Breaking News
ಅಮೀನಗಡ ನಗರದಲ್ಲಿ ಸುಫರ್ ಕಾಫ್ ಪೋಲಿಸ್ ಅಧಿಕಾರಿ ASI ಯಂಕಣಗೌಡ ಪಾಟೀಲ್ !ಅವರ ಕರ್ತವ್ಯ ನಿಷ್ಠೆಗೆ ಒಂದು ಸಲಾಂ!!

ಅಮೀನಗಡ ನಗರದಲ್ಲಿ ಸುಫರ್ ಕಾಫ್ ಪೋಲಿಸ್ ಅಧಿಕಾರಿ ASI ಯಂಕಣಗೌಡ ಪಾಟೀಲ್ !ಅವರ ಕರ್ತವ್ಯ ನಿಷ್ಠೆಗೆ ಒಂದು ಸಲಾಂ!!

ಅಮೀನಗಡ : ಸಾಮಾಜಿಕ ರಂಗದಲ್ಲಿ ಒಂದು ಸಮಾಜ ಸುಭದ್ರವಾಗಿ ಶಾಂತಿಯುತವಾಗಿ ಮುನ್ನಡೆಯಲು ಒಬ್ಬ ಶ್ರೇಷ್ಠ ಯೋಧ ನಂತಹ ಖಡಕ್ ಪೋಲಿಸ್ ಅಧಿಕಾರಿ ಇರಬೇಕು. ಆತ ಅಷ್ಟೇ ಸಮಾಜದ ಎಲ್ಲಾ ಜನರೊಂದಿಗೆ ಬೆರೆತು ಭಾವೈಕ್ಯತೆಯಿಂದ ಸಮಾನವಾಗಿ ಸಾಮಾನ್ಯ ಜನರೊಡನೆ ಬೆರೆಯುವ ಮನಸ್ಥಿತಿ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಇಂತಹ ಅಧಿಕಾರಿಗಳು ಇಂದು ಬಹಳ ವಿರಳವಾಗಿದೆ. ಯಾಕೆಂದರೆ ಪೋಲಿಸ್ ಇಲಾಖೆ ಬಗ್ಗೆ ಇಂದಿನ ಜನರ ಮನಸ್ಥಿತಿ ಅಷ್ಟೊಂದು ಚನ್ನಾಗಿ ಇಲ್ಲ. ಠಾಣೆಗೆ ಹೋದ್ರೆ ಬರಿ ಮೊಸ ನ್ಯಾಯ ಸಿಗುತ್ತೆ ಎಂಬ ಯಾವ ಭರವಸೆಯು ಇಲ್ಲವಗಿದೆ. ಈ ರಾಜಕೀಯ ಬಲ,ಹಣಬಲ,ಜನಬಲದ ಮುಂದೆ ಸಾಮಾನ್ಯರಿಗೆ ನ್ಯಾಯ ಮರಿ ವಿಲೆ ಯಗಿದೆ. ಇಂತಹ ಸಂದರ್ಭದಲ್ಲಿ ಆ ಭಗವಂತ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಒಬ್ಬ ನಿಷ್ಟಾವಂತ ಪ್ರಾಮಾಣಿಕ ದಕ್ಷ ಅಧಿಕಾರಿಯನ್ನು ಸೃಷ್ಟಿ ಮಾಡಿರುತ್ತಾನೆ. ಎಲ್ಲರೂ ಕೆಟ್ಟ ಅಂತ ಹೇಳಲು ಸಾಧ್ಯವಿಲ್ಲ, ಅಂತಹ ಪದಗಳಿಗೂ ಮೀರಿ ಉತ್ತಮ ಕರ್ತವ್ಯ ಮಾಡುವ ಅಧಿಕಾರಿಗಳು ನಮ್ನ ಮಧ್ಯ ಇದ್ದಾರೆ. ಅವರನ್ನು ಗುರುತಿಸುವ ಕೆಲಸ ನಾವು ಮಾಡಬೇಕಾಗಿದೆ.


