ನವದೆಹಲಿ: ಕೋವಿಡ್ 19 ರೋಗ ಹರಡುವ ಮತ್ತು ರೋಗ ನಿರ್ವಹಣೆಗೆ ಸಂಬಂಧಿಸಿದಂತೆ ಉನ್ನತಮಟ್ಟದ ಸಂಶೋಧನೆ ನಡೆಸುವುದಕ್ಕಾಗಿ ಭಾರತ ಮತ್ತು ಅಮೆರಿಕ ರಾಷ್ಟಗಳ ಸಂಶೋಧಕರನ್ನೊಳಗೊಂಡ ಎಂಟು ತಂಡಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾಗಿರುವ ಸಂಶೋಧನಾ ತಂಡಗಳ ಸದಸ್ಯರು, ಸೋಂಕು ನಿಗ್ರಹ, ರೋಗ ನಿರೋಧಕಶಕ್ತಿಯ ವ್ಯತ್ಯಾಸ, ತ್ಯಾಜ್ಯ ನೀರಿನಲ್ಲಿ ಸಾರ್ಸ್ ಕೋವ್ -2 ವೈರಸ್‌ಗಳನ್ನು ಗುರುತಿಸುವುದು, ರೋಗ ಪತ್ತೆಯ ಕಾರ್ಯವಿಧಾನಗಳು, ರಿವರ್ಸ್ ಜೆನಿಟಿಕ್ಸ್ ಕಾರ್ಯತಂತ್ರಗಳು ಮತ್ತು ಔಷಧ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ …
Read More »ಕುಲ್ಗಾಂನಲ್ಲಿ ಸೇನೆಯ ಬಂಕರ್ ಮೇಲೆ ಉಗ್ರರ ದಾಳಿ : ಓರ್ವ ಅಧಿಕಾರಿಗೆ ಗಾಯ
ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಂನಲ್ಲಿ ಅರೆಸೇನಾ ಪಡೆಯ ಬಂಕರ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಓರ್ವ ಅಧಿಕಾರಿ ಗಾಯಗೊಂಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ರಾತ್ರಿ 8-45ರ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ನಿಹಮಾದಲ್ಲಿನ ಕ್ಯಾಂಪ್ ಹೊರಗಡೆ ಸಿಆರ್ ಪಿಎಫ್ 18ನೇ ಬೆಟಾಲಿಯನ್ ನ ಬಂಕರ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ. ಗುಂಡಿನ ದಾಳಿ ವೇಳೆ ಸಿಆರ್ ಪಿಎಫ್ ನ …
Read More »ಎಸೆಸೆಲ್ಸಿ ಪ್ರತಿಭಾನ್ವಿತರಿಗೆ ಲ್ಯಾಪ್‌ಟಾಪ್ ವಿಳಂಬ; ಇನ್ನೂ ಆರಂಭವಾಗದ ಖರೀದಿ ಪ್ರಕ್ರಿಯೆ
ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅಗ್ರಸ್ಥಾನಿ ಗಳಾಗಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಕೈ ಸೇರುವುದು ಈ ವರ್ಷ ವಿಳಂಬವಾಗಲಿದೆ. ಪ್ರತೀ ವರ್ಷ ಸ್ವಾತಂತ್ರ್ಯೋತ್ಸವ ದಿನದಿಂದಲೇ ಜಿಲ್ಲಾ ಮತ್ತು ರಾಜ್ಯ ಮಟ್ಟದ ಅಗ್ರಸ್ಥಾನಿಗಳಿಗೆ ಲ್ಯಾಪ್‌ಟಾಪ್ ನೀಡಲಾಗುತ್ತಿತ್ತು. ಆದರೆ ಈ ವರ್ಷ ಖರೀದಿ ಆರಂಭವಾಗಿಲ್ಲ. ತಡವಾಗಬಹುದು, ಆದರೆ ನೀಡದೆ ಇರುವುದಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಪಪಡಿಸಿದೆ. ರಾಜ್ಯಕ್ಕೆ ಅಗ್ರಸ್ಥಾನಿಗಳ ಸಹಿತ ಜಿಲ್ಲಾಮಟ್ಟದಲ್ಲಿ ಮೂವರು ಮತ್ತು ತಾಲೂಕು ಮಟ್ಟದಲ್ಲಿ ಮೂವರು …
