Breaking News

ಬಾಗಲಕೋಟೆಯಲ್ಲಿ ಬಿಜೆಪಿ ಕಚೇರಿಯಿಂದ ಜೆಪಿ ನಡ್ಡಾ ಶಿಲಾನ್ಯಾಸ

ಬಾಗಲಕೋಟೆ: ಬಾಗಲಕೋಟೆ ನವನಗರದ 22ನೇ ಸೆಕ್ಟರ್ ನಲ್ಲಿ ರೂ.3.25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬಿಜೆಪಿಯ ಜಿಲ್ಲಾ ಕಾರ್ಯಾಲಯದ ಕಟ್ಟಡದ ಶಿಲಾಫಲಕವನ್ನು ಬಿಜೆಪಿಯ ರಾಷ್ಟ್ರಾಧ್ಯಕ್ಷ ಜೆ,ಪಿ.ನಡ್ಡಾ ಅವರು ಆನ್’ಲೈನ್ ಮೂಲಕ ಆ.14ರಂದು ಮಧ್ಯಾಹ್ನ 12.30ಕ್ಕೆ ಉದ್ಘಾಟಿಸಲಿದ್ದಾರೆ.

ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಅವರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಿಗ್ಗೆ 7.30ಕ್ಕೆ ಗೋವಿಂದ ಕಾರಜೋಳ ಅವರಿಂದ ಭೂಮಿ ಪೂಜೆ, 9 ಗಂಟೆಗೆ ಜಗಜೀವನರಾಮ್ ಭವನದಲ್ಲಿ ಸಭೆ ಹಾಗೂ ಅಭಿಪ್ರಾಯ ಸಂಗ್ರಹ. ಮಧ್ಯಾಹ್ನ 12.30 ಗಂಟೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಅವರು ಕಟ್ಟಡದ ಶಿಲಾಫಲಕವನ್ನು ಆನ್’ಲೈನ್ ಮೂಲಕ ನೆರವೇರಿಸಲಿದ್ದಾರೆಂದು ಹೇಳಿದರು.

ಬಳಿಕ ನವರತ್ನ ಕಳಸಕ್ಕೆ ಪುಷ್ಪಾರ್ಚನೆ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರುಗೆ ಹಸ್ತಾಂತರಿಸುವ ಕಾರ್ಯ ನಡೆಯಲಿದೆ ಎಂದು ಶಾಂತಗೌಡ ಪಾಟೀಲ ತಿಳಿಸಿದ್ದಾರೆ.

About vijay_shankar

Check Also

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.