ಅಂತಹ ಸಾಲಿಗೆ ವಿಜಯಪುರ ಜಿಲ್ಲೆಯ ನೂತನ ನೀಡಗುಂದಿ ತಾಲ್ಲೂಕಿನ ಸುಕ್ಷೇತ್ರ ಎಲ್ಲಮ್ಮ ಬೂದಿಹಾಳ ಗ್ರಾಮದ ಪ್ರಗತಿಪರ ರೈತ ಕುಟುಂಭದಲ್ಲಿ ಜನಿಸಿದ ಶ್ರೀಯುತ ಯಲ್ಲನಗೌಡರ ಪ್ರಥಮ ಸುಪುತ್ರರಾಗಿ ಜನಿಸಿ ೧೯೯೨ ರಿಂದ ೧೯೯೩ ರ ತನಕ ಈ ಕ್ಷೇತ್ರದ ತಾಯಿ ಎಲ್ಲಮ್ಮನ ದೇವಸ್ಥಾನದ ಅರ್ಚಕರಾಗಿ ಸೇವೆ ಮಾಡಿ ಆ ತಾಯಿ ಅನುಗ್ರಹದಿಂದ ಪೊಲೀಸ್ ಇಲಾಖೆಗೆ ಬಂದು ಈಗ ನಮ್ಮ ಅಮೀನಗಡ ನಗರದಲ್ಲಿ ಪೋಲಿಸ್ ಇಲಾಖೆಯಲ್ಲಿ ASI ಆಗಿ ಕರ್ತವ್ಯ ನಿರ್ವವಹಿಸುತ್ತಿರುವ ಯಂಕನಗೌಡ ವಾಯ್ ಪಾಟೀಲ್ ಅವರ ಕರ್ತವ್ಯ ನಿಷ್ಟೇಯ ಬಗ್ಗೆ ಒಂದು ಮೆಚ್ಚುಗೆಯ ನುಡಿ ನಮ್ಮ ಸಂಚಿಕೆಯಲ್ಲಿ

ಹೌದು ಸ್ನೇಹಿತರೆ ಈಗ ಅಮೀನಗಡ ನಗರದ ಪೋಲಿಸ್ ಠಾಣೆಯಲ್ಲಿ ASI ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವಾಯ್ ವಾಯ್ ಪಾಟೀಲ ಅವರು ಈಗಿನ ಸು- ಕ್ಷೇತ್ರ ಬೂದಿಹಾಳ ಎಲ್ಲಮ್ಮನ ದೇವಸ್ಥಾನದ ಅರ್ಚಕರಾಗಿ ಎರಡು ವರ್ಷ ಸೇವೆ ಮಾಡಿದ್ದಾರಂತೆ. ಇಂದಿಗೂ ಇವರ ಕುಟುಂಬದ ಮನೆತನದಲ್ಲಿ ಮೂರು ಕುಟುಂಬಗಳು ತಾಯಿ ಸೇವೆ ಮಾಡುತ್ತಿದ್ದಾರೆ. ಆ ತಾಯಿಯ ಅನುಗ್ರಹದಿಂದ ನಾನು ಈಗ ಈ ಸ್ಥಾನದಲ್ಲಿ ಇದ್ದೇನೆ ಎಂದರು.


