Breaking News
ಅಶೋಕ ಚಲವಾದಿ ! ಚಲವಾದಿ ಅಲ್ಲ ಆತ ಛಲವಾದಿ,ಹಠವಾದಿ ಶಾಸಕ ಡಾ: ವಿಜಯಾನಂದ ಕಾಶಪ್ಪನವರ ಅಭಿಮತ

ಅಶೋಕ ಚಲವಾದಿ ! ಚಲವಾದಿ ಅಲ್ಲ ಆತ ಛಲವಾದಿ,ಹಠವಾದಿ ಶಾಸಕ ಡಾ: ವಿಜಯಾನಂದ ಕಾಶಪ್ಪನವರ ಅಭಿಮತ

ಇಲಕಲ್ಲ ಸವಿತಾ ಅಶೋಕ ಯಾವಾಗಲೂ ನನ್ನ ಸಹೋದರಿ ಅವಳಿಗೆ ಸಾರ್ವಜನಿಕ ಹಾಗೂ ರಾಜಕೀಯ ರಂಗದಲ್ಲಿ ದಂಪತಿಗಳಿಗೆ ಉತ್ತಮ ಭವಿಷ್ಯ ಇದೆ. ಅವರ ಕುಟುಂಬದ ಜೊತೆಗೆ ನಾ ಯಾವಾಗಲೂ ಇರುವೆ. ಅಶೋಕ ಚಲವಾದಿ ಅಲ್ಲ ಆತ ಛಲವಂತ,ಹಠವಂತ ಹಿಡಿದ ಕೆಲಸ ಸಾಧಿಸುವಂತಹ ಬುದ್ದಿವಂತ ಹೀಗಾಗಿ ಸಾರ್ವಜನಿಕ ರಂಗದಲ್ಲಿ ತನ್ನ ಸಮಾಜವನ್ನು ಒಗ್ಗೂಡಿಸಿಕೊಂಡು ನಗರದಲ್ಲಿ ದೀಪು- ದೀಕ್ಷಾ ಸಂಸ್ಥೆಯ ಮೂಲಕ ಸಾಮಾಜಿಕ ಸೇವಾ ಕೆಲಸಗಳನ್ನು ಮಾಡುತ್ತಾ ಸದಾ ಜನರ ಮಧ್ಯೆ ಗುರುತಿಸಿಕೊಳ್ಳತ್ತಿರುವ ಇವರ ಸೇವೆ ಹೀಗೆ ಮುಂದು ವರೆಯಲಿ ಎಂದು ಡಾ: ವಿಜಯಾನಂದ ಎಸ್ ಕಾಶಪ್ಪನವರು ಅಭಿಮತ ವ್ಯಕ್ತಪಡಿಸಿದರು.

ನಗರದಲ್ಲಿ ನಡೆದ ಹುನಗುಂದ ಸ್ಪೋರ್ಟ್ಸ್ & ಕಲ್ಚಾರ್ ಸೀಜನ್ 8 ರ ವಿಜಯೋತ್ಸವ ಸಂಭ್ರಮಾಚರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ನಾನು ಈ ಸಂಸ್ಥೆಯ ಅಧ್ಯಕ್ಷನಾದರೂ ಕೂಡ ಹುನಗುಂದ ಸ್ಪೋರ್ಟ್ಸ್ & ಕಲ್ಚಾರ್ ಸೀಜನ್ 8 ರ ಹಾಗೂ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಬಹಳ ಕಷ್ಟ ಪಟ್ಟು 38 ದಿನಗಳ ಕಾಲ ಈ ಸಿಜನ್ 8 ಕ್ರಿಕೆಟ್ ಅನ್ನು ಆಡಿಸಿ ಹೊರ ರಾಜ್ಯದಲ್ಲಿ ಇಲಕಲ್ಲ ನಗರ ಸದ್ದು ಮಾಡಿದೆ. ಇದಕ್ಕೆ ಕಾರಣ ಈ ಸಂಸ್ಥೆಯ ಎಲ್ಲಾ ಸದಸ್ಯರು, ಹಾಗೂ 14 ಟಿಮ್ ಆಟಗಾರರು ಕೂಡ ಉತ್ತಮ ಪ್ರದರ್ಶನ ಮಾಡಿ ಆಟ ಆಡಿದ್ದಾರೆ.

