ಬೆಂಗಳೂರು: ಕಾರ್ಮಿಕ, ರೈಲ್ವೆ ಹಾಗೂ ಕೃಷಿ ಸಚಿವರಾಗಿ ಸೇವೆ ಸಲ್ಲಿಸಿ, ದೇಶಕ್ಕೆ ಬರಗಾಲ ಎದುರಾಗಿದ್ದ ಸಂದರ್ಭ ಕೃಷಿ ಚಟುವಟಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದ “ಹಸಿರು ಕ್ರಾಂತಿಯ ಹರಿಕಾರ” ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಅವರ ಸಾಧನೆಗಳನ್ನು ಸ್ಮರಿಸುವ ಕಾರ್ಯಕ್ರಮ ಎಸ್ಟಿಪಿಐ ಬೆಂಗಳೂರು ಜಿಲ್ಲಾ ಕಛೇರಿಯಲ್ಲಿ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪರ್ ಕೂಡ್ಲಿಪೇಟೆ ಬಾಬುಜಗಜೀವನ್ ರವರು ಕೇವಲ ಉಪ ಪ್ರಧಾನಿ ಮಾತ್ರವಲ್ಲದೇ ಕೃಷಿ, ಕಾರ್ಮಿಕ, ರೈಲ್ವೆ, ರಕ್ಷಣಾ, ದೂರ ಸಂಪರ್ಕ ಸಚಿವರಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಹಸಿರು ಕ್ರಾಂತಿ, ಕಾರ್ಮಿಕರಿಗೆ ಕನಿಷ್ಠ ವೇತನ, ಭವಿಷ್ಯ ನಿಧಿ, ವಿಮಾ ಯೋಜನೆ, ಪಂಡಿತ್ ಪಾನಿ ಎಂಬಂತಹ ಅನಿಷ್ಟ ಪದ್ಧತಿಯ ರದ್ದತಿ ಇತ್ಯಾದಿ ಸಾಧನೆಗಳನ್ನು ಯುವ ಜನತೆ ತಿಳಿಸುವ ಮೂಲಕ ನೈಜ ಅರ್ಥದಲ್ಲಿ ಬಾಬೂಜಿ ರವರನ್ನು ಸ್ಮರಿಸುವ ಕೆಲಸವನ್ನು ಎಸ್ಡಿಪಿಐ ಮಾಡುತ್ತಿದೆ ಎಂದರು.

ಅತಿಥಿಗಳಾಗಿ ಪ್ರಗತಿಪರ ಚಿಂತಕ ಬಿ.ಆರ್. ಭಾಸ್ಕರ್ ಪ್ರಸಾದ್, ದಲಿತ್ ಮೈನಾರಿಟೀಸ್ ಸೇನೆ ರಾಜ್ಯ ಅಧ್ಯಕ್ಷ ಎ. ಜೆ.ಖಾನ್, ಮಾದಿಗ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಸಂಗಮೇಶ್, ಕಾರ್ಮಿಕ ಮುಖಂಡರಾದ ಸಿದ್ದರಾಜು, ಮಾದಿಗ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಕುಮಾರ್, ಬೆಂಬಲಿಗರು ಜಿಲ್ಲಾ ಉಪಾಧ್ಯಕ್ಷರಾದ ಹೆಚ್.ಎಮ್.ಗಂಗಪ್ಪ, ರಾಜ್ಯ ಸಮಿತಿ ಸದಸ್ಯ ಅಡ್ವಕೇಟ್ ವಸೀಂ ಹಾಗೂ ನೂರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News