Breaking News
ಅಮೀನಗಡ ಪೋಲಿಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತವಾಗಿ  ಶಾಂತಿ ಸಭೆ

ಅಮೀನಗಡ ಪೋಲಿಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತವಾಗಿ ಶಾಂತಿ ಸಭೆ

ಮುಖಂಡರೊಂದಿಗೆ ಶಾಂತಿಸಭೆ ಚರ್ಚೆ ನಡೆಸುತ್ತಿರುವ CPI ಸುನೀಲ ಸವದಿ, ಹುನಗುಂದ

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು,ಹಾಗೂ ಅಂಜುಮನ್ ಕಮಿಟಿ ಮಾಜಿ ಅಧ್ಯಕ್ಷರಾದ ಶ್ರೀ ಅಜ್ಮೀರ ಮುಲ್ಲಾ ,

ಅಮೀನಗಡ : ನಗರದ ಪೊಲೀಸ್ ಠಾಣೆಯಲ್ಲಿ ಇಂದು ಬಕ್ರೀದ್ ಹಬ್ಬದ ನಿಮಿತ್ತವಾಗಿ ಶಾಂತಿ ಪಾಲನ ಸಭೆ ನಡೆಯಿತು, ಸಭೆ ಉದ್ದೇಶಿಸಿ ಮಾತನಾಡಿದ ಅಂಜುಮನ್ ಇಸ್ಲಾಂ ಕಮೀಟಿ ಮುಖಂಡರಾದ ಅಜ್ಮೀರ್ ಮುಲ್ಲಾ ಅವರು ಮಾತನಾಡಿ ನಗರದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಯಾವತ್ತಿಗೂ ಸಹಕಾರದಿಂದ ಇದ್ದು ಭಾವೈಕ್ಯತವಾಗಿ ಎಂದಿಗೂ ಸಹಕಾರ ನೀಡುತ್ತಲೇ ಬಂದಿದ್ದಾರೆ,

ಮುಂದೆನೂ ಕೂಡಾ ಹೀಗೆ ನಾವು ಸಹೋದರಾಗಿ ವಿಜ್ರಂ ಮನೆಯಿಂದ ಹಬ್ಬ ಆಚರಿಸಲು ನಮ್ಮಲ್ಲಿ ಎಂದಿಗೂ ಯಾರಿಂದಲೂ ತೊಂದರೆ ಇಲ್ಲ ಎಂದರು. ಜೂನ್ ೭ ರಂದು ನಡೆಯಲಿರುವ ಬಕ್ರೀದ್ ಹಬ್ಬ ಅಂದು ಬೆಳಗ್ಗೆ ೮ ಗಂಟೆಗೆ ಜಾಮೀಯಾ ಮಸೀದಿ ಇಂದ ಅಗಸಿ ಬಾಗಲು ಮಾರ್ಗವಾಗಿ ಸಂಗಮೇಶ್ವರ ದೇವಸ್ಥಾನ ಮತ್ತು ಎಮ್ ಜಿ ರಸ್ತೆಯಿಂದ ಇದ್ಗಾ ಮೈದಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿ ನಂತರ ೧೨:೩೦ ರ ವರೆಗೂ ಇದ್ಗಾ ಹಾಗೂ ನಗರದ ಆಯಾ ಕಟ್ಟಿನ ಸ್ಥಳಗಳಲ್ಲಿ ಸೂಕ್ತ ಭದ್ರತೆ ಇರ್ಲಿ ಎಂದು ಸಭೆ ಉದ್ದೇಶಿಸಿ ಮಾತನಾಡಿದರು.


ನಂತರ ಮಾತನಾಡಿದ ಸೂಳೇಭಾವಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ರಾಜಮಹ್ಮದ ಕಿಡಕಿಮನಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹುಸೇನಫೀರಾ ಖಾದ್ರಿ ಸೇರಿದಂತೆ ಹಲವರು ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಠಾಣಾ ಅಧಿಕಾರಿ ಪಿಎಸ್ಐ ಜ್ಯೋತಿ ವಾಲಿಕಾರ ಅವರು ಮಾತನಾಡಿ ನಗರದಲ್ಲಿರುವ ಮುಸ್ಲಿಂ, ಹಾಗೂ ಹಿಂದೂ ಮುಖಂಡರಿಗೆ ಮನವಿ ಏನಂದರೆ ಆ ದಿನ ತಮ್ಮ ತಮ್ಮ ಸಮಾಜದ ಯುವಕರಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಯಾವುದೇ ಕಾನೂನು ಬಾಹೀರ ಪೊಸ್ಟಗಳನ್ನು ಹಾಕದಂತೆ ಎಚ್ಚರಿಕೆ ವಹಿಸಿ,, ಯಾವತ್ತೂ ಒಬ್ಬರನ್ನು ನಿಂದಿಸಿ, ಆಥವಾ ಧರ್ಮವನ್ನು ಅವಮಾನಿಸುವ ವಿಚಾರದಲ್ಲಿ ಯುವಕರಿಗೆ ಎಚ್ಚರಿಕೆ ಹೇಳಿ ಶಾಂತಿಯುತವಾಗಿ ಹಬ್ಬ ಆಚರಣೆಗೆ ಎಲ್ಲರೂ ಸಹಕಾರ ಕೊಡಬೇಕು ಎಂದರು.