Read More »ಸ್ಥಿರತೆಯತ್ತ ಘಟಪ್ರಭಾ,ಮಲಪ್ರಭೆಯರು!ಕೊಯ್ನಾ ಡ್ಯಾಮಿನಿಂದ ಹೆಚ್ಚಿಗೆ ನೀರಿನ ಬಿಡುಗಡೆಯಿಲ್ಲ:
ಸ್ಥಿರತೆಯತ್ತ ಘಟಪ್ರಭಾ,ಮಲಪ್ರಭೆಯರು!ಕೊಯ್ನಾ ಡ್ಯಾಮಿನಿಂದ ಹೆಚ್ಚಿಗೆನೀರಿನ ಬಿಡುಗಡೆಯಿಲ್ಲ:ನೀರಿನ ಮಟ್ಟ ಕಾಯ್ದುಕೊಂಡ ಆಲಮಟ್ಟಿ ತುಂಬಲು ಇನ್ನೂ 13 ಟಿ ಎಮ್ ಸಿ ಬಾಕಿ! ಮಲಪ್ರಭೆಯ ನೀರಾವೃತ್ತಗೊಂಡ ರಾಮದುರ್ಗ ಸುನ್ನಾಳ ಹಣಮಂತ! ಗ್ರಾಮಕ್ಕೆ ಗ್ರಾಮವೇ ಸ್ಥಳಾಂತರ! ಕಳೆದ ವರ್ಷದ್ದೇ ಪುನರಾವರ್ತನೆ!ಕಿಲಬನೂರು,ಗೊಣಗನೂರು ಗ್ರಾಮಸ್ಥರು ಆತಂಕದಲ್ಲಿ! ಬೆಳಗಾವಿ ವಡಗಾವಿಯ ಯಡಿಯೂರಪ್ಪ ಮಾರ್ಗದ ಬದಿಯ ಬೆಳೆಯೆಲ್ಲ ಜಲಮಯ, ಸೋಮವಾರ ಪ್ರವಾಹದ ಆತಂಕ ಕೊಂಚ ಕಮ್ಮಿಯಾಗುತ್ತಿದೆ.ನಿನ್ನೆ ರವಿವಾರ ಏರಿಕೆಯಲ್ಲಿದ್ದ ಆತಂಕ ಇಂದು ಇಳಿಮುಖವಾಗತೊಡಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿಯ ನವಿಲುತೀರ್ಥ …
Read More »ವ್ಯಾಪಕ ಮಳೆ: ನದಿತೀರದ ಗ್ರಾಮಗಳು, ಪರಿಹಾರ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಹಿರೇಮಠ ಭೇಟಿ, ಪರಿಶೀಲನೆ
ಬೆಳಗಾವಿ, ಆ.17 : ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಲಪ್ರಭಾ ನದಿ ತೀರದ ವಿವಿಧ ಗ್ರಾಮಗಳು ಮತ್ತು ಮುಂಜಾಗ್ರತಾ ಕ್ರಮವಾಗಿ ಆರಂಭಿಸಲಾಗಿರುವ ಪರಿಹಾರ(ಕಾಳಜಿ) ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸವದತ್ತಿ ತಾಲ್ಲೂಕಿನ ನವೀಲುತೀರ್ಥ ಜಲಾಶಯಕ್ಕೆ ಮೊದಲು ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ನೀರಿನ ಒಳ ಹರಿವು ಮತ್ತು ಹೊರ ಹರಿವು ಪ್ರಮಾಣದ ಮಾಹಿತಿಯನ್ನು ಪಡೆದುಕೊಂಡರು. ಜಲಾಶಯದ ನೀರಿನ ಮಟ್ಟದ ಮೇಲೆ ನಿರಂತರವಾಗಿ ನಿಗಾ ವಹಿಸಬೇಕು. …
Read More »ಪೋಸ್ಟ್‌ಗಳ ಮೇಲೆ ನಿಗಾ: ಪ್ರಚೋದನಾತ್ಮಕ ಪೋಸ್ಟ್ ಕಳುಹಿಸುವವರ ಮೇಲೆ ಹದ್ದುಗಣ್ಣು
