Breaking News

ರೈತರ ಸಂಜೀವಿನಿಯಾದ ಮುಖ್ಯ ಕಾರ್ಯನಿರ್ವಾಹ ಕರಾದ ಶ್ರೀ ಯಂಕಣ್ಣ ಚಿ, ಆಲಿ PKPS ಬೈರಮಟ್ಟಿ.

ನಂಬಿಕೆ ಮತ್ತು ವಿಶ್ವಾಸದ ಮೇಲೆ ಯಾವುದೇ ಸಂಘ ಸಂಸ್ಥೆಗಳು ನಿತ್ಯ ಗ್ರಾಹಕರ ಹಾಗೂ ಸಂಸ್ಥೆಯ ಸದಸ್ಯರೊಂದಿಗೆ ಉತ್ತಮ ಸಂಭಂದಗಳ ಜೀವಾಳವೇ ನಂಬಿಕೆ, ಹಾಗೆ ಸಕಾಲಕ್ಕೆ ನೇರವಾಗುವ ಸಂಸ್ಥೆಯ ಆಡಳಿತ ಮಂಡಳಿ ವಿಶ್ವಾಸವೆ ಇಂದು ಎಂಟುವರಿ ಕೋಟಿ ರೂಪಾಯಿ ಹಣಕಾಸಿನ ವ್ಯವಹಾರಕ್ಕೆ ಸಾಕ್ಷಿಯಾಗಿದೆ.

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಬೈರಮಟ್ಟಿ ಗ್ರಾಮದ ಪ್ರಾಥಮೀಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಯಂಕಣ್ಣ ಆಲಿ ಯವರ ಪ್ರಾಮಾಣಿಕ ಪರಿಶ್ರಮದಿಂದ ಇಂದು ಸಂಘದ ಬೆಳವಣಿಗೆ ಹಾಗೂ ಆರ್ಥಿಕ ಸ್ಥತಿ ದಿನೆ ದಿನವೇ ಲಾಭದತ್ತ ಸಂಘವು ದಾಪುಗಾವಲು ಇಡುತ್ತಿದೆ.

ಇದಕ್ಕೆ ಕಾರಣ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ ಕಳೇದ ೧೫/೦೩/೨೦೧೩ ರ ಮಾರ್ಚ ದಿಂದ ಈ ಸಂಘದ ಅಧಿಕಾರ ವಹಿಸಿಕೊಂಡ ಶ್ರೀ ಯಂಕಣ್ಣನವರು ಇದೇ ಸಂಸ್ಥೆಯುಲ್ಲಿ ಒಬ್ಬ ಸಾಮಾನ್ಯ ಕ್ಲಕ್೯ ಆಗಿ ಸೇವೆಮಾಡಿ ಅಪಾರ ಅನುಭವ, ಹಾಗೂ ರೈತರ ಪೂರ್ಣ ವಿಶ್ವಾಸ ಬೆಳೆಸಿಕೊಂಡ ಪರಿಣಾಮವಾಗಿ ಕನಿಷ್ಠ ಮೂರು ಕೋಟಿ ೫೬ ಲಕ್ಷ ರೂ ,ಠೇವಣಿ ಹಾಗೂ ೦೬ ಕೋಟಿ ರೂಪಾಯಿ ಬಿನ್ ಬಂಡವಾಳದಿಂದ ಎಂಟುವರಿ ಕೋಟಿ ರೂಪಾಯಿ ೦೭ ವರ್ಷದಲ್ಲಿ FD,DB, ಬಿನ್ ಸೇತಗಿ ಸಾಲ, ಗೊಬ್ಬರ, ಬೀಜ, ಸಿಮ್ಮೆ ಎಣ್ಣೆ, ಸಾಲ ಒಟ್ಟು ಎಂಟುವರಿ ಕೋಟಿ ರೂಪಾಯಿ ವ್ಯವಹಾರ ಹೊಂದಿದೆ.