ಅಲ್ಲದೆ ಗುಡೂರು,ಕಮತಗಿ,ಸೂಳೇಭಾವಿ ಪ್ರಮುಖ ಗ್ರಾಮಗಳು ಹೀಗಾಗಿ ನಾವು ಎಲ್ಲಾ ಕಡೆ ಗಮನ ಹರಿಸಬೇಕು ಎಲ್ಲಾ ಪ್ರಮುಖಂಡರು ಒಗ್ಗಟ್ಟಿನಿಂದ ಹಬ್ವ ಆಚರಿಸಿ, ನಮ್ಮ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ಹಾಗೂ ಸೂಕ್ತ ಭದ್ರತೆ ನೀಡುವುದಾಗಿ ತಿಳಿಸಿದರು, ಅಲ್ಲದೆ ಗೂವುಗಳ ಹತ್ಯ ನಿಷೇದ ಯಾರು ಕೂಡ ಗೋ ಹತ್ಯ ಮಾಡದಂತೆ ಎಚ್ಚರಿಕೆ ನೀಡಿ, ಎಲ್ಲಾ ಮುಖಂಡರಿವೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು.

ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಲ್ ಇನ್ಸಪೇಕ್ಟರ್ ಸುನೀಲ ಸವದಿ ಅವರು ಮಾತನಾಡಿ ಬಹಳ ವರ್ಷಗಳಿಂದ ಇಲ್ಲಿನ ಸಮಾಜದ ಹಿರಿಯರು ಬಹಳ ಶಾಂತಿಯುತವಾಗಿ ಹಬ್ಬ ಆಚರಿಸುತ್ತಾ ಬಂದಿದ್ದಾರೆ, ಈ ಮುಂದೆನೂ ಕೂಡ ತಾವು ಹೀಗೆ ಅವರಂತೆ ಶಾಂತಿಯಿಂದ ಹಬ್ಬ ಆಚರಿಸಿ, ಯಾವುದೇ ಕಾರಣಕ್ಕೂ ಅಹಿತಕರ ಘಟನೆಗೆ ಅವಕಾಶ ಕೊಡಬಾರದು, ಯಾವತ್ತೂ ನಮ್ಮ ಇಲಾಖೆ ಸಹಕಾರ ತಮಗೆ ಇದೆ,ಏನೆ ಪರ್ಸನಲ್ ಮಾತನಾಡೊದು ಇದ್ರೆ ಬಂದು ಮಿಟ್ ಆಗಿ ಮಾತನಾಡುವುದು,

ಹಾಗೆ ಬಕ್ರೀದ್ ಹಬ್ಬದ ದಿನ ನಾವು ಕೂಡ ಇಲ್ಲೆ ರೌಂಡ್ ಹಾಕತಿವಿ ಒಟ್ಟಿನಲ್ಲಿ .ಹಬ್ಬ ಯಶಸ್ವಿಯಾಗಿ ಶಾಂತಿಯುತವಾಗಿ ನಡೆಯಲಿ ,ನಿಮ್ಮ ಸಂಪೂರ್ಣ ಸಹಕಾರ ಇಲಾಖಗೆ ಇರ್ಲಿ ನಮ್ಮ ಸಹಕಾರ ನಿಮಗೆ ಖಂಡಿತ ಇರುತ್ತೆ ಮತ್ತೊಮ್ಮೆ ತಮ್ಮೆಲ್ಲರಿಗೂ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು.

ಈ ಶಾಂತಿ ಪಾಲನೆ ಸಭೆಯಲ್ಲಿ ಹುಸೇನಫೀರಾ ಖಾದ್ರಿ, ಅಜ್ಮಿರ ಮುಲ್ಲಾ, ರಾಜಮಹ್ಮದ್ ಕಿಡಕಿಮನಿ, ,ಅಬ್ದುಲ್ ರಜಾಕ್ ಗೋಡೆಕಾರ,ಖಾಸೀಮಸಾಬ ಒಂಟಿ, ಅಬುಬಕಾರ್ ಬೇಪಾರಿ,ಹನಮಂತ ತಳಗಿನಮನಿ, ತುಕಾರಾಮ ಪವಾರ್, ಅಮರೇಶ ಮಡ್ಡಿಕಟ್ಟಿ, ಡಿ,ಬಿ,ವಿಜಯಶಂಕರಚ, ಕಿರಣ ಕಾಳಗಿ, ಇಮ್ರಾನ್ ಸಾರ್ವಾಡ, ಹಾಗೂ ಪೋಲಿಸ್ ಸಿಬ್ಬಂದಿಗಳಾದ ಶಿವಾನಂದ ಕಟ್ಟಿಮನಿ, ಆನಂದ ಮನ್ನಿಕಟ್ಟಿ, ವಿಠ್ಠಲ, ಗಣಪತಿ ಪವಾರ್ ಮುಂತಾದವರು ಉಪಸ್ಥಿತಿ ಇದ್ದರು.

ತಾಲೂಕ ಪಂಚಾಯತ ಮಾಜಿ ಅಧ್ಯಯ ಹುಸೇನಫೀರಾ ಖಾದ್ರಿ ,ಅಮೀನಗಡ

About vijay_shankar

Check Also

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.