
ಅಮೀನಗಡ : ನಗರದ ಪ್ರವಾಸಿ ಮಂದಿರಲ್ಲಿ ಇಂದು ಕರ್ನಾಟಕ ಪತ್ರಕರ್ತರ ಸಂಘವು ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಆಚರಿಸಿತು. ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಮಾಜಿ ಶಾಸಕರು & ರಾಜ್ಯ ಅಧ್ಯಕ್ಷರಾದ ಶ್ರೀ ಎಸ್ ಜಿ ನಂಜಯ್ಯನಮಠ ಅವರು ಮಾತನಾಡಿ ಮಾಧ್ಯಮದಲ್ಲಿ ಸೇವೆ ಮಾಡುವಂತಹ ಪ್ರತಿಯೊಬ್ಬರು ಬಹಳ ವಾಸ್ತವಿಕ ಅಧ್ಯಯನ ಜೊತೆಗೆ ಸುಧೀರ್ಘವಾಗಿ ಓದುವ ಹವ್ಯಾಸ ಮಾಡಿಕೊಳ್ಳಬೇಕು. ಜೊತೆಗೆ ಪತ್ರಿಕೆಗಳನ್ನು ಸ್ವಂತ ಹಣದಿಂದ ಕೊಂಡು ಓದಬೇಕು, ಈ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂತವಾಗಿ ವಿವಿಧ ಸಾಧಕರನ್ನು ಗುರುತಿಸಿ ರಾಜ್ಯ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ.

ಎಂದರು. ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಪೂಜ್ಯ ಡಾ: ಗುರುಮಹಾಂತ ಸ್ವಾಮಿಗಳು ಆರ್ಶಿವಚನ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಸಾಧಕರಿಗೆ ರಾಜ್ಯ ಪ್ರಶಸ್ತಿ ನೀಡಲಾಯಿತು. ರಾಷ್ಟಿçÃಯ ಪತ್ರಿಕಾ ದಿನಾಚರಣೆ ಅಂಗವಾಗಿ ಇಂಡಿಯನ್ ಜರ್ನಲಿಸ್ಟ್ ಯುನಿಯನ್ ದೆಹಲಿ ಹಾಗೂ ಕರ್ನಾಟಕ ಪತ್ರಕರ್ತರ ಸಂಘ ಬೆಂಗಳೂರ ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ಬಿಬಿ ನ್ಯೂಸ್ ಡಿಜಿಟಲ್ ಚಾನೆಲ್ ಸಹಯೋಗದಲ್ಲಿ ಪ್ರಶಸ್ತಿ ನಡಿಗೆ ಸಾಧಕರ ಕಡೆಗೆ ಅಭಿಯಾನದಡಿ ಆಯ್ಕೆಯಾದ ರಾಜ್ಯ ಪ್ರಶಸ್ತಿ ಪುರಸ್ಕೃತರು
ಶ್ರೀಮತಿ ಸವಿತಾ ಅಶೋಕ ಛಲವಾದಿ ಸಮಾಜ ಸೇವಕರು ಇಳಕಲ್ಲ – ಸಮಾಜ ಸೇವಾ ರತ್ನ

ಶ್ರೀಮತಿ ಡಾ|| ರಶ್ಮಿ ಬಸಯ್ಯ ಹಿರೇಮಠ ವೈದ್ಯರು ಅಕ್ಕಿ ಆಸ್ಪತ್ರೆ ಇಳಕಲ್ಲ – ವೈಧ್ಯ ರತ್ನ
ಶ್ರೀ ಅರವಿಂದ ಚೌಡಪ್ಪ ಭಜಂತ್ರಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ – ಅತ್ಯುತ್ತಮ ಕರ್ತವ್ಯ ಪಾಲನೆ
ಶ್ರೀ ಉಮಾಪತಿ ಮರಿಬಸಯ್ಯ ಹಂಪಿಹೊಳೆ ನಿವೃತ್ತ ಉಪನ್ಯಾಸಕರು – ಶಿಕ್ಷಣ ಸೇವಾ ರತ್ನ

ಅಧ್ಯಕ್ಷರು/ಕಾರ್ಯದರ್ಶಿಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದ್ದಲಗಿ – ಅತ್ಯುತ್ತಮ ಕರ್ತವ್ಯ ಪಾಲನೆ
ಶ್ರೀ ಶಿವಪ್ಪ ಹನಮಂತಪ್ಪ ರೂಡಗಿ ಕೆ.ಎಸ್.ಆರ್.ಟಿ.ಸಿ. ಕಂಟ್ರೋಲರ್ ಅಮೀನಗಡ – ಅತ್ಯುತ್ತಮ ಕರ್ತವ್ಯ ಪಾಲನೆ
ಶ್ರೀ ಅಂದಾನಿಗೌಡ ಸಂಗನಗೌಡ ಸಿಂಗನಗುತ್ತಿ ಉಪನ್ಯಾಸಕರು – ಶಿಕ್ಷಣ ಸೇವಾ ರತ್ನ

