Breaking News
ಅಮೀನಗಡ ನಗರದ ಪೋಲಿಸ್ ಇಲಾಖೆಯಿಂದ ಕಳ್ಳತನವಾದ ೨೧ ಬೈಕ್ ವಶ ! ಪ್ರಕರಣ ಬೇದಿಸಿದ ಸಿಬ್ಬಂದಿಗೆ ಬಹುಮಾನ ಘೋಷಣೆ ಮಾಡಿದ ಎಸ್ ಪಿ ಸಿದ್ದಾರ್ಥ ಗೋಯಲ್

ಅಮೀನಗಡ ನಗರದ ಪೋಲಿಸ್ ಇಲಾಖೆಯಿಂದ ಕಳ್ಳತನವಾದ ೨೧ ಬೈಕ್ ವಶ ! ಪ್ರಕರಣ ಬೇದಿಸಿದ ಸಿಬ್ಬಂದಿಗೆ ಬಹುಮಾನ ಘೋಷಣೆ ಮಾಡಿದ ಎಸ್ ಪಿ ಸಿದ್ದಾರ್ಥ ಗೋಯಲ್

ಅಮೀನಗಡ : ರಾಯಚೂರು, ಯಾದಗಿರಿ,ಬಾಗಲಕೋಟೆ ಸೇರಿದಂತೆ ಹಲವು ಕಡೆ ಬೈಕ್ ಕಳ್ಳತನ ವ್ಯಾಪಕವಾಗಿ ನಡೆಯುತ್ತಿತ್ತು ಈ ವಿಚಾರದಲ್ಲಿ ಸದರಿ ದಿನಾಂಕ ೧೩/೦೪/೨೦೨೫ ರಂದು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ರಾಮಣ್ಣ ಈಳಗೇರ ತಮ್ಮ ಬೈಕ್ ಕಳ್ಳತನ ಪ್ರಕರಣವನ್ನು ಅಮೀನಗಡ ಠಾಣೆಯಲ್ಲ ಗುಣ್ಣಾ ನಂ, ೫೦/೨೦೨೫ ರ ಕಲಂ ೩೦ [_೨ ] ಬಿ ಎನ್ ಎಸ್ ಅಡಿಯಲ್ಲಿ ದಾಖಲು ಮಾಡಿದಾಗ ಠಾಣೆ ಕ್ರೈಂ ಪಿ,ಎಸ್,ಐ ಶ್ರೀ ವಾಯ್ ಎಚ್ ಪಠಾಣ ಹಾಗೂ ಪಿ,ಎಸ್,ಐ ಶ್ರೀಮತಿ ಜ್ಯೋತಿ ವಾಲಿಕಾರ ರವರು ಪ್ರಕರಣ ದಾಖಲು ಮಾಡಿಕೊಂಡು ಪತ್ತೆ ಕಾರ್ಯ ಆರಂಬಿಸಿದಾಗ ಆರೋಪಿತನಾದ ಹುಲಗಪ್ಪ ತಂ/ ಹನಮಂತ ಮೋಡಿಕೇರ ಇವನಿಂದ ಕಳ್ಳತನ ಮಾಡಿ ಕೆಲವೊಂದು ಮಾರಾಟ ಮಾಡಿದ್ದ

ಕೆಲವೊಂದು ಬಚ್ಚಇಟ್ಟಿದ್ದ ಇತನ ಬಗ್ಗೆ ಕೆಲವು ಮಾಹಿತಿಗಳು ಅನುಮಾನ ಆಸ್ಪದವಾಗಿ ಕಂಡು ಬಂದಾಗ ವಿಚಾರಣೆ ನಡೆಸಿದ ನಮ್ಮ ತಂಡ ಆರೋಪಿತನಿಂದ ೨೧ ಬೈಕ್ ಗಳನ್ನು ವಶಪಡಿಸಿಕೊಂಡಿದೆ. ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದಾರೆ. ಈ ಪ್ರಕರಣ ಬೇದಿಸಲು ಎರಡು ತಂಡಗಳನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಸಿದ್ದಾರ್ಥ ಗೋಯಲ್, IPS ಹಾಗೂ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಶ್ರೀ ಪ್ರಸನ್ನ ದೇಸಾಯಿ & ಮಾನ್ಯ ಪೋಲಿಸ್ ಉಪಾಧೀಕ್ಷಕರಾದ ಶ್ರೀ ಸಂತೋಷ ಬನ್ನಟ್ಟಿ ,ಹಾಗೂ ಮಾನ್ಯ ಸಿ,ಪಿ,ಐ ಶ್ರೀ ಎಸ್,ಬಿ, ಆಜೂರ ಇವರ ಮಾರ್ಗದರ್ಶನದಲ್ಲಿ ಶ್ರೀಮತಿ ಜ್ಯೋತಿ ವಾಲಿಕಾರ,PSI ಹಾಗೂ [ ಕಾಸು] ಶ್ರೀ ವಾಯ್ ಎಚ್ ಪಠಾಣ PSI [ ಅವಿ ] ಇವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ASI ಶ್ರೀ ಎ,ವಾಯ್ ಬಿಳ್ಳೂರು, ಸಿಬ್ಬಂದಿ ಶ್ರೀ ಎಂ ಎಂ ಬೋಳರಡ್ಡಿ