ಬೆಂಗಳೂರು: ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪ್ರಕರಣದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್ ಹಾಕುವವರ ವಿರುದ್ಧ ಕಠಿನ ಕ್ರಮಕ್ಕೆ ಸರಕಾರ ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್ ಗಳು ಹೆಚ್ಚಾಗುತ್ತಿದ್ದು, ಕಾನೂನು ಸುವ್ಯವಸ್ಥೆಗೆ ಸವಾಲಾಗುತ್ತಿರುವುದರಿಂದ ಈ ಕುರಿತು ಮತ್ತಷ್ಟು ಬಿಗಿ ಕ್ರಮ ತೆಗೆದುಕೊಳ್ಳುವುದಕ್ಕೂ ತೀರ್ಮಾನಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್ ಹಾಕುವವರ ಮೇಲೆ ಹದ್ದಿನ ಕಣ್ಣಿಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇತ್ತೀಚಿನ …
Read More »ರಾಯಣ್ಣ ಪ್ರತಿಮೆ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿ: ಸಿದ್ದರಾಮಯ್ಯ ಟ್ವೀಟ್
ಬೆಳಗಾವಿ: ‘ತಾಲ್ಲೂಕಿನ ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಪೊಲೀಸರಿಗೆ ತಿಳಿಸಿದ್ದೇನೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಟ್ವೀಟ್ ಮಾಡಿದ್ದಾರೆ. ‘ಕಾನೂನು ಪ್ರಕಾರ ಅನುಮತಿ ಪಡೆದುಕೊಂಡು, ರಾಯಣ್ಣನ ಅಭಿಮಾನಿಗಳು ಪ್ರತಿಮೆ ಸ್ಥಾಪನೆಗೆ ಮುಂದಾಗಬೇಕು. ಇಂತಹ ಸಂದರ್ಭದಲ್ಲಿ ಪೊಲೀಸರು ಸಂಯಮದಿಂದ ವರ್ತಿಸಬೇಕು’ ಎಂದು ಹೇಳಿದ್ದಾರೆ. ರಾಯಣ್ಣನ ಜಯಂತಿಯ ದಿನವಾದ ಶನಿವಾರ ಅಭಿಮಾನಿಗಳು ಅವರ ಪ್ರತಿಮೆ ಪ್ರತಿಷ್ಠಾಪನೆಗೆ ನಸುಕಿನಲ್ಲಿ ಮುಂದಾಗಿದ್ದರು. ತಡೆದ ಪೊಲೀಸರು ಪ್ರತಿಮೆ ವಶಕ್ಕೆ …
Read More »ಕೊರೊನಾ ಲಾಕ್ಡೌನ್ ನಂತರ ಸಂಸತ್ತಿನ ಮೊದಲ ಮುಂಗಾರು ಅಧಿವೇಶನಕ್ಕೆ ಶುರುವಾಗಿದೆ ಸಿದ್ಧತೆ
ದೆಹಲಿ: ಡೆಡ್ಲಿ ಕೊರೊನಾ ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿರುವ ನಡುವೆಯೇ ಸಂಸತ್ ಮುಂಗಾರು ಅಧಿವೇಶನಕ್ಕೂ ಸಿದ್ಧತೆ ನಡೆದಿದೆ. ಹೀಗಾಗಿ ಸಂಸತ್ ಭವನದಲ್ಲಿ ಅಧಿವೇಶನಕ್ಕಾಗಿ ಸಿದ್ಧತೆ ನಡೆಸಲಾಗಿದ್ದು, ಕೋವಿಡ್-19 ಪ್ರೊಟೋಕಾಲ್ ಅನುಸಾರವಾಗಿ ಸಂಸತ್ ಸದಸ್ಯರಿಗೆ ಸಕಲ ವ್ಯವಸ್ಥೆಗಳನ್ನೂ ಮಾಡಲಾಗಿದೆ. ದೇಶದ ಮೂಲೆ ಮೂಲೆಯಲ್ಲೂ ಕೊರೊನಾ ಜಪ ನಡೆಯುತ್ತಿದೆ. ಮಹಾಮಾರಿಯ ಅಟ್ಟಹಾಸ ಸದ್ಯ ಎಲ್ಲರನ್ನ ಬೆಚ್ಚಿಬೀಳಿಸಿದೆ. ಹೀಗೆ ಕೊರೊನಾ ಸೋಂಕಿನ ಹಿನ್ನೆಲೆ ಮಾರ್ಚ್‌ನಲ್ಲಿ ಘೋಷಿಸಲಾಗಿದ್ದ ಲಾಕ್‌ಡೌನ್ ನಂತ್ರ ಸಂಸತ್ತಿನ ಮೊದಲ ಮುಂಗಾರು ಅಧಿವೇಶನ ಹಲವು ವಿಶೇಷತೆಗಳಿಗೆ …
