Breaking News

ನೀವು ‘ಕೊರೋನಾ’ ಬಂದು ‘ಗುಣಮುಖ’ ಆಗಿದ್ದೀರಾ? ಹಾಗಿದ್ದರೇ ತಪ್ಪದೇ ಈ ಸುದ್ದಿ ಓದಿ

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಕೊರೋನಾ ವಿಶ್ವಾಧ್ಯಂತ ಎಲ್ಲರನ್ನು ನಲುಗಿಸುತ್ತಿದೆ. ಕೊರೋನಾ ನಿಯಂತ್ರಣ ಕ್ರಮಗಳ ಹೊರತಾಗಿಯೂ ಇನ್ನೂ ಯಾವುದೇ ದೇಶ ಅಧಿಕೃತವಾಗಿ ಕೊರೋನಾಗೆ ಲಸಿಕೆ ಕಂಡು ಹಿಡಿದಿಲ್ಲ. ಇದರ ಮಧ್ಯೆ ಕೊರೋನಾ ಬಂದ ನಂತ್ರ, ಕೊರೋನಾದಿಂದ ಗುಣಮುಖರಾದ ನಂತ್ರ ಎಷ್ಟು ದಿನ ನಮ್ಮನ್ನು ರೋಗ ಭಾಧಿಸುತ್ತದೆ ಎಂಬುದು ಅನೇಕರ ಪ್ರಶ್ನೆಯಾಗಿದೆ. ಇದಕ್ಕೆ ಅನೇಕ ಸಂಶೋಧಕರು, ಸಂಶೋಧನಗಳು ಒಂದೊಂದು ಬಗೆಯ ಉತ್ತರವನ್ನು ನೀಡಿವೆ. ಆ ಬಗ್ಗೆ ಮುಂದೆ ಓದಿ..

ಕೊರೋನಾ ಬಂದ ನಂತ್ರ, ಸೋಂಕಿತರು ಎರಡರಿಂದ ಆರು ವಾರಗಳಲ್ಲಿ ಗುಣಮುಖರಾಗುತ್ತಾರೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. 18 ರಿಂದ 34 ವರ್ಷ ವಯಸ್ಸಿನ ಸುಮಾರು 20% ನಷ್ಟು ಜನರು ಇನ್ನೂ ರೋಗಲಕ್ಷಣಗಳನ್ನು ಹೊಂದಿದ್ದರು ಎಂದು ಅಮೇರಿಕಾದ ಅಧ್ಯಯನವು ಕಂಡುಕೊಂಡಿದೆ.

50 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ ಸುಮಾರು ಅರ್ಧದಷ್ಟು ಮಂದಿಗೆ ಇದು ಅನ್ವಯಿಸುತ್ತದೆ.

ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳಲ್ಲಿ, ಶೇ.87% ಮಂದಿ ಅನಾರೋಗ್ಯಪೀಡಿತರಾದ ಎರಡು ತಿಂಗಳ ನಂತರ ಇನ್ನೂ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದಾರೆ ಎಂದು ಇಟಲಿಯಲ್ಲಿ ನಡೆದ ಅಧ್ಯಯವೊಂದರಿಂದ ತಿಳಿದು ಬಂದಿದೆ. ಕೊರೋನಾ ರೋಗದಿಂದ ಗುಣಮುಖರಾದರೂ, ಸುಸ್ತು ಮತ್ತು ಉಸಿರಾಟದ ತೊಂದರೆಯ ಲಕ್ಷಣಗಳನ್ನು ಒಳಗೊಂಡಿರುತ್ತದೆ ಎಂಬುದಾಗಿ ತಿಳಿಸಿದೆ.

