
ಇಳಕಲ್ಲ : ಉತ್ತರ ಕನಾಟಕದಲ್ಲಿ ಕಿರಣ್ ಬೇಡಿ ಎಂದೆ ಖ್ಯಾತಿ ಪಡೆದ ಇಳಕಲ್ಲ ನಗರದ ದಕ್ಷ ಮಹಿಳಾ ಪೋಲಿಸ್ ಅಧಿಕಾರಿ ಪಿ,ಎಸ್,ಐ. ಶ್ರೀಮತಿ ಎಸ್ ಆರ್, ನಾಯಕ ಅವರು ಉತ್ತರ ಕರ್ನಾಟಕವೆಂದರೆ ಗಂಡು ಮೆಟ್ಟಿದ ನಾಡು ಶರಣರು ಸಂತರು ರಾಜ ಮಹಾರಾಜರು ಆಳ್ವಿಕೆ ಮಾಡಿದ ಸುಂದರ ನಾಡಾಗಿದೆ ೧೨ ನೇ ಶತಮಾನದಲ್ಲಿ ಶ್ರೀ ವಿಶ್ವಗುರು ಬಸವಣ್ಣನವರು ಬೆಳೆದ ನಾಡಾಗಿದೆ ಇಂತಹ ಪವಿತ್ರ ಮಣ್ಣಿನಲ್ಲಿ ಸಾಕಷ್ಟು ವೀರರು ಶೂರರು, ವಿದ್ವಾಂಸರು ಬೆಳೆದ ಈ ಪವಿತ್ರ ಮಣ್ಣಿನಲ್ಲಿ ವೀರ ಮಹಿಳೆಯರು ಕೂಡಾ ಇತಿಹಾಸವನ್ನು ಬರೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬದಾಮಿಯ ಮೇಣಬಸದಿ,ಪಟ್ಟದಕಲ್ಲು, ಕದಂಬರ ಹಾಗೂ ಚಾಲುಕ್ಯರು ಆಳಿದ ನಾಡು ಹಾಗೂ ಕದಂಬರ ರಾಜದಾನಿಯಾಗಿತ್ತು. ಅಲ್ಲದೇ ಹುನಗುಂದ ತಾಲೂಕಿನ ಐಹೊಳೆ ಕರ್ನಾಟಕದ ಐತಿಹಾಸಿಕ ಇತಿಹಾಸಗಳ ತೊಟ್ಟಿಲು ಎಂದು ಕರೆಯುತ್ತಾರೆ. ಆದರೆ ವಿಶ್ವಗುರು ಬಸವಣ್ಣನವರು ಐಕ್ಯ ಸ್ಥಳವಾದ ಕೂಡಲ ಸಂಗಮದಲ್ಲಿ ಅನೇಕ ಶರಣರ ಪಾದಸ್ಪರ್ಶದಿಂದ ಈ ಭೂಮಿ ಪವಿತ್ರವಾಗಿದೆ. ನ್ಯಾಯ ಮತ್ತು ಧರ್ಮದ ರಕ್ಷಣೆಗಾಗಿ ಹಲವಾರು ರಾಜ ಮಹಾರಾಜರು, ಶರಣರು, ಸಂತರು, ತಮ್ಮ ವಚನ ಗ್ರಂಥಗಳ ಮೂಲಕ ಕಲ್ಯಾಣ ಕ್ರಾಂತಿಯನ್ನು ಮಾಡಿದ್ದಾರೆ.

