Breaking News

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಶ್ರೀ ವ್ಹಿ,ಜಿ,ಗಡೆದ ಅವರಿಗೆ ರಾಜ್ಯ ಪ್ರಶಸ್ತಿ ಪ್ರದಾನ,

ಕಮತಗಿ : ಹುನಗುಂದ ತಾಲೂಕಿನ ಮೂಗನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ವ್ಹಿ,ಜಿ,ಗಡೆದ ಅವರಿಗೆ ಪ್ರತಿ ವರ್ಷ ಕೊಡಮಾಡುವ ಪ್ರಸಕ್ತ ೨೦೨೦ನೇ ವರ್ಷದ ಅತ್ಯುತ್ತಮ ಮುಖ್ಯ ಕಾರ್ಯನಿರ್ವಾಹಕ ರಾಜ್ಯ ಪ್ರಶಸ್ತಿಯನ್ನು ನೀಡಿ ಇಂದು ಅವರ ಸಂಘದ ಕಾರ್ಯಾಲಯದಲ್ಲಿ ನೀಡಿ ಗೌರವಿಸಲಾಯಿತು.

ಕರೋನ ಮುಂಜಾಗ್ರತಾ ಸಲುವಾಗಿ ಸರಳ ಸಮಾರಂಭದ ಮೂಲಕ ಸಂಘದ ಸದಸ್ಯರುಗಳ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ಸರಳ ಸಮಾರಂಭದ ಮೂಲಕ ನೀಡಲಾಯಿತು.

ಈ ಸಮಾರಂಭದ ಸಾನಿಧ್ಯ ವಹಿಸಿದ್ದ ವೇದಮೂರ್ತಿ ಶ್ರೀ ಚಂದ್ರಶೇಖರಯ್ಯ ಹಿರೇಮಠ, ಅಧ್ಯಕ್ಷತೆ ಭೀಮಪ್ಪ ಕುಬೇರಪ್ಪ,ಕಡಿವಾಲ, ಮುಖ್ಯ ಅಥಿತಿಗಳಾಗಿ,ಶ್ರೀ ಚನ್ನಪ್ಪ,ಗುರಪ್ಪ,ಗಡೆದ ಹಾಗೂ ಕಾರ್ಯಕ್ರಮದ ಕೇಂದ್ರ ಬಿಂದು ಹಾಗೂ ಪ್ರಶಸ್ತಿ ಪುರಸ್ಕೃತರು ಆದ ಶ್ರೀ ವ್ಹಿ,ಜಿ ಗಡೆದ ,ನಿವೃತ್ತ ಪೊಲೀಸ್ ಅಧಿಕಾರಿ ಶ್ರೀ ಎನ್ ,ಪಿ ಕುರಿ, ಸಂಪಾದಕ ಶ್ರೀ ಡಿ,ಬಿ, ವಿಜಯಶಂಕರ್, ಅವರ ನೇತೃತ್ವದಲ್ಲಿ ಸರಳ ಸಮಾರಂಭದ ಮೂಲಕ ಈ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಯಾರು ಈ ವ್ಹಿ,ಜಿ,ಗಡೆದ ೧೯೮೫ ರಿಂದ ಈ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ ಸುಧೀರ್ಘ ೩೫ ವರ್ಷ ಈ ಸಂಘದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು, ಕಾಯಕವೇ ಕೈಲಾಸ ಎಂದು ಪ್ರಾಮಾಣಿಕ ಕೆಲಸ ಮಾಡಿ ರೈತರ ಜೀವನಾಡಿಯಾಗಿ ಜನ ಮಾನಸದಲ್ಲಿ ಉಳಿದ ಸರಳ ಸಜ್ಜನಿಕೆಯ ವ್ಯೆಕ್ತಿ ಗಡೆದ ಅವರು.
ಈ ಸಂಘವು ಹುನಗುಂದ ತಾಲೂಕಿನ ಮೂಗನೂರು ಗ್ರಾಮದಲ್ಲಿ ಇದೆ,,೩,ಸಾವಿರಕ್ಕೂ ಅಧಿಕ ಶೇರುಗಳನ್ನು ಹೊಂದಿರುವ ಸಂಸ್ಥೆ ಅಲ್ಲದೆ ೨,೪೦೦ ಸದಸ್ಯರುಗಳಿಗೆ ಸಾಲ,ಸೌಲಭ್ಯವನ್ನು ನೀಡಿರುವ ಸಂಸ್ಥೆ ಇದಾಗಿದೆ, ಸುಮಾರು ೨೪ ಕೋಟಿ ರೂಪಾಯಿ ವ್ಯವಹಾರ ಹೊಂದಿರುವ ತಾಲೂಕಿನ ಏಕೈಕ ಸಹಕಾರ ಸಂಘ ಎಂಬ ಹೆಗ್ಗಳಿಕೆ ಪಾತ್ರವಾಗಿದೆ,ಎಂದರೆ ತಪ್ಪಾಗಲಾರದು.

