Breaking News

ಹುನಗುಂದ; ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಒಕ್ಕೂಟಗಳ ಪದಗ್ರಹಣ

ಹುನಗುಂದ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇಂದು ದೇಶದಲ್ಲೇ ಅತ್ಯಂತ ದೊಡ್ಡ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಬಾಗಲಕೋಟ ಜಿಲ್ಲಾ ನಿರ್ದೇಶಕ ಕೃಷ್ಣಾ ಟಿ ಹೇಳಿದರು.
ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳೆಯರ ನೇತೃತ್ವದಲ್ಲಿ ಗ್ರಾಮೀಣ ಪ್ರದೇಶಗಳ ಮನೆ ಮನೆ ಸಂದರ್ಶಿಸಿ ಮಹಿಳಾ ಸ್ವ-ಸಹಾಯ ಗುಂಪುಗಳನ್ನು ರಚಿಸಿ ಸ್ವಯಂ ಉದ್ಯೋಗ, ಸ್ವಾವಲಂಬನೆಗೆ ಪೂರಕವಾದ ನಾನಾ ಯೋಜನೆ ರೂಪಿಸಿ ಮತ್ತು ತರಬೇತಿ ನೀಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇಂದು ದೇಶದಲ್ಲೇ ಅತ್ಯಂತ ದೊಡ್ಡ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಬಾಗಲಕೋಟ ಜಿಲ್ಲಾ‌ ನಿರ್ದೇಶಕ ಕೃಷ್ಣಾ ಟಿ ಹೇಳಿದರು.‌


ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹುನಗುಂದ ತಾಲೂಕು, ಐಹೋಳೆ ವಲಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಮತ್ತು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ, ಐಹೋಳೆ ವಲಯ ಆಶ್ರಯದಲ್ಲಿ ಸೋಮವಾರ ವಲಯ ಮಟ್ಟದ ಒಕ್ಕೂಟಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಯೋಜನೆಯು ಸ್ವಸಹಾಯ ಸಂಘಗಳ ರಚನೆ, ಬಲವರ್ಧನೆ ಹಾಗೂ ಆರ್ಥಿಕ ಸೇವೆಯನ್ನು ನೀಡುತ್ತಾ ಬಂದಿದೆ. ಗ್ರಾಮೀಣ ಭಾಗದ ಜನರನ್ನು ಸಂಘಟಿಸಿ ಅವರಲ್ಲಿ ಸಾಮರ್ಥ್ಯ‌ವನ್ನು ಬೆಳೆಸಿ ಸದೃಢರಾಗಿ ಬೆಳೆಯುವಂತೆ ಮಾಡುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ, ಸಂಘಗಳ ಸದಸ್ಯರು ತಮ್ಮ ಮನೆಯಲ್ಲಿ ವಾರ್ಷಿಕವಾಗಿ ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಹಿಡುವಳಿ ಕೈಪಿಡಿಯಲ್ಲಿ ಹಾಕಿಕೊಂಡು ಇದಕ್ಕೆ ಸರ್ಕಾರದಿಂದ, ಪಂಚಾಯತಗಳಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿ ಸಂಘಗಳಿಂದ ಪ್ರಗತಿನಿಧಿಯನ್ನು ನೀಡುವ ಮೂಲಕ ಹಿಡುವಳಿ ಮತ್ತು ವಾರ್ಷಿಕ ಯೋಜನೆಯ ಗುರಿಸಾಧನೆಗೆ ವಿಶೇಷ ಗಮನ ನೀಡಲಾಗುತ್ತಿದ್ದು, ಸದಸ್ಯರು ನಿಗದಿತ ಅವಧಿಯಲ್ಲಿ ಗುರಿಸಾಧನೆ ಮಾಡಲು ಇದು ಪೂರಕವಾಗಿದೆ. ಮತ್ತು ಗ್ರಾಮೀಣ ಪ್ರದೇಶದ ಕೆರೆಗಳು ಪ್ರತಿಯೊಂದು ಊರಿನ ಸಮೃದ್ಧಿಯ ಪ್ರತೀಕವಾಗಿದೆ. ಗ್ರಾಮೀಣ ಜನ ಜೀವನವು ಸಂಪೂರ್ಣವಾಗಿ ಕೆರೆಗಳ ಮೇಲೆಯೆ ಅವಲಂಬಿತವಾಗಿದೆ. ಅಚ್ಚು ಕಟ್ಟಿನ ಪ್ರದೇಶ ಗುರುತಿಸಿ ಅಲ್ಲಿ ವ್ಯವಸ್ಥಿತವಾಗಿ ಕೆರೆಗಳನ್ನು ನಿರ್ಮಿಸಿರುವ ನಮ್ಮ ಪೂರ್ವಜರ ಸಾಧನೆಯೇ ಅದ್ಭುತ‌. ಅಂತರ್ಜಲದ ಮುಖ್ಯ ಸೆಲೆಯಾಗಿದ್ದ ಈ ಕೆರೆಗಳು ಮಳೆಗಾಲದಲ್ಲಿಯೇ ನೀರು ತುಂಬದ ಮಟ್ಟಕ್ಕೆ ಬಂದಿದೆ.