ಜಾತಿ ಧರ್ಮಕ್ಕೆ ನಾವೆಲ್ಲರೂ ಒಂದೇ ಎಂದು ಬಸವ ಕಲ್ಯಾಣದಲ್ಲಿ ಜಗತ್ತಿಗೆ ಸಾರಿದ ಬಸವಣ್ಣನವರು ಇಂದು ವಿಶ್ವಗುರುಗಳಾಗಿದ್ದಾರೆ. ಇಂತಹ ಮಣ್ಣಲ್ಲಿ ಹುನಗುಂದದಲ್ಲಿ ನಗರದ ಶ್ರೀಮತಿ ಎಸ್ ಆರ್, ನಾಯಕ ಅವರು ಜನಿಸಿದ್ದಾರೆ. ಇವರ ಸಣ್ಣ ಪರಿಚಯವನ್ನ ಈ ವಿಶೇಷ VIP Book Diry ಯಲ್ಲಿ ಒಬ್ಬ ದಕ್ಷ ಮಹಿಳಾ ಅಧಿಕಾರಿಯನ್ನು ಪರಿಚಯಿಸಲು ಬಯಸುತ್ತೇನೆ. ಕಡು ಬಡತನದಲ್ಲಿ ಅರಳಿದ ಹೂವು.
ಹುನಗುಂದ ನಗರದಲ್ಲಿ ಖಾಜೇಸಾಬ ನಾಯಕ ಅವರ ಹಿರಿಯ ಪುತ್ರಿ ತಾಯಿ ಅಜೂಜಿಭಿ ಅವರ ಅಕ್ಕರೆಯ ಮುದ್ದಿನ ಮಗಳು ಬಾಲ್ಯದಲ್ಲಿ ತಂದೆಯನ್ನ ಕಳೆದುಕೊಂಡ ನಾಯಕ ಅವರು ತಾಯಿಯ ಆಶ್ರಯದಲ್ಲಿ ಕಡು ಬಡತನದಲ್ಲಿ ಸಮಾಜದ ಹತ್ನು ಹಲವಾರು ನಿಂದನೆಗಳೊAದಿಗೆ ಬಡತನವನ್ನ ಮೆಟ್ಟಿನಿಂತು ಸಾಧನೆಯ ಶಿಖರವನ್ನ ಏರಿದ ಪಿ ಎಸ್ ಐ ನಾಯಕ್ ಅವರ ಯಶೋಗಾದೆ ಇಂದಿನ ಸೋಮಾರಿ ಮಹಿಳಾ ಮಣಿಗಳಿಗೆ ಮಹಿಳಾ ವಿಧ್ಯಾರ್ಥಿನಿಯರಿಗೆ ದಾರಿದೀಪ ಎಂದರೆ ತಪ್ಪಾಗಲಾರದು, ಕಡು ಬಡತನವೆಂದರೆ ಮಾರುಕಟ್ಟೆಯಲ್ಲಿ ಕಾಯಿಪಲ್ಲೆ ಮಾರುತ್ತಾ ಬಂದ ಅಲ್ಪ ಸ್ವಲ್ಪ ಹಣದಲ್ಲಿ ಸಹೋದರಿ ಹಾಗೂ ತಮ್ಮಂದಿರ ಶಿಕ್ಷಣ ಮತ್ತು ಸರಿಯಾದ ಉತ್ತಮ ಊಟ ಉಪಚಾರಕ್ಕೆ ಅಲೆದಾಡಿದ ಕಣ್ಣೀರಿನ ಹನಿ ಇಂದು ಈ ಕೆಟ್ಟ pmಸಮಾಜದಲ್ಲಿರುವ ಮನುಜ ಹುಳಗಳನ್ನ ಮೆಟ್ಟಿನಿಂತ ಧೀರ ಮಹಿಳೆ ಎಸ್ ಆರ್ ನಾಯಕ ಅವರು.

