
ಅಮೀನಗಡ: ನಾನು ಈ ದಿನ ಶಪತ ಮಾಡುತ್ತೇನೆ, ನಾಳೆ ಇಂದಲೇ ಈ ಎರಡು ಶಾಕೆಯ ಸಮಗ್ರ ಅಭಿವೃದ್ಧಿಗೆ ನಾನು ಕಂಕಣ ಬದ್ದವಾಗಿ ಸೇವೆ ಮಾಡಲು ಪಣ ತೋಟ್ಟಿದ್ದೇನೆ.
ಎರಡು ದಿನದಲ್ಲಿ ಈ ಶಾಲೆಯ ಸಂಪೂರ್ಣವಾಗಿ ನವಿಕರಣ ಮಾಡಲು ಇದಕ್ಕೆ ತಗುಲುವ ಸುಣ್ಣ,ಬಣ್ಣ,ಪೆಂಟ್ ಸೇರಿದಂತೆ ಇದರ ಅಂದಾಜು ವೆಚ್ಚದ ಮಾಹಿತಿಯನ್ನು ದೇವರಾಜ ಅವರು ಹಾಗೂ ಹುಲಗಪ್ಪ ಅವರು ನೀಡಿದರೆ ಮುಂದಿನ ಕೆಲಸವನ್ನು ನಾನು ಆರಂಭಿಸುತ್ತೇನೆ.

ನಾನು ಕರ್ತವ್ಯದ ಒತ್ತಡದಲ್ಲಿ ಇತ್ತೀಚಿನವರೆಗೆ ಕಡೆ ಗಮನ ಹರಿಸಲು ಆಗಿರಲಿಲ್ಲ, ಈ ವಿಚಾರ ನನ್ನ ಗಮನಕ್ಕೆ ಬ.ದಿರಲಿಲ್ಲ ೧೪೦ ವರ್ಷ ಶತಮಾನ ಕಡ ಈ ಶಾಲೆಯಲ್ಲಿ ನಾನು ಕೂಡ ೬ ನೇ ತರಗತಿ ವ್ಯಾಸಂಗ ಮಾಡಿದ್ದೇನೆ. ಸಾವಿರಾರು ಮಕ್ಕಳ ಭವಿಷ್ಯವನ್ನು ರೂಪಿಸುವ ಈ ವಿಧ್ಯಾಮಂದಿರದ ಸಮಗ್ರ ಅಭಿವೃದ್ಧಿ ನನ್ನ ಹಾಗೂ ನಿಮ್ಮೆಲ್ಲರ ಜವಬ್ದಾರಿ ಹೀಗಾಗಿ ಈ ಬರುವ ಮುಂದಿನ ವರ್ಷದಲ್ಲಿ ಸಂಪೂರ್ಣ ನವೀಕರಣ ಮಾಡೋಣ,

ಈ ವಿಚಾರದಲ್ಲಿ ತಾವು ಮೇಲಿಂದ ಮೇಲೆ ನನಗೆ ಸಂಪರ್ಕಮಾಡಿ,ಅಥವಾ ಪೊನ್ ಕರೆ ಮಾಡಿ ತಾವು ಕೆಲಸ ತೆಗೆದುಕೋಳ್ಳಬೇಕು ಶಾಲೆಯ ಶಿಸ್ತು ಹಾಗೂ ಸ್ವಚ್ಚತೆಯನ್ನು ಗುರುಗಳು ಕಾಯ್ದುಕೊಂಡು ಉತ್ತಮ ಪರಿಸರ ನಿರ್ಮಾಣ ಮಾಡಬೇಕು ಇದರೊಂದಿಗೆ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವ ಕಾರ್ಯ ಆಗಬೇಕು ,ಹಾಗೆ ಮಕ್ಕಳು ಮುಬೈಲ್ ಬಳಕೆಯಿಂದ ದೂರ ಇರಬೇಕು ಉತ್ತಮ ವ್ಯಾಸಂಗ ಮಾಡಿ ಗ್ರಾಮದ ಕೀರ್ತಿ ತರಬೇಕೆಂದು ಮಜ್ಕಳಿಗೆ ಶುಭ ಕೋರಿದರು

ಅವರು ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಎಮ್,ಪಿ,ಎಸ್,ಹಾಗೂ ಕೆ,ಜಿ,ಎಸ್ ಶಾಲಾ ಮಕ್ಕಳ ೨೦೨೫- ೨೦೨೬ನೇ ಸಾಲಿನ ೭ ನೇ ತರಗತಿ ವಿಧ್ಯಾರ್ಥಿಗಳ ಶುಭ ಕೋರುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ತಮ್ಮ ಭಾಷಣದ ಉದ್ದಕ್ಕೂ ಶಾಲೆಯ ಅಭಿವೃದ್ಧಿ ಮಂತ್ರ ಪಠಿಸಿದರು

ಮುಖ್ಯ ಅಥಿತಿಗಳಾಗಿ ಮಾತನಾಡಿದ ಸರಕಾರಿ ಕಾಲೇಜು ಎಸ್,ಡಿ,ಎಂ,ಸಿ ಅಧ್ಯಕ್ಷ ರಹೇಮನಸಾಬ ದೊಡಮನಿ ಮಾತನಾಡಿ ಮಾನ್ಯ ಎಸ್ ಜಿ ನಂಜಯ್ಯನಮಠ ಅವರು ಈ ಎರಡು ಶಾಲೆಯ ಕಮಿಟಿ ಅಧ್ಯಕ್ಷರು ಯುವಕರಾಗಿದ್ದು ಉತ್ತಮ ಕೆಲಸ ಮಾಡುತ್ತಿದ್ದಾರೆ. ಖಾಸಗಿ ಶಾಲೆಗಳ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಮೀರಿಸುವಷ್ಟು ಉತ್ತಮ ಸುಸಜ್ಜಿತ ವೇದಿಕೆ ಮಾಡಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿದ ದೇವರಾಜ್ ಹಾಗೂ ಹುಲಗಪ್ಪ ಕುರಿ ಅವರಿಗೆ ಅಭಿನಂದಿಸುತ್ತೇನೆ.