೧೯೯೨ / ೯೩ ನೇ ಸಾಲಿನಲ್ಲಿ ಸೇವೆ ಮಾಡುತ್ತಿದ್ದಾಗಲೇ ೧೯೯೪ ರಲ್ಲಿ ನಾನು ಪೋಲಿಸ್ ಇಲಾಖೆಗೆ ಕಾನ್ಸ್ ಟೇಬಲ್ ಆಗಿ ಪ್ರಪ್ರಥಮ ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿ ಗ್ರಾಮದ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿ ಇಲ್ಲಿ ಮೂರು ವರ್ಷ ಉತ್ತಮ ಸೇವೆ ಮಾಡಿ ಜನಮನ ಗೆದ್ದು ಅಪಾರ ಸ್ನೇಹ ಬಳಗ ಸಂಪಾದಿಸಿದರು. ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿ ಪ್ರಾಮಾಣಿ ಸೇವೆ ಸಲ್ಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಇಲ್ಲಿಂದ ೧೯೯೮ ರಲ್ಲಿ ನೂತನ ಜಿಲ್ಲೆ ಘೋಷಣೆ ಆದಾಗ ಪ್ರಪ್ರಥಮ ನಮ್ಮ ಬಾಗಲಕೋಟೆಗೆ ನೂತನ ಎಸ್,ಪಿ ಆಗಿ ಎನ್ ಶಿವಕುಮಾರ್ ಅಧಿಕಾರ ವಹಿಸಿಕೊಂಡಿದ್ದರು. ಆಗ ಶಹರ ಠಾಣೆಗೆ ವರ್ಗಾವಣೆಗೊಂಡ ಬಳಿಕ ನಗರದಲ್ಲಿ ೭ ವರ್ಷ ಸೇವೆ ಮಾಡಿ ನಗರದಲ್ಲಿ ಆಗಾಗಾ ನಡೆಯುತ್ತಿರುವ ಹಿಂದೂ- ಮುಸ್ಲಿಂ ಗಲಾಟೆ ಹಾಗೂ ನಗರದಲ್ಲಿ ಶಾಂತಿ ಸುವ್ಯವಸ್ಥಿತೆ ಹಾಳು ಮಾಡುವ ಪುಂಡ ಪೊಕರಿಗೆ ಸಿಂಹ ಸ್ವಷ್ಣವಾಗಿ ಮುಂಚೂಣಿಯಲ್ಲಿ ನಿಂತು ದಕ್ಷತೆ ಮೆರೆದ ಪಾಟೀಲ ಅವರ ಕರ್ತವ್ಯವನ್ನು ಅಂದಿನ ಜಿಲ್ಲಾ ಪೋಲಿಸವರಿಷ್ಟಾಧಿಕಾರಿ ಎನ್ ಶಿವುಕುಮಾರ್ ಕರೆದು ಪ್ರಶಂಸೆ ವ್ಯಕ್ತಪಡಿಸಿದ್ದರಂತೆ, ಅಂದು ಅವರ ಉತ್ತಮ ಮಾರ್ಗದರ್ಶನದಲ್ಲಿ ಇಂದಿಗೂ ಸರಳ ಸದೃಢವಾದ ಆರೋಗ್ಯಕರ ಕಟ್ಟುಮಸ್ತಾದ ದೇಹವನ್ನು ಹೊಂದಿರುವ ಪಾಟೀಲ್ ಅವರ ಈ ೫೬ ನೇ ವಯಸ್ಸಲ್ಲೂ ಯುವ ತರುಣರಂತೆ ಆರೋಗ್ಯಕರ ಉತ್ತಮ ಕರ್ತವ್ಯ ಇಂದಿಗೂ ನಿರ್ವಹಿಸುತ್ತಿದ್ದಾರೆ.

ನಂತರ ೨೦೦೫ ರಲ್ಲಿ ಬಾಗಲಕೋಟೆ ಇಂದ ಇಲಕಲ್ಲ ಠಾಣೆಗೆ ವರ್ಗಾವಣೆ ಗೊಂಡು ಇಲ್ಲಿಯೂ ಸಹ ೫ ವರ್ಷ ಉತ್ತಮ ಸೇವೆ ಮಾಡಿ ಅಂದಿನ ಶಾಸಕ ದಿ, ಶ್ರೀ ಎಸ್,ಆರ್ ಕಾಶಪ್ಪನವರರಿಂದ ಹಾಗೂ ಸ್ಥಳೀಯ ಮುಖಂಡರಿಂದ ಉತ್ತಮ ಪ್ರಶಂಸೆಗೆ ಪಾತ್ರರಾಗಿ ನಗರದಲ್ಲಿ ಶಾಂತಿ ಸುವ್ಯವಸ್ಥಿತೆ ಕಾಪಾಡುವಲ್ಲಿ ಹಾಗೂ ಅಪರಾದ ಹೃತ್ಯಗಳು ನಡೆಯದಂತೆ ಹಗಲು ರಾತ್ರಿ ಗಸ್ತು ತಿರುಗಿ ಉತ್ತಮ ಕರ್ತವ್ಯ ನಿರ್ವಹಿಸಿ ಸೈ ಎನ್ನಿಸಿಕೊಂಡ ಪಾಟೀಲ ಅವರ ಕರ್ತವ್ಯ ನಾವು ಮೆಚ್ಚಲೆ ಬೇಕು.