ಈ ಸಂಘವು ಸುಮಾರು ಆರು ಹಳ್ಳಿಗಳನ್ನು ಒಳಗೊಂಡಿದೆ ,ಯಾವೆಂದರೆಮೂಗನೂರು, ಬೂದಿಹಾಳ,ಬಸವನಾಳ,ಅಂಬಲಿಕೊಪ್ಪ,ಚಿಕ್ಕಮಡ್ಡಿ,ಇನಾಂ,ಬೂದಿಹಾಳ,ಹೀಗೆ ೦೬ ಹಳ್ಳಿಗಳನ್ನು ಇದು ಒಳಗೊಂಡಿದೆ, ಒಟ್ಟು ೧೨ ಜನ ಆಡಳಿತ ಮಂಡಳಿ ಸದಸ್ಯರುಗಳನ್ನು ಒಳಗೊಂಡಿದೆ. ಸಾವಿರಾರು ರೈತರಿಗೆ ಸರಕಾರದ ಹತ್ತು ಹಲವು ಯೋಜನೆಯನ್ನು ಒದಗಿಸಿದೆ,ಅಲ್ಲದೆ ಸಂಘದ ಕಾರ್ಯ ಚಟುವಟಿಕೆಗೆ ರೈತರು ಹರ್ಷ ವ್ಯಕ್ತಪಡಿಸಿದ್ದು ಸಂಘದ ಸರ್ವತೋಮುಖ ಏಳಿಗೆಗೆ ಗಡೆದ ಅವರ ದಕ್ಷತೆ, ಪ್ರಾಮಾಣಿಕ ಸೇವೆ, ಅವರು ರೈತರಿಗೆ ಸ್ಪಂದಿಸುವ ರೀತಿ,ರೈತರಿಗೆ ಕೊಡುವ ಗೌರವ,ಅದನ ಮೆಚ್ಚಲೇ ಬೇಕು ಗಡೆದ ಅವರಂತಹ ವ್ಯಕ್ತಿಗೆ ಈ ಪ್ರಶಸ್ತಿಯನ್ನು ನೀಡಿದ್ದು ನಮ್ಮ ಗ್ರಾಮಕ್ಕೆ ಬಂದಷ್ಟು ಖುಷಿ ತಂದಿದೆ ಎಂದು ಅಲ್ಲಿನ ರೈತರೊಬ್ಬರು ನಮ್ಮೂಂದಿಗೆ ಖುಷಿ ಹಂಚಿಕೊಂಡರು. ರೈತರಿಗೆ ಬೆಳೆ ವಿಮೆ,ಬೆಳೆ ಸಾಲ,ವಾಹನ ಸಾಲ, ಬಂಗಾರ, ಸಾಲ,ಮನೆ ಸಾಲ,ಬಾಂಡ್ ಪೇಪರ್ ವ್ಯವಸ್ಥೆ, ಮಿನಿ ATM ವ್ಯವಸ್ಥೆ, ಗೊಬ್ಬರ,ರೆಶನ್,ಸೀಮೆಎಣ್ಣೆ, ಹೀಗೆ ಒಂದು ಸುಜ್ಜಿತ ಕಟ್ಟಡ ನಿರ್ಮಾಣ ಮಾಡಿ ಜಿಲ್ಲೆಯ ಇತರೆ ಸಹಕಾರ ಸಂಘಗಳಿಗೆ ಒಂದು ಮಾದರಿ ಸಂಘವನ್ನು ಮಾಡಿದ್ದು ವ್ಹಿ,ಜಿ ಗಡೆದ ಅವರ ಪ್ರಾಮಾಣಿಕ ಕಾಯಕ ಸಾಮಥ್ರ್ಯವನ್ನು ತೋರಿಸುತ್ತದೆ.