ನಾಯಕ್ ಅವರು ಎಸ್,ಎಸ್,ಎಲ್,ಸಿ. ವೀಧ್ಯಾಭ್ಯಾಸ ಮುಗಿದ ನಂತರ ಮುಂದಿನ ವ್ಯಾಸಂಗಕ್ಕೆ ಕಾಲೇಜು ಹಚ್ಚಲು ಕೇವಲ ನೂರು ರೂಪಾಯಿ ಇರಲಿಲ್ಲ ಕೆಲವು ಸಂಬಂಧಿಕರ ಬಳಿ ಹಣವನ್ನು ಸಾಲ ಕೇಳಿದದಾಗ ಕೆಲವರು ಇವರ ಶಿಕ್ಷಣವನ್ನು ಮುಂದುವರಿಸದಂತೆ ಇವರ ತಾಯಿಗೆ ತಾಕೀತು ಮಾಡಿದ್ದರು, ಮೊದಲು ಎಲ್ಲಿಯಾದರು ಮದುವೆಮಾಡಿ ಕೊಡು ಈ ಹೆಣ್ಣು ಮಕ್ಕಳಿಗೆ ಶಿಕ್ಷಣ ಯಾಕೆ? ಊಟಕ್ಕೂ ಗತಿಯಿಲ್ಲದ ಈ ಸಂದರ್ಭದಲ್ಲಿ ಮಕ್ಕಳನ್ನ ಸಾಲಿ ಬಿಡಿಸಿ ವ್ಯಾಪಾರಕ್ಕೆ ಕರೆದುಕೊಂಡು ಹೋಗು ಎಂದು ಗದರಿಸಿದ್ದರು, ಆದರೆ ತಾಯಿಯ ಕನಸು ಅದು ಬೇರೆದ್ದೆ ಆಗಿತ್ತು, ಮಗಳ ಶಿಕ್ಷಣದ ಹಂಬಲವನ್ನ ಅರಿತ ತಾಯಿ ಕಷ್ಟ ಪಟ್ಟು ಕಾಯಿಪಲ್ಲೆ ವ್ಯಾಪಾರ ಮಾಡಿ ಒಂದು ವಾರದ ನಂತರ ಮಗಳಿಗೆ ನೀನು ಶಿಕ್ಷಣವನ್ನ ಮೊಟಕುಗೊಳಿಸಬೇಡ ಹೋಗು ಶಾಲೆಗೆ ಹಚ್ಚು ಎಂದು ಒಂದು ನೂರು ರೂಪಾಯಿಯನ್ನ ತಾಯಿ ಕೊಟ್ಟದ್ದನ್ನ ಮತ್ತು ಆ ಸಂದರ್ಭವನ್ನ ನೆನಪು ಮಾಡಿಕೊಂಡಾಗಲೆಲ್ಲ ಕಣ್ಣಲ್ಲಿ ತನ್ನಿಂದ ತಾನೆ ಕಣ್ಣೀರು ಹರಿಯುತ್ತವೆ. ತಾಯಿ ಕೊಟ್ಟ ಹಣದಲ್ಲಿ ಶಿಕ್ಷಣವನ್ನ ಮುಂದುವರಿಸಿದಾಗ ತಾಯಿಯ ಆಶೀರ್ವಾದಿಂದ ೧೯೯೪ ರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಪೋಲಿಸ್ ಕಾನ್ಸ್ಟೇಬಲ್ ಆಗಿ ಭರ್ತಿಯಾದರು,

ಇದನ್ನು ಸಹಿಸದ ಕೆಲವು ಸಂಬಧಿಕರು ವಿರೋಧಿಸಿದರು, ಹೆಣ್ಣುಮಕ್ಕಳು ಮನೆಬಿಟ್ಟು ಹೊರಗಡೆ ನೌಕರಿ ಮಾಡುವ ಅವಶ್ಯಕಥೆ ಏನಿದೆ. ನಮ್ಮನ್ನು ಕೇಳದೆ ನೌಕರಿಗೆ ಹೋಗಿದ್ದು ಅಪರಾದ ನಮ್ಮನ್ನು ತಮ್ಮ ಯಾವ ಮನೆ ಶುಭಕಾರ್ಯಗಳಿಗೆ ಕರೆಯಬೇಡಿ ಎಂದಾಗ ಸ್ವತಃ ನಾಯಕ್ ಅವರು ಕೆಲವು ಹಿರಿಯರಿಗೆ ಕ್ಷಮೆ ಕೇಳಿ ತಮ್ಮ ಮನೆ ಶುಭ ಕಾರ್ಯಗಳಿಗೆ ಕರೆದಿದ್ದಾರೆ. ಇವರ ಪ್ರತಿಯೊಂದು ಯಶಸ್ವಿಯ ಹಿಂದೆ ತಾಯಿಯ ಬೆವರಿನ ಹನಿಗಳು