ಸುಕ್ಷೇತ್ರ ಬೂದಿಹಾಳ ಗ್ರಾಮದ ಎಲ್ಲಮ್ಮದೇವಿ ,,,,,,,,
ಇಲ್ಲಿಂದ ಮತ್ತೆ ಹುನಗುಂದ ನಗರಕ್ಕೆ ಬಂದು ಇಲ್ಲಿ ಎರಡು ವರ್ಷ ಸೇವೆ ಮಾಡಿದ ನಂತರ ಅಪಾರ ಜನರೊಂದಿಗೆ ಸ್ನೇಹ ಬಳಗ ಹೊಂದಿ ಉತ್ತಮ ಕರ್ತವ್ಯದ ಮೂಲಕ ಜನಮಾನಸದಲ್ಲಿ ಉಳಿದ ಒಬ್ಬ ದಕ್ಷ ಅಧಿಕಾರಿ ಎಂದರೆ ಅದು ಪಾಟೀಲ . ಅವರ ಪ್ರಾಮಾಣಿಕ ಸೇವೆ ಪರಿಗಣಿಸಿ ಅವರಿಗೆ ಇಲ್ಲಿ ಪ್ರಮೋಶನ್ ಹವಾಲ್ದಾರ್ ಆಗಿ ಮತ್ತೆ ಇಲಕಲ್ಲ ನಗರಕ್ಮೆ ಬಂದು ಮತ್ತೆ ೫ ವರ್ಷ ಇಲ್ಲಿ ಸೇವೆ ಮಾಡಿ ಇಲ್ಲಿಂದ ಬದಾಮಿಗೆ ವರ್ಗಾವಣೆ ಮಾಡಲಾಗುತ್ತದೆ. ಅಲ್ಲಿ ೩ ವರ್ಷ ಸೇವೆ ಮಾಡಿದ ನಂತರ ಮತ್ತೆ ಪ್ರಮೋಶನ್ ಆಗಿ ಅಮೀನಗಡ ನಗರಕ್ಕೆ ASI ಆಗಿ ಈಗ ಕಳೆದ ೪ ವರ್ಷಗಳಿಂದ ಇಲ್ಲಿ ಸೇವೆ ಮಾಡುತ್ತಿರುವ ನಮ್ಮ ಯಂಕನಗೌಡ ಪಾಟೀಲ್ ಅವರ ಕರ್ತವ್ಯ ನಿಷ್ಟೇಯನ್ನು ಈಗ ಜನ ಕೊಂಡಾಡುತ್ತಿದ್ದಾರೆ.

ಈ ವಯಸ್ಸಲ್ಲೂ ಕೂಡ ಉತ್ತಮ ಆರೋಗ್ಯ ಹಾಗೂ ಸರಳ ಸಾದ ಸೀದಾ ದೇಹ ಹೊಂದಿರುವ. ಪಾಟೀಲ ಅವರ ಕರ್ತವ್ಯ ನಿಷ್ಟೇ ಇತರರಿಗೆ ಮಾದರಿ, ಅಮೀನಗಡ ನಗರದಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಎಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಠಾಣೆಯಲ್ಲಿ ಯಾವುದೇ ಸಾರ್ವಜನಿಕ ಹಿಂದೂ- ಮುಸ್ಲಿಂ ಹಬ್ಬಗಳು ಬಂದಾಗ ಸೂಕ್ತ ಸಲಹೆ ಸೂಚನೆ, ನೀಡಿ ನಗರದಲ್ಲಿ ಶಾಂತಿ ಕದಡದಂತೆ ಠಾಣಾ ಮುಖ್ಯ ಅಧಿಕಾರಿಗಳೊಂದಿಗೆ ಕೈ ಜೊಡಿಸಿ ಕಾನೂನು ಸುವ್ಯವಸ್ಥಿತೆ ಕಾಪಾಡಿದ್ದಾರೆ. ನಗರದ ಹೊರ ವಲಯದಲ್ಲಿ ನಡೆಯುವ ರಸ್ತೆ ಅಪಘಾತ, ಹಾಗೂ ಅಕ್ರಮ ಚಟುವಟಿಗಳ ಮೇಲೆ ನಿಗಾ ವಹಿಸಿ ಸೂಕ್ತ ಕಾನೂನು ಕ್ರಮದ ಬಗ್ಗೆ ಎಚ್ಚರಿಕೆ ನೀಡಿ ಅವರಿಗೆ ಬುದ್ದಿ ಕಲಿಸಿ ಸರಿ ದಾರಿಗೆ ತರುವ ಮೂಲಕ ಜನಮಾನಸದಲ್ಲಿ ಉಳಿದ ದಕ್ಷ ಅಧಿಕಾರಿ ಎಂದರೆ ಅದು ಯಂಕಣಗೌಡ ಪಾಟೀಲ್ ಎಂದರೆ ತಪ್ಪಾಗಲಾರದು.