ಶಿಕಾಗೋ ಶ್ವಾಸಕೋಶ ತಜ್ಞ ಡಾ.ಖಲೀಲ್ಗೇಟ್ಸ್ ಅವರು, ಆಸ್ಪತ್ರೆಗೆ ದಾಖಲಾದ ಅನೇಕ ರೋಗಿಗಳು ಈಗಲೂ ಕೆಮ್ಮು, ಉಸಿರಾಟದ ತೊಂದರೆ ಮತ್ತು ಸೋಂಕಿನ ನಂತರ ಮೂರು ನಾಲ್ಕು ತಿಂಗಳ ನಂತರವೂ ಸುಸ್ತು ಎಂಬುದಾಗಿ ಹೇಳುತ್ತಿದ್ದಾರೆ. ಅಲ್ಲದೇ COVID-19 ರೋಗಿಗಳು ಯಾವಾಗ ಗುಣಮುಖರಾಗುವುದು ಎಂದು ನಿಖರವಾಗಿ ಊಹಿಸುವುದು ಕಷ್ಟ ಎಂದು ಹೇಳಿದ್ದಾರೆ.

ಆರಂಭಿಕ ಕಾಯಿಲೆ ಕಡಿಮೆಯಾದ ನಂತರ ಯಾವ ರೋಗಿಗಳು ತೊಂದರೆಗಳನ್ನು ಹೊಂದುತ್ತಾರೆ ಎಂದು ಊಹಿಸುವುದು ಕೂಡ ಕಷ್ಟ. COVID-19 ಬಹುತೇಕ ಎಲ್ಲಾ ಅಂಗಗಳ ಮೇಲೆ ಪರಿಣಾಮ ಬೀರಬಹುದು. ದೀರ್ಘಕಾಲೀನ ತೊಡಕುಗಳು ಹೃದಯದ ಉರಿಯೂತ, ಮೂತ್ರಪಿಂಡದ ಕಾರ್ಯಚಟುವಟಿಕೆ, ಅಸ್ಪಷ್ಟ ಚಿಂತನೆ, ಆತಂಕ ಮತ್ತು ಖಿನ್ನತೆಯನ್ನು ಒಳಗೊಂಡಿರಬಹುದು. ಕೊರೋನಾ ವೈರಸ್ ನಿಂದ ಉರಿಯೂತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಎಮೋರಿ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಜಯ್ ವರ್ಕೀ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಕೊರೋನಾ ಸೋಂಕಿನಿಂದ ಒಂದೆರಡು ವಾರಗಳ ಕಾಲ ವಾಸಿಯಾದರೂ, ಕೆಲವೊಬ್ಬರಿಗೆ ರೋಗದಿಂದ ಕೆಲ ಸಮಸ್ಯೆಗಳು, ಸುಸ್ತಿನಂತ ತೊಂದರೆ ಕಾಡಬಹುದಾಗಿ ಅನೇಕ ಸಂಶೋಧನೆಯಿಂದ ತಿಳಿದು ಬಂದಿದೆ. ಆದ್ರೇ ಕೊರೋನಾ ಸೋಂಕು ನಿವಾರಣೆಯಾಗೋಕೆ ಎಷ್ಟು ದಿನ ಬೇಕು ಎಂಬುದಾಗಿ ಯಾವುದೇ ಸಂಶೋಧನೆಯು ನಿಖರ ಉತ್ತರ ನೀಡಿಲ್ಲ. ಕೆಲವರು ಒಂದು ವಾರಕ್ಕೆ ಗುಣಮುಖರಾದರೇ, ಮತ್ತೆ ಕೆಲವರು ಅದಕ್ಕಿಂತ ಹೆಚ್ಚಿನ ದಿನ ಕೂಡ ಆಗಬಹುದು. ಇಲ್ಲವೇ ಸೋಂಕಿತ ವ್ಯಕ್ತಿಯ ದೈಹಿಕ ಮಟ್ಟದ ಮೇಲೂ ನಿರ್ಧರಿಸಿದೆ ಎಂಬುದಾಗಿ ತಿಳಿಸಿವೆ.

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಆನಂದ ಪರಾಳದ

ಶ್ರೀ ಆನಂದ ಪರಾಳದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ಸದಸ್ಯರು ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.