ನಾನು ಬಾಲ್ಯದಲ್ಲಿ ಜೀವನ ಇಷ್ಟೊಂದು ಕಠಿನ ಅಂತ ಅಂತ ಭಾವಿಸಿರಲಿಲ್ಲ ,ಪ್ರತಿ ಕ್ಷಣ,ಪ್ರತಿ ನಿಮಿಷಗಳು ನನ್ನ ಅಪ್ಪಾಜಿ ತೊರಿಸುತ್ತಿದ್ದ ಅಕ್ಕರೆ ,ಕಾಳಜಿ, ಅಂದು ನನಗೆ ಹಿಂಸೆ ಅನ್ನಿಸುತ್ತಿತ್ತು ಇಂದು ಅದರ ನಿಜವಾದ ಬೆಲೆ ಆ ಪ್ರೀತಿ ,ಮಮತೆ ,ಇಂದು ನಾ ಕಳೆದುಕೊಂಡ ಮೇಲೆ ನಾ ಹಾಕೊ ಪ್ರತಿ ಕಣ್ಣೀರಿನಲ್ಲೊ ಅಪ್ಪನ ತ್ಯಾಗ,ಮಗಳ ಕಾಳಜಿ, ಏನೂ ಅಂತ ಇವಾಗ ಗೊತ್ತಾಗಿದೆ ಆದರೆ ಕಾಲ ಮಿಂಚಿದೆ ಅಪ್ಪಾಜಿ ಎಂದು ಕರೆದರೂ ಸಹ ಕೆಳದಷ್ಷಟು ದೂರ, ಮತ್ತೆ ಬಾರದಷ್ಟು ಬಾನೆತ್ತರ ನಮ್ಮನ ಅಗಲಿ ಇಂದಿಗೆ ವರ್ಷ ಕಳೆದಿದೆ ಅವರ ನೆನಪು ನನ್ನ ಹೃದಯದ ಪ್ರತಿ ಮಿಡಿತದಲ್ಲಿ ಅವರದೇ ಸದ್ದು ಬಡತನದ ಬೆಗೆಯಲ್ಲಿ ಅಪ್ಪನ ಆರೋಗ್ಯ ಸುದಾರಿಸಲಿಲ್ಲ ಅಂದು ನನಗೂ ಮನೆಯ ವಾಸ್ತವ ಗುರುತಿಸುವಷ್ಟು ತಿಳುವಳಿಕೆ ಇರಲಿಲ್ಲ ಇಂದು ನಾನು ಒಬ್ಬಳೆ ಇದ್ದಾಗ ನಾ ಕಳೆದುಕೊಂಡಿದ್ದೆನೂ, ಪಡೆದುಕೊಂಡಿದ್ದೆನೂ ಎಂಬ ತಿಂತೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ ಆದರೆ ವಾಸ್ತವ ವಿಚಾರ ಒಂದೇ ಅರ್ಥವಾಗಿದ್ದು ಇದ್ದಾಗ ಅರ್ಥಮಾಡಿಕೊಂಡು ಅದನ ಉಳಿಸಿಕೊಳ್ಳುವ ಪ್ರಯತ್ನ ಮಾಡಿಕೊಳ್ಳಬೇಕು ಅದೇ ತಂದೆ,ತಾಯಿಯ ,ಪ್ರೀತಿ,ಇಂದು ನಾ ಅಪ್ಪಾಜಿಯನ್ನು ಕಳೆದುಕೊಂಡು ಅನಾಥಳಾಗಿದ್ದೇನೆ ಅವರ ನೆನಪು ಅಮರ ಅವರೊಂದಿಗೆ ಕೆಲವು ನೆನಪುಗಳನ ನನ್ನ ಈ ಭಾವಯಾನ , ಎಂಬ ನನ್ನ ಲೇಖನ ಮೂಲಕ ವ್ಯಕ್ತಪಡಿಸುತ್ತಿದ್ದೇನೆ…