ಯಂಕನಗೌಡರು ಎಷ್ಟು ಖಡಕ್ ಅಧಿಕಾರಿ ಎಂದರೆ ಅಷ್ಟೇ ಮೃದುವಾದ ಮನಸ್ಸು ಉಳ್ಖವರು, ಸದಾ ಜನರೊಂದಿಗೆ ಉತ್ತಮ ಒಡನಾಟ ಹಾಗೂ ಆತ್ಮೀಯವಾಗಿ ಬೇರೆಯುವ ಸ್ನೇಹ ಜೀವಿ,ಸಂಘಜೀವಿ, ಅಷ್ಟೇ ಸರಳತೆಯ ಸೂತ್ರಧಾರ, ಇಂತಹ ಅಧಿಕಾರಿಗಳು ಜನರ ಮಧ್ಯ ಇರುವುದರಿಂದ ಇಲಾಖೆ ಜೊತೆಗೆ ಸಮಾಜ ಕೂಡ ಕೈ ಜೋಡಿಸುತ್ತದೆ. ಬರೀ ಖಾಕೀ ಖದರ್ ನಿಂದ ಜನರನ್ನು ಹತ್ತಿಕ್ಕಲು ಸಾಧ್ಯವಿಲ್ಲ ಸಾಮಾನ್ಯ ಜನರೊಂದಿಗೆ ಒಬ್ಬ ಅಧಿಕಾರಿ ಧರ್ಪಬಿಟ್ಟು, ಸ್ವಾಭಿಮಾನದಿಂದ ಈ ಸಮಾಜದೊಡನೆ ಬೇರೆತಾಗ ಒಂದು ಸುಭದ್ರ ಸಮಾಜ ಹಾಗೂ ಬಲಿಷ್ಠ ಸಮಾಜ ಆರೋಗ್ಯವಂತ ಸಮಾಜ ಶಾಂತಿಯುತ ಸಮಾಜ ನಿಮಾರ್ಣ ಮಾಡಬಹುದು ಎಂಬುದಕ್ಕೆ ನಮ್ಮ ಪಾಟೀಲ್ ಅವರೇ ಸಾಕ್ಷಿ, ಠಾಣೆಯಲ್ಲಿ ಎಲ್ಲಾ ಸಿಬ್ಬಂದಿಗಳೊಂದಿಗೆ ಉತ್ತಮ ಒಡನಾಟ ಹೊಂದಿ ಎಲ್ಲರನ್ನೂ ಕರೆದುಕೊಂಡು ಅವರಿಗೆ ಉತ್ತಮ ಸಲಹೆ,ಮಾರ್ಗದರ್ಶನ ಮಾಡಿ ಕೆಲಸ ತೆಗೆದುಕೊಳ್ಳುವ ಜಾಣತನ ಎಲ್ಗರಿಗೂ ಬರುವುದಿಲ್ಲ. ಇಂತಹ ಅಧಿಕಾರಿಗಳಿಂದ ನಮ್ನ ಸಮಾಜ ಯಾವತ್ತೂ ಸುರಕ್ಷಿತವಾಗಿರುತ್ತದೆ.