ಸದಸ್ಯರ ಠೇವಣಿ ಹಣ ೧.೫೪.೯೬೧೨ರೂ ಪಿಗ್ಮಿ ಹೀಗೆ ಹತ್ತು ಹಲವು ವ್ಯವಹಾರ ಮೂಲಕ ದಿನ ದಿನ ಸಂಘದ ಸರ್ವತೋಮುಖ ಏಳಿಗರಗಾಗಿ ಸಂಘದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿತ್ಯ ರೈತರ ಅನೇಕ ಸಮಸ್ಯೆಗಳ ಮಧ್ಯ ಸಾಲ ವಸೂಲಿ ಮಾಡಿ, ಸಂಘದ ಕಾರ್ಯದರ್ಶಿ/ ಸಿಬ್ಬಂದಿ ಸೈ ಎನ್ನಿಸಿಕೊಂಡವರು.

ಎಲ್ಲಾ ರೈತರ ವಿಶ್ವಾಸ ಬೆಳೆಸಿಕೊಂಡ ಪರಿಣಾಮವಾಗಿ ಕನಿಷ್ಟ ಮೂರು ಕೋಟಿ ಐವತ್ತಾರು ಲಕ್ಷ ರೂಪಾಯಿ ಠೇವಣಿ ಹಾಗೂ ಬಿನ್ ಬಂಡವಾಳ ಆರು ಕೋಟಿ ಹೀಗೆ ಒಟ್ಟು ಎಂಟುವರೆ ಕೋಟಿ ರೂಪಾಯಿ ಮೊತ್ತದ ವ್ಯವಹಾರ ಈ ಸಣ್ಣ ಗ್ರಾಮದಲ್ಲಿ ನಡೆಯುತ್ತಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಕಾರ್ಯದರ್ಶಿ ಯಂಕಣ್ಣನವರ ಸರಳ ಪ್ರಾಮಾಣಿಕ ಸೇವೆ ಜೊತೆಗೆ ಉತ್ತಮ ಆಡಳಿತ ಮಂಡಳಿಯ ಪೂರ್ಣ ಸಹಕಾರ ಕಾರಣ ಎಂದು ಆಲಿ ಯವರ ಅಭಿಪ್ರಾಯ,

ಒಟ್ಟು ಎರಡು ಹಳ್ಳಿಗಳನ್ನು ಒಳಗೊಂಡ ಈ ಸಂಘ ಚೌಡಾಪೂರು,ಇಂಗಳಗಿ, ಒಟ್ಟು ೧೩ ಜನ ಸದಸ್ಯರನ್ನು ಒಳಗೊಂಡಿದೆ, ಚಿಕ್ಕ ಗ್ರಾಮದಲ್ಲಿ ಚೊಕ್ಕ ಸಂಘ ಗ್ರಾಮೀಣ ಭಾಗದಲ್ಲಿ ರೈತರ ಸಂಜೀವಿನಿಯಾಗಿ ಕಾರ್ಯ ನಿರ್ವಹಿಸುತ್ತಿದೆ, ಎಂದರೆ ಅದಕ್ಕೆ ಮುಖ್ಯ ಕಾರ್ಯನಿರ್ವಾಹ ಕರಾದ ಯಂಕಣ್ಣನವರ ಸಮಯ ಪಾಲನೆ ಹಾಗೂ ಅವರೊಂದಿಗೆ ಸದಾ ಕೈ ಜೊಡಿಸಿ ಸಕಾಲದಲ್ಲಿ ಕಾರ್ಯ ನಿರ್ವಹಿಸುತ್ತಿರು ಸಂಘದ ಸಿಬ್ಬಂದಿ ಸೋಮಣ್ಣ, ರಾ,ದುರ್ಗದ, ಹನುಮಗೌಡ ರಾ,ಹೊಸಗೌಡರ,ಹನುಮಂತ ಬೂದಿಹಾಳ,ಹನುಮಂತ ಗೊ,ಹೊಲೇಕಾರ.