ಒಂದೊಂದು ಸಲ ನನಗೆ ಅನಿಸುತ್ತೆ ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಅಂತ ಹೇಳ್ತಾರೆ, ನಮ್ಮ ಪೂರ್ವಜರು ಹೇಗೆಂದರೆ ಒಂದು ಕಡೆ “ಅವಸರವೇ ಅಪಘಾತಕ್ಕೆ ಕಾರಣ” ಯಾವುದೇ ಕಾರ್ಯದಲ್ಲೂ ನಿಧಾನಗತಿಯಿಂದ ಮಾಡು ಅಂತ ಹೇಳಿದ್ದಾರೆ. ಅದೇ ಪೂರ್ವಜರು ಇನ್ನೊಂದು ಕಡೆ “ನಾಳೆ ಮಾಡುವ ಕೆಲಸ ಈಗಲೇ ಮಾಡು ಅಂತ ಹೇಳ್ತಾರೆ ಹಾಗಾಗಿ ಒಮ್ಮೊಮ್ಮೆ ಯಾವುದು ಸರಿ ಯಾವುದು ತಪ್ಪು ಎಂದು ತಿಳಿದುಕೊಳ್ಳುವ ಗಲಿಬಿಲಿಯಲ್ಲಿ ನಿಂತು ಮೌನವಾಗಿಬಿಡುತ್ತವೆ. ಮೌನವಾಗಿದ್ದು ಒಮ್ಮೊಮ್ಮೆ ಮೌನ ಒಳ್ಳೆಯದು ಎನಿಸಿಕೊಳ್ಳುತ್ತದೆ. ಒಮ್ಮೊಮ್ಮೆ ಮೌನವಾಗಿದಲ್ಲಿ ನಮ್ಮ ಮೇಲೆ ದೂರುಗಳು ಆಕ್ರಮಿಸುವ ಪರಿ ಉಂಟಾಗಬಹುದು, ಆದರೆ ಮೌನದಿಂದ ಹಲವಾರು ಲಾಭಗಳು ಹಾಗೂ ಹಲವಾರು ನಷ್ಟಗಳು ಇವೆ, ನಾನು ಚಿಕ್ಕವರು ಏನ್ ಬೇಕಾದ್ರು ನಾನು ಏನೇ ಕಿಡಿಗೇಡಿ ತನ ಕೆಲಸ ಮಾಡಿದರೂ ನನ್ನ ಅಪ್ಪ ನನ್ನ ಅಮ್ಮ, ಇಬ್ಬರು ನನ್ನ ಬೈದಿದ್ದು. ಈಗ ನಾನು ಅವರನ್ನು ತಿರುಗಿ ಗುರುತಿಸಿದೆ. ಆ ಸಮಯದಲ್ಲಿ ನನಗೆ ಅದು ಸರಿಯಾಗಿ ಕಾಣುತ್ತಿತ್ತು. ದೊಡ್ಡವರಾದಂತೆಲ್ಲಾ ನಮ್ಮ ತಪ್ಪಿನ ಅರಿವು ನಮಗೆ ಕಾಣಿಸುತಿತ್ತು.
