ಬೆಂಗಳೂರು : ಕರ್ನಾಟಕದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಬಂದಿದ್ದು, ಈ ಹಿನ್ನೆಲೆಯಲ್ಲಿ ಇಂದಿನಿಂದ ಎಲ್ಲ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿಗಳಿಗೆ ಅಡ್ಮಿಷನ್ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳ ಪಿಯುಸಿ ಅಡ್ಮಿಷನ್ ಇಂದಿನಿಂದ ಆರಂಭವಾಗಲಿದೆ.
ಆನ್ಲೈನ್ ಸೌಕರ್ಯ ಇರುವ ಕಾಲೇಜುಗಳಲ್ಲಿ ಆನ್ಲೈನ್ ಮೂಲಕವೇ ಪ್ರವೇಶಾತಿ ಪ್ರಕ್ರಿಯೆ ನಡೆಸಲು ಸೂಚನೆ ನೀಡಲಾಗಿದೆ. ಆನ್ಲೈನ್ ಅಡ್ಮಿಷನ್ನ ಆಯ್ಕೆ ಇಲ್ಲದಿರುವ ಕಾಲೇಜುಗಳಲ್ಲಿ ನೇರ ನೇಮಕಾತಿ ಮಾಡಿಕೊಳ್ಳಬಹುದು. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಕಡ್ಡಾಯ ಎಂದು ಆದೇಶಿಸಲಾಗಿದೆ.
ಇನ್ನು ಅಡ್ಮಿಷನ್ ವೇಳೆ ಕೊರೋನಾ ನೆಪದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಶುಲ್ಕ ಪಡೆಯುವಂತಿಲ್ಲ. ಒಂದುವೇಳೆ ಪದವಿಪೂರ್ವ ಕಾಲೇಜುಗಳು ಇಚ್ಛಿಸಿದರೆ ಕಡಿಮೆ ಶುಲ್ಕ ಪಡೆಯಬಹುದು. ತರಗತಿಗಳ ಆರಂಭ ಮತ್ತು ಶೈಕ್ಷಣಿಕ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲು ನಿರ್ಧಾರ ಮಾಡಲಾಗಿದೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News