Breaking News

vijay_shankar

ಸೂಳೇಭಾವಿ ಗ್ರಾಮದಲ್ಲಿ ವಾತ್ಸಲ್ಯ ಯೋಜನೆ ಅಡಿ ಮಾಶಾಸನ ಪಡೆಯುತ್ತಿರುವ ಕುಟುಂಬಕ್ಕೆ ವಾತ್ಸಲ್ಯ ಕಿಟ್ ವಿತರಣೆ !

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ವಲಯದ ಶ್ರೀ ಕ್ಷೇತ್ರ ಗ್ರಾಮಭಿವೃದ್ಧಿ ಯೋಜನೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಡಾ. ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಸೂಳೇಭಾವಿ ಗ್ರಾಮದಲ್ಲಿ ಮಾಶಾಸನ ಪಡೆಯುತ್ತಿರುವ ಫಲಾನುಭವಿ ಶಾರದಾ ಬಡಿಗೇರ ಅವರಿಗೆ ಅವಶ್ಯಕತೆ ಇರುವ ವಾತ್ಸಲ್ಯ ಕಿಟ್ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು . ಗ್ರಾಮ ಪಂಚಾಯಿತ ಅಧ್ಯಕ್ಷರಾದ ಪಿಡ್ಡಪ್ಪ ಕುರಿ ಹಾಗೂ ‌ಜನಜಾಗೃತಿ ಸದಸ್ಯರಾದ ಕೃಷ್ಣಾ ರಾಮದುರ್ಗ ,ಹಾಗೂ ಯುವ ಮುಖಂಡರಾದ ದೇವರಾಜ್ ಕಮತಗಿ ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿಗಳಾದ …

Read More »

ಇಂದು ಐಹೊಳೆ ಗ್ರಾಮ ಪಂಚಾಯತಿಯಲ್ಲಿ ಡಾ: ಬಿ,ಆರ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಆಚರಿಸಲಾಯಿತು

ಅಮೀನಗಡ : ಹುನಗುಂದ ತಾಲೂಕಿನ ಐಹೊಳೆ ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಶಿಲ್ಪಿ ಡಾ: ಬಿ,ಆರ್ ಅಂಬೇಡ್ಕರ್ ಅವರು ಸ್ವಾಭಿಮಾನ ಹಾಗೂ ಸಮಾನತೆಗಾಗಿ ಹೋರಾಡಿದ ಮಹಾನ್ ದಲಿತ ನಾಯಕ ಡಾ: ಬಿ,ಆರ್ ಅಂಬೇಡ್ಕರ್ ಅವರ ಪರನಿರ್ವಾಣ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶರಣಪ್ಪ ಮಾಲಗಿತ್ತಿ ,ಹಾಗೂ ನೀಲಪ್ಪ ಚಿಮ್ಮಲಗಿ ಆಡಳಿತ ಅಧಿಕಾರಿ ಎಮ್ ಎಸ್ ಗೋಡಿ ಹಾಗೂ ಸಿಬ್ಬಂದಿ ವರ್ಗು ಉಪಸ್ಥಿತಿ ಇದ್ದರು

Read More »

ಕರ್ನಾಟಕದ ಎರಡನೇ ತಿರುಪತಿ ದರ್ಶನಕ್ಕೆ ಬೆಸತ್ತ ಜನತೆ, ಬೆಳಗ್ಗೆ ಬ್ರಾಹ್ಮಿ ಮೊರ್ತದಲ್ಲಿ ಪೂಜೆ ಮಾಡಲು ಮನವಿ

ಹನಮಸಾಗರ :ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಹೊರ ವಲಯದ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ತಿರುಪತಿ ವೆಂಕಟರಮಣ ಸ್ವಾಮಿ ಕರ್ನಾಟಕದ ಎರಡನೇ ತಿರುಪತಿ ದೇವಸ್ಥಾನ ಎಂದು ಪ್ರಸಿದ್ದಿ ಪಡೆದಿದೆ ಇಲ್ಲಿನ ಆಡಳಿತ ಮಂಡಳಿ ಈ ದೇವಸ್ಥಾನದ ಜೀರ್ನೋದ್ದಾರ ಮಾಡಿದ್ದು ಶ್ಲಾಘನೀಯ ,ಆದರೆ ಈ ಕಾರ್ತಿಕ ಮಾಸದಲ್ಲಿ ಪೂಜೆ ಬ್ರಾಹ್ಮೀ ಸಮಯದಲ್ಲಿ ನಡೆಯಬೇಕೆಂದು ಹುನಗುಂದ ನಗರದ ಉಧ್ಯಮಿ ಶ್ರೀ ಮಹಾಂತೇಶ ,ಚಿತ್ತರಗಿ, ಹಾಗೂ ಶ್ರೀಮತಿ ವಿಜಯಲಕ್ಷ್ಮಿ ದಂಪತಿಗಳು ಆಗ್ರಹಿಸಿದ್ದಾರೆ. …

Read More »

ನಿಮ್ಮೆಲ್ಲರ ಸಹಕಾರದಿಂದ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಸವದತ್ತಿ ಶಾಸಕ, ವಿಶ್ವಾಸ ವಸಂತ ವೈಧ್ಯ

ಸವದತ್ತಿ : ನನ್ನ ಈ ರಾಜಕೀಯ ರಂಗದಲ್ಲಿ ಈ ಸ್ಥಾನಕ್ಕೆ ,ಈ ಪದವಿಗೆ ನಿಮ್ಮ ಸಹಕಾರ ಮತ್ತು ನೀವೆ ಕಾರಣ ನಿಮ್ಮ ಸಂಪೂರ್ಣ ಸಹಕಾರದಿಂದ ನಾನು ಈಗ ಈ ಪದವಿಯಲ್ಲಿ ಇದ್ದೇನೆ. ನಾನು ಯಾವಾಗಲೂ ನಿ ಮ್ಮೊಂದಿಗೆ ಸದಾ ಇದ್ದೇನೆ. ನಿಮ್ಮ ಬೇಡಿಕೆಗಳ ಬಗ್ಗೆ ಮಾನ್ಯ ಮುಖ್ಯ ಮಂತ್ರಿಗಳೊಂದಿಗೆ ಈ ಚಳಿಗಾಲ ಅಧಿವೇಶನದಲ್ಲಿ ನಾನು ಖುದ್ದಾಗಿ ಮಾತನಾಡುತ್ತೇನೆ, ಎಂದು ಸವದತ್ತಿ ಮತಕ್ಷೇತ್ರದ ಜನಪ್ರಿಯ ಶಾಸಕ ಶ್ರೀ ವಿಶ್ವಾಸ ವಸಂತ ವೈಧ್ಯ …

Read More »

ಸೂಳೇಭಾವಿಯ ಶ್ರೀ ಕಾಳಿಕಾಂಬದೇವಿ ಕಾರ್ತಿಕೋತ್ಸವ ಸಂಪನ್ನವಾಗಿ ಜರುಗಿತು

ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ಇಂದು ಗ್ರಾಮದ ಆರಾಧ್ಯದೈವ ಶ್ರೀ ಕಾಳಿಕಾದೇವಿ ಕಾರ್ತೀಕೋತ್ಸ ಅದ್ದೂರಿಯಾಗಿ ಜರುಗಿತು, ಗ್ರಾಮದ ಎಲ್ಲಾ ಸದ್ಬಕ್ತರು ಹಣತೆಗಳಗೆ . ದೀಪಹಚ್ಚಿ ದೇವಿಗೆ ನಮಿಸಿದರು.ಅರ್ಚಕರಾದ ಪೂಜ್ಯ ಮೌನೇಶ ಅವರು ದೇವಿಗೆ ವಿಶೇಷ ಅಲಂಕಾರ ಹಾಗೂ ಮಹಾ ಮಂಗಳಾರತಿ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಪ್ರಮುಖರಾದ ಮನೋಹರ ಕಮ್ಮಾರ,ಗಣೇಶ ಕಮ್ಮಾರ, ಸಂಗಮೇಶ ಕಮ್ಮಾರ,ಗಂಗಾಧರ ಕಮ್ಮಾರ, ನಾಗೇಶ ಗಂಜಿಹಾಳ ,ಸಂಗಯ್ಯ ಮರಳಯ್ಯಮಠ, …

Read More »

ಶ್ರೀ ಕ್ಷೇತ್ರ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ಪತ್ರಕರ್ತರಿಗೆ ಉಚಿತ ಬ್ಯಾಗ್ ವಿತರಣೆ

ಅಮೀನಗಡ: ಇಂದು ಅಮೀನಗಡ ನಗರದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಶ್ರೀ ಮಂಜುನಾಥ ಸ್ವಾಮಿ ದೀಪೋತ್ಸವ ನಿಮಿತ್ತವಾಗಿ ಗ್ರಾಮೀಣ ಶ್ರೀ ಕ್ಷೇತ್ರ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ಅವರ ಕಾರ್ಯಾಲಯದಲ್ಲಿ ಸ್ಥಳೀಯ ಪತ್ರಕರ್ತರರಿಗೆ ಉಚಿತ ಬ್ಯಾಗ್ ನೀಡಿದರು. ಸಾಬೂನು,ಆ್ಯಂಡ್ ವಾಶ್ ಲಿಕ್ವೀಡ್ ,ಟವೇಲ್, ಉದುಬತ್ತಿ, ಇತರೆ ಸಾಮಗ್ರಿಗಳನ್ನು ಉಚಿತವಾಗಿ ನೀಡಿ ಪತ್ರಕರ್ತರ ಸಮಾಜ ಸೇವೆ ಅನನ್ಯ ಹೀಗಾಗಿ ನಿಮ್ಮೊಂದಿಗೆ ನಾವು ಸದಾ ಇದ್ದೇವೆ ತಮ್ಮೆಲ್ಲರಿಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ …

Read More »

ಸಾರ್ವಜನಿಕ ರಸ್ತೆ ನುಂಗಿ ನೀರು ಕುಡಿದರೂ ಮೌನ ವಹಿಸಿದ ಗ್ರಾಮ ,ಪಂ,ಸದಸ್ಯರು, ಹಾಗೂ ಅಭಿವೃದ್ಧಿ ಅಧಿಕಾರಿಗಳು

ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ವಾರ್ಡ ನಂಬರ್ ೪ ರಲ್ಲಿ ಸಾರ್ವಜನಿಕ ರಸ್ತೆ ಮೇಲೆ ಬೋರವೆಲ್ ಹಾಕಿಸಿದ ಶ್ರೀಕಾಂತ ಧೂಪದ ಅವರು ಆಗ ಇದು ಸಂಪೂರ್ಣವಾಗಿ ರಸ್ತೆ ಮೇಲೆ ಇದೆ ಎಂದು ಅನೇಕರು ವಿರೋಧ ಮಾಡಿದರೂ ಸಹ ಉದ್ದಟತನ ಮೆರೆದಿದ್ದರು. ಈಗ ಮನೆ ಬಾರ್ಡಡರ್ ಸುತ್ತಳತೆ ಬಾಂಡ್ರಿ ಪಿಕ್ಸ್ ಮಾಡಿ ಕಂಪೌಂಡ್ ಕಟ್ಟುತ್ತಿದ್ದಾರೆ, ಆಗ ಯಾರ ಮಾತಿಗೂ ಕಿವಿ ಕೊಡದ ಶಿಕ್ಷಕ ಶ್ರೀಕಾಂತ್ ಅವರು ಮಾಡಿದ ತಪ್ಪಿಗೆ …

Read More »

ಗುಡೂರು ಹುಲ್ಲೇಶ್ವರ ದೇವಸ್ಥಾನ ವಕ್ತ್ ಮಂಡಳಿ ಕೈ ವಶ ? ದೇವಸ್ಥಾನದ ಕಾಂಪ್ಲೆಕ್ಸ್ ಕರ್ಮಕಾಂಡ,ಕಣ್ಮುಚ್ಚಿ ಕುಳಿತ ಆಡಳಿತ ಮಂಡಳಿ,,,,,!