ಡಾ|| ರಾಜೇಂದ್ರ ಕೃಷ್ಣಪ್ಪ ಕಿಲಬನೂರ ವೈಧ್ಯಾಧಿಕಾರಿಗಳು ಸೂರಿಬಾಣ – ವೈಧ್ಯ ರತ್ನ
ಶ್ರೀ ಸಂಗಪ್ಪ ಬಸಪ್ಪ ಅಂಗಡಿ ಶಿಕ್ಷಕರು ಅಮೀನಗಡ ಸಾ|| ಹುಲಗಿನಾಳ – ಅತ್ಯುತ್ತಮ ಕರ್ತವ್ಯ ಪಾಲನೆ
ಶ್ರೀ ಶೇಖರಯ್ಯ ಮೇಟಿಮಠ ಮುಖ್ಯಕಾರ್ಯನಿರ್ವಾಹಕರು ಪಿ.ಕೆ.ಪಿ.ಎಸ್. ಕೆಲೂರ – ಅತ್ಯುತ್ತಮ ಕರ್ತವ್ಯ ಪಾಲನೆ
ಶ್ರೀ ಸಂಗನಗೌಡ ಸಿದ್ದನಗೌಡ ಗೌಡರ ಕೆ.ಎಸ್.ಆರ್.ಟಿ.ಸಿ. ಕಂಟ್ರೋಲರ್ ಅಮೀನಗಡ – ಅತ್ಯುತ್ತಮ ಕರ್ತವ್ಯ ಪಾಲನೆ
ಶ್ರೀ ಅಶೋಕ ಶಿರಿಯಾನ ಹೋಟೆಲ್ ಉದ್ದೆಮಿದಾರರು ಅಮೀನಗಡ – ಅತ್ತುತ್ತಮ ಕರ್ತವ್ಯ ಪಾಲನೆ

ಶ್ರೀ ಪಾಂಡುರAಗ ಹೋಟಿ ಮುಖ್ಯಕಾರ್ಯನಿರ್ವಾಹಕರು ಕಮತಗಿ – ಅತ್ಯುತ್ತಮ ಕರ್ತವ್ಯ ಪಾಲನೆ
ಶ್ರೀಮತಿ ಸವಿತಾ ಬಾಲಚಂದ್ರ ವಂದಾಲ ಪ್ರಚಾರ್ಯರು ಇಳಕಲ್ಲ – ಶಿಕ್ಷಣ ಸೇವಾ ರತ್ನ
ಶ್ರೀಮತಿ ನೇಹಾ ಲಾಹೋಟಿ ಸಂಸ್ಥಾಪಕ ಕಾರ್ಯಾಧ್ಯಕ್ಷರು ಹುನಗುಂದ – ಶಿಕ್ಷಣ ಸೇವಾ ರತ್ನ
ಶ್ರೀ ಉಸ್ತಾದ್‌ಖಾನ್ ಇಲಾಳ ಅಧ್ಯಕ್ಷರು ಸಂಸ್ಕೃತಿಕ ಸೇವಾ ಸಂಸ್ಥೆ ಇಳಕಲ್ಲ – ಸಮಾಜ ಸೇವಾ ರತ್ನ
ಶ್ರೀ ರಾಘವೇಂದ್ರ ಬಸವರಾಜ್ ಹಡಪದ ಅಧ್ಯಕ್ಷರು ಹಡಪದ ಸಮಾಜ ಅಮೀನಗಡ – ಸಮಾಜ ಸೇವಾ ರತ್ನ

ಜಿಲ್ಲಾ ಕೆ,ಪಿ,ಸಿ,ಸಿ ಎಸ್ ಸಿ ಮೊರ್ಚಾ ಅಧ್ಯಕ್ಷ ರಾಜು ಮಣ್ಣಿಕೇರಿ, ರಾಜ್ಯ ಸಮಿತಿ ಸದಸ್ಯೆ ರಾಜೇಂದ್ರ ದೇಶಪಾಂಡೆ ,ಕಲ್ಯಾಣ ಕರ್ನಾಟಕ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮುಂಡಲಿಕ ಮುರಾಳ ಹಾಗೂ ರಾಜ್ಯ ಪತ್ರಿಕೆ ವಿತರಕರ ಸಂಘದ ರಾಜ್ಯ ಅಧ್ಯಕ್ಷ ಶಂಕರ್ ಕುದರಿಮೊತಿ, ಜಿಲ್ಲಾ ಕರ್ಣಾಟ ಕ ಪತ್ರಕರ್ತರ ಸಂಘದ ಅಧ್ಯಕ್ಷ ಡಿ,ಬಿ,ವಿಜಯಶಂಕರ್, ಕಾರ್ಯದರ್ಶಿ ಕಿರಣರಾಜ್ ಕಾಳಗಿ, ಆಪ್ತ ಸಹೆಗಾರರಾದ ಭೀಮಸಿಂಗ್ ರಾಠೋಡ ,ಸೇರಿದಂತೆ ಅನೇಕರು ಉಪಸ್ಥಿತಿ ಇದ್ದರು




ವರದಿ : ಕಿರಣರಾಜ್ ಎಂ ಕಾಳಗಿ
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News