ಹೀಗೆ ನಾಲ್ಕು ಜನ ಸಿಬ್ಬಂದಿಗಳ ಪ್ರಾಮಾಣಿಕ ಪ್ರಯತ್ನವನ್ನು ಇಂದು ನಾವೆಲ್ಲರೂ ಪ್ರಶೌಂಶನೆ ಮಾಡಲೇಬೇಕು. ಸಂಸ್ಥೆಯ ಅಧ್ಯಕ್ಷರಾದ ಶಿವಪುತ್ರಪ್ಪ,ಕಮತಗಿ, ಅವರು ಸಹ ರೈತರ ಬಗ್ಗೆ ಅಪಾರ ಪ್ರೀತಿ, ಹೊಂದಿದ ಮುತ್ಸದ್ದಿ ನಾಯಕರು ಇವರು ಸದಾ ಸಂಘದ ವ್ಯವಹಾರವನ್ನು ಪರಿಸಿಲಿಸಿ ನಿತ್ಯ ರೈತರಿಗೆ ತೊಂದರೆ ಆಗದಂತೆ ಸಿಬ್ಬಂದಿಗಳಿಗೆ ತಿಳಿ ಹೇಳಿ ಒಂದು ಸಂಘದ ಬಗ್ಗೆ ಜನತೆಯಲ್ಲಿ ಉತ್ತಮ ವಿಶ್ವಾಸ ಸಂಪಾದಿಸಲು ಬಹು ಕಷ್ಟ ಆ ನಂಬಿಗೆ ಯಿಂದಲೆ ಇಂದು ಈ ಸಂಘಕ್ಕೆ ಮೂರು ವರೆ ಕೋಟಿ ಎಫ್,ಡಿ ಹಣ ಬಂದಿದೆ ಇದು ಸಂಘದ ಬಗ್ಗೆ ಇರುವ ನಂಬಿಕೆಯ ಮೂಲ ಮಂತ್ರ ಎಂದರು.

ಮುಂದಿನ ದಿನದಲ್ಲಿ ಇನ್ನೂ ಕೇವಲ ೩ ವರ್ಷದಲ್ಲಿ ಹತ್ತರಿಂದ ಹಣ್ಣೆರಡು ಕೋಟಿ ರೂಪಾಯಿ ವ್ಯವಹಾರ ಮಾಡಲು ನಾವು ಹಾಗೂ ಆಡಳಿತ ಮಂಡಳಿ ಸಿಬ್ಬಂದಿ ಸಂಘದ ಇತರೆ ಆದಾಯ ಹೆಚ್ಚಿಸಲು ,ರೈತರಿಗೆ ಬಿಜ,ಗೊಬ್ಬರ, ಸಿಮ್ಮೆ ಎಣ್ಣಿ, ರೇಶನ್,ಹಾಗೂ ಇತರೆ ವ್ಯವಹಾರದ ಸಲುವಾಗಿ ಸತತ ಪ್ರಯತ್ನ ಮಾಡುತ್ತಿದ್ದೇವೆ ಈಗಾಗಲೇ ನಮ್ಮ ಸಂಘದಿಂದ ಗೊಬ್ಬರ, ರೇಶನ್,ಸಿಮ್ಮೆ ಎಣ್ಣಿ ಹಂಚಿಕೆ ಮಾಡುತ್ತಿದ್ದು,ಸಂಘದ ಕಾರ್ಯಾಲಯ ಬಹಳ ಚಿಕ್ಕದು ಗೊಬ್ಬರ ಸಂಗ್ರಹ ಮಾಡಲು ದೊಡ್ಡ ಗೂಡಾಮ್ ಬೇಕು ಅದಕ್ಕಾಗಿ ೮೦/ ೪೦ ,ಅಳತೆಯ ಸೈಟ್ ನೋಡಿದ್ದೇವೆ ಅಲ್ಲಿ ಹೊಸ ಕಟ್ಟಡ ಮಾಡಲು ಈಗಾಗಲೇ ಸಂಧಿಸಿದ ಅಧಿಕಾರಿ/ ಶಾಸಕರಿಗೆ ಮನವಿ ನೀಡಿರುವುದಾಗಿ ಆಲಿ ಅವರು ತಿಳಿಸಿದರು.

