ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಇಂದು ಕನ್ನಡ ರಾಜ್ಯೋತ್ಸವವನ್ನು ನಗರದ ಜಯಕರ್ನಾಟಕ ಸಂಘಟನೆಯಿಂದ ಅಮೀನಗಡ ಪಟ್ಟಣದ ಸೂಳೇಭಾವಿ ಕ್ರಾಸ್‌ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಂಡಿತ್ತು,ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಉಪ ತಹಶೀಲ್ದಾರ ಎಸ್, ವ್ಹಿ,ಕುಂದರಗಿ ಹಾಗೂ ಪಿ,ಎಸ್,ಐ, ಎಮ್,ಜಿ,ಕುಲಕರ್ಣಿ ಅವರು ಮಾತನಾಡಿ ಕನ್ನಡ ನಾಡು ನುಡಿಗಾಗಿ ನಾವು ಇಂದು ಕನ್ನಡ ಪರ ಧ್ವನಿ ಎತ್ತುವುದು ಅನಿವಾರ್ಯ ಹೀಗಾಗಿ ನಾವು ಆಧುನಿಕವಾಗಿ ಎಷ್ಟೇ ಬೆಳೆದರು ಸಹ ಎಷ್ಟೇ ದೂರ ಹೋದರು ಸಹ ಎಲ್ಲೇ ಇರಲಿ ಹೇಗೆ ಇರಲಿ ನಾವು ಕನ್ನಡಿಗರಾಗಿ ,ಭಾಷೆ ಅಭಿಮಾನಿಗಳಾಗಿ ಇರಬೇಕು
ಎಂದರು, ಈ ಸರಳ ಸಮಾರಂಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಗುರುರಾಜ್ ಚೌಕೀಮಠ, ಹಾಗೂ ಅಜ್ಮೀರ ಮುಲ್ಲಾ ಮತ್ತು ಎಮ್,ಬಿ,ಕುದುರೆ ಸರ್ ಸಂಘಟನೆಯ ಹಲವಾರು ಹೋರಾಟಗಳು ಜನಪರವಾಗಿವೆ ಅವರ ಕಾರ್ಯ ಮೆಚ್ಚುಗೆ ಪಾತ್ರವಾಗಿದೆ,ಅವರು ಪ್ರಾಮಾಣಿಕ ಹೋರಾಟ ಮಾಡಬೇಕು,ಕನ್ನಡ ನೆಲ,ಜಲ,ಉಳಿಯಲು ಇಂತಹ ಜಯ ಕರ್ನಾಟಕ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು. ಅಮರೇಶ ಮಡ್ಡಿಕಟ್ಟಿ ಅವರು ಸಂಘಟನೆಯ ಕಾರ್ಯ ಚಟುವಟಿಕೆಗಳನ್ನು ಜನ ಮೆಚ್ಚುತ್ತಿದ್ದಾರೆ ನಮ್ಮ ಜಲ,ಭಾಷೆ ಉಳಿಯಲು ಇಂತಹ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು, ಈ ಸರಳ ಸಮಾರಂಭದ ಕನ್ನಡ ರಾಜೋತ್ಸವದಲ್ಲಿ ತಾಲ್ಲೂಕು ಅಧ್ಯಕ್ಷ ಸಂಜೆಯ್ ಐಹೊಳೆ, ನಗರ ಪಟ್ಟಣದ ಸೂಳೇಭಾವಿ ಕ್ರಾಸ್ ನಲ್ಲಿ ಕನ್ನಡ ರಾಜ್ಯೋತ್ಸವದ ಆಂಗವಾಗಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲು ಅವರು ಕೇಂದ್ರ ಬಿಂದುವಾಗಿ ಕಾರ್ಯಕ್ರಮ ನಿರೂಪಣೆ ಮಾಡಿದರು.

ಅಮೀನಗಡ ನಗರ ಘಟಕದ ಅಧ್ಯಕ್ಷ ಮಂಜುನಾಥ ಭಜಂತ್ರಿ ಹಾಗೂ ಕಾರ್ಯಕ್ರಮದಲ್ಲಿ, ಗ್ಯಾನಪ್ಪ ಭಜಂತ್ರಿ ಚಂದ್ರಶೇಖರ್ ಹಳ್ಳಿ, ಅಂಜಮನ್ ಇಸ್ಲಾಂ ಕಮಿಟಿ ಅಧ್ಯಕ್ಷರಾದ ಅಜ್ಮೀರ್ ಮುಲ್ಲಾ, ಹನುಮಂತ್ ಕಡ್ಡಿಪುಡಿ, ಮಲ್ಲು ಹೂಗಾರ್, ಹನುಮಂತ ಭಜಂತ್ರಿ, ಪೊಲೀಸ್ ಇಲಾಖೆಯಿಂದ ರಮೇಶ ಸಮಗಾರ, ಸುನಿಲ್ ಪವಾರ್, ಹಾಗೂ ಅನೇಕ ಜನರು ಉಪಸ್ಥಿತಿ ಇದ್ದರು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News