Breaking News

ಗುಡೂರುsc ಗ್ರಾಮದ ಬಸ್ ನಿಲ್ದಾಣದಲ್ಲಿ ಅಕ್ರಮ ತಳ್ಳು ಬಂಡಿಗಳ ಹಾವಳಿಯಿಂದ ಬೇಸತ್ತ ಜನತೆ, ವಾಹನ ಸಂಚಾರಕ್ಕೆ ಅಡೆತಡೆ,,,,!

ಇದು ಗುಡೂರು ಗ್ರಾಮದ ಇಂದಿನ ವಾಸ್ತವಿಕ ಸ್ಥಿತಿ ಇನ್ನೂ ಶುಕ್ರವಾರ, ಸಂತೆ ಒಂದು ಬೈಕ್ ಕೂಡ ಸರಳವಾಗಿ ಈ ರಸ್ತೆ ದಾಟಲು ಆಗಲ್ಲ

ಅಮೀನಗಡ :

ಗುಡೂರು sc :
ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಗುಡೂರು sc ಗ್ರಾಮದಲ್ಲಿ ಬಿದಿ ಬದಿ ವ್ಯಾಪಾರಿಗಳ ಹಣ್ಣು,ಚಹಾ, ಪಾನ್ ,ಹಾಗೂ ಇತರೆ ವ್ಯಾಪಾರಕ್ಕೆ ನಿಲ್ಲಿಸಿದ ಅಕ್ರಮ ತಳ್ಳು ಬಂಡಿಗಳ ಹಾವಳಿಯಿಂದ ಗುಡೂರು ಗ್ರಾಮದಲ್ಲಿ ಸಂಚರಿಸವ ಸರಕಾರಿ ಬಸ್ ಹಾಗೂ ಖಾಸಗಿ ವಾಹನಗಳ ಓಡಾಟಕ್ಕೆ ದೊಡ್ಡ ಸವಾಲಿನ ಕೆಲಸವಾಗಿದೆ, ನಿತ್ಯ ವಾಣಿಜ್ಯ ಕೇಂದ್ರ ಬಿಂದುವಾದ ಈ ಗ್ರಾಮಕ್ಕೆ ಪ್ರತಿ ದಹನ ನೂರಾರು ಜನ ವಿವಿಧ ಗ್ರಾಮಗಳಿಂದ ಸಂತೆ,ವ್ಯಾಪಾರಕ್ಕೆ ಬರುತ್ತಾರೆ, ಇಲ್ಲಿ ನೂತನ ಹೊಸ ಬಸ್ ತಂಗುದಾನ ಗ್ರಾಮದ ಹೊರ ಭಾಗದಲ್ಲಿ ಇದ್ದರೂ ಸಹ ಅಲ್ಲಿಗೆ ಸಾರ್ವಜನಿಕರು ಹೋಗುವುದಿಲ್ಲ , ಅಲ್ಲಿ ಮೂಲಭೂತ ಯಾವ ಸೌಲಭ್ಯಗಳು ಇಲ್ಲದ ಕಾರಣ ಜನ ಹಿಂದೆಟು ಹಾಕುತ್ತಾರೆ,

