Breaking News

ಶೂಲೀಭಾವಿ ಗ್ರಾಮದಲ್ಲಿ ಶ್ರೀ ಬನಶಂಕರಿ ದೇವಿಯ ೫೧ ನೇ ವರ್ಷದ ಸುವರ್ಣ ಸಂಭ್ರಮ ಜಾತ್ರಾ ಮಹೋತ್ಸ ಜನೇವರಿ:೨೭ ರಿಂದ ಆರಂಭ

ಅಮೀನಗಡ : ರಾಜ್ಯದಲ್ಲಿಯೇ ಸೂಳೇಭಾವಿ ಗ್ರಾಮ ಭಾವೈಕ್ಯತೆಗೆ ಮಾದರಿಯಾದ ಗ್ರಾಮ ಎಂದರೆ ತಪ್ಪಾಗಲಾರದು, ನಮ್ಮ ಪೂರ್ವಜರು ಹಾಕಿ ಕೊಟ್ಟ ಈ ಭಾವೈಕ್ಯತೆಯನ್ನು ಇಂದು ನಾವು ನಮ್ಮ ಮುಂದಿನ ಪೀಳಿಗೆಗೆ ಕೊಟ್ಟು ಹೋಗಬೇಕಾಗಿದೆ. ಅದರಂತೆ ಗ್ರಾಮದ ಆರಾಧ್ಯೆ ದೇವತೆ ತಾಯಿ ಬನಶಂಕರಿ ದೇವಿಯ ೫೧ ನೇ ವರ್ಷದ ಸುವರ್ಣ ಸಂಭ್ರನ ಜಾತ್ರಾ ಮಹೋತ್ಸ ಜನೆವರಿ ೨೭ ರಿಂದ ಆರಂಭವಾಗಲಿದೆ. ಗ್ರಾಮದ ದಲಿತ ರಿಂದ ತಾಯಿ ಬನಶಂಕರಿದೇವಿಗೆ ಮೊಟ್ಟ ಮೊದಲು ಗರ್ಭಗುಡಿಯಲ್ಲಿ ಅಭಿಶೇಖ ಮಾಡಿಸುವ ಮೂಲಕ ಧಾರ್ಮಿಕ ಪೂಜೆಯೊಂದಿಗೆ ಈ ಜಾತ್ರೆ ಆರಂಭವಾಗುವುದು ವಿಶೇಷ.. ಇಂತಹ ಭಾವೈಕ್ಯೆತೆಗೆ ಈ ಜಾತ್ರೆ ಮಾದರಿಯಾಗಿದೆ. ಎಂದು ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ

ಎಸ್ ಜಿ ನಂಜಿಯ್ಯನಮಠ ಅವರು ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತನಾಡಿದರು. ಅಲ್ಲದೆ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವರಾದ ಮಾನ್ಯ ಆರ್ ಬಿ ತಿಮ್ಮಾಪೂರ ಅವರು ಅಂದು ಪಾಲ್ಗೊಳ್ಳಲಿದ್ದಾರೆ. ,ಇಂತಹ ಭಾವೈಕ್ಯೆತೆ ಜಾತ್ರೆ ಎಲ್ಲರಿಗೂ ಮಾದರಿ ಆಗಬೇಕು,ಈ ಮಾಧ್ಯಮದ ಮೂಲಕ ಇದು ಹೆಚ್ಚಿನ ಪ್ರಚಾರ ಪದೆದು ಈ ಉತ್ತಮ ಸಂದೇಶದಿಂದ ಸಮಾಜ ಪರಿವರ್ತನೆಯಾಗಬೇಕೆಂದರು.

ಕೆ,ಎಚ್,ಡಿ,ಸಿ ನಿಗಮ ಮಂಡಳಿ ಮಾಜಿ ಅಧ್ಯಕ್ಷರು, ಹಾಗೂ ಪ್ರತಿಷ್ಠಿತ ಶ್ರೀ ಗಾಯತ್ರಿ ಪತ್ತಿನ ಸಹಕಾರಿ ಸಂಘದ ಸಂ,ಅಧ್ಯಕ್ಷರಾದ ಶ್ರೀ ಆರ್ ಪಿ ಕಲಬುರಗಿ ವಾಲ್ ಪೊಸ್ಟ್ ಬಿಡುಗಡೆ ಮಾಡಿ ಮಾತನಾಡಿದ ಅವರು ಗ್ರಾಮದಲ್ಲಿ ಒಟ್ಟು ೨೬ ಇತರೆ ಸಮಾಜಗಳಿದ್ದು ಈ ೫೧ ನೇ ಜಾತ್ರಾ ಮಹತ್ವದ ಸುವರ್ಣ ಸಂಭ್ರಮ ಈ ವರ್ಷ ಬಹಳ ಅದ್ದೂರಿಯಾಗಿ ಜಾತ್ರೆ ನಡೆಯಲಿದೆ,