ಶ್ರೀ ರಕ್ಷೆಯಾಗಿವೆ. ಇವರ ಬಡತನವನ್ನ ಬಂಡವಾಳ ಮಾಡಿಕೊಂಡು ಅಂದು ಅವಮಾನಿಸಿದ ಸಮಾಜದ ಕೆಲವು ಹಿರಿಯರು ಇಂದು ಇವರ ಮುಂದೆ ಕೈಕಟ್ಟಿ ನಿಲ್ಲುವ ಮಟ್ಟಕ್ಕೆ ಸಾಧನೆಮಾಡಿ ತೋರಿಸಿದ ಉತ್ತರ ಕರ್ನಾಟಕದ ನಮ್ಮ ಹೆಮ್ಮೆಯ ಜೂನಿಯರ್ ಕಿರಣ್ ಬೇಡಿ ಶ್ರೀಮತಿ ಎಸ್ ಆರ್, ನಾಯಕ್ ಅವರೆಂದರೆ ತಪ್ಪಾಗಲಾರದು.

೧೯೯೬/-೯೭ ಎರಡು ವರ್ಷ ತರಬೇತಿ ಮುಗಿಸಿಕೊಂಡು ಅಂದಿನ ಹುನಗುಂದ ತಾಲೂಕಿನ ಇಳಕಲ್ಲ ನಗರಕ್ಕೆ ವರ್ಗಾವಣೆಗೊಂಡು ೨೦೦೪ರ ವರೆಗೆ ಐ-ಕಾನ್ ಲೇಡಿ ಎಂದು ಗುರುತಿಸಿಕೊಂಡರು. ಠಾಣೆಯಲ್ಲಿ ಕೊಟ್ಟ ಜವಾಬ್ದಾರಿಯನ್ನ ತಪ್ಪದೆ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಿ ಸೈ ಎನ್ನಿಸಿಕೊಂಡ ದಿಟ್ಟ ಮಹಿಳೆ ನಂತರ ಪ್ರಮೋಷನ್ ಹೊಂದಿ ಬಾಗಲಕೋಟೆಯ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡು ಜಿಲ್ಲೆಯಲ್ಲಿ ಸದ್ದು ಮಾಡಿದ ಸುಫರ್ ಕಾಫ್ ಎಸ್ ಆರ್ ನಾಯಕ್ ಸಲ್ಲುತ್ತದೆ ಯಾವುದೇ ಪ್ರಕರಣವಿರಲಿ ಅದರಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಅದನ್ನ ಮುಗಿಸುವವರೆಗೂ ಬಿಡುತ್ತಿರಲಿಲ್ಲ. ಹೀಗಾಗಿ ಉನ್ನತ ಅಧಿಕಾರಿಗಳಿಂದ ಮೆಚ್ಚುಗೆ ಪಡೆಯುತ್ತಿದ್ದರು, ನಿರಂತರ ಐದು ವರ್ಷ ಇಲ್ಲಿ ಸೇವೆ ಮಾಡಿ ಸಾಕಷ್ಟು ಜನಪ್ರೀಯತೆಯನ್ನು ಪಡೆದರು, ನಂತರ ಇಲ್ಲಿಂದ ಇಳಕಲ್ಲ ನಗರಕ್ಕೆ ಹವಾಲ್ದಾರರಾಗಿ ಬಂದು ಠಾಣೆಯಲ್ಲಿ ಉತ್ತಮ ಸಾರ್ವಜನಿಕ ಸೇವೆ ಮಾಡುತ್ತಾ ಮತ್ತಷ್ಟು ಜನಪ್ರೀಯತೆಯನ್ನು ಪಡೆದರು, ಠಾಣೆಗೆ ಬರುವ ಪ್ರಕರಣಗಳನ್ನ ತಮ್ಮ ಮಾತಿನ ಚಾಣಕ್ಯದಿಂದ ಅವರಿಗೆ ಬುದ್ದಿ ಹೇಳಿ ಸಾಂತ್ವನದ ಮೂಲಕ ತಿಳಿ ಹೇಳಿ ತಪ್ಪು ಮಾಡಿದ ಆರೋಪಿತರಿಗೆ ಒದ್ದು ಬುದ್ದಿ ಕಲಿಸಿ ಸಹಬಾಳ್ವೆಗೆ ಹಚ್ಚಿದ ಕೀರ್ತಿ ಇವರಿಗೆ ಸಲ್ಲಿತ್ತದೆ.

