Breaking News

ಶೂಲೇಭಾವಿ ಗ್ರಾಮದಲ್ಲಿ ಅದ್ದೂರಿಯಾಗಿ ನೇರವೇರಿದ ಶಿವಶರಣ ನೂಲಿ ಚಂದಯ್ಯ ನವರ ೯೧೫ ನೇ ಜಯಂತಿ

ಅಮೀನಗಡ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ಇಂದು ಶಿವಶರಣ ಶ್ರೀ ನೂಲಿ ಚಂದಯ್ಯನವರ ೯೧೫ ನೇ ಜಯಂತೋ ತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಶ್ರೀ ದುರ್ಗಾದೇವಿ ಕೊರವರ ( ಕೊರಮ) ಸಮಾಜದಿಂದ ಕುಲ ಗುರುಗಳಾದ ಕೊರವಂಜಿ ವಂಶಜರಾದ ನೀವು ಶ್ರೀ ವಿಷ್ಟು ಮಹಾಲಕ್ಷ್ಮಿಯನ್ನು ಒರೆಸುವ ಸಲುವಾಗಿ ಕೊರವಂಜಿ ಅವತಾರವನ್ನು ತಾಳಿ ಆಕಾಶರಾಜನ ಮಗಳಾದ ಪದ್ಮಾವತಿಯನ್ನು ಮದುವೆಯಾಗಲು ಶ್ರೀ ಹರಿ ಈ ಕೊರವಂಜಿ ವೇಷ ಧರಿಸಿದ ಆ ವಿಷ್ಣುವಿನ ಅವರಾವೇ ಈ ಕೊರವಂಜಿ ವಂಶಜರು,

ಶ್ರೀ ಕೃಷ್ಣಾ ರಾಮದುರ್ಗ

ಈ ವಂಶದ ಕುಲ ಗುರುಗಳು ೧೨ನೇ ಶತಮಾನದ ಕಾಯಕ ಯೋಗಿ ಶಿವಶರಣರಾದ ನೂಲಿ ಚಂದಯ್ಯನವರು ವಿಶ್ವ ಗುರು ಬಸವಣ್ಣನವರ ೭೬೨ ಶರಣರಲ್ಲಿ ಇವರು ಒಬ್ಬರು ತಮ್ಮ ಕಾಯಕ ನಿಷ್ಟೇ ಹಾಗೂ ದಾಸೋಹದಿಂದ ಲಿಂಗ ಜಂಗಮರ ಮನಗೆದ್ದು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಾನಿಯನ್ನು ಎತ್ತಿ ಹಿಡಿದರು.

. ಶಿವಶರಣ ಶ್ರೀ ನೂಲಿ ಚಂದಯ್ಯನವರ  ೪೨ ವಚನ ಗ್ರಂಥಗಳನ್ನು ಸರಕಾರ ಗುರುತಿಸಿ ಇಂದು ರಾಜ್ಯಾದ್ಯಂತ ರಜಾ ರಹೀತವಾಗಿ ಶಿವಶರಣ ನೂಲಿ ಚಂದಯ್ಯನವರ ಜಯಂತಿಯನ್ನು ಎಲ್ಲಾ ಸರಕಾರ  ಕಛೇರಿಯಲ್ಲಿ ಆಚರಿಸಬೇಂದು ಆದೇಶ ನೀಡಿದ್ದು ಕೊರಮ ಜನಾಂಗದ ಬಹು ವರ್ಷಗಳ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ ಎಂದು ಕೊರಮ ಸಮಾಜದ ನೂತನ ಅದ್ಯಕ್ಷ ಶ್ರೀ ಯಮನಪ್ಪ ಭಜಂತ್ರಿ ಅವರು  ಭಾವಚಿತ್ರ ಪೂಜೆ ವೇಳೆ ಸಮಾಜ ಉದ್ದೇಶಿಸಿ ಮಾತನಾಡಿದರು.

