಿ ಹಾಗೂ ಅಕ್ರಮ ಮಧ್ಯದ ಬಗ್ಗೆ ದಾಖಲೆ ಬೇಕಾದರೆ ತನಿಖೆಗೆ ನಮ್ಮ ಪತ್ರಿಕೆ ಸದಾ ಸಹಕರಿಸುತ್ತದೆ. ಚಿಕನಾಳ ವ್ಯಾಪ್ತಿಯಲ್ಲಿ ಭರತ್ ಪೆಟ್ರೊಲಿಯಂ ಬಂಕ್ ಪಕ್ಕದಲ್ಲಿ ಫ್ಯಾಮಲಿ ರೆಸ್ಟೋರೆಂಟ್ ನಲ್ಲಿ ಇದೆ ಮಧ್ಯಪಾನ ವ್ಯಸನದಿಂದ ಒಂದು ಕೊಲೆ ಆಯಿತು,ಅದು ಇನ್ನೂ ತನಿಲೆ ಹಂತದಲ್ಲಿ ಇದೆ ಈಗ ಮತ್ತೆ ಅದೇ ಜಾಗದಲ್ಲಿ ಅಕ್ರಮ ಬಾರ್ ಪ್ರಾರಂಭವಾಗಿದೆ.

ಇದಕ್ಕೆ ಅಧಿಕಾರಿಗಳೆ ಸಾರ್ವಜನಿಕರಿಗೆ ಉತ್ತರ ನೀಡಬೇಕು, ಅಲ್ಲದೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ನಾಗರತ್ನ ಅವರು ಯಾವ ರೀತಿ ಅನುಮತಿ ನೀಡಿದ್ದಾರೆ ಎಂಬುದನ್ನು ಬಹಿರಂಗವಾಗಿ ಉತ್ತರ ನೀಡಲಿ ,ಈ ಬಗ್ಗೆ ಅಧಿಕಾರಿಗಳು ಒಂದು ಸಲ ತಾಲೂಕಿನ ಆಧ್ಯಾಂತಹ ಪ್ರತಿ ಹಳ್ಳಿಗಳಲ್ಲಿ ಇರುವ ಕಿರಾಣಿ ಸ್ಟೂರ್ ಹಾಗೂ ಹೋಟೆಲ್, ಪಾನ್ ಶಾಫ್ ಗಳಲ್ಲಿ ಮಧ್ಯ ದೊರೆಯುತ್ತಿದೆ, ಇದರಿಂದ ದೇಶ ಬೆಳಗಬೇಕಾದ ಯುವಶಕ್ತಿ ಮದ್ಯವೇಸನಿಗಳಾಗಿ ಸಣ್ನ ವಯಸ್ಸಿನಲ್ಲಿ ಕಿಡ್ಲಿ ಕಳೆದುಕೊಂಡು ಮರಣ ಹೊಂದಿರುವ ಪ್ರಕರಣ ನಮ್ಮ ಸುತ್ತ ಸಾಕಷ್ಟಿವೆ , ಸುಭದ್ರ ಸಮಾಜದ ಅಭಿವೃದ್ಧಿ, ಹಾಗೂ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಅಧಿಕಾರಿಗಳು ಏನ್ ಕ್ರಮ ಜರುಗಿಸುತ್ತಾರೆ ,,ಎಂಬುದನ್ನು ಕಾದು ನೋಡೊಣ , ಕ್ಷಣ ಕ್ಷಣದ ಸುದ್ದಿಗಾಗಿ ನಿಮ್ಮ ಮುಂದೆ BB NEWS ,,,,,,,,web

About vijay_shankar

Check Also

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.