ಇದರ ಗೆಲವನ್ನು ಮುಡಿಗೆರಿಕೊಂಡ ಡಿ,ಡಿ ,ಲಯನ್ಸ್ ತಂಡದ ನಾಯಕ ಅಶೋಕ ದಂಪತಿಗಳು ಹಾಗೂ ಎಲ್ಲಾ ಆಟಗಾರಿಗೆ. ಮತ್ತು ತಂಡದ ಎಲ್ಲಾ ಮಾಲೀಕರಿಗೆ, ಈ ಸಂದರ್ಭದಲ್ಲಿ ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಎಂದರು.

ನಗರದಲ್ಲಿ ನಡೆದ ಐ.ಪಿ.ಎಲ್.‌ ಸೀಸನ್‌ 8 ರಲ್ಲಿ ಡಿ.ಡಿ.ಲಯನ್ಸ್‌ ತಂಡ ಅಭೂತಪೂರ್ವ ಗೆಲುವು ಸಾಧಿಸಿತ್ತು. ಈ ಗೆಲುವಿನ ಸಂಭ್ರಮಾಚರಣೆಗೆ ದೀಪು ದೀಕ್ಷಾ ಕ್ರೀಡಾ ಮತ್ತು ಸಾಂಸ್ಕೃತಿಕ ಶಿಕ್ಷಣ ಸಂಸ್ಥೆಯ ವತಿಯಿಂದ ಅಭಿನಂದನಾ ಮತ್ತು ಗೌರವ ಸತ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್‌ ಅವರನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಶೋಕ ಚಲವಾದಿ ಮತ್ತು ಕಾರ್ಯದರ್ಶಿ ಸವಿತಾ ಅಶೋಕ ಚಲವಾದಿ ಅವರು ಅದ್ಧೂರಿಯಾಗಿ ಬರಮಾಡಿಕೊಂಡರು.

ಕಾರ್ಯಕ್ರಮವನ್ನು ಶಾಸಕ ವಿಜಯಾನಂದ ಕಾಶಪ್ಪನವರ್‌, ವೆಂಕಟೇಶ ಸಾಕಾ, ರಾಜು ಬೋರಾ ಮಹಾಂತೇಶ ನರಗುಂದ ಅಶೋಕ ಚಲವಾದಿ ದಂಪತಿಗಳು ಸೇರಿದಂತೆ ಅನೇಕ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಐ.ಪಿ.ಎಲ್.‌ 8 ರಲ್ಲಿ ಭಾಗವಹಿಸಿದ ಎಲ್ಲಾ ತಂಡದ ಮಾಲೀಕರು ಮತ್ತು ನಾಯಕರು ಹಾಗೂ ಇಲಕಲ್ಲ ಹುನಗುಂದ ಮತ್ತು ಕುಷ್ಟಗಿ ತಾಲೂಕಿನ ಚಲವಾದಿ ಸಮಾಜದ ಹಿರಿಯರು ಗಣ್ಯರಿಗೆ ಅಭಿನಂದಿಸಿ ಗೌರವ ಸತ್ಕಾರ ಮಾಡಲಾಯಿತು.

ಸಂಸ್ಥೆಯ ಮಾಡಿರುವ ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಗೆಯೇ ಪ್ರತಿವರ್ಷ ಇನ್ನು ಹತ್ತಾರು ಸಾಮಾಜಿಕ ಕಾರ್ಯಗಳು ಸಂಸ್ಥೆ ವತಿಯಿಂದ ನಡೆಯಲಿ ಎಂದರು.

