ಮಂಗಳೂರು: 6 ತಿಂಗಳಿನಿಂದ ಸಂಚಾರ ನಿಲ್ಲಿಸಿದ್ದ ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲು ಸಂಚಾರ ಶುಕ್ರವಾರ ಪುನರ್ ಆರಂಭಗೊಂಡಿದೆ.ರೈಲ್ವೆ ಮಂಡಳಿಯು ದಕ್ಷಿಣ-ಪಶ್ಚಿಮ ರೈಲ್ವೆ ವಿಭಾಗದ ಮೂರು ವಿಶೇಷ ರೈಲುಗಳ ಸಂಚಾರಕ್ಕೆ ಅನುಮತಿ ನೀಡಿದೆ.
ಕೋವಿಡ್ 19ನಿಂದಾಗಿ ರೈಲು ಸೇವೆಗಳನ್ನು ಮಾರ್ಚ್ ತಿಂಗಳಲ್ಲಿ ಸ್ಥಗಿತಗೊಳಿಸಲಾಗಿತ್ತು.
ಪ್ರಕಟಣೆಯ ಪ್ರಕಾರ ಬೆಂಗಳೂರಿನಿಂದ ಮಂಗಳೂರಿಗೆ ರೈಲ್ವೆ ಸಂಚಾರ ಶುಕ್ರವಾರ ಪ್ರಾರಂಭಗೊಂಡಿದೆ. ಆದರೆ ಮಂಗಳೂರಿನಿಂದ ಬೆಂಗಳೂರಿಗೆ ರೈಲುಗಳ ಸಂಚಾರ ನಾಳೆಯಿಂದ ಪ್ರಾರಂಭಗೊಳ್ಳಲಿವೆ. ಈ ರೈಲುಗಳು ವಾರದಲ್ಲಿ ನಾಲ್ಕು ದಿನ ಕಾರ್ಯ ನಿರ್ವಹಿಸುತ್ತದೆ.
ಯಶವಂತಪುರದಿಂದ ಕಾರವಾರಕ್ಕೆ ಹೋಗುವ ರೈಲು ಶುಕ್ರವಾರ ಸಂಜೆ 6.45ಕ್ಕೆ ಹೊರಟಿದ್ದು, ಹಿಂದಿರುಗುವ ರೈಲು ಇಂದು ಸಂಜೆ 6 ಗಂಟೆಗೆ ಹೊರಡಲಿದೆ.
ಬೆಂಗಳೂರಿನಿಂದ ಮಂಗಳೂರಿಗೆ ವಾರದಲ್ಲಿ ಮೂರು ಬಾರಿ ಚಲಿಸುವ ರೈಲುಗಳು ಸೆಪ್ಟೆಂಬರ್ 6ರಂದು ಪುನಾರಾರಂಭಗೊಳ್ಳಲಿದೆ. ಶನಿವಾರ ಮತ್ತೇ ವಾಪಾಸ್ ಆಗಲಿದೆ.
ಕೋವಿಡ್ ಮುನ್ನೆಚ್ಚರಿಕ ಕ್ರಮಗಳೊಂದಿಗೆ ರೈಲುಗಳು ಕಾರ್ಯನಿರ್ವಹಿಸಲಿದ್ದು, ಟಿಕೆಟ್ ನ್ನು ಮುಂಚಿತವಾಗಿ ಕಾಯ್ದಿರಿಸಿದವರಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News