Breaking News

ಬೆಂಗಳೂರಿನ IFSMN ಸಂಸ್ಥೆಯ ರಾಜ್ಯ ಉಪಾಧ್ಯಕ್ಷರಾಗಿ ಶ್ರೀ ಡಿ ಬಿ ವಿಜಯಶಂಕರ್ ಆಯ್ಕೆ

ಬೆಂಗಳೂರು: ಇದೆ ತಿಂಗಳ ಮಾರ್ಚ್ ೨೮ ರಂದು ಬೆಂಗಳೂರಿನ ಗಾಂಧಿ ಭವಣದಲ್ಲಿ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ ಬೆಂಗಳೂರು ( IFSMN) ಇದರ ರಾಜ್ಯ ಉಪಾಧ್ಯಕ್ಷರಾಗಿ ಶ್ರೀ ಡಿ,ಬಿ,ವಿಜಯಶಂಕರ್ ಅವರು ಅಧಿಕೃತ ಅಧಿಕಾರವನ್ನು ರಾಷ್ಟ್ರೀಯ ಅಧ್ಯಕ್ಷ ಶ್ರೀ ಬಿ,ಜೆ,ವಿಜಯ್ ಹಾಗೂ ರಾಜ್ಯ ಅಧ್ಯಕ್ಷ ಶ್ರೀ ಜಿ,ರಮೇಶ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿಸೋಜಾ ಅವರ ನೆತ್ರುತ್ವದಲ್ಲಿ ಅಧಿಕಾರ ಸ್ವೀಕರಿಸಿದರು.

ರಾಜ್ಯದಲ್ಲಿ ಹೆಚ್ಚುತ್ಯಿರುವ ಪತ್ರಕರ್ತರ ಸಂಖ್ಯೆ ಹಾಗೂ ಅನೇಕ ಸಣ್ಣ ಪತ್ರಿಕೆಗಳ ಸಂಪಾದಕರ ಕಲ್ಯಾಣಾಕ್ಕಾಗಿ ಕಳೆದ ೩೦ ವರ್ಷಗಳಿಂದ ಸದರಿ ಸಂಸ್ಥೆಯು ಸಣ್ಣ ಪತ್ರಿಕೆಗಳ ಸಂಪಾದಕರ ಕಲ್ಯಾಣಕ್ಕಾಗಿ ದೆಹಲಿ,ಹರಿಯಾಣ,ಗುಜರಾತ್, ತಮಿಳುನಾಡು, ಮಹಾರಾಷ್ಟ್ರ, ಆಂದ್ರ,ಹೀಗೆ ಅನೇಕ ರಾಜ್ಯದಲ್ಲಿ ಬಲಿಷ್ಟ ಸಂಘಟನೆ ಹೊಂದಿರುವ ಈ IFSMN ಸಂಸ್ಥೆಯು ಕರ್ನಾಟಕದಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಪತ್ರಿಕೆ ಸಂಪಾದಕರ ಕಲ್ಯಾಣ, ಹಾಗೂ ಸರಕಾರದ ಅನೇಕ ಸೌಲಭ್ಯಗಳನ್ನು ಒದಗಿಸುವಲ್ಲಿ ಸಂಘದ ಪಾತ್ರ ಅನನ್ಯ,

ಇಂತಹ ಪ್ರತಿಷ್ಠಿತ ಸಂಸ್ಥೆಯ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಡಿ,ಬಿ ವಿಜಯಶಂಕರ್ ಅವರಿಗೆ ಉತ್ತರ ಕರ್ನಾಟಕದಲ್ಲಿ ಅನೇಕ ಸಣ್ಣ ಪತ್ರಿಕೆಗಳ ಸಂಪಾದಕರ ಆರ್ಥಿಕ ಸ್ಥಿತಿ ಗಂಭೀರವಾಗಿ ಇವೆ,

ಅವರ ಸರ್ವತೋಮುಖ ಅಭಿವೃದ್ಧಿಗೆ ತಾವು ಶ್ರಮಿಸಿ ಸಂಘದಲ್ಲಿ ಅವರನ್ನು ಸದಸ್ಯ ಮಾಡಿ ಸರಕಾರದ ಸೌಲಭ್ಯಗಳನ್ನು ನೀಡಿ ಆರ್ಥಿಕ ಉತ್ತೇಜನ ನೀಡಲು ರಾಷ್ಟ್ರೀಯ ಅಧ್ಯಕ್ಷ ಬಿ,ಜೆ,ವಿಯಜ್ ಅವರು ರಾಜ್ಯ ಕಮಿಟಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿಸೋಜಾ,ಹಾಗೂ ವಿವಿಧ ಜಿಲ್ಲೆಯ ಸಂಪಾದಕರು,ಜಿಲ್ಲಾ ಅಧ್ಯಕ್ಷರು ಉಪಸ್ಥಿತಿ ಇದ್ದರು.

About vijay_shankar

Check Also

ಅಮೀನಗಡ  ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಾನಂದ ಕಟ್ಟಿಮನಿ ಅವರಿಗೆ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಯುಕ್ತ ಅಭಿನಂದನ ಕಾರ್ಯಕ್ರಮ

ಅಮೀನಗಡ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಾನಂದ ಕಟ್ಟಿಮನಿ ಅವರಿಗೆ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಯುಕ್ತ ಅಭಿನಂದನ ಕಾರ್ಯಕ್ರಮ

ಅಮೀನಗಡ : ಇಂದು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಜ ಯುವ ಸಂಘಗಳ ಒಕ್ಕೂಟ ವಿಜಯಪುರ ಹಾಗೂ ಮುದ್ದೇಬಿಹಾಳ ಘಟಕದಿಂದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.