
ನಾಗರಾಳ : ಮಕ್ಕಳು ಈ ದೇಶದ ಮುಂದಿನ ಆಸ್ತಿ ಆ ಮಟ್ಟದಲ್ಲಿ ಎಲ್ಲಾ ಶಾಲೆಯ ಶಿಕ್ಷಕರು ಮಕ್ಕಳಿಗೆ ಉತ್ತಮವಾದ ನಮ್ಮ ಸಂಸ್ಕ್ರತಿಯ ಅನೇಕ ಪಾರಂಪರಿಕ ಕಲೆ,ಸಾಹಿತ್ಯ ಒಳಗೊಂಡ ವಿವಿಧ ಗ್ರಾಮೀಣ ಸಂಸ್ಕೃತಿಯ ಡಾನ್ಸ್ ಹಾಗೂ ನೃತ್ಯ ,ಹಾಡುಗಳನ್ನು ಉತ್ತವಾಗಿ ಆಯ್ಕೆ ಮಾಡಿ ಈ ಪ್ರತಿಭಾ ಕಾರಂಜಿಗೆ ಮಕ್ಕಳ ಪ್ರತಿಭಿಯೇ ಕೇಂದ್ರ ಬಿಂದು, ಈ ಪ್ರತಿಭಾ ಕಾರಂಜಿ ಯೋಜನೆಯನ್ನು ನಮ್ಮ ಕಾಂಗ್ರೆಸ್ ಸರಕಾರ ೨೦೦೨ ರಲ್ಲಿ S M ಕೃಷ್ಣ ಸರಕಾರ ಇದ್ದಾಗ ಎಚ್ ವಿಶ್ವನಾಥ ಶಿಕ್ಷಣ ಸಚಿಚರಿದ್ದಾಗ ಈ ಪ್ರತಿಭಾ ಕಾರಂಜಿ ಅಲ್ಲಿಂದ ಪ್ರಾರಂಭವಾಗಿ ಇಂದು ಈ ಮಟ್ಟದ ಸಾಧನೆ ಮಾಡಿದೆ. ಮಕ್ಕಳ ಉತ್ತಮ ಪ್ರತಿಭೆ ಹೊರ ಹೊಮ್ಮಲು ಇದೊಂದು ಸುವರ್ಣ ಅವಕಾಶದ ವೇದಿಕೆ ಇದಾಗಿದೆ ,ಅಧಿಕಾರಿಗಳು ತಮ್ಮ ಕರ್ತವ್ಯವನ್ನು ತುಂಬಾ ಜವಾಬ್ದಾರಿ ಇಂದ ನಿಭಾಯಿಸಲು ಸೂಚಿಸುತ್ತೇನೆ, ರಾಜ್ಯ ಮಟ್ಟದಲ್ಲಿ ನಮ್ಮ ಕ್ಷೇತ್ರದ ಮಕ್ಕಳು ಗುರುತಿಸಿಕೊಳ್ಳಲ್ಲಿ ಎಂದು ಮಕ್ಕಳಿಗೆ ಶುಭ ಕೋರಿದರು.
ಬೀಳಗಿ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆಯುತ್ತಿರಯವ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ದೇಶಿಸಿ ಶಾಸಕ ಜೆ ಟಿ ಪಾಟೀಲರು ಮಾತನಾಡಿದರು.

ಈ ಕಾರ್ಯಕ್ರಮದ ಮುಖ್ಯ ಅಥಿತಿಸ್ಥಾನ ವಹಿಸಿ ಮಾತನಾಡಿದ ರಾಜೇಂದ್ರ ದೇಶಪಾಂಡೆ ಅವರು ನಮ್ಮೂರಿನ ಎಲ್ಲಾ ಗುರು ಹಿರಿಯರ ಸಹಕಾರ ಮತ್ತು ಪ್ರೋತ್ಸಾಹದಿಂದ ಇವತ್ತು ಈ ವೇದಿಕೆ ಸಿದ್ದವಾಗಿದೆ, ಇದೊಂದು ಸುವರ್ಣ ವೇದಿಕೆ ಮಕ್ಕಳು ತಮ್ಮ ಪ್ರತಿಭೆಯ ಮೂಲಕ ಇಲ್ಲಿ ಗುರುತಿಸಿಕೊಂಡು ರಾಜ್ಯ ಮಟ್ಟದಲ್ಲಿ ನಮ್ಮ ಶಾಲೆಯ ಹಾಗೂ ಈ ತಾಲೂಕಿನ ಕೀರ್ತಿ ಮಿಂಚುವಂತೆ ಮಕ್ಕಳು ಪ್ರದರ್ಶನ ಮಾಡಬೇಕು ಈ ನಮ್ಮ ಶಿಕ್ಷಣ ಸಂಸ್ಥೆಯ ಶಾಲಾ ಕಟ್ಟಡ ಅಭಿವೃದ್ಧಿಗೆ ಮಾನ್ಯ ಶಾಸಕರಾದ ಜೆ,ಟಿ ಪಾಟೀಲ ಸಾಹೇಬರು ನನಗೆ ವಯಕ್ತಿಕ ಹಣ ಕಾಸೀನ ಸಾಲ ನೀಡಿ ನಿರಂತರ ಇಂತಹ ಶಿಕ್ಷಣ ಸಂಸ್ಥೆ ಮುನ್ನಡೆಸಲು ಸಹಾಯ ಮಾಡಿದ್ದಾರೆ, ಅವರಿಗೆ ಅಭಿನಂದನೆ, ನನ್ನ ಮಾರ್ಗದರ್ಶಕರು, ಅವರೇ ಇಂದು ಅನಿವಾರ್ಯ ಕಾರಣಗಳಿಂದ ಅವರು ಬೆಂಗಳೂರು ಹೋಗಬೇಕಿತ್ತು ನಮ್ಮ ಈ ಕಾರ್ಯಕ್ರಮದ ಸಲುವಾಗಿ ಬಿಟ್ಟು ಇಂದು ಈ ಕಾರ್ಯಕ್ರಮಕೆ ಚಾಲನೆ ನೀಡಿ ಯಶಸ್ವಿಯಾಗಿಸಿದ್ದಾರೆ ಅವರಿವೆ ನಮ್ಮ ಗ್ರಾಮದ ಪರವಾಗಿ ಹಾಗೂ ಈ ಶಾಲಾ ಶಿಕ್ಷಕರ ಪರವಾಗಿ ಅಭಿನಂದನೆ ಸಲ್ಲಿಸಿದರು.

