Breaking News

ಮೊಮ್ಮಗನಿಗೆ ಮನಬಂದಂತೆ ಥಳಿಸಿದ ಅಜ್ಜಿ; ಬೆಂಗಳೂರಿನಲ್ಲಿ ಹೀನ ಕೃತ್ಯ

ಬಾಲಕನ ತಂದೆ ಇಮ್ರಾನ್ ಪಾಷ ಮತ್ತು ತಾಯಿ ಅಜೀರಾ ದಂಪತಿ ಗುರಪ್ಪನಪಾಳ್ಯದಲ್ಲಿ ವಾಸವಾಗಿದ್ದರು. ಇವರಿಬ್ಬರೂ ಸಹ ಪ್ರೀತಿಸಿ ಮದುವೆಯಾಗಿದ್ದರು. ಇದೇ ವಿಚಾರಕ್ಕೆ ಅತ್ತೆ ಮತ್ತು ಅಳಿಯನ ನಡುವೆ ವೈಮನಸ್ಸಿತ್ತು ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಪತ್ನಿ ಅಜೀರಾ ಕೂಡ ತನ್ನ ತಾಯಿಯ ಜೊತೆ ಸೇರಿಕೊಂಡು ಗಂಡನ ಜೊತೆ ಜಗಳ ಮಾಡುತ್ತಿದ್ದಳು.

ಬೆಂಗಳೂರು(ಆ.29): ಅತ್ತೆಯ ಸಿಟ್ಟು ಕೋತಿಯ ಮೇಲೆ ಎಂಬ ಗಾದೆ ಇದೆ. ಬೆಂಗಳೂರಿನಲ್ಲೂ ಸಹ  ಅದೇ ರೀತಿ ಆಗಿದೆ. ವೃದ್ಧೆಯೋರ್ವಳು ಅಳಿಯನ ಮೇಲಿನ ಕೋಪವನ್ನು ಮೊಮ್ಮಗನ ಮೇಲೆ ತೀರಿಸಿಕೊಂಡಿದ್ದಾಳೆ. ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ ಅಮಾನವೀಯ ಘಟನೆಯೊಂದು ನಡೆದಿದೆ. ಸ್ವಂತ ಅಜ್ಜಿಯೇ ಮೊಮ್ಮಗನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾಳೆ. 2 ವರ್ಷದ ಮಗುವಿನ ಬಾಯಿಗೆ ಪ್ಲಾಸ್ಟರ್ ಹಾಕಿ ಹೊಟ್ಟೆ ಹಾಗೂ ಮುಖದ ಮೇಲೆ ಸುಟ್ಟು, ಮನಬಂದಂತೆ ಥಳಿಸಿದ್ದಾಳೆ.  ಏನೂ ಅರಿಯದ ಮುಗ್ಧ ಕಂದಮ್ಮನ ಮೇಲೆ ಮೃಗೀಯ ವರ್ತನೆ ತೋರಿದ್ದಾಳೆ ಎಂದು ತಿಳಿದು ಬಂದಿದೆ.

ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ಈ ಘಟನೆ ನಡೆದಿದೆ. ಮಗು ನೆಲದಲ್ಲಿ ಬಿದ್ದು ಎಷ್ಟೇ ಒದ್ದಾಡುತ್ತಿದ್ದರೂ ಬಿಡದ ಕ್ರೂರಿ ಅಜ್ಜಿ ಮತ್ತೆ ಹಲ್ಲೆ ಮಾಡಿದ್ದಾಳೆ. ಇಷ್ಟು ಮಾತ್ರವಲ್ಲದೇ, ಮಗು ಅಳುವುದನ್ನು ನಿಲ್ಲಿಸದಿದ್ದಕ್ಕೆ ಮುಖದ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಸದ್ಯ ಮಗುವಿನ ಮುಖ ಹಾಗೂ ಕಣ್ಣಿಗೆ ಪೆಟ್ಟಾಗಿದ್ದು ಇಂದಿರಾಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಾಲಕನ ಅಜ್ಜಿ ಮುಬೀನಾ ಹಲ್ಲೆ ಮಾಡಿದ ಆರೋಪಿತ ಮಹಿಳೆ. ಇನ್ನು ಘಟನೆ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಮುಬೀನಾ ಮನೆಯಿಂದ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಬಾಲಕ ಹೆಚ್ಚು ಊಟ ಕೇಳುತ್ತಾನೆ ಎಂದು ಆತನ ಅಜ್ಜಿ ಹಲ್ಲೆ ಮಾಡಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಬಾಲಕನ ಅಪ್ಪ(ಅಳಿಯ) ಇಮ್ರಾನ್ ಪಾಷ ಪ್ರಶ್ನಿಸಿದ್ದಕ್ಕೆ, ಹೆಚ್ಚಾಗಿ ಮಾತನಾಡಿದರೆ ನೀನು ನಿನ್ನ ಮಕ್ಕಳ ಜೊತೆ ಮನೆ ಖಾಲಿ ಮಾಡಿ ಎಂದು ಹೇಳಿದ್ದಳಂತೆ. ಆಗ ಬಾಲಕನ ತಂದೆ ವಿಧಿಯಿಲ್ಲದೇ ಸುಮ್ಮನಾಗಿದ್ದನಂತೆ. ಘಟನೆ ನಡೆಯುವಾಗ ಮಗುವಿನ ಅಳುವಿನ ಸದ್ದು ಕೇಳಿದ ಸ್ಥಳೀಯರು ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಾಲಕನ ತಂದೆ ಇಮ್ರಾನ್​ ಪಾಷ ಮತ್ತು ತಾಯಿ ಅಜೀರಾ ದಂಪತಿ ಗುರಪ್ಪನಪಾಳ್ಯದಲ್ಲಿ ವಾಸವಾಗಿದ್ದರು. ಇವರಿಬ್ಬರೂ ಸಹ ಪ್ರೀತಿಸಿ ಮದುವೆಯಾಗಿದ್ದರು.  ಇದೇ ವಿಚಾರಕ್ಕೆ ಅತ್ತೆ ಮತ್ತು ಅಳಿಯನ ನಡುವೆ ವೈಮನಸ್ಸಿತ್ತು ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಪತ್ನಿ ಅಜೀರಾ ಕೂಡ ತನ್ನ ತಾಯಿಯ ಜೊತೆ ಸೇರಿಕೊಂಡು ಗಂಡನ ಜೊತೆ ಜಗಳ ಮಾಡುತ್ತಿದ್ದಳು. ಗಂಡ ಇಲ್ಲದ ವೇಳೆ ತಾನು ಹೆತ್ತ ಮಗುವಿನ ಮೇಲೆಯೇ ಹಲ್ಲೆ ಮಾಡಿ ಕೋಪ ತೀರಿಸಿಕೊಳ್ಳುತ್ತಿದ್ದಳು ಎನ್ನಲಾಗಿದೆ. ಹೀಗಾಗಿಯೇ ಮಗು ಅಜ್ಜಿ ಮತ್ತು ತಾಯಿ ಹತ್ತಿರ ಸೇರುತ್ತಿರಲಿಲ್ಲ. ಅವರು ಏನೇ ಕೊಟ್ಟರೂ ತಿನ್ನುತ್ತಿರಲಿಲ್ಲ. ಇದರಿಂದ ಬಾಲಕನ ತಾಯಿ ಮತ್ತು ಅಜ್ಜಿ ಕೋಪಗೊಂಡಿದ್ದರು.

ಇಷ್ಟೆಲ್ಲಾ ಕೃತ್ಯ ತಾಯಿಯ ಕಣ್ಣೆದುರೇ ನಡೆದರೂ, ಮಗುವಿನ ಮೈ ಸುಟ್ಟು ಹಲ್ಲೆ ನಡೆಸುತ್ತಿದ್ದರೂ ಆಕೆಯ ಹೆತ್ತ ಕರುಳು ಮಾತ್ರ ಕರಗಲಿಲ್ಲ. ಹೀನ ಕೃತ್ಯವನ್ನು ನೋಡುತ್ತಲೇ ನಿಂತಿದ್ದಳು. ಬಾಲಕನ ತಂದೆ ಪ್ರಶ್ನಿಸಿದರೆ ಆತನಿಗೆ ಬೆದರಿಕೆ ಹಾಕುತ್ತಿದ್ದಳು. ಜೊತೆಗೆ ಅಮ್ಮ ಮಗಳು ಸೇರಿಕೊಂಡು ವಿಷಯಾಂತರ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಘಟನೆ ಮಗುವಿನ ತಾಯಿ ಹೆರಿಗೆಗಾಗಿ ತನ್ನ ತವರು ಮನೆಗೆ ಹೋಗಿದ್ದಾಗ ನಡೆದಿದೆ. ಅಜ್ಜಿ ಮೊಮ್ಮಗನಿಗೆ ಚಿತ್ರಹಿಂಸೆ ನೀಡಿದ್ದಾಳೆ.

ಒಟ್ಟಾರೆ ಕ್ರೂರಿ ಮಹಿಳೆ ಅಳಿಯನ ಮೇಲಿನ ಕೋಪವನ್ನು ಮೊಮ್ಮಗನ ಮೇಲೆ ತೀರಿಸಿಕೊಂಡಿದ್ದಾಳೆ. ಘಟನೆ ಸಂಬಂಧ ತಡರಾತ್ರಿ ಮಗುವಿನ ತಂದೆ ಇಮ್ರಾನ್ ಪಾಷ ಮತ್ತು ಸ್ಥಳೀಯರು ಸುದ್ದಗುಂಟೆ ಪಾಳ್ಯದಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಸುದ್ದಗುಂಟೆ ಪಾಳ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಆನಂದ ಪರಾಳದ

ಶ್ರೀ ಆನಂದ ಪರಾಳದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ಸದಸ್ಯರು ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.