ಕೆರೆಗಳ ಇಂದಿನ ದುಃಸ್ಥಿತಿಗೆ ನೇರವಾಗಿ ಮಾನವನೇ ಹೊಣೆ ಹೊರತು ಬೇರೆ ಯಾರೂ ಅಲ್ಲ. ಹಾಗಾಗಿ ಇಂದು ಹೆಚ್ಚುತ್ತಿರುವ ನೀರಿನ ಬೇಡಿಕೆಗೆ ಕೆರೆಗಳನ್ನು ಪುನಃಶ್ಚೇತನಗೊಳಿಸದ ಹೊರತು ಬೇರೆ ಯಾವುದೇ ಮಾರ್ಗೋಪಾಯಗಳು ಇಲ್ಲವಾಗಿದೆ. ಇಂದಿನ ಬರಗಾಲದ ಪರಿಸ್ಥಿತಿಗೆ ಪ್ರತಿಯೊಂದು ಕೆರೆಗಳ ಹೂಳೆತ್ತಿ ಅವುಗಳ ಜೀರ್ಣೋದ್ಧಾರಗೊಳಿಸುವ ಅವಶ್ಯಕತೆ ಇದೆ. ಆದರೆ ಪುನಃಶ್ಚೇತನದ ಕೆಲಸವು ಸ್ಥಳೀಯರ ಮೂಲಕವೇ ನಡೆಯಬೇಕೆಂಬ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ, ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರ ನೇತೃತ್ವದಲ್ಲಿ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರ ಮಾರ್ಗದರ್ಶನದಲ್ಲಿ 2016 ರಲ್ಲಿ “ನಮ್ಮೂರು ನಮ್ಮ ಕೆರೆ’ ಯೋಜನೆಯನ್ನು ರೂಪಿಸಿದೆ. ಎಸ್‌ ಕೆ ಡಿಆರ್‌ ಡಿ ಪಿ ಯ ಆರ್ಥಿಕ ಸಹಕಾರ ದೊಂದಿಗೆ ಸ್ಥಳೀಯರ ಸಹಭಾಗಿತ್ವದಲ್ಲಿ ಕೆರೆಗಳನ್ನು ಪುನಃಶ್ಚೇತನಗೊಳಿಸುವ “ನಮ್ಮೂರು ನಮ್ಮ ಕೆರೆ’ ಯೋಜನೆಯಿಂದ ಕಾಮಗಾರಿ ಮಾಡಿಸ‌ಲಾಗಿದೆ. ಕೇಂದ್ರ ಸರಕಾರದ ಮನೆ ಬಾಗಿಲಿಗೆ ಬ್ಯಾಂಕ್‌ ಎಂಬ ಚಿಂತನೆಯನ್ನು ಸಾಧಿಸಿ ತೋರಿಸಿದೆ. ವರದಕ್ಷಿಣೆ ಪಿಡುಗು ಹೋಗಲಾಡಿಸಲು ಜಾಗೃತಿ ಮೂಡಿಸಿದೆ. ಮಧ್ಯವರ್ಜನೆ ಶಿಬಿರಗಳನ್ನು ನಡೆಸಿ ಹಲವರನ್ನು ಮದ್ಯ ಮುಕ್ತರನ್ನಾಗಿಸುವ ಮೂಲಕ ಅನೇಕ ಕುಟುಂಬಗಳಿಗೆ ಮರು ಜೀವ ನೀಡಿದೆ. ಸಾಮೂಹಿಕ ವಿವಾಹ, ಮೊದಲಾದ ನಾನಾ ವಲಯಗಳಲ್ಲಿ ರಾಜಕೀಯ ರಹಿತವಾಗಿ ಗುರಿ ಸಾಧಿಸಿದೆ. ನೂತನ ಪದಾಧಿಕಾರಿಗಳು ಅದನ್ನು ಮುಂದುವರಿಸಿ, ಮುನ್ನಡೆಸ ಬೇಕಾಗಿದೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ಕೃಷ್ಣಾ ರಾಮದುರ್ಗ ಅವರು ಹೇಳಿದರು.

ಬಾಗಲಕೋಟ ಜಿಲ್ಲಾ ನಿರ್ದೇಶಕರು, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ಕೃಷ್ಣಾ ರಾಮದುರ್ಗ, ಹುನಗುಂದ ಯೋಜನಾಧಿಕಾರಿ ಸಂತೋಷ ಕುಮಾರ,& PKPS ಅಧ್ಯಕ್ಷರಾದ ಗದಗಯ್ಯ ನಂಜಯ್ಯನಮಠ ಪತ್ರಕರ್ತರಾದ ದೇವರಾಜ ಕಮತಗಿ, ಒಕ್ಕೊಟದ ಅಧ್ಯಕ್ಷರು ಮತ್ತು ಸದಸ್ಯರು ಊರಿನ ಪ್ರಮುಖರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.


ಬಾಗಲಕೋಟ ಜಿಲ್ಲಾ ನಿರ್ದೇಶಕರಾದ ಕೃಷ್ಣಾ ಟಿ, ಜನಜಾಗೃತಿ ವೇದಿಕೆ ಸದಸ್ಯರಾದ ಕೃಷ್ಣಾ ರಾಮದುರ್ಗ, PKPS ಅಧ್ಯಕ್ಷರಾದ ಗದಗಯ್ಯ ನಂಜಯ್ಯನಮಠ, ಪತ್ರಕರ್ತರಾದ ದೇವರಾಜ ಕಮತಗಿ, ಐಹೊಳೆ ವಲಯದ ಮೇಲ್ವಿಚಾರಕರಾದ ಭಾರತಿ, ಯೋಜನಾಧಿಕಾರಿ ಸಂತೋಷ ಕುಮಾರ, ಮತ್ತು ಕೃಷಿ ಮೇಲ್ವಚಾರಕರಾದ ಆನಂದ, ಐಹೊಳೆ ವಲಯದ ಎಲ್ಲಾ ಸೇವಾಪ್ರತಿನಿಧಿಗಳು ಉಪಸ್ಥಿತಿ ಇದ್ದರು.

About vijay_shankar

Check Also

novinha muito excitada also mature ohmibod orgasm

kendell woods students His Secretary’s Overtime Included a Special Bonus The files ruined across the …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.