ಈಗ ಪೊಲೀಸ್ ಠಾಣೆ ಮುಂದೆ ಸಣ್ಣ ಬಸ್ ತಂಗುದಾನವೇ ಗ್ರಾಮದ ಪ್ರಮುಖ ಬಸ್ ನಿಲ್ದಾಣ ಹೀಗಾಗಿ ಪ್ರತಿ ಶುಕ್ರವಾರ ಸಂತೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ ‌ ಸುಮಾರು ೧೦, ಸಾವಿರ ಜನ ಜಂಗುಳಿಂದ ತುಂಬಾ ಟ್ರಾಫಿಕ್ ಕಿರಿ ಕಿರಿ ಉಂಟಾಗುತ್ತದೆ. ಇದು ಇಲ್ಲಿನ ಜನತೆಗೆ ಅಭ್ಯಾಸವಾದಂತೆ ಕಾಣುತ್ತದೆ. ಆದರೆ ಹೊರಗಿನಿಂದ ಈ ಗ್ರಾಮದ ಮೂಲಕ ಸಂಚರಿಸುವ ಸರಕಾರಿ ವಾಹನಗಳು, ೧೦೮ ವಾಹನ ಖಾಸಗಿ ವಾಹಣಗಳು ತುಂಬಾ ಪ್ರಾಯಾಸದಿಂದ ಗ್ರಾಮ ದಾಟಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಈ ಬಸ್ ನಿಲ್ದಾಣದ ಸುತ್ತ ಕಾಲಿ ಕಾಲಿಯಾಗಿ ಒಂದಕೊಂದು ಅಂಟಿಕೊಂಡು ನಿಂತಿರುವ ತಳ್ಳು ಬಂಡಿಗಳ ಹಾವಳಿ , ಇವು ಯಾರುವು ? ಇದರ ಮಾಲಿಕರು ಯಾರು,? ಯಾವ ಕಾರಣಕ್ಕೆ ಇವು ಇಲ್ಲಿ ನಿಲ್ಲಿಸಲಾಗಿದೆ ? ಇದರಿಂದ ವಾಹನ ಸವಾರರಿಗೆ, ಸಾರ್ವಜನಿಕ ಬಸ್ ಗಳಿಗೆ ಆಟೊ ಚಾಲಕರಿಗೆ ದೊಡ್ಡ ತೊಂದರೆ ಆಗುತ್ತಿದ್ದರು ಸಹ ಸ್ಥಳೀಯ ಗ್ರಾಮ ಪಂಚಾಯತಿ ಆಡಳಿತ ಅಧಿಕಾರಿ ಬಸವರಾಜ್ ರೇವಡಿ ಹಾಗೂ ಪಂಚಾಯತಿ ಅಧ್ಯಕ್ಷರಾದ ಶಶಿಧರ್ ಮ್ಯಾಗೇರಿ ಅವರು ಸಾರ್ವಜನಿಕರಿಗೆ ಉತ್ತರ ನೀಡಬೇಕಾಗಿದೆ.

ಇಲ್ಲಿ ಅಕ್ರಮವಾಗಿ ತಳ್ಳು ಬಂಡೆಗಳನ್ನು ನಿಲ್ಲಿಸಲಾಗಿದೆ ಕೆಲವೊಂದು ಬಂಡಿಗಳು, ಬೆಳಗಿನ ಜಾವ ೭ ರಿಂದ ೧೦ ಗಂಟೆ ವರೆಗೆ ಮಾತ್ರ ಪ್ರಾರಂಭ ಮಾಡಿ ನಂತರ ಕ್ಲೊಜ್ ಮಾಡುತ್ತಾರೆ , ಆದರೆ ಅಲ್ಲಿಂದ ಬಂಡಿ ತೆರವು ಮಾಡುವುದಿಲ್ಲ ನಂತರ ಮತ್ತೆ ಎಂದಿನಂತೆ ವ್ಯಾಪಾರಕ್ಕೆ ಬಳಕೆ ಮಾಡುತ್ತಾರೆ, ೩ ಗಂಟೆ ವ್ಯಾಪಾರಾಕ್ಕಾಗಿ ದಿನದ ಎಲ್ಲಾ ಸಮಯ ಜನರಿಗೆ ಇವುಗಳಿಂದ ತೊಂದರೆ ಆಗುತ್ತಿದೆ,. ಇವು ನಿಜವಾದ ಕೂಲಿ ವ್ಯಾಪಾರಿಗಳ ಬಂಡಿಗಳು ಹೌದೊ ! ಅಲ್ಲವೊ ? , ಇದರಲ್ಲಿ ಕೆಲವು ಗ್ರಾಮದ ಪ್ರಮುಖರು ೨/೩ ಬಂಡಿ ನಿಲ್ಲಿಸಿ ದಿನದ ಬಾಡಿಗೆಯಂತೆ ನಿತ್ಯ ಕೂಲಿ ವ್ಯಾಪಾರ ಮಾಡುವವರಿಗೆ ದಿನಕ್ಕೆ 50 ರಿಂದ 100, ರೂಪಾಯಿ ಯಂತೆ ಬಾಡಿಗೆ ಹಣ ಪಡೆಯುತ್ತಾರೆ , ಎಂಬ ಆರೋಪಗಳು ಕೇಳಿ ಬರುತ್ತಿವೆ.

