ಜಗತ್ತಿನಲ್ಲಿನ ಬಹುಪಾಲು ಸರ್ವಾಧಿಕಾರಿಗಳ ಹೆಸರು “M” ಅಕ್ಷರದಿಂದಲೇ ಏಕೆ ಪ್ರಾರಂಭವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ಮೋದಿಯ ಹೆಸರು ಹೇಳದೇ ಕಾಲೆಳೆದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಹಲವರು ಸರ್ವಾಧಿಕಾರಿಗಳ ಹೆಸರನ್ನು ಟ್ವೀಟ್ ಮಾಡಿದ್ದಾರೆ. “ಜಗತ್ತಿನ ಬಹುಪಾಲು ಸರ್ವಾಧಿಕಾರಿಗಳ ಹೆಸರಿನ ಮೊದಲ ಅಕ್ಷರ “M” ಆಗಿರುತ್ತದೆ ಯಾಕೆ? ಮಾರ್ಕೋಸ್, ಮುಸಲೋನಿ, ಮಿಲೊಸೇವಿಚ್, ಮುಬಾರಕ್, ಮೊಬುಟು, ಮುಶರಫ್, ಮಿಕೊಂಬೆರೋ”
Why do so many dictators have names that begin with M ?
— Rahul Gandhi (@RahulGandhi) February 3, 2021
Marcos
Mussolini
Milošević
Mubarak
Mobutu
Musharraf
Micombero
ಫಿಲಿಪೈನ್ಸ್ನ ಮಾಜಿ ಅಧ್ಯಕ್ಷ ಫರ್ಡಿನೆಂಟ್ ಮಾರ್ಕೊಸ್, ಇಟಲಿಯ ಸರ್ವಾಧಿಕಾರಿ ಬೆನೊಟೋ ಮುಸೊಲೊನಿ, ಯುಗೊಸ್ಲಾವಾಕಿಯಾದ ಅಧ್ಯಕ್ಷ ಸ್ಲೊಬೊದನ್ ಮಿಲೊಸೇವಿಚ್, ಈಜಿಪ್ಟಿನ ಅಧ್ಯಕ್ಷ ಹುಸ್ನಿ ಮುಬಾರಕ್, ಸಯರ್ ಮಾಜಿ ಅಧ್ಯಕ್ಷ ಮೊಬುಟು ಸಿಕೆ ಸಿಸೊ, ಮಾಜಿ ಪಾಕಿಸ್ತಾನ ಅಧ್ಯಕ್ಷ ಪರ್ವೇಝ್ ಮುಶರಫ್, ಬುರುಂಡಿ ಮಾಜಿ ಅಧ್ಯಕ್ಷ ಮೈಕಲ್ ಮಿಕೊಂಬೆರೋ ಮುಂತಾದವರನ್ನು ಸರ್ವಾಧಿಕಾರಿಗಳೆಂದು ಪರಿಗಣಿಸಲಾಗುತ್ತದೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News