ಈ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ತಾಲೂಕಿನ ನಾಗರಾಳ ಸೇರಿದಂತೆ , ಬೀಳಗಿ ತಾಲೂಕಿನ ೧೨ CRC ಯಲ್ಲಿ ಆಯ್ಕೆಯಾದ ಮಕ್ಕಳು ಈ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ೧ ರಿಂದ ತನಕ ಅಲ್ಲಿ ೫ನೇ ತರಗತಿ ಮಕ್ಕಳಿಗೆ ೧೪ ಸ್ಪರ್ಧೇಗಳು ನಡೆಯುತ್ತವೆ, ಇದರಲ್ಲಿ ೧೬೮ ಮಕ್ಕಳು ಭಾಗವಹಿಸಿದ್ದರು. ಇನ್ನೂ ೫ ರಿಂದ ೭ನೇ ತರಗತಿಯಲ್ಲಿ ೧೬ ಸ್ಪರ್ಧೆಗಳು ನಡೆಯುತ್ತವೆ ಇದರಲ್ಲಿ ೧೯೨ ಮಕ್ಕಳು ಭಾಗವಹಿಸಿದ್ದರು.
ಇನ್ನೂ ೮ ರಿಂದ ೧೦ನೇ ತರಗತಿ ಮಕ್ಕಳಿಗೆ ೨೦ ಸ್ಪರ್ಧೆಗಳು ನಡೆಯುತ್ತವೆ ಇದರಲ್ಲಿ ೩೪೪ ಮಕ್ಕಳು ಭಾಗವಹಿಸಿದ್ದರು, ಒಟ್ಟು ತಾಲ್ಲೂಕು ಮಟ್ಟದ ಈ ಪ್ರತಿಭಾ ಕಾರಂಜಿಯು ಜಿಲ್ಲಾ ಪಂಚಾಯತ ಹಾಗೂ ಶಾಲಾ ಶಿಕ್ಷಣ ಇಕಾಖೆ ಬಾಗಲಕೋಟೆ ತಾಲೂಕಾ ಆಡಳಿತ ,ತಾಲೂಕು ಪಂಚಾಯತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೀಳಗಿ ಹಾಗೂ ಡಾ.ಎಸ್. ರಾಧಾಕೃಷ್ಣನ್ ಪ್ರಾಥಮಿಕ ಶಾಲೆ ನಾಗರಾಳ ಇವರ ಸಂಯುಕ್ತ ಆಶ್ರಯದಲ್ಲಿ ಈ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ೨೦೨೩- ೨೪ ರ ಈ ಸ್ಪರ್ಧೆಯಲ್ಲಿ ಒಟ್ಟು ೫೦ ಇವೆಂಟ್ ಗಳಲ್ಲಿ ೭೪೪ ಮಕ್ಕಳು ಭಾಗವಹಿಸಿದ್ದರು
ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಆರ್,ಎಸ್, ಆದಾಪೂರ BB News ಸುದ್ದಿ ವಾಹಿನಿಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವೇದ,ಮೂರ್ತಿ ಶ್ರೀ ಶೇಷಪ್ಪಯ್ಯ ಗು ದಿಗಂಬರಮಠ ಹಾಗೂ ಕಾರ್ಯಕ್ರಮದ ಉದ್ಘಾಟನೆಯನ್ನು ಜನಪ್ರಿಯ ಶಾಸಕ ಸನ್ಮಾನ್ಯ ಜೆ ಟಿ ಪಾಟೀಲ ಅವರು ವೇದಿಕೆ ಹಾಗೂ ಬೊಲೂನ್ ಹಾರಿ ಬಿಟ್ಟು ,ಸ್ವತಂತ್ರದ ಸಂಖ್ಯೆತವಾದ ಪಾರಿವಾಳವನ್ನು ಹಾರಿ ಬಿಡುವ ಮೂಲಕ ಕಲೋತ್ಸವಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜೇಂದ್ರ ದೇಶಪಾಂಡೆ ಅವರು ವಹಿಸಿದ್ದರು. ಮುಖ್ಯ ಅಥಿತಿಗಖಾಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಮತಿ ನಿಂಗವ್ವ ಹೊಸಮನಿ, ಹಾಗೂ ಎಸ್,ವ್ಹಿ ಪಾಟೀಲ ತಾ,ಪ್ರಾಥಮಿಕ ಶಾಲಾ ಶಿ,ಸಂ, ಅಧ್ಯಕ್ಷರು, ಮತ್ತು ಶ್ರೀ ಪರಶುರಾಮ ಮಾದರ ತಾ,ಪ್ರೌಢ ಶಾಲಾ ಸಹ ಶಿಕ್ಷಕರ ಸಂ ಅಧ್ಯಕ್ಷರು, ಹಾಗೂ ಎಮ್ ಎನ್ ಇಂಗಳೇಶ್ವರ , ತಾ,ಸಹಾಯ ನಿರ್ದೇಶಕರು, ಅಕ್ಷರ ದಾಸೋಹ ತಾ,ಪಂ, ಬೀಳಗಿ, ಶ್ರೀ ಎಚ್ ಟಿ, ಸಣ್ಣಗೌಡರ, ತಾ,ಪ್ರತಿಬಾ ಕಾರಂಜಿ ನೋಡಲ್ BRP, ಶ್ರೀ ಕೆ,ವ್ಹಿ, ಆರಡ್ಡಿ, ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಸಿದ್ದಾಪುರ. ಹಾಗೂ ನಾಗರಾಳ ಗ್ರಾಮದ ಗುರು ಹಿರಿಯರು,,ಯುವಕರು ಸೌಹಾರ್ದ ದಿಂದ ಈ ಮಕ್ಕಳ ಕಾರ್ಯಕ್ರಮಕ್ಕೆ ಬಂದು ಸೇವೆ ಮಾಡಿ ನೂರಾರು ಮಕ್ಕಳಿಗೆ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಿದ್ದರು. ತಾಲೂಕಿನ ಎಲ್ಲಾ ಸರಕಾರಿ ಶಾಲಾ ಶಿಕ್ಷಕರು, ಉಪಸ್ಥಿತಿ ಇದ್ದರು.

ಕಾರ್ಯಕ್ರಮದ ನಿರೂಪನೆ ಯನ್ನು ಶ್ರೀ ಬಸವರಾಜ್ ಕುಪ್ಪಸದ, ಆಗ್ಲಭಾಷೆ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ನಾಗರಾಳ, ಶ್ರೀ ಎಸ್, ಎಸ್ ,ಹಡಪದ ಕನ್ನಡ ಭಾಷೆ ಶಿಕ್ಷಕರು ಸ,ಪ್ರೌಢ ಶಾಲೆ ನಾಗರಾಳ ಹಾಗೂ ಡಾ,ರಾಧಾಕೃಷ್ಣನ್ ಪ್ರಾಥಮಿಕ ಶಾಲೆ ಮುಖ್ಯಗುರು ಶ್ರೀ ಶಿವಾನಂದ ಅಸ್ಕಿ, ಹಾಗೂ ಸಹ ಶಿಕ್ಷಕರಾದ ಶ್ರೀಮತಿ ಪದ್ಮಾವತಿ ಹುಲಗಬಾಳ ,ಕುಮಾರಿ ರೇಷ್ಮಾ ಘಾಟಿನ್ ಶ್ರೀಮತಿ ಅಂಜಲಿ ಗೋಗಾವಿ, ಕುಮಾರಿ ಸವಿತಾ ಚಲವಾದಿ, ಶ್ರೀಮತಿ ಮಲ್ಲಮ್ಮ ತಿರಕನ್ನವರ ಹಾಗೂ ಶಾಲಾ ಸಿಬ್ಬಂದೆತರ ವರ್ಗ ಕಳೆದ ಒಂದು ವಾರದಿಂದ ಕಾರ್ಯಕ್ರಮದ ಶಿಸ್ತು ಹಾಗೂ ಯಶಸ್ವಿಯಾಗಲು ಕಾರ್ಯಕ್ರಮದ ರೂಪ ರೇಶ ಮಾಡಿ ಯಶಸ್ವಿಗೆ ಶ್ರಮಿಸಿದ್ದಕ್ಕಾಗಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಜೇಂದ್ರ ದೇಶಪಾಂಡೆ ಅವರು ಎಲ್ಲರನ್ನು ಶ್ಲಾಘಿಸಿದರು
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News