ಇದರ ಬಗ್ಗೆ ಸೂಕ್ತ ವಿಚಾರಣೆ ಮಾಡಿ ನಿಜವಾದ ವ್ಯಾಪಾರಿಗಳಿಗೆ ಆ ಜಾಗವನ್ನು ಅನುಕೂಲ ಮಾಡಿ ಕೊಡಬೇಕು. ಇದರಿಂದ ಇಲ್ಲಿನ ಬಿದಿ ಬದಿ ವ್ಯಾಪಾರಿಗಳಿಗೆ ಸ್ಥಳೀಯ ಗ್ರಾಮ ಪಂಚಾಯತಿ ಹಾಗೂ ಅರಣ್ಯ ಇಲಾಖೆ ಇವರಿಗೆ ಯಾವ ರೀತಿ ಅನುಮತಿ ನೀಡಿದ್ದಾರೆ, ? ಇದರಿಂದ ಸಾರ್ವಜನಿಕರಿಗೆ ಎಷ್ಟು ತೊಂದರೆ ಆಗುತ್ತಿದೆ, ಮೊದಲು ಸ್ಥಳೀಯ ಆಡಳಿತ ಮಂಡಳಿ ಸಾರ್ವಜನಿಕ ಹಿತ ದೃಷ್ಟಿಯಿಂದ ಇಲ್ಲಿನ ನಿಜವಾದ ವ್ಯಾಪಾರಿಗಳಿಗೆ ಅನುಕೂಲ ಮಾಡಿ ಅಕ್ರಮ ವಾಗಿ ಬಂಡಿ ನಿಲ್ಲಿಸಿ ಬಾಡಿಗೆ ತಿನ್ನುತ್ತಿರುವ ಎಲ್ಲಾ ಕಾಲಿ ಇರುವ ತಳ್ಳು ಬಂಡಿಗಳನ್ನು ಸ್ಥಳದಿಂದ ತೆರವು ಮಾಡಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ. ದಿನದಿಂದ ದಿನಕ್ಕೆ ಗುಡೂರು ಗ್ರಾಮ ದೊಡ್ಡ ಮಾರುಕಟ್ಟೆಯಾಗಿ ಬೆಳೆಯುತ್ತಿದೆ. ಇಲ್ಲಿ ಯಾರಿಗೂ ತೊಂದರೆ ಆಗದಂತೆ ಸ್ವಚ್ಚತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಳ್ಳು ಬಂಡೆಗಳನ್ನು ತೆರವು ಮಾಡಲು BB News ಕಳಕಳಿ . ಇದಕ್ಕೆ ಪ್ರತಿಕ್ರಿಯೆ ನೀಡಿದ ಗ್ರಾಮ ಪಂ, ಅಧ್ಯಕ್ಷ ಶಶಿಧರ್ ಅವರು

ಒಂದು ವಾರದಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ತೊಂದರೆ ಆಗದಂತೆ ಬಸ್ ನಿಲ್ದಾಣ ವಿಶಾಲವಾಗಿ ಕಾಣುವಂತೆ ಸ್ವಚ್ಚತೆ ಕೈಗೊಂಡು ಅಕ್ರಮವಾಗಿ ನಿಲ್ಲಿಸಿದ ತಳ್ಳು ಬಂಡಿ ವ್ಯಾರಿಗಳು ಯಾರೆ ಆಗಲಿ ಅವರಿಗೆ ನೋಟಿಸ್ ನೀಡಿ ದಂಡ ಹಾಕಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿ ಕೊಡುತ್ತೇವೆಂದು ಗ್ರಾಮ ಪಂಚಾಯತಿ ಅದ್ಯಕ್ಷ ಶ್ರೀ ಶಶಿಧರ್ ಮ್ಗಾಗೇರಿ ಅವರು ಹಾಗೂ ಆಡಳಿತ ಅಧಿಕಾರಿ ಶ್ರೀ ಬಸವರಾಜ್ ರೇವಡಿ ಅವರು ಭರವಸೆ ನೀಡಿದರು.

ವರದಿ : ಅನಾಮಿಕ /

About vijay_shankar

Check Also

ಆಸಂಗಿ ಗ್ರಾಮದಲ್ಲಿ ರಾಜಶೇಖರ್ ಶೀಲವಂತ ಇವರಿಂದ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ವಿತರಣೆ

ಗುಳೇದಗುಡ್ಡ : ತಾಲೂಕಿನ ಸಮಿಪದ ಆಸಂಗಿ ಗ್ರಾಮದಲ್ಲಿ ಇಂದು ಶ್ರೀ ಮಾರುತೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಸದಸ್ಯರಿಗೆ ಬಾಗಲಕೋಟೆ ಜಿಲ್ಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.