ಬೆಂಗಳೂರು (04-09-2020): ಜೀ ಟಿವಿ ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಾಧಾರಿತ ಧಾರಾವಾಹಿ ಮಹಾನಾಯಕ ಅತ್ಯಂತ ಜನಪ್ರಿಯತೆ ಪಡೆದುಕೊಂಡು ಕರ್ನಾಟಕದಾದ್ಯಂತ ಮನೆಮಾತಾಗಿದೆ.
ಜೀ ಟಿವಿ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಆಗಿರುವ ರಾಘವೇಂದ್ರ ಹುಣಸೂರು ಮಾಡಿರುವ ಟ್ವೀಟ್ ಇದೀಗ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ. ಮಹಾನಾಯಕ ಧಾರಾವಾಹಿ ನಿಲ್ಲಿಸುವಂತೆ ಹಲವಾರು ದೂರವಾಣಿ ಕರೆಗಳು ಬರ್ತಾ ಇದೆಯಂತೆ. ಅಲ್ಲದೆ ಮಧ್ಯರಾತ್ರಿ ಕರೆಮಾಡಿ ಧಾರಾವಾಹಿ ನಿಲ್ಲಿಸುವಂತೆ ಕೆಲವರು ಒತ್ತಡ ಹಾಕುತ್ತಿದ್ದಾರಂತೆ.
— Raghavendra Hunsur (@Raghav_Hunsur) September 3, 2020
ಈ ಬಗ್ಗೆ ಟ್ವೀಟ್ ಮಾಡಿರುವ ರಾಘವೇಂದ್ರ ಹುಣಸೂರು ಇಂತಹ ಯಾವುದೇ ಬೆದರಿಕೆಗೆ ತಾವು ತಲೆಕೆಡಿಸಿಕೊಳ್ಳುವುದಿಲ್ಲ, ಮಹಾನಾಯಕ ನಿಲ್ಲುವುದಿಲ್ಲ ಎಂಬ ಸ್ಪಷ್ಟವಾದ ಸಂದೇಶವನ್ನು ರವಾನಿಸಿದ್ದಾರೆ. ‘ಮಹಾನಾಯಕ’ ನಮ್ಮ ಹೆಮ್ಮಯಾಗಿದೆ, ಅದರ ಬಗ್ಗೆ ನಮಗೆ ವೈಯಕ್ತಿಕವಾಗಿ ಬಹಳ ಪ್ರೀತಿಯಿದೆ. ಇದನ್ನು ಸಮಾಜಕ್ಕೆ ಒಂದು ಸಮಸ್ಯೆಯೆಂದು ಭಾವಿಸುವವರಿಗೆ ಟಾಂಗ್ ನೀಡಿರುವ ರಾಘವೇಂದ್ರ ಹುಣಸೂರು ನಿಜಕ್ಕೂ ನೀವು ಸಮಾಜಕ್ಕೆ ಸಮಸ್ಯೆಯಾಗಿದ್ದೀರಿ ಎಂದಿದ್ದಾರೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News