ನಂತರ ಇಲ್ಲಿಂದ ೨೦೧೩ ರಲ್ಲಿ ಎ,ಎಸ್,ಐ. ಆಗಿ ಪ್ರಮೋಷನ್ ಭರ್ತಿ ಹೊಂದಿ ಹುನಗುಂದಕ್ಕೆ ವರ್ಗಾವಣೆಗೊಂಡರು, ನಂತರ ನಗರದಲ್ಲಿರುವ ಅಕ್ರಮ ದಂಧೆಗಳು ಸೇರಿದಂತೆ ನಗರದ ಶಾಂತಿ ಕಾನೂನು ಸು ವ್ಯವಸ್ಥೆಯನ್ನ ಕಾಪಾಡುವಲ್ಲಿ ಯಶಸ್ವಿಯಾದರು ತಮ್ಮ ವೃತ್ತಿ ಜೀವನದುದ್ದಕ್ಕೂ ಎಲ್ಲಿಯೂ ಕಪ್ಪು ಚುಕ್ಕೆಯಿಲ್ಲದೆ ತವರು ನೆಲದಲ್ಲಿ ಹೆಸರುಮಾಡಿ ಇಸ್ಲಾಂ ಧರ್ಮದ ಕೀರ್ತಿಯನ್ನ ಎತ್ತಿ ಹಿಡಿದ ಉತ್ತರ ಕರ್ನಾಟಕದ ಹೆಣ್ಣು ಹುಲಿ ಎಂದು ಕರೆಸಿಕೊಂಡರು,
೨೦೧೯ ರಲ್ಲಿ ಮತ್ತೆ ಕ್ರೈಂ ಪಿ,ಎಸ್,ಐ. ಆಗಿ ೨೦೨೩ ರ ತನಕ ಕರ್ತವ್ಯ ನಿರ್ವಹಿಸಿ ವಿಜಯಪುರ ಜಿಲ್ಲಾ ಮುದ್ದೇಬಿಹಾಳ ತಾಲೂಕಿಗೆ ಚುನಾವಣೆ ನಿಮಿತ್ತವಾಗಿ ಎರಡು ತಿಂಗಳು ಸೇವೆ ಸಲ್ಲಿಸಿದರು, ನಂತರ ೧೩/೦೬/೨೦೨೪ ರಂದು ಇಳಕಲ್ಲ ನಗರಕ್ಕೆ ಕಾನೂನು ಸು ವ್ಯವಸ್ಥೆ ಪಿ,ಎಸ್,ಐ. ಆಗಿ ಕರ್ತವ್ಯಕ್ಕೆ ಹಾಜರಾಗಿ ಇಂದು ದೊಡ್ಡ ಹೆಸರನ್ನ ಮಾಡುತ್ತಿದ್ದಾರೆ. ತಮ್ಮ ವೈಯಕ್ತಿಕ ಜೀವನದಲ್ಲಿ ವೀರ ಯೋಧನನ್ನ ಕೈ ಹಿಡಿದು ಸುಂದರ ಇಬ್ಬರು ಮಕ್ಕಳಿಗೆ ಜನ್ಮ ನೀಡಿ ಸುಂದರ ಬದುಕನ್ನ ಸಾಗಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಮುದಗಲ್ಲ ಇವರ ಗಂಡನ ಮನೆ ಒಂದೇ ಮುಖದ ಎರಡು ನಾಣ್ಯಗಳಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗಂಡನ ಸಹಕಾರದೊಂದಿಗೆ ಇಂದು ಈ ಮಟ್ಟದ ಸಾಧನೆ ಮಾಡಿದ್ದಾಗಿ ತಮ್ಮ ಅಭಿಪ್ರಯವನ್ನ ನಮ್ಮೊಂದಿಗೆ ಹಂಚಿಕೊಂಡರು,

