ಕೋಲ್ಕತ್ತಾ: ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ ಪ್ರಕರಣ ಹಸಿರಾಗಿರುವಂತೆಯೇ ಅತ್ತ ಪಶ್ಚಿಮ ಬಂಗಾಳಲ್ಲೂ ಇಂತಹುದೇ ಪ್ರಕರಣವೊಂದು ಬಯಲಾಗಿದ್ದು, ಬಂಗಾಳಿ ನಟಿ ನಂದಿತಾ ದತ್ತಾ ಮತ್ತು ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ ನೀಲಿ ಚಿತ್ರ ನಿರ್ಮಾಣ ಆರೋಪದ ಮೇಲೆ ಬಂಗಾಳಿ ನಟಿ, ರೂಪದರ್ಶಿ ನಂದಿತಾ ದತ್ತ ಹಾಗೂ ಅವರ ಮ್ಯಾನೇಜರ್ ಮೈನಾಕ್ ಘೋಷ್ ಮತ್ತು ಇತರರನ್ನು ಪೊಲೀಸರು ಬಂಧಿಸಿದ್ದಾರೆ. ನಂದಿತಾ ದತ್ತ ಅಶ್ಲೀಲ ಚಿತ್ರಗಳನ್ನು ನಿರ್ಮಾಣ ಮಾಡಿ ಅವುಗಳನ್ನು ಓಟಿಟಿ ಮೂಲಕ ಪ್ರಸಾರ ಮಾಡುತ್ತಿದ್ದರು ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಜುಲೈ 26ರಂದು ಇಬ್ಬರು ಯುವತಿಯರು ದೂರು ನೀಡಿದ್ದರು. ಈ ದೂರಿನ ಆಧಾರ ಮೇಲೆ ಶೋಧ ನಡೆಸಿದ್ದ ಪೊಲೀಸರು ನಿನ್ನೆ ನಂದಿತಾ ಹಾಗೂ ಅವರ ಮ್ಯಾನೇಜರ್ ಮೈನಾಕ್ ಘೋಷ್ ಮತ್ತು ನಿರ್ಮಾಪಕರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಪಡೆದು ಅಲ್ಲಿ ನೀಲಿ ಚಿತ್ರಗಳ ವಿಡಿಯೊಗಳನ್ನು ಚಿತ್ರೀಕರಿಸಲಾಗುತ್ತಿತ್ತು. ಇದಕ್ಕಾಗಿ ರೂಪದರ್ಶಿಗಳ ಹಾಗೂ ಸಿನಿಮಾಗಳ ಅವಕಾಶಕ್ಕಾಗಿ ಕಾಯುತ್ತಿರುವ ಹೊಸ ಪ್ರತಿಭಗೆಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಈ ಪ್ರಕರಣ ಸಂಬಂಧ ನಂದಿತಾ ಮತ್ತು ಅವರ ಮ್ಯಾನೇಜರ್ ಮೈನಾಕ್ ಘೋಷ್ ರನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ರೂಪದರ್ಶಿ ನಂದಿತಾ ದತ್ತ ಹತ್ತಾರು ಬಂಗಾಳಿ ಹಾಗೂ ಬೋಜ್‌ಪುರಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News