ಕೊಪ್ಪಳ : ಜಿಲ್ಲೆಯದ್ಯಂತ ಕೊರೊನಾ ಮಾರ್ಗಸೂಚಿಯನ್ನ ಲೆಕ್ಕಿಸದೇ ಶ್ರೀ ಶುಕಮುನಿ ತಾತಾನವರ ಅಡ್ಡಪಲ್ಲಕ್ಕಿ ಉತ್ಸವದ ಹೆಸರಿನಲ್ಲಿ ಕಿಡಿಗೇಡಿಗಳು ಪೊಲೀಸ್ ಜೀಪ್ ನ್ನು ಜಖಂಗೊಳಿಸಿದ ಹಿನ್ನೆಲೆಯಲ್ಲಿ ದೋಟಿಹಾಳ ಗ್ರಾಮದ ಸುತ್ತಮುತ್ತಲಿನ 50 ಮಂದಿ ವಿರುದ್ದ ಕುಷ್ಟಗಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಶ್ರೀ ಶುಕಮುನಿ ಆರಾಧನಾ ಮಹೋತ್ಸವದ ಅಡ್ಡಪಲ್ಲಕ್ಕಿ ಗುರುವಾರ ನಡೆಯಬೇಕಿತ್ತು. ಇದರ ಬಗ್ಗೆ ಜಿಲ್ಲಾಡಳಿತ ಕೂಡಾ ಅದ್ಧೂರಿ ಉತ್ಸವ ಬದಲು ಸರಳವಾಗಿ …
Read More »ಕೊರೊನಾ ತವರು ಚೀನಾದ ಬೀಜಿಂಗ್ ಈಗ ಮಾಸ್ಕ್ ಮುಕ್ತ..! ಸತತ 13 ದಿನ ಹೊಸ ಕೇಸ್ ಇಲ್ಲ
ಚೀನಾದ ರಾಜಧಾನಿ ಬೀಜಿಂಗ್ ಮಾಸ್ಕ್ ಮುಕ್ತವಾಗಿದ್ದು, ಇನ್ಮೇಲೆ ಮಾಸ್ಕ್ ಇಲ್ಲದೆಯೂ ನಗರದಲ್ಲಿ ಹೊರಗಡೆ ಓಡಾಡಬಹುದು. ಸತತ 13 ದಿನ ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗದ ಹಿನ್ನೆಲೆ ಬೀಜಿಂಗ್ ಮಾಸ್ಕ್ ಫ್ರೀ ಆಗಿದೆ. ಬೀಜಿಂಗ್: ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಇನ್ಮೇಲೆ ಮಾಸ್ಕ್‌ಇಲ್ಲದೆಯೂ ಹೊರಗಡೆ ಓಡಾಡಬಹುದು. ಹೌದು, ಸತತ 13 ದಿನ ಹೊಸ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗದ ಹಿನ್ನೆಲೆ ಬೀಜಿಂಗ್‌ನ ಆರೋಗ್ಯ ಅಧಿಕಾರಿಗಳು ಹೊರಾಂಗಣದಲ್ಲಿ ಮಾಸ್ಕ್ ಧರಿಸುವ ನಿಯಮವನ್ನು ರದ್ದುಗೊಳಿಸಿದ್ದಾರೆ. ಜೊತೆಗೆ ಕೊರೊನಾ ನಿಯಂತ್ರಣಕ್ಕೆ …
Read More »ಕಾರು ಖರೀದಿಸಿದ್ದಕ್ಕಿಂತಲೂ ಎಮ್ಮೆ ಖರೀದಿಸಿದ್ದೇ ಹೆಚ್ಚು ಖುಷಿ ಕೊಟ್ಟಿದೆ: ಸೋನು ಸೂದ್!
ಐಷಾರಾಮಿ ಕಾರು ಕೊಂಡುಕೊಳ್ಳುವುದು ಎಂದರೆ ಸೆಲೆಬ್ರಿಟಿಗಳಿಗೆ ಸಖತ್ ಉತ್ಸಾಹ. ಆದರೆ ನಟ ಸೋನು ಸೂದ್ ಅವರಿಗೆ ಕಾರಿಗಿಂತಲೂ ಎಮ್ಮೆ ಖರೀದಿಸಿದ್ದರಲ್ಲೇ ಹೆಚ್ಚು ಖುಷಿ ಸಿಕ್ಕಿದೆ! ಯಾಕೆ ಎಂಬುದಕ್ಕೆ ಉತ್ತರ ಈ ಲೇಖನದಲ್ಲಿದೆ. ನಟ ಸೋನು ಸೂದ್ ಅವರ ಇಮೇಜ್ ಸಂಪೂರ್ಣ ಬದಲಾಗಿದೆ. ಪರದೆ ಮೇಲೆ ವಿಲನ್ ಆಗಿ ಕಾಣಿಸಿಕೊಳ್ಳುವ ಅವರು ನಿಜಜೀವನದಲ್ಲಿ ರಿಯಲ್ ಹೀರೋ ಆಗಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಜನರಿಗೆ ಅವರು ಮಾಡಿದ ಸಹಾಯವೇ ಈ ಬದಲಾವಣೆಗೆ ಕಾರಣ. ಈಗ ಅವರು ಎಮ್ಮೆ ಖರೀದಿಯ ಖುಷಿ …
Read More »ಬಾಂಬ್ ಬೆದರಿಕೆ ಕರೆ: ಆರೋಪಿ ಕಸ್ಟಡಿಗೆ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿರುವುದಾಗಿ ಬುಧವಾರ ಹುಸಿ ಕರೆ ಮಾಡಿದ್ದ ವ್ಯಕ್ತಿಯನ್ನು ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಮುದ್ರಾಡಿಯ ವಸಂತ (33) ಎಂದು ಗುರುತಿಸಲಾಗಿದ್ದು, ಪೊಲೀಸರು ಬಂಧಿಸಿ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತನನ್ನು ಕೋವಿಡ್ ಸೋಂಕು ಪರೀಕ್ಷೆ ನಡೆಸಬೇಕಾಗಿರುವುದರಿಂದ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಪರೀಕ್ಷಾ ವರದಿ ನೆಗೆಟಿವ್ ಬಂದರೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಪೊಲೀಸ್ ಆಯುಕ್ತ …
Read More »ನಕಲಿ ಪಾಸ್ ಪೋರ್ಟ್ ತಯಾರಿಕೆ: ಮೂವರ ಬಂಧನ
ಶಿರಸಿ: ನಕಲಿ ಪಾಸ್‌ಪೋರ್ಟ್ ತಯಾರಿಸಿದ ಆರೋಪದಡಿಯಲ್ಲಿ ಮೂವರನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಹುಲೇಕಲ್ ಗ್ರಾಮದ ಹಂಚರಟ್ಟಾದ ಅಬ್ದುಲ್ ರೆಹಮಾನ್ (22) ವಿದೇಶಕ್ಕೆ ತೆರಳಲು ನಕಲಿ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ. ಈ ಮೊದಲು ಪಾಸ್‌ಪೋರ್ಟ್ ಹೊಂದಿದ್ದ ಈತನಿಗೆ ಇಸಿಎನ್‌ಆರ್ ಪಾಸ್‌ಪೋರ್ಟ್ ಸಿಗದ ಕಾರಣಕ್ಕೆ, ನಕಲಿ ಆದಾಯ ಪ್ರಮಾಣ ಪತ್ರ ನೀಡಿ ಮತ್ತೆ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ. ಅಧಿಕಾರಿಗಳು ತಪಾಸಣೆ ನಡೆಸಿದ್ದ ವೇಳೆ, ಪಾಸ್‌ಪೋರ್ಟ್ ನಕಲಿ ಎಂಬುದು ದೃಢಪಟ್ಟಿತ್ತು. ಈ ಕುರಿತು ಶಿರಸಿ …
Read More »ನಿಮಗೆ ಜಂತು ಹುಳುಗಳ ಸಮಸ್ಯೆ ಇದ್ದರೆ ಈ ರೀತಿ ಮಾಡಿ
ಮಕ್ಕಳಿರಲೀ ದೊಡ್ಡವರಿರಲೀ, ಜಂತು ಹುಳುಗಳು ಸಾಮಾನ್ಯ. ಆದರೆ ಅವುಗಳ ಪರಿಹಾರಕ್ಕೆ ಔಷಧಿಯೇ ಆಗಬೇಕೆಂದೇನಿಲ್ಲ. ಮನೆಮದ್ದುಗಳೂ ತುಂಬಾ ಪರಿಣಾಮಕಾರಿ. ಪುಟ್ಟ ಮಕ್ಕಳಿಗೆ ಜಂತು ಹುಳುಗಳು ಕಂಡು ಬಂದರೆ ಜಂತು ಹುಳುವಿನ ಔಷಧಿ ಕುಡಿಸುತ್ತೇವೆ. ಆದರೆ ಇದು ದೊಡ್ಡವರಾದ ನಮಗೆ ಕೆಲಸ ಮಾಡುವುದಿಲ್ಲ. ಕೆಲವೊಂದು ಬಾರಿ ಡಬಲ್ ಡೋಸ್ ತೆಗೆದುಕೊಂಡರೂ ಅಷ್ಟೇನೂ ಪ್ರಯೋಜನ ಆಗುವುದಿಲ್ಲ. ತುಂಬಾ ಕಲುಷಿತ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಹೊಟ್ಟೆಯ ಹಾಗೂ ಕರುಳಿನ ಭಾಗದಲ್ಲಿ ಇಂತಹ ಹುಳುಗಳು ಸಾಮಾನ್ಯವಾಗಿ ಕಂಡು …
Read More »ಇಡೀ ರಾಜ್ಯಕ್ಕೇ ಪ್ರವಾಹ, ಮಳೆ ಇದ್ದರೆ ಚಿಕ್ಕಬಳ್ಳಾಪುರದಲ್ಲಿ ಮಾತ್ರ ಬರಗಾಲ!
ಇಡೀ ರಾಜ್ಯದಲ್ಲಿ ಯಥೇಚ್ಛ ಮಳೆಯಿಂದಾಗಿ ಅತಿವೃಷ್ಟಿಯಾಗುತ್ತಿದೆ. ಇದರಿಂದ ಕೃಷಿ ಚಟುವಟಕೆಗಳಿಗೆ ಕಷ್ಟವಾಗುತ್ತಿದೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಮಳೆ ಇಲ್ಲದೆ ಕೃಷಿ ಕುಂಠಿತವಾಗಿದೆ. ಚಿಕ್ಕಬಳ್ಳಾಪುರ: ರಾಜ್ಯದ ಹಲವು ಭಾಗದಲ್ಲಿ ಯಥೇಚ್ಛ ಮಳೆಯಿಂದಾಗಿ ಅತಿವೃಷ್ಟಿಯಾಗುತ್ತಿದೆ. ಅತಿಯಾದ ಮಳೆ ಹಾಗೂ ಪ್ರವಾಹದಿಂದ ಜನಜೀವನ ತತ್ತರಿಸಿರುವ ಜತೆಗೆ ಕೃಷಿಗೂ ನಷ್ಟ ಉಂಟಾಗುತ್ತಿದೆ. ಆದರೆ ಇತ್ತ ಬಯಲುಸೀಮೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆ ಅಭಾವದಿಂದ ಅನಾವೃಷ್ಟಿ ಉಂಟಾಗುವ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಮಳೆ ಕಣ್ಮರೆಯಾಗಿದೆ. ಒಂದು ವಾರದಿಂದ ದೊಡ್ಡ ಮಟ್ಟದಲ್ಲಿಮೋಡಗಳು ಬರುತ್ತಿಯೆಯಾದರೂ, ಅಲ್ಲಲ್ಲಿ …
Read More »ಜಾನುವಾರು ಚಿಕಿತ್ಸೆಗೆ ಪಶು ಸಂಜೀವಿನಿ: ಸಿಎಂ ಚಾಲನೆ
ಬೆಂಗಳೂರು: ಪಶುಸಂಗೋಪನೆ ಇಲಾಖೆ ರೈತರ ಆದಾಯ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಕೃಷಿಯ ಜತೆಗೆ ಪಶುಪಾಲನೆಯಲ್ಲಿ ತೊಡಗಿದವರು ಜಾನುವಾರು ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ವಿಧಾನಸೌಧದಲ್ಲಿ ಪಶು ಸಂಗೋಪನೆ ಇಲಾಖೆಯ 15 ಸುಸಜ್ಜಿತ ಪಶು ಶಸ್ತ್ರಚಿಕಿತ್ಸಾ ವಾಹನ “ಪಶು ಸಂಜೀವಿನಿ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಸುಸಜ್ಜಿತವಾದ ಪಶು ಶಸ್ತ್ರಚಿಕಿತ್ಸಾ ವಾಹನವು ರೈತರ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಲಿದೆ. ಸದ್ಯ 15 ಜಿಲ್ಲೆಗಳಿಗೆ …
Read More »ಸೆ.21 ರಿಂದ 30ರವರೆಗೆ ಮುಂಗಾರು ಅಧಿವೇಶನ: ಸಚಿವ ಸಂಪುಟ ತೀರ್ಮಾನ
ಬೆಂಗಳೂರು: ಕೊರೋನಾ ಸಂಕಷ್ಟದ ನಡುವೆಯೂ ರಾಜ್ಯ ವಿಧಾನಮಂಡಲ ಅಧಿವೇಶನ ಕರೆಯಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಸೆಪ್ಟೆಂಬರ್ 21 ರಿಂದ 30ರವರೆಗೆ ಅಧಿವೇಶನ ನಡೆಸಲು ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ವಿಧಾನಸಭಾ ಸ್ಪೀಕರ್ ಹಾಗೂ ವಿಧಾನಪರಿಷತ್ ಸಭಾಪತಿ ಅವರಿಗೆ ಸಂಪುಟ ಮನವಿ ಮಾಡಿದೆ. ಕೊರೋನಾ ಮಹಾಮಾರಿಯಿಂದಾಗಿ ಕಳೆದ ಬಾರಿ ಬೇಸಿಗೆ ಅಧಿವೇಶನವನ್ನು ರಾಜ್ಯದಲ್ಲಿ ಮುಂದೂಡಲಾಗಿತ್ತು. ಈ ವೇಳೆ ಸುಗ್ರೀವಾಜ್ಞೆ ಮೂಲಕ ಬಿಎಸ್ ಯಡಿಯೂರಪ್ಪ ಸರ್ಕಾರ ಎಪಿಎಂಸಿ ಕಾಯ್ದೆ ಮತ್ತು ಭೂ …
Read More »ಕೊರೊನಾ ವೈರಸ್ ಆತಂಕದ ನಡುವೆಯೇ ನಾಡಿನೆಲ್ಲೆಡೆ ಗೌರಿ ಹಬ್ಬದ ಸಂಭ್ರಮ
ಬೆಂಗಳೂರು : ಕೊರೊನಾ ವೈರಸ್ ಆತಂಕದ ನಡುವೆಯೇ ನಾಡಿನೆಲ್ಲೆಡೆ ಗೌರಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಹೂ, ಹಣ್ಣು ತರಕಾರಿ ಖರೀದಿಯಲ್ಲಿ ಜನರು ಬ್ಯುಸಿಯಾಗಿದ್ದಾರೆ. ಬೆಲೆ ಏರಿಕೆಯ ನಡುವೆಯೂ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಳ್ಳಾರಿ ಸೇರಿದಂತೆ ನಾಡಿನಾದ್ಯಂತ ಗೌರಿ ಹಬ್ಬದ ಸಂಭ್ರಮ ಜೋರಾಗಿದ್ದು, ಒಂದು ಮೊಳ ಮಲ್ಲಿಗೆ ಹೂವಿನ ಬೆಲೆ 40 ರೂ. ಇದ್ದರೆ, ಕನಕಾಂಬರ ದರ 50 ರೂ. ಬಿಡಿಹೂವು ಕೆಜಿಗೆ 400 ರಿಂದ 450 ರೂ. …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News