ಮಾಜಿ ಶಾಸಕರಾದ ಡಾ: ವಿಜಯಾಂದ ಕಾಶಪ್ಪನವರ ಶಿವಶರಣ ನೂಲಿ ಚಂದಯ್ಯನವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ ಮೆರವಣಿಗೆಗೆ  ರಿಬ್ಬನ್ ಕಟ್ಟ್ ಮಾಡುವ ಮೂಲಕ ಚಾಲನೆ ನೀಡಿದರು. ನಂತರ ವೇದಿಕೆ ಉದ್ದೇಶಿಸಿ ಮಾತನಾಡಿದ ಡಾ: ವಿಜಯಾನಂದ ಎಸ್ ಕಾಶಪ್ಪನವರ

ಶ್ರೇಷ್ಠ ಕಾಯಕ ಹಾಗೂ ಜಂಗಮ ಪ್ರಸಾದದ ಮೂಲಕ ಹಳ್ಳ ಹಾಗೂ ನದಿ ದಂಡೆಯ ಮೇಲೆ ಹುಲ್ಲು ಕಟಾವು ಮಾಡಿ ಕಸಬಾರಿಗೆ ಹಾಗೂ ಪುಟ್ಟಿಗಳನ್ನು  ಎನೆದು ಜೀವನ ಸಾಗಿಸುದ್ದರು. ಬಸವಣ್ಣನವರ ಚಿಂತನೆ ಹಾಗೂ ಸರ್ವರೂ ಒಂದೇ ಜಾತಿ ಧರ್ಮ ಎಂಬ ಅವರ ವಿಚಾರ ಧಾರೆಗಳು ಎಲ್ಲಾ ಶರಣರು ಒಪ್ಪುವಂತಿದ್ದವು ಒಟ್ಟು ೭೬೨ ಶರಣರಲ್ಲಿ ೧೨ ನೇ ಶತಮಾನದಲ್ಲಿ ಶಿವಶರಣ ನೂಲಿ ಚಂದಯ್ಯನವರು ಒಬ್ಬರು

ಶ್ರೀ ನಾಗೇಶ ಗಂಜಿಹಾಳ

ಸರಕಾರ ಅವರನ್ನು ಗುರುತಿಸಲು ಇಷ್ಟು ವರ್ಷ ಬೇಕಾಯಿತು. ಇನ್ನೂ ನಿಮ್ಮ ಸಮಾಜ ಒಗ್ಗಟ್ಟಾಗಲಿ,ಆರ್ಥಿಕವಾಗಿ, ಶೈಕ್ಷಣಿಕವಾಗಿ,ರಾಜಕೀಯವಾಗಿ ಬೆಳೆಯಲಿ,ನಾನು ಈ ಹಿಂದೆ ಶಾಸಕನಟಗಿದ್ದಾಗ ೩ ಜನರನ್ನು ತಾಲೂಕು ಪಂಚಾಯತ ಅಧ್ಯಕ್ಷರಾಗಿ, ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಮಾಡಿ ನಿಮ್ಮ ಜನಾಂಗಕ್ಕೆ ರಾಜಕೀಯ ಸ್ಥಾನಮಾನ ನೀಡಿದ್ದೇನೆ.

ಸಮಾಜದ ಗೌರವ ಅಧ್ಯಕ್ಷರು ಶ್ರೀ ಬಸವರಾಜ್ ಭಜಂತ್ರಿ

ಮುಂದಿನ ದಿನ ಇದೆ ಅ, ೨೮ ನೇತಾರಿಗೆ ಹುನಗುಂದ ತಾಲ್ಲೂಕಿನಲ್ಲಿ ದೊಡ್ಡ ಮಟ್ಟದ ನೂಲಿ ಚಂದಯ್ಯನವರ ಜಯಂತಿಯನ್ನು ಆಚರಿಸುತ್ತಿದ್ದಿರಿ ನನಗೆ ಏನೇ ಜವಾಬ್ದಾರಿ ಹಾಕಿದರೂ ನಾನು ಸಹಕಾರ ನೀಡುತ್ತೇನೆ. ೯೧೫ ನೇ ಜಯಂತಿಗೆ ನನನ್ನು ಕರೆದು ಈ ಕಾರ್ಯಕ್ರಮ ಉದ್ಘಾಟನೆ ಮಾಡಿಸಿ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿಸಿದ್ದಕ್ಕಾಗಿ ನೀವು ಯಾವತ್ತು ನಮ್ಮೊಂದಿಗೆ ಇದ್ದಿರಿ ಅಂತ ನಾನು ಭಾವಿಸಿದ್ದಿನಿ ಮುಂದಿನ ದಿನ ಈ ಕ್ಷೇತ್ರದ ಹಾಗೂ ತಮ್ಮ ಜನಾಂಗದ ಸಮಗ್ರ ಅಭಿವೃದ್ಧಿ ಹಾಗೂ ಏಳಿಗೆಗೆ ನಿಮ್ಮ ಆರ್ಶಿವಾದ  ನಮ್ಮ ಮೇಲೆ ಇರಲಿ ನಾವೆಲ್ಲರೂ ಒಂದೇ ಧರ್ಮ ಅದು ಲಿಂಗಾಯತ ಧರ್ಮ ಎಂದರು.

ಮಾಜಿ ಶಾಸಕರಿಗೆ ಈ ಸಂದರ್ಭದಲ್ಲಿ ಸಮಾಜದ ಎಲ್ಲಾ ಹಿರಿಯರು ಗೌರವ ಸನ್ಮಾನ ಮಾಡಿದರು.

ಸಭೆಯ ಮುಖ್ಯ ಅಥಿತಿಗಳಾಗಿ ಆಗಮಿಸಿದ ಆರ್,ಪಿ,ಕಲಬುರಗಿ ಅವರು ಸರಕಾರ ಬಹು ದಿನದ  ವರ್ಷಗಳ ಹೋರಾಟಕ್ಕೆ ಇಂದು ನಿಮಗೆ ಜಯ ಸಿಕ್ಕಿದೆ. ಶಿವಶರಣರಾದ ನೂಲಿ ಚಂದಯ್ಯನವರ ಈ ೯೧೫ ನೇ ಜಯಂತಿಯಲ್ಲಿ ನಾನು ಪಾಲ್ಗೊಂಡಿದ್ದು ಬಹಳ ಖುಷಿಯಾಗಿದೆ.ಕಾಯಕವೇ ಕೈಲಾಸ ಎಂದು ಬಸವಣ್ಣನವರ ವಚನವನ್ನು ಅಕ್ಷರ ಸಹ ಪಾಲಿಸಿದ ಕಾಯಕ ನಿಷ್ಠೆಯ ಮೂಲಕ ಲಿಂಗ ಕಳಚಿ ಬಿದ್ದರು ಸಹ ಕಾಯವೇ ಮೊದಲು ಅದನ್ನು ಎಂದರು ಹಾಗೆ      ತಾವು ಸಹ ಈಗ ಮುಂದು ವರೆದ ಸಮಾಜ ತಾವು ಆರ್ಥಿಕವಾಗಿ ,ಸಾಮಾಜಿಕವಾಗಿ ,ಶೈಕ್ಷಣಿಕವಾಗಿ ಇನ್ನೂ ಹೆಚ್ವು ಹೆಚ್ಚು ಬೆಳೆಯಬೇಕು,ಸಮಾ ಒಗ್ಗಟ್ಟಾಗಿ ಬಲಗೋಳ್ಳಬೇಕು ಎಂದರು.ಈ ಸಂದರ್ಭದಲ್ಲಿ ರಾಜ್ಯ ದೇವಾಂಗ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾದ ಆರ್ ,ಪಿ,ಕಲಬುರಗಿ ಅವರಿಗೆ ಸಮಾಜದ ಹಿರಿಯರು ,ಮಾಜಿ ಅಧ್ಯಕ್ಷರಾದ ಬಸಪ್ಪ ಯ ಹಂಗರಗಿ,ಹಾಗೂ ಗೌರವ ಅಧ್ಯಕ್ಷ ಬಸವರಾಜ್ ಯರಗೇರಿ ಅವರು  ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಕೃಷ್ಣಾ ರಾಮದುರ್ಗ, ನಾಗೇಶ ಗಂಜಿಹಾಳ, ವಾಯ್ ಬಿ ಭಜಂತ್ರಿ ಮಾತನಾಡಿ ಶಿವಶರಣ ನೂಲಿ ಚಂದಯ್ಯನವರ ಕಾಯಕ ನಿಷ್ಠೆ ಹಾಗೂ ದಾಸೋಹದಿಂದ ಗುರುತಿಸಿಕೊಂಡವರು ಸರಕಾರ ಇವರ ೪೨ ವಚನ ಗ್ರಂಥಗಳನ್ನು ಗುರುತಿಸಿ ೧೨ ನೇ ಶತಮಾನದಲ್ಲಿ ೭೬೨ ಶರಣರಲ್ಲಿ ಇವರೂ ಒಬ್ಬರು ಸರಕಾರ ಇವರನ್ನು ಅಂತ್ಯಹ ಗೌರವದಿಂದ ಇಂದು ರಾಜ್ಯಾದ್ಯಂತ ಇವರ ಜಯಂತಿಯನ್ನು ಆಚರಿಸಲು