Read More »ರಸ್ತೆ, ಗಲ್ಲಿ, ಓಣಿಯಲ್ಲಿ ಗಣಪತಿ ಪ್ರತಿಷ್ಠಾಪನೆ ನಿಷೇಧ: ಗಣೇಶೋತ್ಸವ ಆಚರಣೆಗೆ ಮಾರ್ಗಸೂಚಿ ಪ್ರಕಟ
ಧಾರವಾಡ: ಕೋವಿಡ್ -19 ಸೋಂಕು ನಿಯಂತ್ರಿಸಲು ಈ ಬಾರಿ ಆಗಸ್ಟ್ 22 ರಂದು ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣೇಶೋತ್ಸವ ಆಚರಿಸಲು ಕೇಂದ್ರ ಗೃಹ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರ ಹೊರಡಿಸಿರುವ ನಿರ್ದೇಶನಗಳ ಅನುಸಾರವಾಗಿ ಧಾರವಾಡ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿರುವ ಮಾರ್ಗಸೂಚಿಗಳನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಿಸಿದ್ದಾರೆ. ಗಣೇಶ ಚತುರ್ಥಿ ಹಬ್ಬವನ್ನು ಸರಳವಾಗಿ ಹಾಗೂ ಭಕ್ತಿಪೂರ್ವಕವಾಗಿ ದೇವಸ್ಥಾನಗಳ ಒಳಗೆ ಅಥವಾ ಮನೆಗಳಲ್ಲಿ ಆಚರಿಸುವುದು. ಗಣೇಶ ಚತುರ್ಥಿ …
Read More »ಕೊಪ್ಪ ತಾಲ್ಲೂಕು ಅತಿವೃಷ್ಟಿಯಿಂದ ಸಂಕಷ್ಟದಲ್ಲಿದ್ದವರ ಅಳಲು ಜಿಲ್ಲಾ ಪತ್ರಕರ್ತರ ಸಂಘ ಸ್ಪಂದನೆ .
ಕೊಪ್ಪ ತಾಲ್ಲೂಕಿನ ಜಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿನಾಯಕ ನಗರದ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಗುಡ್ಡ ರಸ್ತೆ ಮೇಲೆ ಕುಸಿದು 10 ದಿನದಿಂದ ಜನರು ಸಂಕಷ್ಟದಲ್ಲಿದ್ದರು . ಸ್ಥಳೀಯರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ದೂರು ನೀಡಿದ್ದರು ಇದನ್ನು ಗಮನಿಸಿ ಚಿಕ್ಕಮಗಳೂರಿಂದ ಪ್ರಯಾಣ ಬೆಳೆಸಿದ ಜಿಲ್ಲಾ ಸಂಘದ ಪದಾಧಿಕಾರಿಗಳು ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಕೊಪ್ಪ ತಹಸೀಲ್ದಾರ್. ತಾಲೂಕು ಪಂಚಾಯಿತಿ ಇಒ ಹಾಗೂ ಪಿಡಿಒ ಗಮನಕ್ಕೆ ತರಲಾಯಿತು ಆದರೂ .ತೆರವು ಕಾರ್ಯದ ವಿಳಂಬಕ್ಕೆ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News