Breaking News

ಹುಬ್ಬಳ್ಳಿಯ ಹಿರಿಯ ಸಾಹಿತಿ ದಂಡೆ ದಂಪತಿಗಳಿಗೆ “ಸಂಗಮ ಸಿರಿ ‘ ಪ್ರಶಸ್ತಿ ಪ್ರಧಾನ


  • ಹುಬ್ಬಳ್ಳಿ : ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ರಚನೆಗೊಂಡಿದ್ದು ಇದರಡಿ ವಚನಸಾಹಿತ್ಯದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ‘ಸಂಗಮ ಸಿರಿ’ ಪ್ರಶಸ್ತಿ ಹಾಗೂ ೧೦ ಸಾವಿರ ರೂ.ನಗದು ಹಾಗೂ ಫಲಕವನ್ನೊಳಗೊಂಡ ಪ್ರಶಸ್ತಿ ಈ ವರ್ಷದಿಂದ ನೀಡಲಾಗುತ್ತಿದೆ.
    ‘ಸಂಗಮ ಸಿರಿ’ ಪ್ರಶಸ್ತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ.ವೀರಣ್ಣ ದಂಡೆ ಹಾಗೂ ಡಾ. ಜಯಶ್ರೀ ದಂಡೆ ದಂಪತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಹಾಗೂ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತರಾದ ಜಿ.ಜಿ.ಗೌಡಪ್ಪಗೋಳ ಹೇಳಿದರು.
    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಂಡೆ ದಂಪತಿಗಳು ವಚನ ಸಾಹಿತ್ಯ ಸಂಶೋಧನೆಯಲ್ಲಿ ಹಿರಿದಾದ ಸಾಧನೆ ಮಾಡಿದ್ದಾರೆ. ಈ ಪ್ರಶಸ್ತಿಯನ್ನು ಅ.೨ ರಂದು ವಿತರಿಸಲಾಗುವುದು.ಇದೇ ಸಂದರ್ಭದಲ್ಲಿ ಡಾ. ಸಂಗಮೇಶ ಹಂಡಿಗಿ ಹಾಗೂ ಬೀದರನ ಹಂಶಕವಿ ಅವರು ಸಂಪಾದಿಸಿದ ‘ಆಧುನಿಕ ವಚನಗಳು ಭಾಗ -೧೦’ ಕೃತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು. ಡಾ.ಸಂಗಮೇಶ ಹಂಡಿಗಿ ಅವರು ೪೬ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕದಲ್ಲಿ ತಮ್ಮದೆಯಾದ ಒಂದು ಬಳಗ ಸೃಷ್ಟಿಸಿಕೊಂಡಿದ್ದರು. ಅವರ ನೆನಪಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಪ್ರಶಸ್ತಿ ಆಯ್ಕೆಯ ಮುಖ್ಯಸ್ಥರಾಗಿ ಹಿರಿಯ ಸಾಹಿತಿ ಮಹಾಂತಪ್ಪ ನಂದೂರು ಕಾರ್ಯ ನಿರ್ವಹಿಸಿದರು. ಆಯ್ಕೆ ಸಮಿತಿ ಸಭೆಯಲ್ಲಿ ಸಾಹಿತಿ ಎಸ್.ವಿ.ಪಟ್ಟಣಶೆಟ್ಟಿ, ಹಿರಿಯ ಪತ್ರಕರ್ತರಾದ ಗಣಪತಿ ಗಂಗೊಳ್ಳಿ,ಡಾ.ರಾಮು ಮೂಲಗಿ, ಡಾ. ಮಹೇಶ ಹೊರಕೇರಿ, ಜಿ.ವಿ. ಹಿರೇಮಠ, ರವೀಂದ್ರ ರಾಮದುರ್ಗಕರ ,ಬಸವರಾಜ ಕರ್ಕಿ ಇತರರು ಪಾಲ್ಗೊಂಡಿದ್ದರು ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಮಹಾಂತಪ್ಪ ನಂದೂರ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ವೀರೇಶ್ ಹಂಡಿಗಿ, ಖಜಾಂಚಿ ಬಸವರಾಜ ಕರ್ಕಿ ಇತರರು ಇದ್ದರು.
    ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ(ರಿ)ಹುಬ್ಬಳ್ಳಿಯ ಅಧ್ಯಕ್ಷರಾಗಿ ಜಿ.ಬಿ. ಗೌಡಪ್ಪಗೋಳ ಇದ್ದು, ಗೌರವಾಧ್ಯಕ್ಷರು ಗಣಪತಿ ಗಂಗೊಳ್ಳಿ, ಉಪಾಧ್ಯಕ್ಷರು ಸಂತೋಷ ಆರ್ ಶೆಟ್ಟಿ, ಡಾ.ಲಿಂಗರಾಜ ಅಂಗಡಿ, ಡಾ.ರಾಮು ಮೂಲಗಿ, ಪ್ರಧಾನ ಕಾರ್ಯದರ್ಶಿ ಡಾ.ವೀರೇಶ ಹಂಡಿಗಿ, ಸಹ ಕಾರ್ಯದರ್ಶಿಗಳು ರವೀಂದ್ರ ರಾಮದುರ್ಗಕರ, ಬಿ.ಎಸ್.ಮಾಳವಾಡ, ಖಜಾಂಚಿ ಬಸವರಾಜ ಕರ್ಕಿ, ನಿರ್ದೇಶಕರು ಜಿ.ಎಸ್.ಅಂಗಡಿ, ರಘುವೀರ ಹೆಬ್ಬಾರ, ಜಿ.ವಿ.ಹಿರೇಮಠ, ಶ್ರೀಮತಿ ಶ್ವೇತಾ ಬಣಕಾರ, ಶ್ರೀಮತಿ ಶೃತಿ ಹೆಬ್ಬಾರ , ಸೋಮು ರೆಡ್ಡಿ, ಶ್ರೀಕಾಂತ ಬಣಕಾರ, ಸಂಭಾಜಿ ಕಲಾಲ, ಸಾಹಿತ್ಯ ಕಮೀಟಿಯಲ್ಲಿ -ಎಸ್.ವಿ.ಪಟ್ಟಣಶೆಟ್ಟಿ, ಲೋಚನೇಶ ಹೂಗಾರ , ಮಹಾಂತಪ್ಪ ನಂದೂರ, ಡಾ.ಮಹೇಶ ಹೊರಕೇರಿ, ಡಾ.ಪ್ರಭು ಗಂಜಿಹಾಳ, ಸತೀಶ ಕುಲಕರ್ಣಿ, ಶ್ರೀಮತಿ ಶ್ರೀದೇವಿ ಕೆರೆಮನೆ, ಸೋಮಶೇಖರ ಉಮರಾಣಿ, ಆರ್.ಎಂ.ಗೋಗೇರಿ, ಸುಶಿಲೇಂದ್ರ ಕುಂದರಗಿ ಇದ್ದಾರೆ. ***

ವರದಿ-
ಡಾ.ಪ್ರಭು ಗಂಜಿಹಾಳ-೯೪೪೮೭೭೫೩೪೬

ಸಾಹಿತಿ / ನಿವೃತ್ತಿ ಪ್ರಾಧ್ಯಾಪಕ ಡಾ,ವೀರಣ್ಣ ದಂಡಿ

About vijay_shankar

Check Also

novinha muito excitada also mature ohmibod orgasm

kendell woods students His Secretary’s Overtime Included a Special Bonus The files ruined across the …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.