ಗ್ರಾಮದಲ್ಲಿ ಈಗಾಗಲೇ ಹಬ್ಬದ ಸಂಭ್ರಮ ಪ್ರಾರಂಭವಾಗಿದೆ. ಈಮಹೋತ್ಸವದ ಅಂಗವಾಗಿ ನಿಂತರ ೫ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಂಸ್ಕೃತಿಕ ಕಾರ್ಯಕ್ರಮಗಳು, ಬಹಳ ಅದ್ದೂರಿಯಾಗಿ ಜರುಗಲಿವೆ. ಅಲ್ಲದೆ ಗ್ರಾಮದ ಎಲ್ಲಾ ಸಮಾಜದ ಪೀಠದ ಕುಲ ಗುರುಗಳಿಗೆ ಸಾನಿಧ್ಯ ವಹಿಸಲು ಆಹ್ವಾನ ನೀಡಿದ್ದು ಅದರಲ್ಲಿ ಬಹಳ ಜನ ಪೂಜ್ಯರು ಉಪಸ್ಥಿತಿ ವಹಿಸಲಿದ್ದಾರೆ,

ಸಚಿವರು,ಶಾಸಕರು, ಗಣ್ಯರು, ಸೇರಿದಂತೆ, ಈ ಜಾತ್ರಾ ಸುವರ್ಣ ಸಂಭ್ರಮದ ಉತ್ಸವದಲ್ಲಿ ಅನೇಕರು ಉಪಸ್ಥಿತಿ ವಹಿಸಲಿದ್ದಾರೆ.ಅನೇಕ ಸಾಧಕರಿಗೆ ಪ್ರಶಸ್ತಿ, ಸನ್ಮಾನಗಳನ್ನು ಹಮ್ಮಿಕೊಂಡಿದೆ. ಅಲ್ಲದೆ ಜನೆವರಿ : ೨೭ ರಂದ ಸಾಯಂಕಾಲ ೪ ಗಂಟೆಗೆ ಮುಸ್ಲಿಂ ಬಾಂಧವರಿಂದ ಗರುಡ ಪಟ ಕಟ್ಟಿಸುವ ಮೂಲಕ ಅಂದು ಸಾಯಂಕಾಲ ೪ ಗಂಟೆಗೆ ಧಾರ್ಮಿಕ ಚಿಂತನೆ ಹಾಗೂ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಂಡಿದೆ,

ಮಾಜಿ ಸಚಿವರಾದ ಶ್ರೀಮಾನ್ ಸಿ ಎಂ ಇಬ್ರಾಹಿಂ ಉಪಸ್ಥಿತಿ ವಹಿಸಿ ಮಾತನಾಡಲಿದ್ದಾರೆ. ಗ್ರಾಮದ ಜನತೆ ಹಾಗೂ ಸುತ್ತ ಹಳ್ಳಿಯ ಎಲ್ಲಾ ಗುರು ಹಿರಿಯರು ಭಾವೈಕ್ಯೆತೆಯಿಂದ ಭಾಗವಹಿಸಿ ಈ ಸುವರ್ಣ ಸಂಭ್ರಮ ೫೧ ನೇ ವರ್ಷದ ಜಾತ್ರಾ ಮಹೋತ್ಸ ಯಶಸ್ವಿಯಾಗಿ ನಡೆಯಲು ಎಲ್ಲರು ಅತೀ ಉತ್ಸಕತೆಯಿಂದ ಭಾವಹಿಸಿ ಸ್ವ ಇಚ್ಛೆಯಿಂದ ತಾಯಿ ಬನಶಂಕರಿ ದೇವಿ ಸೇವೆ ಮಾಡಿ ಪುಣಿತರಾಗಿ, ಗ್ರಾಮದ ಎಲ್ಲಾ ಸಮಾಜದ ಬಾಂಧವರು ನಿಂತು ಜವಾಬ್ದಾರಿಯಿಂದ ೫ ದಿನ.ಇಲ್ಲಿ ಪ್ರಸಾದ ಇರುತ್ತದೆ.ತಾವೆಲ್ಲರೂ ನಿಂತು ಸೇವೆ ಮಾಡಲು ಕರೆ ಕೊಟ್ಟರು, ಈ ಸುದ್ದಿ ಗೋಷ್ಠಿಯಲ್ಲಿ ಶ್ರೀ ಎಸ್,ಜಿ, ನಂಜಯ್ಯನಮಠ ,ಶ್ರೀ ಆರ್ ಪಿ, ಕಲಬುರಗಿ, ಶ್ರೀ ದುರಗಪ್ಪ ಹೊಸಮನಿ ಉಪಸ್ಥಿತಿ ಇದ್ದರು.

About vijay_shankar

Check Also

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.