ಅಮೀನಗಡ : ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮದಲ್ಲಿ ಇಂದು ಗ್ರಾಮ ಪಂಚಾಯತ್ ಹಾಗೂ ಗ್ರಾಮದ ಹಲವು ಸಮಾಜ ಸೇವಕರ ಸಾರಥ್ಯದಲ್ಲಿ ಅತ್ಯಂತಹ ಸರಳವಾಗಿ ಕನ್ನಡ ರಾಜೋತ್ಸವವನ್ನು ಮಾಜಿ ಶಾಸಕರಾದ ಶ್ರೀ ಎಸ್,ಜಿ ನಂಜಯ್ಯನಮಠ ಅವರು ಧ್ವಜಾರೋಹಣ ಮಾಡುವ ಮೂಲಕ ಹಾಗೂ ದಿ,ಶ್ರೀ ಪಿ,ಬಿ,ಧುತ್ತರಗಿ ಅವರ ಭಾವ ಚಿತ್ರಕ್ಕೆ ಹೂವಿನ ಹಾರ ಹಾಕಿ ಅವರನ್ನು ಸ್ಮರಿಸುವ ಮೂಲಕ ಸರಳ ಹಬ್ಬ ಆಚರಿಸಲಾಯಿತು, ಕನ್ನಡಕ್ಕಾಗಿ ಹಲವಾರು ಸಾಹಿತ್ಯಗಾರರು, ಬರಹಗಾರರು ಈ ಕನ್ನಡ ನಾಡು ನುಡಿಗಾಗಿ ಈ ಕರುನಾಡನ್ನು ಕೆ,ಎಸ್ ನಿಸಾರ್ ಅಹಮದ್ ಅವರ ಜೋಗದಸಿರಿ ಬೆಳಕಿನಲ್ಲಿ .

ಕವಿತೆಯನ್ನು ಈ ನಾಡು ಇಂದಿಗೂ ಮರೆತಿಲ್ಲ ಹಾಗೆ ಜಾತಿ,ಧರ್ಮವನ್ನು ಮೀರಿ ಅನೇಕ ಧರ್ಮದ ಕವಿ,ಸಾಹಿತ್ಯಗಾರರು ಇಲ್ಲಿ ಜನಿಸಿದ್ದಾರೆ ,ನಮ್ಮದು ಭಾವೈಕ್ಯತಾ ದೇಶ ಅವರ ಭಾಷೆ, ಅಭಿಮಾನ ನಾವು ಎಂದಿಗೂ ಮರಿಯುವಂತಿಲ್ಲ ಎಲ್ಲೆ ಇರೂ ಹೇಗಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಎಲ್ಲರಿಗೂ ಕನ್ನಡದಲ್ಲಿ ರಾಜೋತ್ಸವದ ಶುಭಾಶಯ ಹೇಳಿದರು, ಈ ಸಂಧರ್ಭದಲ್ಲಿ ಎಲ್ಲರೂ ಕಡ್ಡಾಯ ಮಾಸ್ಕ ದರಿಸಿ,ಅಂತರ ಕಾಯ್ದುಕೊಂಡು ಇರಬೇಕು ಬರುವ ದೀಪಾವಳಿ ಹಬ್ಬಕ್ಕೆ ಕರೋನ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಲ್ಲರೂ ಸುರಕ್ಷಿತೆ ಬಗ್ಗೆ ಗಮನ ಇರಲು ಸಲಹೇ ನೀಡಿದರು .

ಈ ಸಂದರ್ಭದಲ್ಲಿ ಶ್ರೀ ಆರ್,ಪಿ ಕಲಬುರ್ಗಿ, ನಾಗೇಂದ್ರಸಾ ನೀರಂಜನ್,ಮಹಾಂತೇಶ ಭಧ್ರಣ್ಣವರ, ಪಿಡ್ಡಪ್ಪ ಕುರಿ ,,ನಾಗೇಶ ಗಂಜಿಹಾಳ,ದೇವರಾಜ ಕಮತಗಿ, ಹನಮಂತ ಘಂಟಿ, ಆಡಳಿತ ಅಧಿಕಾರಿ ಎಮ್,ಎ,ದಖನಿ ಹಾಗೂ ಆನಂದ ಮೊಕಾಶಿ, ಹನಮಂತ ಹಿರೇಮನಿ, ರಾಜಮಹಮ್ಮದ ಮುಲ್ಲಾ ಅನೇಕ ಗ್ರಾಂ,ಪ,ಮಾಜಿ ಸದಸ್ಯರು, ಗ್ರಾಮದ ಪ್ರಮುಖರು ಹಾಗೂ ರಾಮಯ್ಯಸ್ವಾಮಿ ವಿಧ್ಯಾ ಸಂಸ್ಥೆಯ ಮುಖ್ಯಗರು ಎ,ಸಿ,ಅತ್ತಾರ, ಹಾಗೂ ಶಾಲೆಯ ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು,