ಬೆಂಗಳೂರು:- ಸಿಎಎ ಮತ್ತು ಎನ್ಆರ್ಸಿ ಪ್ರತಿಭಟನೆ ವೇಳೆ ಸಾಕಷ್ಟು ಶ್ರಮ ವಹಿಸಿದ್ದೀರಿ ಎಂದು ಬೆಂಗಳೂರು ನಗರ ನಿರ್ಗಮಿತ ಪೊಲೀಸ್ ಕಮೀಷನ್ ಭಾಸ್ಕರ್ ರಾವ್ ಅವರು ಹೇಳಿದರು. ನಗರದಲ್ಲಿ ವೈರ್ಲೆಸ್ ಮೂಲಕ ಪೊಲೀಸ್ ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಪ್ರಯತ್ನ ಪಟ್ಟಿದ್ದೀರಿ ನಂತರ ಕೊರೊನಾ ವೇಳೆ ಹಗಲು ರಾತ್ರಿ ಕರ್ತವ್ಯ ನಿರ್ವಹಿಸಿ ಕೊರೊನಾ ನಿಯಂತ್ರಣಕ್ಕೆ ಶ್ರಮ ಹಾಕಿದ್ದೀರಿ. ಸೋಂಕು ತಗುಲಿದ ವೇಳೆ ನೀವು ದಕ್ಷವಾಗಿ ಕೆಲಸ …
Read More »ಸಚಿವ ಬಿ.ಸಿ.ಪಾಟೀಲ್ ಕುಟುಂಬಕ್ಕೆ ಪಾಸಿಟಿವ್.
ಹಾವೇರಿ:- ರಾಜ್ಯದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಪತ್ನಿ, ಅಳಿಯ ಸೇರಿದಂತೆ ಒಟ್ಟು ಐದು ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. ಕೋವಿಡ್ ಸೋಂಕು ಕುರಿತು ಸಚಿವರು ತಮ್ಮ ಟ್ವಿಟರ್ ಖಾತೆ ಮೂಲಕ ತಿಳಿಸಿದ್ದಾರೆ, ನನ್ನ ಶ್ರೀಮತಿ, ಅಳಿಯ ಹಾಗೂ ಹಿರೇಕೆರೂರಿನ ನಿವಾಸದ ಸಿಬ್ಬಂದಿ ವರ್ಗದವರು ಸೇರಿದಂತೆ ಒಟ್ಟು ಐವರಿಗೆ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿದೆ. ಅವರನ್ನು ನಿರ್ದಿಷ್ಟವಾದ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಲಾಗಿದೆ. …
Read More »ಸರ್ಕಾರದ ಭ್ರಷ್ಟಾಚಾರ ಕೋರ್ಟ್ ಮೂಲಕ ತನಿಖೆ.- ಡಿಕೆಶಿ.
ಮಂಗಳೂರು:- ಕೊರೊನಾಗಿಂತ ಭೀಕರವಾಗಿದೆ ಬಿಜೆಪಿಯ ಭೃಷ್ಟಾಚಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಭೃಷ್ಟಾಚಾರದ ಬಗ್ಗೆ ಕೋರ್ಟ್ ಮೂಲಕ ತನಿಖೆ ನಡೆಸುತ್ತೇವೆ. ನ್ಯಾಯಾಧೀಶರು ಈ ಪ್ರಕರಣವನ್ನು ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಅಲ್ಲದೆ, ರಾಜ್ಯ ಸರ್ಕಾರದಿಂದ ಲೀಗಲ್ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನೋಟಿಸ್ ಗೆ ನಾವು ಉತ್ತರ ಕೊಡುತ್ತೇವೆ. ನಮ್ಮಲ್ಲಿ ಬೇಕಾದ ಎಲ್ಲಾ ದಾಖಲೆ ಇದೆ. ನಮಗೂ ಕಾನೂನು ಹೋರಾಟ ಮಾಡುವುದಕ್ಕೆ …
Read More »ಅಯೋಧ್ಯೆ: ಮೋದಿಯವರು ಪ್ರತಿಷ್ಠಾನ ಮಾಡಲಿರುವ ಬೆಳ್ಳಿ ಇಟ್ಟಿಗೆ.
ರಾಮಜನ್ಮಭೂಮಿಯನ್ನು ವಿಶ್ವದ ಗಮನ ಸೆಳೆಯುವಂತೆ ರೂಪಿಸಲು ಕೇಂದ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಆಗಸ್ಟ್ 5ರ ಭೂಮಿಪೂಜೆ ಸಮಾರಂಭದ ವೇಳೆ 326 ಕೋಟಿ ರೂ. ವೆಚ್ಚದಲ್ಲಿ ರಾಮ ಮಂದಿರಕ್ಕೆ ಸಂಬಂಧಿಸಿದ ವಿವಿಧ ನಿರ್ಮಾಣ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಲಿದೆ.ಭೂಮಿಪೂಜೆ ಬಳಿಕ ಮಂದಿರ ನಿರ್ಮಾಣ ಸೇರಿದಂತೆ ಸುತ್ತಮುತ್ತಲಿನ 57 ಎಕರೆಗಳಲ್ಲಿ ರಾಮ ದೇಗುಲ ಸಂಕೀರ್ಣ, ರಾಮ್‌ಕಥಾ ಪುಂಜ್ ಪಾರ್ಕ್ ನಿರ್ಮಾಣಗೊಳ್ಳಲಿವೆ. ನಕ್ಷತ್ರ ವಾಟಿಕಾ, ಮ್ಯೂಸಿಯಂ, ದೇಶದ ಅತಿ ದೊಡ್ಡ ಧಾರ್ಮಿಕ ಗ್ರಂಥಾಲಯ ಸೇರಿದಂತೆ …
Read More »ಸವದಿಯ ದೆಹಲಿಯಾತ್ರೆ ಊಹಾಪೋಹಗಳಿಗೆ ಎಡೆಮಾಡಿದೆ.