ಅತ್ಯುತ್ತಮ ಸಿಬ್ಬಂದಿ : ಸುಮಾರು ೧೧ ಜನ ಸಿಬ್ಬಂದಿ ಹೊಂದಿರುವ ಈ ಸಂಘ ಎಲ್ಲಾ ಸಿಬ್ಬಂದಿಗಳ ಜೊತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು, ಒಂದೇ ಮನೆಯ ಸದಸ್ಯರು ಎಂಬಂತೆ ಹಗಲು ,ರಾತ್ರಿ, ಎನ್ನದೇ ರೈತರ ಸಾಲ ಮನ್ನಾ ಸಲುವಾಗಿ ಹಗಲು ರಾತ್ರಿ ಎನ್ನದೆ ಮನ್ನಾ ಮಾಡಿಸಿದ ಕಿರ್ತಿ ಸಿಬ್ಬಂದಿವರ್ಗಕ್ಕೂ ಸಲ್ಲುತ್ತದೆ. ಇಂತಹ ಎಲ್ಲಾ ಸಿಬ್ಬಂದಿ ,ಆಡಳಿತ ಮಂಡಳಿಯನ್ನು ತಿದ್ದಿ,ತಿಡಿ, ಸಮಾಜದಿಂದ ಸಂಘದ ಅಭಿವೃದ್ಧಿ ಬಗ್ಗೆ ದಿನಾ ಪೂರ್ತಿ ಯೋಚಿಸಿ,ಇಂದು ಯಶಸ್ವಿಯಾಗಿ ನಿಂತು ಸಂಘವನ್ನು ಹೆಮ್ಮರವಾಗಿ ಬೆಳೆಸಿದ ಕಿರ್ತಿ ವ್ಹಿ, ಜಿ ಗಡೆದ ಅವರಿಗೆ ನಿಜಕ್ಕೂ ಸಲ್ಲಬೇಕು .

ಅಂತಹ ಕಾಯಕ ನಿಷ್ಟೆ, ಅವರಲ್ಲಿರುವ ಪ್ರಯುಕ್ತ ಸಂಘ ಇಂದು ಸಾವಿರಾರು ರೈತರ ಜೀವನಾಡಿ ಯಾಗಿದೆ, ಎಂದರೆ ತಪ್ಪಾಗಲಾರದು,ಎರಡು ದಿನ ರಾಜಕೀಯ ಮಾಡಿ ,ಆದರೆ ನಿಮ್ಮ ರಾಜಕೀಯ ದಿಂದ ಸಂಘದ ಮೇಲೆ ಕೆಟ್ಟ ಪರಿಣಾಮ ಬೀರದಿರಲಿ, ನಾವೆಲ್ಲ ಒಂದೇ ಕುಟುಂಬದ ಸದಸ್ಯರಾಗಿ ನಿಂತು ಈ ಸಂಘವನ್ನು ಇನ್ನೂ ಎತ್ತರಕ್ಕೆ ಬೇಳೆಸಬೇಕು,ರೈತರ,ಹಾಗೂ ಸಾರ್ವಜನಿಕವಾಗಿ ಅನುಕೂಲಕರ ಆಗಲು ಒಂದು ದೊಡ್ಡ ಗುದಾಮ್ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು,ಎಲ್ಲರ ಸಹಕಾರ ಸಿಕ್ಕರೆ ಅಲ್ಲಿ ,ರೈತರ ಹಲವಾರು ತರಬೇತಿ, ಕಾರ್ಯಕ್ರಮ ಸಾರ್ವಜನಿಕ ಕಾರ್ಯಕ್ರಮ, ರೈತರ ,ಕಲ್ಯಾಣಕ್ಕಾಗಿ ಅದು ಬಹಳ ಅನುಕೂಲ ಇರುವುದರಿಂದ ಈ ಪ್ಲಾನ್ ಮಾಡುತ್ತಿದ್ದು ಗ್ರಾಮದಲ್ಲಿ ಕಾರ್ಯಕ್ರಮ ಮಾಡಲು ಜಾಗದ ಕೊರತೆ ಇದೆ ಒಂದು ಒಳ್ಳೆಯ ಸ್ಥಳ,ಭವಣ ಇಲ್ಲ ಈ ರೈತರ ಗೊದಾಮ್ ಮಾಡಿದರೆ ಎಲ್ಲರಿಗೂ ತುಂಬಾ ಅನುಕೂಲ ಆಗಲಿದೆ. ಆದರೆ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದು ಗಡೆದ ಅವರು ಈ ಸಭೆ ಉದ್ದೇಶಿಸಿ ಮಾತನಾಡಿದರು.