,ಶ್ರೀ ರವಿ ದಾಸರ, ಶ್ರೀ ಸಿದ್ದಲಿಂಗಪ್ಪ ಬಾರಡ್ಡಿ, ಶ್ರೀ ಆನಂದ ಮನ್ನಿಕಟ್ಟಿ, ಶ್ರೀ ಎಚ್,ಪಿ,ಕೂಗಟಿ, ಶ್ರೀ ವಾಯ್,ಎಸ್, ಬೋಳಿ ಶ್ರೀ ಬಸು ನಲತವಾಡ, ಶ್ರೀ ಸಂಗಮೇಶ ತೋಟದ ಶ್ರೀ ಪ್ರಶಾಂತ ವಾಲಿಕಾರ, ಶ್ರೀ ಮನೋಹರ ಪತ್ತಾರ, ಶ್ರೀ ನಾಗರಾಜ ಗೌಡರ ಶ್ರೀ ರಮೇಶ ಗಣಿ , ಶ್ರೀ ಸೋಮು ವಿಟ್ಲಾಪೂರ ಶ್ರೀ ಎಸ್,ಕೆ ಕಟ್ಟಿಮನಿ, ಶ್ರೀ ಗಣೇಶ ಪವಾರ ಶ್ರೀ ಚಂದ್ರು ಜಟ್ಟೆಪ್ಪಗೋಳ ,ಈ ಎಲ್ಲಾ ಸಿಬ್ಬಂದಿಗಳ ಪರಿಶ್ರಮದಿಂದ ಇಂದು ಆರೋಪಿ ಹುಲಗಪ್ಪ ಮೊಡಿಕೇರ ಇವನಿಂದ ಕಳ್ಳತನ ಮಾಡಿದ ೨೧ ಬೈಕ್ ಗಳನ್ನು ವಶಪಡಿಸಿಕೊಂಡು ದೊಡ್ಡ ಜಾಲವನ್ನು ಬೇದಿಸಿದ್ದಾರೆ. ಸಿಬ್ಬಂದಿಗಳ ಈ ಕಾರ್ಯಕೆ ಜಿಲ್ಲಾ ಎಸ್,ಪಿ ಅವರು ಅಭಿನಂದಿಸಿದ್ದು ಸೂಕ್ತ ಬಹುಮಾನ ನೀಡುವುದಾಗಿ ಹೇಳಿದರು. ಕಳ್ಳತನದ ಈ ಎಲ್ಲಾ ಬೈಕುಗಳನ್ನು ಸಂಬಂದಿಸಿದ ಮಾಲಿಕರಿಗೆ ಒಪ್ಪಿಸಲಾಗುತ್ತದೆ . ಎಂದರು‌.

ವರದಿ : ಕಿರಣರಾಜ್ ಎಮ್ ಕಾಳಗಿ

About vijay_shankar

Check Also

ಎರಡನೇ ಗಂಡನ ಮನೆಯಲ್ಲಿ ಯುವತಿ ಶವ ಪತ್ತೆ! ರೊಚ್ಚಿಗೆದ್ದ ಪೋಷಕರಿಂದ ನಡೆದೇ ಹೋಯ್ತು ಘೋರ ದುರಂತ

ಹುನಗುಂದ: ಮದುವೆಯಾಗಿದ್ದರೂ ಗಂಡನಿಂದ ದೂರವಾಗಿ ಪ್ರಿಯಕರನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿಯೊಬ್ಬಳು ಇಂದು ತನ್ನ ಪ್ರಿಯ ಗಂಡನ ಮನೆಯಲ್ಲೇ ದುರಂತ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.