ಬೆಳೆದು ದೊಡ್ಡವರಾದಂತೆಲ್ಲಾ ಬೆಳವಣಿಗೆಯ ಜೋತೆ ಬುದ್ದಿ ಕೂಡಾ ಬರುತ್ತದೆ. ಹಾಗಾಗಿ ಒಮೊಮ್ಮೆ ದೊಡ್ಡವರಿದ್ದಾಗಲೂ ಕೂಡಾ ತಿಳಿದೆನೊ ತಿಳಿದೋ ಅಥವಾ ಮಂಗ ಬುದ್ದಿಯಿಂದ ಏನೋ ತಪ್ಪು ಮಾಡ್ತಿವ್ಹಿ , ಆಗ ತಂದೆ ತಾಯಿ ಬೈತಾರೆ ಅದರಲ್ಲಿ ದೊಡ್ಡವರಾದ ಮೇಲಂತು ತುಂಬಾ ಚೆನ್ನಾಗಿ ಬೈತಾರೆ. ಈಗ ನಾನು ಚಿಕ್ಕ ವಯಸ್ಸಿನವರ ತರ ಮರು ವಾದಿಸಿದರೆ ಮತ್ತೆ ಜಗಳವಾಡುವ ಸಂಭವ ಕಾಣಬಹುದು. ಅದರ ಬದಲು ಮರುವಾದಿಸದೇ `ಮೌನವಾಗಿ ನಿಂತುಕೊಳ್ಳುವುದು ಮರು ಉತ್ತರ ನೀಡುತ್ತಿರಲಿಲ್ಲ
ಹಿಂದೊಮ್ಮೆ ನಾನು ತಪ್ಪು ಮಾಡಿದಾಗಲೆಲ್ಲ ನನ್ನ ಅಪ್ಪಾಜಿ ಬೈತಿದ್ರು ನಾನು ಅವರು ಕೇಳುವ ಪ್ರಶ್ನೆಗೆ ಮರುವಾದಿಸದೇ ಮೌನವಾಗಿ ಬಿಡುತ್ತದೆ. ಅವರು ನನಗೆ ಎಷ್ಟು ಬೇಕು ಅಷ್ಟು ಬೈಕೊಂಡು ನನ್ನಿಂದ ಏನೂ ಉತ್ತರ ಸಿಗದೆ ಬೈಯೊದು ನಿಲ್ಲಿಸಿ ಹೊರಟು ಹೋಗುತ್ತಿದ್ದರು, ಆದರೆ ನನ್ನ ಅಪ್ಪಜಿ ನನ್ನ ಮೇಲೆ ತುಂಬಾ ಪ್ರೀತಿ ವಾತ್ಸಲ್ಯ ತೋರಿಸುತ್ತಿದ್ದರು ನನಗೂ ಕೂಡ ಅಪ್ಪಜಿ ಅಂದ್ರೆ ತುಂಬಾ ಇಷ್ಟ. ತಾಯಿಗೆ ಗಂಡು ಮಕ್ಕಳು ಇಷ್ಟವಾದರೆ ತಂದೆಗೆ ಹೆಣ್ಣುಮಗಳು ಇಷ್ಟ ಇದೊಂದು ತಾನಾಗಿ ಬರುವ & ಬಂದಿರುವ ಸಹಜ ಕ್ರಿಯೆಯ, ತಾಯಿ ಯಾವಾಗಲೂ ಗಂಡು ಮಕ್ಕಳನ್ನು ಹೆಚ್ಚು ಮುದ್ದು ಮಾಡುತ್ತಾರೆ. ತಾಯಿಯು ಗಂಡು ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸುತ್ತಾರೆ ಆದರೆ ತಂದೆ ಹೆಣ್ಣು ಮಕ್ಕಳನ್ನು ಮುದ್ದು ಮಾಡುತ್ತಾರೆ.
ಗಂಡುಮಕ್ಕಳು ಅಮ್ಮ “I LOVE YOU” ಅಂತ ಹಾಡು ಹಾಡುತ್ತಾರೆ. ಹೆಣ್ಣು ಮಕ್ಕಳು “APPA I LOVE YOU” ಅಂತ ಹಾಡುತ್ತಾರೆ. ನಾನು ಬಾಲ್ಯದಲ್ಲಿರುವಾಗ ಏನೇ ತಪ್ಪು ಮಾಡಿದ್ರು ನನ್ನ ತಂದೆ ನನಗೆ ತುಂಬಾ ಬೈತಿದ್ರು ಎಷ್ಟೇ ಪ್ರೀತಿ ತೋರಿಸಿದರೂ. ಒಮ್ಮೆ ಇಷ್ಟವಿಲ್ಲದ ಕೆಲಸ ಮಾಡಿಬಿಟೆ ನಮ್ಮ ಮನೆಯ ಪಕ್ಕದಲ್ಲಿರುವ ಗೆಳತಿಯೊಂದಿಗೆ ಬಟ್ಟೆ ಅಂಗಡಿಗೆ ಹೋಗಿದ್ದೆ ನನ್ನ ಗೆಳತಿಗೆ ಅವರ ತಾಯಿ ತುಂಬಾ ಇಷ್ಟವಾದ ಬಟ್ಟೆ ಕೊಡಸಿದ್ರು, ಆದರೆ ನನಗೂ ತೆಗೆದುಕೊಳ್ಳುವ ಆಸೆ, ಆದರೆ ನಮ್ಮ ಮನೆಯ ಆರ್ಥಿಕ ಸ್ಥಿತಿ ಸರಿ ಇರಲಿಲ್ಲ, ತಂದೆ ಕೆಲಸ ಮಾಡಿ ಹಣ ತಂದಾಗಲೇ ನಮ್ಮ ಜೀವನ ಸಾಗುತಿತ್ತು. ಹೀಗಿರುವಾಗ ಗೆಳತಿಯ ಬಟ್ಟೆ ನೋಡಿ ನಾನು ಗೆಳತಿಯ ತಾಯಿಯ ಹತ್ತಿರ ಸಾಲ ಮಾಡಿ ಅದೇತರ ಬಟ್ಟೆ ತೆಗೆದುಕೊಂಡು ಬಂದೆ, ಆದರೆ ಇದು ತಂದೆಯ ಮನಸ್ಸಿಗೆ ಸರಿ ಅಣ್ಣಿಸಲಿಲ್ಲ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿರದಿದ್ದರೂ ಕೂಡಾ ನಾನು ಬಟ್ಟೆ ತಂದಿದ್ದು ತಂದೆ ತಾಯಿಗೆ ಇಷ್ಟವಿಲ್ಲದ ಕೆಲಸ ಮಾಡಿದೆ, ಅಂತ ನನಗೂ ನೋವಾಯಿತು ಅದೇ ದಿನ ರಾತ್ರಿ ಅಪ್ಪ ಬಾಯಿಗೆ ಬಂದಂತೆಲ್ಲಾ ಬೈದ್ರು, ಈಗ ನನ್ನ ತಪ್ಪಿನ ಅರಿವಾಗಿದೆ , ಮೌನವಾಗಿ ನಿಂತು ಅವರು ಎಷ್ಟೇ ಅಂದರು,ಬೈದ್ರು ಸಹ ನಾನು ಮರು ಮಾತನಾಡದೇ ಸುಮ್ಮನಾದೇ ಆದರೆ ಇಂದು ಅವರು ನನ್ನೊಂದಿಗೆ ಇಲ್ಲ ನಾನು ಏನೇ ಕರಿದಿ ಮಾಡಿ ತಂದರೂ ನನ್ನನೂ ಪ್ರಶ್ನೆ ಮಾಡೊರು ಇಲ್ಲ ಕಾರಣ ಅಪ್ಪಾಜಿ ಜೀವಂತ ಇಲ್ಲ ಅವರು ಅಂದು ಆಡಿದ ನೆನಪು ಇಂದು ನಾನು ಪ್ರತಿ ಸಲ ಬಟ್ಟೆ,ಕರಿದಿ ಮಾಡಿದಾಗ ಅವರ ಮಾತುಗಳು ನನ್ನ ಕಣ್ಣ ಅಂಚಿನಲ್ಲಿ ನೀರಾಗಿ ಹರಿಯುತ್ತವೆ ಹಾಗಾಗಿ ಅಂತಹ ಅಪ್ಪನ ಪ್ರೀತಿಯಿಂದ ನಾನು ಇಂದು ವಂಚಿತಳು ಯಾರೂ ತಂದೆಯ ಪ್ರೀತಿಯನ್ನು ತಿರಸ್ಕರಿಸಬೇಡಿ.
