ಬೆಂಗಳೂರು: ಭಾರತೀಯ ತೈಲ ನಿಗಮ ದೇಶಾದ್ಯಂತ ಸಿಲಿಂಡರ್ ಬುಕಿಂಗ್ ಗಾಗಿ ಒಂದೇ ಸಂಖ್ಯೆಯ ಸೇವೆಯನ್ನು ಆರಂಭಿಸಿದೆ.
ಇಂಡೇನ್ ಅಡುಗೆ ಅನಿಲ ಸಲಿಂಡರ್ ಪಡೆಯಲು ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ ಸಂಖ್ಯೆ 77189 55555 ಆಗಿದ್ದು ಗ್ರಾಹಕರಿಗೆ ದಿನದ 24 ಗಂಟೆ ಸೇವೆ ಲಭ್ಯವಿರುತ್ತದೆ. ಎಲ್ಪಿಜಿ ಬುಕಿಂಗ್ ಅನ್ನು ಒಂದೇ ಸಂಖ್ಯೆಯಲ್ಲಿ ಎಸ್‌ಎಂಎಸ್ ಮತ್ತು ಐವಿಆರ್‌ಎಸ್ ಮೂಲಕ ಮಾಡಬಹುದಾಗಿದೆ.
ಇಂಡೇನ್ ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಇರುವ ಬುಕ್ಕಿಂಗ್ ದೂರವಾಣಿ ಸಂಖ್ಯೆ ದೂರಸಂಪರ್ಕ ವೃತ್ತ ನಿರ್ದಿಷ್ಟವಾಗಿದ್ದು ನಾಳೆ ಶನಿವಾರ ಮಧ್ಯರಾತ್ರಿಯಿಂದ ನಿಷ್ಕ್ರಿಯವಾಗುತ್ತದೆ. ಎಲ್ಪಿಜಿ ಸಿಲಿಂಡರ್ ಬುಕಿಂಗ್ ಗಾಗಿ ಹೊಸ ಸಂಖ್ಯೆ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.
ಇನ್ನು ಸಿಲಿಂಡರ್ ಪಡೆಯಲು ನವೆಂಬರ್ 1 ರಿಂದ ಹೊಸ ನಿಯಮ ಜಾರಿಗೆ ಬರಿಲಿದೆ. ಗ್ರಾಹಕರು ತಮ್ಮ ಮೊಬೈಲ್ ಗೆ ಬರುವ ಕೋಡ್ ನೀಡಿ ಸಿಲಿಂಡರ್ ಪಡೆಯಬಹುದಾಗಿದೆ ಎನ್ನಲಾಗಿದೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News