Breaking News

ಭೀಮನಗಡ ಗ್ರಾಮದಲ್ಲಿ ಅದ್ದೂರಿ ವಾಲ್ಮೀಕಿ ಜಯಂತಿಗೆ ಚಾಲನೆ ನೀಡಿದ ಮಾಜಿ ಶಾಸಕ ಡಾ: ವಿಜಯಾನಂದ ಕಾಶಪ್ಪನವರ

ಗುಡೂರು sc : ಇಲಕಲ್ಲ ತಾಲೂಕಿನ ಭೀಮನಗಡ ಗ್ರಾಮದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಹಾಗೂ ನೂತನ ವಾಲ್ಮೀಕಿ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಹುನಗುಂದ ಮತಕ್ಷೇತ್ರದ ಮಾಜಿ ಶಾಸಕರಾದ ಸನ್ಮಾನ್ಯ #ಶ್ರೀವಿಜಯಾನಂದಎಸ್_ಕಾಶಪ್ಪನವರ ಅವರು ಬೈಕ್ ರಾಲಿ ಹಾಗೂ ಫೋಟೋ ಮೆಣಿಗೆ ಬೈಕ ರೆಡ್ ಮಾಡುವ ಮೂಲಕ ಚಾಲನೆ ನೀಡಿದರು ನಂತರ ಸನ್ಮಾನ ಸ್ವೀಕರಿಸಿ ಮಾತನಾಡದ ಅವರು ನನ್ನ ಸರಕಾರದ ಅವದಿಯಲ್ಲಿ ಈ ಗ್ರಾಮಕ್ಕೆ ಹಾಗೂ ನಿಮ್ಮ ಸಮೂದಾಯಕ್ಕೆ ಸಾಕಷ್ಟು ಅಭಿವೃದ್ಧಿ ಹಾಗೂ ಅಧಿಕಾರವನ್ನು ನೀಡಿದ್ದೇನೆ,ಮುಂದಿನ ಸರಕಾರ ನಮ್ಮದೆ ಈ ಸಮೂದಾಯ ಭವನಕ್ಕೆ ನಾನೆ ಮತ್ತೆ ಉದ್ಘಾಟನೆ ಮಾಡುತ್ತೇನೆ. ಈ ಬರುವ ಚುನಾವಣೆಯಲ್ಲಿ ತಾವೆಲ್ಲರೂ ಒಗ್ಗಟ್ಟಿನಿಂದ ಕೈ ಬಲಪಡಿಸಬೇಕು, ತಳ ಸಮೂದಾಯ ಇನ್ನೂ ಎಲ್ಲಾ ಕ್ಷೇತ್ರದಲ್ಲಿ ತಾವು ಬೆಳಿಬೇಕು ಯಾವತ್ತು ನಾನು ನಿಮ್ಮ ಸಮಯದ ಜೊತೆಗೆ ಇದ್ದೇನೆ ಎಂದರು.

ಬೈಕ್ ರ್ಯಾಲಿಗೆ ಚಾಲನೆ ನೀಡುವ ಮುನ್ನ ಡಾವಿಜಯಾನಂದ ಕಾಶಪ್ಪನವರಿಗೆ ಮುತೈದೆಯೊಬ್ಬರು ಆರತಿ ಮಾಡಿ ತಿಲಕ ಇಟ್ಟರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಶ್ರೀ ಶ್ರೀ ಮೌನೇಶ್ವರ ಮಹಾಸ್ವಾಮಿಗಳು ಮೂರ್ನಾಳ ಸಂಸ್ಥಾನ ಮಠ ಭೀಮನಗಡ ಹಾಗೂ ಶ್ರೀ ಶ್ರೀ ಶ್ರೀ ಕಲ್ಲಿನಾಥ ಶಿವಶರಣರು ಶ್ರೀ ವೀರಭದ್ರೇಶ್ವರ ಲೀಲಾ ಮಠ ಭೀಮನಗಡ,ಶ್ರೀ R D ಮೊಕಾಶಿ ನಿವೃತ್ತ ಜಂಟಿ ನಿರ್ದೇಶಕರು ಬೆಂಗಳೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ವಾಶಪ್ಪ ಮೊಕಾಶಿ ಶ್ರೀ ಹುಸೇನ ಸಾಬ್ ನದಾಫ್ ಶ್ರೀಮತಿ ಲೀಲಾವತಿ ಉಪ್ಪಾರ್ ಶ್ರೀಮತಿ ಲಕ್ಷ್ಮವ್ವ ಮಾದರ್ ಹಾಗೂ ಗ್ರಾಮದ ಪ್ರಮುಖರು ವಾಲ್ಮೀಕಿ ಸಾಮಾಜದ ಮುಖಂಡರು,ಮಹಿಳೆಯರು, ಯುವಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಿಗೆ ಸನ್ಮಾನ ಮಾಡಲಾಯಿತು.

About vijay_shankar

Check Also

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಅಮೀನಗಡ : ಸಮೀಪದ ಗುಡೂರು ಎಸ್,ಸಿ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ವಿಚಿತ್ರ ಎಂದರೆ ಈ ದುಶ್ಚಟಕ್ಕೆ ವಯಸ್ಕರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.