ಬೆಂಗಳೂರು:- ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಚುರುಕುಗೊಳ್ಳುತ್ತಿರುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿಯ ಯಾತ್ರೆ ಹಲವಾರು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಬಿ.ಎಸ್ ಯಡಿಯೂರಪ್ಪ ಒಂದು ವರ್ಷದ ಸಾಧನೆ ಸಮಾರಂಭದ ದಿನದಂದೇ ಸವದಿ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹಾಗೂ ಇತರ ಕೇಂದ್ರ ನಾಯಕರುಗಳನ್ನು ಭೇಟಿ ಮಾಡಿದ್ದು ಕುತೂಹಲ ಕೆರಳಿಸಿದೆ. ವರ್ಷದ ಸಂಭ್ರಮಾಚರಣೆ ಬೆನ್ನಲ್ಲೇ ಕಮಲದಲ್ಲಿ ಬಂಡಾಯವು ಬಿ.ಎಸ್.ವೈಯವರಿಗೆ ಹೊಸ ತಲೆನೋವು ತಂದೊಡ್ಡಿದೆಯೇ ಎಂಬ ಪ್ರಶ್ನೆ …
Read More »ವಿಜಯಪುರ : ಇಲ್ಲಿಯವರೆಗೆ ೨೧೮೪ ಗುಣಮುಖರೋಗಿಗಳು ಆಸ್ಪತ್ರೆಯಿಂದ ಬಿಡುಗಡೆ -ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್
ವಿಜಯಪುರ : ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು ೨೧೮೪ ಗುಣಮುಖರೋಗಿಗಳನ್ನು ಬಿಡುಗಡೆಗೊಳಿಸಲಾಗಿದ್ದು, ಆಸ್ಪತ್ರೆಯಲ್ಲಿ ಸದ್ಯ ೯೧೨ ಕೋವಿಡ್ -೧೯ ಪಾಸಿಟಿವ್ ಸಕ್ರಿಯ ರೋಗಿಗಳಿದ್ದು, ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ. ಒಟ್ಟು ೩೬ ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಅವರು ತಿಳಿಸಿದ್ದಾರೆ.ಅದರಂತೆ ಜಿಲ್ಲೆಯ ವಿಜಯಪುರ ನಗರದಲ್ಲಿ ೨೦೨೨, ಬ.ಬಾಗೇವಾಡಿಯಲ್ಲಿ ೧೮೭, ಬಬಲೇಶ್ವರದಲ್ಲಿ ೫೨, ಚಡಚಣದಲ್ಲಿ ೩೦, ದೇ.ಹಿಪ್ಪರಗಿಯಲ್ಲಿ ೫೬, ಇಂಡಿಯಲ್ಲಿ ೧೫೯, ಕೋಲ್ಹಾರದಲ್ಲಿ ೩೮, ಮುದ್ದೇಬಿಹಾಳದಲ್ಲಿ ೧೪೮, ನಿಡಗುಂದಿಯಲ್ಲಿ ೩೫, ಸಿಂದಗಿಯಲ್ಲಿ ೧೬೫, …
Read More »ಯಡಿಯೂರಪ್ಪ ಪರ ಮಠಾಧೀಶರು, ಸಿಎಂ ಹುದ್ದೆಯಿಂದ ಕೆಳಗಿಳಿಸಿದರೆ ಹೋರಾಟದ ಎಚ್ಚರಿಕೆ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಹುದ್ದೆಯಿಂದ ಕೆಳಗಿಳಿಸಬಾರದು ಎಂದು ವಿವಿಧ ಮಠಾಧೀಶರು ಒತ್ತಾಯಿಸಿದ್ದಾರೆ.ತಿಪಟೂರು ರುದ್ರಮುನಿ ಶ್ರೀ ಸೇರಿದಂತೆ ಹಲವು ಸ್ವಾಮೀಜಿಗಳು ಈ ಕುರಿತಾಗಿ ಆಗ್ರಹಿಸಿದ್ದಾರೆ. ಸಿಎಂ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರೆ ವೀರಶೈವ ಲಿಂಗಾಯತ ಸಮಾಜದ ಶ್ರೀಗಳು ತಿರುಗಿ ಬೀಳುವ ಎಚ್ಚರಿಕೆ ನೀಡಿದ್ದಾರೆ.ಸಮಾಜದ ಶ್ರೀಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪರ ನಿಂತಿದ್ದಾರೆ. ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಬೆಂಬಲ ನೀಡಿದ್ದು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಕಾರಣರಾಗಿದ್ದಾರೆ. ಅವರನ್ನು …
