ಬಾದಾಮಿ ತಾಲೂಕಿನ ಮತ್ತೆ ಮರಳಿ ಪ್ರವಾಹ ಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ನೆರೆ ವೀಕ್ಷಣೆಗೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳು, ಬಾದಾಮಿ ವಿಧಾನಸಭಾ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಸಿದ್ದರಾಮಯ್ಯ ಅವರನ್ನು ಹಾಗೂ ವರುಣಾ ವಿಧಾನಸಭಾ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಯತೀಂದ್ರ ಸಿದ್ದರಾಮಯ್ಯ ಅವರನ್ನು ಕೆಪಿಸಿಸಿ(ಹಿಂ.ವ.ವಿ) ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಮಹೇಶ ಎಸ್ ಹೊಸಗೌಡ್ರ ಅವರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಎಂ ಬಿ ಹಂಗರಗಿ ಅವರು ಕಾಂಗ್ರೆಸ್ ಮುಖಂಡರು , ಕೊಣ್ಣೂರ ಗ್ರಾಮದಲ್ಲಿ ಮಾನ್ಯರನ್ನು ಸ್ವಾಗತ ಕೋರಿದರು.

ಕೊಣ್ಣೂರ ಮೇಲಸೇತುವೆ ವೀಕ್ಷಣೆ :
ಹುಬ್ಬಳ್ಳಿ – ವಿಜಯಪುರ ರಾಜ್ಯ ಹೆದ್ದಾರಿ ಮಾರ್ಗ ಮಧ್ಯದಲ್ಲಿರುವ ಕೊಣ್ಣೂರ ಗ್ರಾಮದ ಮೇಲಸೇತುವೆ ನೆರೆಹಾಳಿಯಿಂದ ಹಾನಿಗಿಡಾಗಿದ್ದು. ಮಾಜಿ ಮುಖ್ಯಮಂತ್ರಿಗಳು, ಬಾದಾಮಿ ಶಾಸಕರಾದ ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ಬೇಟಿ ನೀಡಿ ವೀಕ್ಷಿಸಿದ. ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ವರುಣಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಯತೀಂದ್ರ ಸಿದ್ದರಾಮಯ್ಯ ಅವರು , ಕೆಪಿಸಿಸಿ (ಹಿಂ.ವ.ವಿ) ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಮಹೇಶ ಎಸ್ ಹೊಸಗೌಡ್ರ ಅವರು ಮಾಜಿ ಜಿಲ್ಲಾಪಂಚಾಯತ ಸದಸ್ಯರಾದ ಶ್ರೀ ಎಂ ಬಿ ಹಂಗರಗಿ ಅವರು ಇನ್ನಿತರ ಮುಖಂಡರು ಉಪಸ್ಥಿತರಿದ್ದರು. ವರದಿ : ಬಸವರಾಜ್ .