ಇನ್ನು ನಂತರ ವಿಜಯಕುಮಾರ ಗದ್ದನಕೇರಿ
ಮಾತನಾಡಿ ಮಾನ್ಯ ಶಾಸಕರು ಒಂದಿಗೆ ತಾವುಗಳು ಬಂದು ಸೇರ್ಪಡೆಯಾಗಿದ್ದು ನಮ್ಮ ನಿಮ್ಮಗಳ ನಿರ್ಣಯವಲ್ಲ ಅದು ದೈವದ ಇಚ್ಛೆ ದೈವದ ನಿರ್ಣಯ ಅಣ್ಣ ತಂಗಿಯ ಭಾಂದವ್ಯ ಇದೇ ರೀತಿ ಮುಂದುವರೆಯಲಿ ನನ್ನನ್ನು ಆತ್ಮೀಯತೆಯಿಂದ ಕರೆಸಿ ಸನ್ಮಾನಿಸಿದ್ದಕ್ಕೆ ಅಶೋಕ್ ಚಲವಾದಿ ದಂಪತಿಗಳಿಗೆ ಧನ್ಯವಾದ ತಿಳಿಸಿದರು

ಅಧ್ಯಕ್ಷ ಪರ ಮಾತನಾಡಿದ
ಸಂಸ್ಥೆಯ ಕಾರ್ಯದರ್ಶಿ ಸವಿತಾ ಅಶೋಕ ಚಲವಾದಿ ಮಾತನಾಡಿ ನನ್ನ ಅಣ್ಣನ ಸಮನಾದ ವಿಜಯಾನಂದ ಕಾಶಪ್ಪನವರ ಅವರ ಹೆಸರಿನಲ್ಲೇ ವಿಜಯ ಇದೇ ಹಾಗೇ ಇದು ವಿಜಯೋತ್ಸವ ಎಂದು ಭಾವುಕರಾದರು.

ಇನ್ನು ಕಾರ್ಯಕ್ರಮದಲ್ಲಿ ವಿಠ್ಠಲ ಜಕ್ಕಾ, ಪವಾಡೆಪ್ಪ ಚಲವಾದಿ, ಮಹಾದೇವ ಕಂಬಾಗಿ, ಗಿರೀಶ್ ಅಚನೂರ್,ಮಹಾಂತೇಶ ನರಗುಂದ, ಜಬ್ಬಾರ ಕಲಬುರ್ಗಿ, ಬಸವರಾಜ್ ಜಾಲಿಹಾಳ, ನಾಗರಾಜ್ ಪವಾರ್, ನೀಲಪ್ಪ ತಪೇಲಿ, ರಫೀಕ್ ಕೋಡಿಹಾಳ, ವಿದ್ಯಾಧರ್ ಗೋಟುರ್, ಮಹಾಂತೇಶ್ ಹೊಸೂರ್, ಶ್ರೀ ಪುಂಡಲೀಕ ಮುರಾಳ, ಶ್ರೀ ಡಿ,ಬಿ,ವಿಜಯಶಂಕರ್ ಹಾಗೂ ಇಳಕಲ್ ಶಹರ ಠಾಣೆಯ ಪಿಎಸ್ಐ
ಸೇರಿದಂತೆ ಅನೇಕ ಗಣ್ಯರು ಹಾಗೂ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ನಗರದ ಕ್ರಿಕೆಟ್ ನ ಕ್ರೀಡಾ ಅಭಿಮಾನಿಗಳು ಇತರರು ಉಪಸ್ಥಿತರಿದ್ದರು.

ವರದಿ: ಸಚ್ಚಿನ್

About vijay_shankar

Check Also

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಅಮೀನಗಡ : ಸಮೀಪದ ಗುಡೂರು ಎಸ್,ಸಿ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ವಿಚಿತ್ರ ಎಂದರೆ ಈ ದುಶ್ಚಟಕ್ಕೆ ವಯಸ್ಕರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.