ನಮ್ಮ ಕಾಯಕ ಮೆಚ್ಚಿ ನಾವು ಇದ್ದಲ್ಲಿಗೆ ಬಂದು ಈ ರಾಜ್ಯ ಪ್ರಶಸ್ತಿಯನ್ನು ನೀಡುತ್ತಿರುವುದು ನೀಜಕ್ಕೂ ನನಗೆ ಖುಷಿ ತಂದಿಗೆ ಈ ಪ್ರಶಸ್ತಿ ನಮ್ಮ ೩೫ ವರ್ಷದ ಪ್ರಾಮಾಣಿಕ ಸೇವೆಗೆ ಸಂದ ಗೌರವ,ಇದು ನನ್ನನೊಗೊಬ್ಬನಿಗೆ ಇದರ ಶ್ರೇಯಸ್ಸು ಬೇಡ ನನ್ನೊಂದಿಗೆ ನನ್ನ ಸಿಬ್ಬಂದಿ ಕಷ್ಟ ಪಟ್ಟು ಹಗಲು ರಾತ್ರಿ ಹೆಗಲು ಕೊಟ್ಟು ಅವರೂ ದುಡಿದಿದ್ದಾರೆ ,ಈ ಪ್ರಶಸ್ತಿಯಲ್ಲಿ ಅವರದೂ ಪಾಲಿದೆ,ಈ ಕಿರ್ತಿ ಅವರಿಗೂ ಸಲ್ಲುತ್ತದೆ ಎಂದರು‌, ಈಗಾಗಲೇ ಜಿಲ್ಲಾ ಸಹಕಾರ ಇಲಾಖೆ ಹಾಗೂ DCC ಬ್ಯಾಂಕ್ ನಿಂದ ಹಲವಾರು ಪ್ರಶಸ್ತಿ ಪಡೆದು ಉತ್ತಮ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ,ಇದನ ನೋಡಿ ತಿಳಿದುಕೊಂಡು ನಮ್ಮ ಕೆಲಸ ಗುರುತಿಸಿ ಪ್ರಶಸ್ತಿ ನೀಡಿದ್ದಾರೆ ,ಇಂತಹ ಪ್ರಾಮಾಣಿಕ ಸಂಘದ ಕಾರ್ಯದರ್ಶಿ ಅವರನ್ನು ಗುರುತಿಸಿ ಸನ್ಮಾನಿಸಿದ್ದು ನಮ್ಮ ಪತ್ರಿಕಾ ಸಂಘಕ್ಕೂ ಹಾಗೂ ಪತ್ರಿಕಾ ಬಳಗಕ್ಕೂ ಹೆಮ್ಮೆ ಅನಿಸುತ್ತಿದೆ.

ಕರ್ನಾಟಕ ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಸನ್ಮಾನ್ಯ ಶ್ರೀ ಕೆ,ಜಿ ಪಂಡಿತ್,ಹಾಗೂ ರಾಜ್ಯ ಅಧ್ಯಕ್ಷ ಶ್ರೀ ಮುರಗೇಶ,ಶಿವಪೂಜಿ,ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಸಂಘದ ವತಿಯಿಂದ ಹಾಗೂ ನಮ್ಮ ಪತ್ರಿಕೆಯ ಸಹಯೋಗದೊಂದಿಗೆ

ಶ್ರೀ ವ್ಹಿಜಿ ಗಡೆದ ಅವರಿಗೆ ಈ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂರ್ಭದಲ್ಲಿ ಸಂಘದ ಅಧ್ಯಕ್ಷರಾದ ಭೀಮಪ್ಪ ಕಡಿವಾಲ ಹಾಗೂ ಉಪಾಧ್ಯಕ್ಷರಾದ ಶ್ರೀ ಸಿ,ಜಿ,ಗಡೆದ ಹಾಗೂ ಸಾನಿಧ್ಯ ವಹಿಸಿದ ವೇದಮೂರ್ತಿ ಶ್ರೀ ಚಂದ್ರಶೇಖರಯ್ಯ ಹಿರೇಮಠ ಅವರಿಗೆ ಪತ್ರಿಕಾ ಬಳಗದಿಂದ ಗೌರವ ಸನ್ಮಾನ ಮಾಡಲಾಯಿತು.ಸದರಿ ಈ ಸರಳ ಸಮಾರಂಭದಲ್ಲಿ ಸಂಘದ ಸರ್ವ ಸದಸ್ಯರು ಹಾಗೂ ಸಿಬ್ಬಂದಿವರ್ಗ ಮತ್ತು ಗ್ರಾಮದ ಪ್ರಮುಖರು ಉಪಸ್ಥಿತಿ ಇದ್ದರು.

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಆನಂದ ಪರಾಳದ

ಶ್ರೀ ಆನಂದ ಪರಾಳದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ಸದಸ್ಯರು ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.