ಕಾಣದ ಹಾಗೆ ಮರಳಿ ಯಾರು ಬಾರದ ಊರಿಗೆ ನನ್ನನ್ನು ಮತ್ತು ಅಮ್ಮನನ್ನು ಬಿಟ್ಟು ದೂರ ಹೋಗಿದ್ದಾರೆ: ಅಪ್ಪನಿಗೆ ದೇಹದಲ್ಲಿ ಸರಿಯಾಗಿ ರೋಗವಿಲ್ಲದಿದ್ದರು ಕೂಡ ಮನೆ ಆರ್ಥಿಕ ಪರಿಸ್ಥಿತಿ ನೋಡಿ ದುಡಿಯುತ್ತಿದ್ದರು. ಅವರ ನೋವು ಹೆಚ್ಚಾದಂತೆ ,ಮನೆಯ ಆರ್ಥಿಕತೆಯ ಬಗ್ಗೆ ಚಿಂತಿ ಮಾಡಿ
ಮಾಡಿ ಒಂದು ದಿನ ಸತ್ತೆ ಹೊದರು ಆದರೆ ಇಂದು ನನ್ನ ಪಾಲಿನ ಹೀರೊ ನನ್ನ ಅಪ್ಪಾಜಿ ಬಡತನವನ್ನು ಹೇಗೆ ಹಿಮ್ಮಟ್ಟಿಸಬೇಕು ಈ ಲಜ್ಜೆಗೆಟ್ಟ ಸಮಾಜದಲ್ಲಿ ಹೇಗೆ ಬದುಕಬೇಕು ಎಂದು ಸತ್ಯದ ಅರಿವನ್ನು ಮೂಡಿಸಿದ್ದಾರೆ, ಅಂತಹ ಅಪ್ಪಾಜಿ ಯಾರಿಗೂ ಸಿಗಲ್ಲ ಆದರೆ ಓದುಗರಿಗೆ ನನ್ನ ಮನವಿ ತಂದೆ ,ತಾಯಿ, ಕಣ್ಣಿಗೆ ಕಾಣುವ ಪ್ರತ್ಯೇಕ ದೇವರು ಈ ಭೂಮಿಯ ಮೇಲೆ ಇವರಿಗಿಂತ ದೊಡ್ಡ ದೇವರು, ಮತ್ತು ಧೈವಶಕ್ತಿ ಯಾರೂ ಇರಲೂ ಸಾಧ್ಯವೇ ಇಲ್ಲ ಅಂತಹ ದೇವರ ಕಣ್ಣಲ್ಲಿ ನೀರು ತರಿಸುವ ಎಷ್ಟೋ ಕುಡುಕ ಗಂಡಸರನ್ನು ನಿತ್ಯ ನೋಡುತ್ತಿದ್ದೇನೆ, ಒಂದು ಹೊತ್ತು ಅಣ್ಣಕ್ಕಾಗಿ ಅನಾಥರಾದ ಎಷ್ಷೊ ಪಾಲಕರು ಬಿದಿ ಪಾಲಾಗಿದ್ದಾರೆ ,ಒಂದು ದಿನ ನೀವು ಮುದುಕರಾಗುತ್ತಿರಿ,ನಿಮಗೂ ಇಂತಹದೇ ಸ್ಥಿತಿ ಬರಬಹುದು ಎಚ್ಚರ.
ನಾನು ನನ್ನ ಮುಂದಿನ ಭಾವಯಾನ ಅಂಕಣದಲ್ಲಿ ನನ್ನ ಪೊರ್ಣ ಪರಿಚಯ ಮಾಡಲು ಬಯಸುತ್ತೇನೆ.
ಇಂತಿ ನಿಮ್ಮ
ಕುಮಾರಿ : ಕಿರ್ತಿ ಜಂಗಮರ
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News