Breaking News

ನಾಳೆ ಚಂದ್ರಗ್ರಹಣ | ಭಾರತದಲ್ಲಿ ಹೆಚ್ಚು ಪರಿಣಾಮ ಇಲ್ಲ

ಬೆಂಗಳೂರು | ನಾಳೆ ಚಂದ್ರಗ್ರಹಣ ಸಂಭವಿಸಲಿದೆ. ಈ ಬಾರಿಯ ಚಂದ್ರಗ್ರಹಣವೂ ಸಂಪೂರ್ಣವಾಗಿ ಭಿನ್ನವಾಗಿರಲಿದ್ದು, ಚಂದ್ರನ ಆಕಾರದಲ್ಲಿ ಯಾವುದೇ ಬದಲಾವಣೆ ಇರಲ್ಲ. ಗ್ರಹಣದ ಸಮಯದಲ್ಲಿ ಚಂದ್ರನು ಅರ್ಧಾಕಾರದಲ್ಲಿ ಕಾಣದೇ ತನ್ನ ಪೂರ್ಣ ಗಾತ್ರದಲ್ಲೇ ಚಲಿಸಲಿದ್ದಾನೆ. ಈ ಗ್ರಹಣವೂ ಕೂಡ ಪೂರ್ಣ ಅಥವಾ ಭಾಗಶಃ ಚಂದ್ರಗ್ರಹಣವಲ್ಲ. ಇದು ಆರಂಭದ ಎರಡು ಗ್ರಹಣಗಳಂತೆ ನೆರಳು ಚಂದ್ರಗ್ರಹಣವಾಗಿರುತ್ತದೆ.

ಆದ್ದರಿಂದಗ್ರಹಣವುಭಾರತದಲ್ಲಿಹೆಚ್ಚುಪರಿಣಾಮಬೀರುವುದಿಲ್ಲದೇಗುಲಬಂದ್ಮಾಡುವುದು,ಆಹಾರಸೇವನೆಮುಂತಾದಚಟುವಟಿಕೆಗಳಿಗೆಯಾವುದೇನಿರ್ಬಂಧವಿಲ್ಲಅರೆನೆರಳಿನಚಂದ್ರಗ್ರಹಣವನ್ನುಸೂತಕಎಂದುತಿಳಿಯಲ್ಲಎಂದುಜ್ಯೋತಿಷಿಗಳುಹೇಳುತ್ತಾರೆ.

ಗ್ರಹಣ ಕಾಲ: 

ನಾಳಿನ ಚಂದ್ರಗ್ರಹಣ ರಾತ್ರಿ 11.16ಕ್ಕೆ ಆರಂಭಗೊಂಡು 02.32ಕ್ಕೆಅಂತ್ಯವಾಗಲಿದೆ. ರಾತ್ರಿ 12.54ಕ್ಕೆ ಪೂರ್ಣ ಗ್ರಹಣ ಘೋಚರವಾಗಲಿದೆ.

ಎಲ್ಲೆಲ್ಲಿ ಗೋಚರ:

ಭಾರತ, ಏಷ್ಯಾದ ಕೆಲವು ಭಾಗ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾ, ಯುರೋಪ್,ಆಫ್ರಿಕಾದಲ್ಲೂ ಚಂದ್ರಗ್ರಹಣ ಗೋಚರವಾಗಲಿದೆ. ಚಂದ್ರನ ಚಿತ್ರಣವು ಅಥವಾಪ್ರಭಾವಳಿ ನಮಗೆ ಮುಸುಕಾಗಿ ಕಾಣುತ್ತದೆ. ಗ್ರಹಣಕ್ಕೂಮುನ್ನಚಂದ್ರಭೂಮಿಯನೆರಳನ್ನುಪ್ರವೇಶಮಾಡುತ್ತಾನೆಪ್ರವೇಶಕ್ಕೆಚಂದ್ರಮಾಲಿನ್ಯ (ಪೆನುಂಬ್ರಾ)ಎನ್ನಲಾಗುತ್ತೆ.

ಚಂದ್ರ ಭೂಮಿಯ ನೆರಳನ್ನು ಪ್ರವೇಶಿಸಿದಾಗ ಸಹಜವಾಗಿ ಶಶಿಯ ಕಾಂತಿಯ ಕಡಿಮೆಯಾದಂತೆ ಕಾಣುತ್ತದೆ.
2020ರ ಮೊದಲ ಚಂದ್ರಗ್ರಹಣ ಜನವರಿ 10ರಂದು ಸಂಭವಿಸಿತ್ತು. ನಾಳೆ 5ರಂದು ಮತ್ತೊಂದು ಚಂದ್ರಗ್ರಹಣ ಸಂಭವಿಸುತ್ತಿದೆ.

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಆನಂದ ಪರಾಳದ

ಶ್ರೀ ಆನಂದ ಪರಾಳದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ಸದಸ್ಯರು ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.