Breaking News

ನೀವು ಯಾರ ಪರ?: ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ರೈತರು!

ನಿನ್ನೆಯ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರೈತರ ಹೋರಾಟ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ರೈತ ವಿರೋಧಿಯಾಗಿರುವ ಮೂರು ಕಾಯ್ದೆಗಳನ್ನು ಸರ್ಕಾರ ಹಿಂಪಡೆಯುವುದಕ್ಕೆ ಪಟ್ಟು ಹಿಡಿದಿರುವ ರೈತರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.

ಇದರ ಭಾಗವಾಗಿ ಬುಧವಾರ ಬೆಳಗ್ಗೆಯಿಂದಲೇ ರೈತರ ರಕ್ತವನ್ನು ಸಂಗ್ರಹಿಸಿ ಆ ರಕ್ತ ಬಳಸಿ ಸಹಿ ಸಂಗ್ರಹಿಸಲಾಗುತ್ತಿದೆ. ಜೊತೆಗೆ ಕೇಂದ್ರ ಸಚಿವರಿಗೆ ಹಾಗೂ ಸುಪ್ರಿಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ 21 ಪ್ರಶ್ನೆಗಳಿರುವ ಪತ್ರಗಳನ್ನು ಬರೆಯುತ್ತಿದ್ದಾರೆ.

“ನಿಮ್ಮ ನಿರ್ಧಾರ ಕೇಂದ್ರದ ಪರವಾಗಿದೆಯೇ? ಅಥವಾ ರೈತರ ಪರವೇ? ನೀವು ಕೇಂದ್ರದ ಪರ. ಹಾಗಾಗಿಯೇ ನೀವು ಕಾನೂನುಗಳನ್ನು ರದ್ದುಗೊಳಿಸಿಲ್ಲ” ಎಂದು ಪತ್ರದಲ್ಲಿ ಬರೆಯುತ್ತಿದ್ದಾರೆ.

ಪಂಜಾಬ್‌ನ ಲೂದಿಯಾನಾದವರಾದ ರೈತ ಮುಖಂಡ ತರಣ್ ಜಿತ್ ಸಿಂಗ್ ನಿಮಣಾ ಅವರು ಈ ಪತ್ರ ಚಳವಳಿಯ ನೇತೃತ್ವ ವಹಿಸಿದ್ದಾರೆ.

ಈ ಹಿಂದೆಯೂ ರೈತರು, “ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಿರಿ” ಎಂದು ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದಿದ್ದರು.

About vijay_shankar

Check Also

ಅಮೀನಗಡ  ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಾನಂದ ಕಟ್ಟಿಮನಿ ಅವರಿಗೆ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಯುಕ್ತ ಅಭಿನಂದನ ಕಾರ್ಯಕ್ರಮ

ಅಮೀನಗಡ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಾನಂದ ಕಟ್ಟಿಮನಿ ಅವರಿಗೆ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಯುಕ್ತ ಅಭಿನಂದನ ಕಾರ್ಯಕ್ರಮ

ಅಮೀನಗಡ : ಇಂದು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಜ ಯುವ ಸಂಘಗಳ ಒಕ್ಕೂಟ ವಿಜಯಪುರ ಹಾಗೂ ಮುದ್ದೇಬಿಹಾಳ ಘಟಕದಿಂದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.