ಶ್ರೀ ಯಂಕಣಗೌಡ ವಾಯ್ ಪಾಟೀಲ್ ASI

ಅಲ್ಲದೆ ಸಿಟ್ಟಿನಲ್ಲಿ ಪ್ರತಿ ನಿತ್ಯ ಎಷ್ಟೊ ಜನ ಠಾಣೆಗೆ ತಮ್ಮ ಸಂಭಂದಿಕರ ಮೇಲೆ ನೇರೆ ಹೋರೆಯವರ ಮೇಲೆ,ಅಕ್ಕ ಪಕ್ಕದಲ್ಲಿ ಇರುವ ಜನರ ಮಧ್ಯ ಸಣ್ಣ ಸಣ್ಣ ವಿಷಯಕ್ಕೂ ಠಾಣೆಗೆ ಬಂದು ಪಿರಿಯಾದೆ ಕೊಡುತ್ತಾರೆ ,ಇಂತಹ ಜನರ ಮನಸ್ಸು ಅರೆತು ಅವರೊಂದಿಗೆ ಶಾಂತವಾಗಿ ಮಾತನಾಡಿ ಎದುರು ಪಾರ್ಟಿ ಜನರನ್ನ ಅಥವಾ ಆರೋಪಿತರನ್ನು ಕರೆದು ಅವರ ಮುಂದೆ ಎರಡು ಮಾತು ಬೈದು ಗಂಭೀರವಾಗಿ ವಿಷಯ ಇದ್ರೆ ಎರಡು ಒದ್ದು ಬುದ್ದಿ ಹೇಳಿ ಅವರನ್ನು ಮತ್ತೆ ಒಂದು ಮಾಡಿ ರಾಜಿ ಮಾಡಿಸಿ ಸೈ ಎನ್ನಿಸಿಕೊಂಡವರು, ಗಂಡ,ಹೆಂಡತಿ ಜಗಳ, ಹೀಗೆ ಅನೇಕ ಪ್ರಕರಣಗಳಿಗೆ ಲೆಕ್ಕವಿಲ್ಲ ಇಂತಹ ಪ್ರಾಮಾಣಿಕ, ಅನುಭವಿಕ ದಕ್ಷ ಅಧಿಕಾರಿಗಳು ಇಂದು ಠಾಣೆಗೆ ಬರಬೇಕಾಗಿದೆ, ಲಂಚಾವತಾರ ಕೇಳಿ ಬರುತ್ತಿರುವ ಎಷ್ಟೊ ಪೋಲೀಸ್ ಠಾಣೆಗಳಿಗೆ ಮೇಲಾಧಿಕಾರಿಗಳು ಸೂಚನೆ ನೀಡಿದರೂ ಕೇಲವು ಪೋಲಿಸ್ ಠಾಣೆಗಳು ಇನ್ನೂ ಸುಧಾರಣೆ ಆಗಿಲ್ಲ, ಪಾಟೀಲ್ ಅಂತಹ ಸರಳ ಸಜ್ಜನಿಕೆಯ ವ್ಯಕ್ತಿಗಳು ಇಂದಿನ ಸಮಾಜಕ್ಕೆ ಅವಶ್ಯಕ ಇವರಿಗೆ ಇನ್ನೂ ಹೆಚ್ವಿನ ಹುದ್ಸೆಗಳು,ಪ್ರಮೋಶನ್ ಸಿಗಲಿ ಎಂದು ನಮ್ಮ ಪತ್ರಿಕೆ ಶುಭ ಹಾರೈಸುತ್ತದೆ.

ಹಾಗೆ ಇವರ ಪ್ರಾಮಾಣಿಕ ಕರ್ತವ್ಯ ನಿಷ್ಠೆಗೆ ನಮ್ಮದೊಂದು ಸಲಾಂ!!

About vijay_shankar

Check Also

ಕೈಯಲ್ಲಿ ಲಾಠಿ,ಬಾಯಲ್ಲಿ ಬಸವಣ್ಣ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ  ನಡೆಗೆ ಬೇಸರ ವ್ಯಕ್ತ ಪಡಿಸಿದ                 ನಿಂಗಪ್ಪ ಪಿರೋಜಿ !

ಕೈಯಲ್ಲಿ ಲಾಠಿ,ಬಾಯಲ್ಲಿ ಬಸವಣ್ಣ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನಡೆಗೆ ಬೇಸರ ವ್ಯಕ್ತ ಪಡಿಸಿದ ನಿಂಗಪ್ಪ ಪಿರೋಜಿ !

ಮೂಡಲಗಿ: ಇದೆ ಡಿ,೩೦-ಪಂಚಮಸಾಲಿ ಸಮಾಜದ ಮೇಲೆ ಲಾಠಿ ನಡೆಸಿದ, ಕೈಯಿಂದಲೇವಿಜಯಪುರದಲ್ಲಿ ರಾಣಿ ಚೆನ್ನಮ್ಮಳ ಪುತ್ತಳಿ ಅನಾವರಣ ಮಾಡುತ್ತಿರೋದುಗೌರವವಲ್ಲ, ಶುದ್ಧ ದ್ವಂದ್ವ …

One comment

  1. ನಮ್ಮ ಊರಿನ ಹೆಮ್ಮೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.