ಹಾಗೆ ಶಾಲೆಯ ಎಲ್ಲಾ ಗುರುಗಳು ಉತ್ತಮ ಶಿಕ್ಷಣ ನೀಡುತ್ತಿದ್ದಾತೆ. ಶತಮಾನ ಕಂಡ ಈ ಶಾಲೆಯನ್ನು ಮಾನ್ಯ ನಂಜಯ್ಯನಮಠ ಅವರು ಹೆಚ್ಚಿನ ಅಭಿವೃದ್ಧಿ ಮಾಡಬೇಕು ಅಲೆಯ ದುರಸ್ತಿ ಕಾರ್ಯ ನಡೆಯಬೇಕು, ಕಡ್ಡಾಯ ಕನ್ನಡ ಶಾಕೆಯ ಉಳಿವಿಗಾಗಿ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕಿಡಬೇಕೆಂದು ಸಲಹೆ ನೀಡಿ ಮಕ್ಕಳು ಉತ್ತಮ ವ್ಯಾಸಂಗ ಮಾಡಿ ಗ್ರಾಮದ ಕೀರ್ತಿ ತರಬೇಕೆಂದು ಶುಭ ಕೋರಿದರು. ನಂತರ ಮಾತನಾಡಿದ ರಂಗನಾಥ ಮಾಸರಡ್ಡಿ ಹಾಗೂ ಸಂಗಮೇಶ ಪಾಟೀಲ ಮಾತನಾಡಿ

ಇದೊಂದು ಅಭೂತಪೂರ್ವ ಸುಂದರ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾನು ಈ ಹಿಂದೆ ಈ ಭಾಗದಲ್ಲಿ ಸಿಆರ್ಸಿ ಇದ್ದಾಗ ಮೇಲಾಧಿಕಾರಿಗೆ ಖುದ್ದಾಗಿ ನಾನೇ ಇಂಗ್ಲೀಷ್ ಮಾಧ್ಯಮ ಶಾಲೆ ಕೊಡಬೇಕೆಂದು ಒತ್ತಾಯ ಮಾಡಿದೆ ಇದು ಬಹಳ ಮಕ್ಕಳು ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಎಂದು ಮಾಸರಡ್ಡಿ ಅವರು ಸಂತಸ ವ್ಯಕ್ತಪಡಿಸಿದರು.

ಈ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವರಾಜ್ ಕಮತಗಿ, ಹಾಗೂ ಹುಲಗಪ್ಪ ಕುರಿ ವಹಿಸಿದ್ದರು ಮುಖ್ಯ ಅಥಿತಿಗಳಾಗಿ ರಹೇಮಾನಸಾಬ ದೊಡಮನಿ, ದುರಗಪ್ಪ ಮಾದರ,ಮೈನಪ್ಪ ಸಿಂಗಾಡಿ,ಪ್ರವೀಣ ರಾಮದುರ್ಗ, ಆರ್,ಜೆ ರಾಮದುರ್ಗ , ಈರಪ್ಪ ಫರಾಳದ, ದಯಾನಂದ ಕಲಬುರಗಿ, ವಿರೂಪಾಕ್ಷ ಧೂಪದ , ಬಿ,ಜೆ ಬೆವೂರ,ಶ್ರೀಮತಿ ಎಸ್,ಎಸ್,ಕರಿಲಿಂಗನವರ,,ಎಮ್,ಜಿ,ನಡುವಿನಮನಿ,ಎಚ್,ಎನ,ಮಾಚಾ, ಹಾಗೂ ಶ್ರೀಮತಿ,ಕವಿತಾ ಲೂತಿಮಠ, ಶ್ರೀಮತಿ ರೇಷ್ಮಾ ಸಾಧನಿ, ಶ್ರೀಮತಿ ಶಿವಲಿಲಾ ಹರಗಬಲ್ಲ, ಸೇರಿದಂತೆ ಅನೇಕ ಪ್ರಮುಖಕರು ಉಪಸ್ಥಿತಿ ಇದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸಿಂಗರೆಡ್ಡಿ ಮೆಡನ್ ಹಾಗೂ ವೀರಯ್ಯ ಕೆಂಭಾವಿಮಠ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮಾನ್ಯ ಎಸ್ ಜಿ ನಂಜ್ಯನಮಠ ಅವರಿಗೆ ಶಾಲೆಯ ಸರ್ವ ಸದಸ್ಯರಿಂದ ಗೌರವ ಸನ್ಮಾನ ಮಾಡಲಾಯಿತು



ವರದಿ : ಕಿರಣರಾಜ್ ಎಮ್ ಕಾಳಜಿ
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News