ಇಳಕಲ್ಲ ನಗರವೆಂದರೆ ಅದು ಹೈ ವೋಲ್ಟೇಜ್ ನಗರ ಗ್ರ್ಯಾನೈಟ್ ಉದ್ಯಮಕ್ಕೆ ದೇಶ ವಿದೇಶದಲ್ಲಿ ಹೆಸರು ಮಾಡಿದ ನಗರ ಅಲ್ಲದೆ ಹಿಂದೂ ಮುಸ್ಲಿಂ ದೊಡ್ಡ ಸಮುದಾಯಗಳ ಮಧ್ಯೆ ಆಗಾಗ ನಡೆಯುವ ಗಲಾಟೆಗಳ ನಗರ ಮತ್ತು ಮರಳು ಮಾಫಿಯಾ, ಓಸಿ ಮಟ್ಕಾ ಅನೇಕ ಅಕ್ರಮ ದಂದೆಕೊರರಿಗೆ ಸಿಂಹಸ್ವಪ್ನವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಾಯಕ ಅವರ ಎದೆಗಾರಿಕೆಯನ್ನ ಮತ್ತು ಅವರ ಕರ್ತವ್ಯ ನಿಷ್ಠೆಗೆ ಹಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ನಗರದಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಒತ್ತಡದಲ್ಲಿ ಎಲ್ಲಾ ಪಕ್ಷದ ಕಾರ್ಯಕರ್ತರ ವಯಕ್ತಿಕ ವ್ಯಾಜ್ಜಗಳನ್ನ ಸಮಾಧಾನದಿಂದ ಬುದ್ದಿ ಹೇಳಿ ನಗರದಲ್ಲಿ ಇಂದಿಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸು ವ್ಯವಸ್ಥೆಯನ್ನ ಕಾಪಾಡುತ್ತಿದ್ದಾರೆ. ಈ ನಗರದಲ್ಲಿ ಬಹಳ ದೊಡ್ಡ ಅನುಭವಿಕ ಅಧಿಕಾರಿಗಳು ಈ ಠಾಣೆಗೆ ಬಂದು ಹೋಗಿದ್ದಾರೆ. ಆದರೆ ಒಂದಿಲ್ಲೊಂದು ದೊಡ್ಡ ದೊಡ್ಡ ಗಲಾಟೆಗಳು ನಡೆಯುತ್ತಿದ್ದವು ಮತ್ತು ನಗರದಲ್ಲಿ ಬಲಾಡ್ಯ ರಾಜಕಾರಣಿಗಳ ಒತ್ತಡದಲ್ಲಿ ಕರ್ತವ್ಯನಿರ್ವಹಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಶ್ರೀಮತಿ ನಾಯಕ ಅವರು ಇಲ್ಲಿ ಕಾನೂನು ಸು ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವುದು ಅಸಾಧ್ಯ ಒಂದೇ ತಿಂಗಳಲ್ಲಿ ಠಾಣೆಯನ್ನ ಬಿಟ್ಟುಹೋಗುತ್ತಾರೆಂದು ಲೇವಡಿ ಮಾಡಿದ್ದರು, ಆದರೆ ನಿರಂತರವಾಗಿ ೨೦೨೩ ರಿಂದ ಇಲ್ಲಿಯವರೆಗೆ ಒಂದು ಕಪ್ಪು ಚುಕ್ಕೆ ಇಲ್ಲದೆ ಯಾವುದೇ ನಗರದಲ್ಲಿ ಹಿಂದೂ ಮುಸ್ಲಿಂ ಇತರೆ ಜನಾಂಗದ ಗಲಾಟೆಗಳಿಲ್ಲದೆ ನಗರದಲ್ಲಿ ಶಾಂತಿ ಸು ವ್ಯವಸ್ಥೆಯನ್ನ ಕಾಪಾಡಿಕೊಂಡು ತಮ್ಮ ಕರ್ತವ್ಯನಿಷ್ಠೆಯ ಮೂಲಕ ಜನಮನ ಗೆದ್ದ ದಕ್ಷ ಅಧೀಕಾರಿಣಿ ಎಂದರೆ ತಪ್ಪಾಗಲಾರದು. ನಮ್ಮ ನಾಡಲ್ಲಿ ವೀರ ರಾಣಿ ಕಿತ್ತೂರು ಚನ್ನಮ್ಮನಂತೆ ಈ ಸಮಾಜವನ್ನ ಶಾಂತಿಪಾಲನೆಯಿಂದ ರಕ್ಷಣೆ ಮಾಡುತ್ತಿದ್ದಾರೆ. ಹಾಗೂ ಚಿತ್ರದುರ್ಗದ ವೀರ ಒಣಿಕೆ ಓಬವ್ವನಂತೆ ಭ್ರಷ್ಟರಿಗೆ ಚಾಮುಂಡಿಯಾಗಿದ್ದಾಳೆ ಹಾಗೂ ಅಕ್ಕಮಹಾದೇವಿಯಂತೆ ತಪ್ಪು ದಾರಿ ತುಳಿಯುವ ಖದೀಮರಿಗೆ ಬುದ್ದಿ ಹೇಳಿ ಸರಿ ದಾರಿಗೆ ತರುತ್ತಿದ್ದಾರೆ.

ಇಂತಹ ಮಹಿಳಾ ಅಧಿಕಾರಿ ಶ್ರೀಮತಿ ಎಸ್ ಆರ್, ನಾಯಕ ಅವರು ನಮ್ಮ ಹುನಗುಂದ ತಾಲೂಕಿನ ಅಧಿಕಾರಿ ಎಂಬುವುದು ಹೆಮ್ಮೆಯ ಸಂಗತಿ, ಇಂತಹ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು ಸಮಾಜದಲ್ಲಿನ ಬಡತನ ಹಾಗೂ ಸಿರಿತನ ಸಂಬಂಧಗಳ ಅರಿವು ಎಲ್ಲ ಅನುಭವದೊಂದಿಗೆ ಸಾರ್ವಜನಿಕ ರಂಗದಲ್ಲಿ ತಳಮಟ್ಟದಿಂದ ಇಂದು ಉನ್ನತ ಹುದ್ದೆಯಲ್ಲಿರುವ PSI ನಾಯಕ ಮೆಡಂ ಅವರ ಸಾರ್ವಜನಿಕ ಸೇವಾಭಾವಣೆ ಸಾರ್ತಕಥೆ ಹೊಂದಿದೆ. ಇವರಿಗೆ ಇನ್ನೂ ಹೆಚ್ಚಿನ ಪದವಿಗಳು ದೊರೆಯಲೆಂದು ನಮ್ಮ BB News ಶುಭ ಹಾರೈಸುತ್ತದೆ.
ವರದಿ ಕಿರಣ್ ಕಾಳಗಿ : + 99011 12171
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News