ಕರೆ ನೀಡಿದೆ ಇದು ಬಹು ವರ್ಷಗಳ ಹೋರಾಟಕ್ಕೆ ಸಿಕ್ಕ ಜಯ ಎಂದರು. ಈ ಜಯಂತೋತ್ಸವದಲ್ಲಿ ಮಾಜಿ ಶಾಸಕ ಡಾ: ವಿಜಯಾಂದ ಕಾಶಪ್ಪನವರ, ಶ್ರೀ ಆರ್,ಪಿ,ಕಲಬುರಗಿ, ಮಾಜಿ ಅಧ್ಯಕ್ಷರು KHDC ನಿ,ಬೆಂಗಳೂರು,ಶ್ರೀಮತಿ ಸರೋಜಾ ಕನಕಪ್ಪ ವಡ್ಡರ. ಶ್ರೀ ಜಹಾಂಗೀರ್ ಜಾಗೀರದಾರ್ , ನಾಗೇಶ ಗಂಜಿಹಾಳ, ತಾ,OBC ಘಟಕದ ಅಧ್ಯಕ್ಷರು,(BJP) ಶ್ರೀ ಗ್ಯಾನಪ್ಪ ಗೋನಾಳ ಗ್ರಾಂ,ಪ,ಸದಸ್ಯರು. ಸಮಾಜದ ನೂತನ ಅಧ್ಯಕ್ಷರಾದ ಶ್ರೀ ಯಮನಪ್ಪ ಫ ಭಜಂತ್ರಿ, ಗೌರವ ಅಧ್ಯಕ್ಷರಾದ ಶ್ರೀ ಬಸವರಾಜ್ ಭಜಂತ್ರಿ (ಯರಗೇರಿ) ಶ್ರೀ ಬಸಪ್ಪ ಭಜಂತ್ರಿ ಮಾಜಿ ಅಧ್ಯಕ್ಷರು,ಶ್ರೀ ರೋಮಣ್ಣ ಭಜಂತ್ರಿ,ಶ್ರೀ ಭೋಜಪ್ಪ ಭಜಂತ್ರಿ.ಶ್ರೀ ದೊಡ್ಡಭೀಮಪ್ಪ ಬಾ ಭಜಂತ್ರಿ.ಶ್ರೀ ರಾಮಣ್ಣ ಮೇಲ್ದಿ,ಶ್ರೀ ಶರಣಪ್ಪ ಸ ಭಜಂತ್ರಿ. ಶ್ರೀ ಬೈಲಪ್ಪ ದು ಭಜಂತ್ರಿ ಶ್ರೀ ಹನಮಂತ ಹಿರೇಮನಿ,ಶ್ರೀ ಯಮನಪ್ಪ ಬೊ ಭಜಂತ್ರಿ. ಶ್ರೀ ಶಿವಪುತ್ರಪ್ಪ ಭಜಂತ್ರಿ, ಹಾಗೂ ಸಮಾಜದ ಅನೇಕ ಹಿರಿಯರು,ಯುವಕರು,ತಾಯಂದಿರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

About vijay_shankar

Check Also

ಆಸಂಗಿ ಗ್ರಾಮದಲ್ಲಿ ರಾಜಶೇಖರ್ ಶೀಲವಂತ ಇವರಿಂದ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ವಿತರಣೆ

ಗುಳೇದಗುಡ್ಡ : ತಾಲೂಕಿನ ಸಮಿಪದ ಆಸಂಗಿ ಗ್ರಾಮದಲ್ಲಿ ಇಂದು ಶ್ರೀ ಮಾರುತೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಸದಸ್ಯರಿಗೆ ಬಾಗಲಕೋಟೆ ಜಿಲ್ಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.