Read More »ಪಂಜಾಬ್‌ನಲ್ಲಿ ನಕಲಿ ಮದ್ಯ ಸೇವನೆ; ಮೃತರ ಸಂಖ್ಯೆ 98ಕ್ಕೆ ಏರಿಕೆ
ಚಂಡೀಗಡ: ಪಂಜಾಬ್‌ನಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ ಭಾನುವಾರ 98ಕ್ಕೆ ಏರಿಕೆಯಾಗಿದೆ.‘ಹೊಸ ಹನ್ನೆರಡು ಮೃತ ಪ್ರಕರಣಗಳು ತರ್ನ್ ಟರಾನ್ ಜಿಲ್ಲೆಯಲ್ಲಿ ವರದಿಯಾಗಿವೆ. ಈವರೆಗೆ ಈ ಜಿಲ್ಲೆಯಲ್ಲಿ ಎಪ್ಪತ್ತೈದು ಮಂದಿ ಮೃತರಾಗಿದ್ದಾರೆ’ ಎಂದು ಜಿಲ್ಲಾಧಿಕಾರಿ ಕುಲ್ವಂತ್ ಸಿಂಗ್ ತಿಳಿಸಿದ್ದಾರೆ.‘ಮೃತರ ಕುಟುಂಬದವರು ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸುವುದಕ್ಕೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪಡೆದ ಮಾಹಿತಿಯಿಂದಾಗಿ ಎಪ್ಪತ್ತೈದು ಮಂದಿ ಮೃತರಾಗಿರುವುದು ತಿಳಿದುಬಂದಿದೆ. …
Read More »ಭಾರತ ಸೇರಿ 31 ದೇಶದವರು ಈ ದೇಶಪ್ರವೇಶಿಸುವಂತಿಲ್ಲ!
ಕುವೈತ್, ಆಗಸ್ಟ್ 02: ಕೊರೊನಾವೈರಸ್ ಸೋಂಕು ಹರಡದಂತೆ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಇಲ್ಲಿನ ಸರ್ಕಾರವು, ವಿಮಾನಯಾನವನ್ನು ಮತ್ತೆ ಆರಂಭಿಸಿದೆ. ಆದರೆ ಭಾರತ ಸೇರಿದಂತೆ 31 ದೇಶಗಳ ಪ್ರಯಾಣಿಕರು ಸದ್ಯ ಕುವೈತ್ ಪ್ರವೇಶಿಸುವಂತಿಲ್ಲ, ಆ ದೇಶಗಳಿಂದ ವಾಣಿಜ್ಯ ವಿಮಾನ ಇಲ್ಲಿ ಲ್ಯಾಂಡ್ ಆಗುವಂತಿಲ್ಲ ಎಂದು ಕಠಿಣ ಆದೇಶ ಹೊರಡಿಸಲಾಗಿದೆ.ನಿರ್ಬಂಧಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ, ಇರಾನ್, ಚೀನಾ, ಬ್ರೆಜಿಲ್, ಲೆಬನಾನ್, ಸ್ಪೇನ್, ಸಿಂಗಪುರ, ಈಜಿಪ್ಟ್ ಹಾಗೂ ಶ್ರೀಲಂಕಾ ಪ್ರಮುಖವಾಗಿವೆ. ಒಟ್ಟು 31 …
Read More »ಇಂದು ರಾಜ್ಯದಲ್ಲಿ 5532 ,ಬೆಂಗಳೂರು 2105, ಬಳ್ಳಾರಿ 377, ಬೆಳಗಾವಿ 172, ಗದಗ 88, ಕೊಪ್ಪಳ 87 ಜನರಿಗೆ ಸೋಂಕು ದೃಢ
ಬೆಂಗಳೂರು : ಇಂದು ರಾಜ್ಯದಲ್ಲಿ 5532 ,ಬೆಂಗಳೂರು 2105, ಬಳ್ಳಾರಿ 377, ಬೆಳಗಾವಿ 172, ಗದಗ 88, ಕೊಪ್ಪಳ 87,ಕಲಬುರ್ಗಿ 238, ಮೈಸೂರು 238, ರಾಯಚೂರು 212, ಉಡುಪಿ 182, ಧಾರವಾಡ 181,ದಾವಣಗೆರೆ 178, ದಕ್ಷಿಣ ಕನ್ನಡ 163, ಹಾವೇರಿ 146, ಹಾಸನ 142, ಬೀದರ್ 135, ಬಾಗಲಕೋಟೆ 131, ವಿಜಯಪುರ 113, ಶಿವಮೊಗ್ಗ 99, ಮಂಡ್ಯ 97, ಗದಗ 88, ರಾಮನಗರ 71, ಚಿಕ್ಕಬಳ್ಳಾಪುರ 55, ಕೋಲಾರ 51, …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News