ಅಮೀನಗಡ : ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲ್ಲೂಕಿನ ಗುಡೂರುsc ಗ್ರಾಮದ ಆರಾಧ್ಯದೈವ ಶ್ರೀ ಹುಲ್ಲೇಶ್ವರ ದೇವಸ್ಥಾನ ಗ್ರಾಮದ ಪ್ರಮುಖ ದೇವಸ್ಥಾನ, ಪ್ರತಿ ವರ್ಷ ಬಹಳ ವಿಶೇಷವಾಗಿ ಇಲ್ಲಿ ಜಾತ್ರೆ ಪ್ರಸಿದ್ದಿ ಪಡೆದಿದೆ. ಗ್ರಾಮದ ಮಾಜಿ,ಜಿಲ್ಲಾ ಪಂಚಾಯತ ಸದಸ್ಯರಾದ ಮಲ್ಲಣ್ಣ ಹುಲಗೇರಿ ಈ ದೇವಸ್ಥಾನದ ಮುಖ್ಯಸ್ಥರಾಗಿ ಇಲ್ಲಿನ ಅಭಿವೃದ್ಧಿ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದರು. ಕಳೆದ ೯ ವರ್ಷಗಳಿಂದ ಈಗ ಹುನಗುಂದ ತಾಲೂಕಿನ ಅಮೀನಗಡ ಕಂದಾಯ ಇಲಾಖೆ ಉಪ ತಹಶಿಲ್ದಾರರ …

Read More »

ಗುಡೂರುsc ಗ್ರಾಮದ ಬಸ್ ನಿಲ್ದಾಣದಲ್ಲಿ ಅಕ್ರಮ ತಳ್ಳು ಬಂಡಿಗಳ ಹಾವಳಿಯಿಂದ ಬೇಸತ್ತ ಜನತೆ, ವಾಹನ ಸಂಚಾರಕ್ಕೆ ಅಡೆತಡೆ,,,,!

ಇದು ಗುಡೂರು ಗ್ರಾಮದ ಇಂದಿನ ವಾಸ್ತವಿಕ ಸ್ಥಿತಿ ಇನ್ನೂ ಶುಕ್ರವಾರ, ಸಂತೆ ಒಂದು ಬೈಕ್ ಕೂಡ ಸರಳವಾಗಿ ಈ ರಸ್ತೆ ದಾಟಲು ಆಗಲ್ಲ ಅಮೀನಗಡ : ಗುಡೂರು sc :ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಗುಡೂರು sc ಗ್ರಾಮದಲ್ಲಿ ಬಿದಿ ಬದಿ ವ್ಯಾಪಾರಿಗಳ ಹಣ್ಣು,ಚಹಾ, ಪಾನ್ ,ಹಾಗೂ ಇತರೆ ವ್ಯಾಪಾರಕ್ಕೆ ನಿಲ್ಲಿಸಿದ ಅಕ್ರಮ ತಳ್ಳು ಬಂಡಿಗಳ ಹಾವಳಿಯಿಂದ ಗುಡೂರು ಗ್ರಾಮದಲ್ಲಿ ಸಂಚರಿಸವ ಸರಕಾರಿ ಬಸ್ ಹಾಗೂ ಖಾಸಗಿ ವಾಹನಗಳ ಓಡಾಟಕ್ಕೆ …

Read More »

ಗುಡೂರುsc ಗ್ರಾಮದ ಢಾಬಾಗಳಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ಕೊನೆ ಎಂದು? ಹಳ್ಳಿ ಹಳ್ಳಿಗಳಲ್ಲಿ ಮದ್ಯದ ಹೊಳೆ ,,,,,,,!

ಗುಡೂರು:ಇಲಕಲ್ಲ ತಾಲೂಕಿನ ಗುಡೂರು sc ಗ್ರಾಮದ ಸುತ್ತ ಕೆಲೂರು, ಇಲಾಳ ಹಾಗೂ ಕಟಾಪೂರು ಕ್ರಾಸ್ ನಿಂದ ಭೀನಮಗಡ ಗುಡೂರು ಹಾಗೂ ಭೀಮನಗಡ/ ಕಟಾಪೂರ ಮಾರ್ಗದಲ್ಲಿ ಬರುವ ಡಾಭಾ ಹಾಗೂ ಖಾನಾವಳಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಜೋರಾಗಿ ನಡೆಯುತ್ತಿದೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಾದ ಅಧಿಕಾರಿಗಳೇ ಈ ಅಕ್ರಮ ಮಾರಾಟಕ್ಕೆ ಬೆಂಗಾವಲಾಗಿ ನಿಂತಿರುವುದು ಬೇಸರದ ಸಂಗತಿ, ಪ್ರತಿಯೊಬ್ಬರು ಬಹಳ ಸುಲಭವಾಗಿ ಈ ತರ ಒಂದು ಡಾಭಾ ಪ್ರಾರಂಭ ಮಾಡಿ ಅಲ್ಲಿ …

Read More »