ಇಂತಹ ಸತತ ಪ್ರಯತ್ನ ದಿಂದಾಗಿ ಯಾವುದೇ ಸಂಘ,ಸಂಸ್ಥೆಗಳು ಮುಂದೆ ಬಂದಲ್ಲಿ ಯಶಸ್ಸು ಖಂಡಿತ ದೊರೆಯುತ್ತದೆ, ಸಂಘದ ಅಧ್ಯಕ್ಷರು,ಹಾಗೂ ಕಾರ್ಯದರ್ಶಿ ಯಂಕಣ್ಣನವರ ಪ್ರಾಮಾಣಿಕ ಸೇವೆ ,ಹೀಗೆ ಮುಂದು ವರೆದಿದ್ದಲ್ಲಿ ಇದು ಮುಂದಿನ ದಿನಮಾನದಲಿ ಸಾವಿರಾರು ರೈತರ ಜೀವನಾಡಿ ಆಗಲಿದೆ,
ಯಂಕಣ್ಣನವರ ಸರಳ ಗುಣ,ನಿಷ್ಟುರತೆ ಸ್ವಭಾವ, ಅವರ ನೇರ ನುಡಿ , ಅಷ್ಟೇ ಬೇಗ ಎಂತವನ್ನು ಸಹ ಆತ್ಮಿಯ ರನ್ನಾಗಿ , ಮಾಡುವ ಶಕ್ತಿ ಅವರಲಿದೆ , ಇಂದು ಅವರ ಈ ಸರಳ ವ್ಯಕ್ತಿತ್ವವನ್ನು ನೋಡಿ ನಮ್ಮ ಪತ್ರಿಕಾ ವರದಿಗಾರ ಅವರ ಪ್ರಾಮಾಣಿಕ ಸೇವೆ ಜೊತೆಗೆ ಸಂಘದ ಬಗ್ಗೆ ಅವರಿಗಿರುವ ಗೌರವ ಕಂಡು ಈ ಸಣ್ಣ ಪತ್ರಿಕೆ ಮೂಲಕ ಅವರನ್ನು ಜಿಲ್ಲೆಯ ಜನತೆಗೆ ಪರಿಚಯಿಸುವ ಒಂದು ಸಣ್ಣ ಪ್ರಯತ್ನ ಇದಾಗಿದೆ.

ಈ ಪ್ರಾಮಾಣಿಕ ಸೇವೆ ಮೆಚ್ಚಿ ನಮ್ಮ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ ದೆಹಲಿ,ಹಾಗೂ ನಮ್ಮ ಪತ್ರಿಕಾ ಬಳಗದಿಂದ ಯಂಕಣ್ಣನವರಿಗೆ ಸಂಘದ ಪ್ರಸಕ್ತ ಸಾಲಿನ ಅತ್ಯುತ್ತಮ ಕಾರ್ಯನಿರ್ವಾಹಕ. ಪ್ರಶಸ್ತಿಯನ್ನು ನೀಡಲು ತಿರ್ಮಾಣಿಸಲಾಗಿ, ಇದೇ ತಿಂಗಳ ೨೫/೦೯/೨೦೨೦,ರಂದು ವಿತರಿಸಲಾಗುವು.

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಆನಂದ ಪರಾಳದ

ಶ್ರೀ ಆನಂದ ಪರಾಳದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ಸದಸ್ಯರು ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.