Breaking News
ಬದಾಮಿ ನಗರದಲ್ಲಿ  ಬಿ ರಾಜ್ ಶಟ್ಟಿ ಸಾರಥ್ಯದಲ್ಲಿ,,, “ಬಿ ನ್ಯೂಸ್ ಅಲರ್ಟ್ ಡಿಜಿಟಲ್ ಲೈವ್ಹ್ ಚಾನಲ್ ಅನಾವರಣ,,,!!

ಬದಾಮಿ ನಗರದಲ್ಲಿ ಬಿ ರಾಜ್ ಶಟ್ಟಿ ಸಾರಥ್ಯದಲ್ಲಿ,,, “ಬಿ ನ್ಯೂಸ್ ಅಲರ್ಟ್ ಡಿಜಿಟಲ್ ಲೈವ್ಹ್ ಚಾನಲ್ ಅನಾವರಣ,,,!!

ಬದಾಮಿ: ಇಂದು ಬದಾಮಿ ನಗರದ ಅಂಬೇಡ್ಕರ್ ಭವನದಲ್ಲಿ ಬಿ ರಾಜ್ ,,,ಶಟ್ಟಿ ಸಾರಥ್ಯದಲ್ಲಿ ” ಬಿ ನ್ಯೂಸ್ ಅಲಟ್೯ ಡಿಜಿಟಲ್ ಲೈವ್ಹ್ ಚಾನಲ್ ಸ್ಟೂಡಿಯೋ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಮುಖ್ಯ ಅಥಿತಿಗಳಾಗಿ ಮಾತನಾಡಿದ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಡಿ ಬಿ ವಿಜಯಶಂಕರ್ ಮಾತನಾಡಿ ವಿಶ್ವ ವಿಖ್ಯಾತ ಬದಾಮಿ ನಗರದಲ್ಲಿ ಇಂತಹ ಲೈವ್ಹ್ ಚಾನಲ್ ಮಾಡಿದ್ಸು ನಗರಕ್ಕೆ ಕೀರ್ತಿ ತಂದು ಕೊಟ್ಟ ಗೌರವ ಇವರಿಗೆ ಸಲ್ಲುತ್ತದೆ. ಆರ್ಥಿಕವಾಗಿ ಬಹಳ ಕಷ್ಟದಲ್ಲಿ ಇದ್ದರೂ ಕೂಡ ಇಂತಹ ಸಾಹಸ ಮಾಡಿದ್ದು ಶ್ಲಾಘನೀಯ.

ಪೂಜ್ಯರು,ಹಾಗೂ ಮಾಹಾಂತೇಶ ಅಣ್ಣನವರು ಒಂದುಷ್ಟು ಜಾಹೀರಾತು ಮೂಲಕ ಆರ್ಥಿಕ ಸಹಾಯ ಮಾಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದಿಂದ 4 ಲಕ್ಷ ಅಪಘಾತ ವಿಮೆ ಹಾಗೂ ಸದಸ್ಯತ್ವ ಕಾರ್ಡ ಪೂಜ್ಯರ ಮೂಲಕ ನೀಡಲಾಯಿತು.
ನಂತರ ಮುಖ್ಯ ಅಥಿತಿಗಳಾಗಿ ಮಾತನಾಡಿದ ಮಹಾಂತೇಶ ಹಟ್ಟಿ ಅವರು ಮಾತನಾಡಿ ಇಂದು ಬಸವರಾಜ್ ಅವರು ನಮ್ಮ ನಗರದಲ್ಲಿ ಈ ಬಿ ನ್ಯೂಸ್ ಅಲಟ್೯ ಲೈವ್ಹ್ ಚಾನಲ್ ಮಾಡಿದ್ದು ಬಹಳ ಖುಷಿ ತಂದಿದೆ, ಮಾಧ್ಯಮ ಬಹಳ ಪವಿತ್ರವಾದ ಶಾಸಕಾಂಗಗಳಲ್ಲಿ ನಾಲ್ಕನೆ ರಂಗವಾಗಿದೆ. ಇಂತಹ ಕ್ಷೇತ್ರದಲ್ಲಿ ನಮ್ಮ ಬದಾಮಿ ಹುಡುಗ ಇಂತಹ ದೊಡ್ಡ ಸಾಹಸ ಮಾಡಿದ್ದಾನೆ. ಈ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಿ ಗೌರವಿಸುವ ಮೂಲಕ ಮಾನವಿಯತೆ ಮೆರೆದ ಬಸುವರಾಜ್ ಅವರ ಈ ಕಾರ್ಯ ಶ್ಲಾಘನೀಯ ನಾನು ಯಾವತ್ತೂ ಅವರೊಂದಿಗೆ ಇದ್ದೇನೆ ನನ್ನಿಂದ ಏನೇ ಸಹಾಯ ಸಹಕಾರ ಬೇಕಾದರೂ ಮಾಡಲು ಸಿದ್ದ ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ನೀಲಗುಂದ ಕ್ಷೇತ್ರದ ಪೂಜ್ಯರಾದ ಶ್ರೀ ಮಂಜುನಾಥ ಅಪ್ಪಾಜಿಯವರು ಮಾತನಾಡಿ ಬಸುವರಾಜ್ ಅವರು ನಮ್ಮ ಪರಮ ಶಿಸ್ಯೆ ಬಹಳ ಕ್ರಿಯಾಶೀಲ ಯುವಕ ಈ ಸುದ್ದಿ ಸಂಸ್ಥೆಯನ್ನು ಈ ನಗರದಲ್ಲಿ ಅನಾವರಣ ಮಾಡುವ ಮೂಲಕ ದೊಡ್ಡ ಸಾಹಸ ಮಾಡಿದ್ದಾನೆ. ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆದ ಒಂದು ಘಟನೆಯನ್ನು ಕ್ಷಣಾರ್ಧದಲ್ಲಿ ಪ್ರಸಾರ ಮಾಡಿ ಸಮಾಜ ಹಾಗೂ ಸರಕಾರದ ಗಮನಕ್ಕೆ ತರುವ ಈ ಪತ್ರಿಕಾ ಮಾಧ್ಯಮ ಬಹಳ ಶ್ರೇಷ್ಠ ಕಾಯಕ ಇದಾಗಿದೆ.

ಬಸವರಾಜ್ ಅವರು ಸಣ್ಣ ವಯಸ್ಸು ಬಹಳ ಜಾಗೃತೆಯಿಂದ ಸಮಾಜವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸುದ್ದಿ ಹೋರ ಬರಬೇಕು ಹಾಗೂ ಆಡಳಿತರೂಡ ಅಧಿಕಾರಿ ಶಾಹೀಗಳ ಸುದ್ದಿ ನೋಡಿದ ತಕ್ಷಣ ವಾಸ್ತವ ಸತ್ಯದ ಪರಿಕಲ್ಪನೆ ಮೂಡುವಂತಿರಲಿ ಎಂದು ಶುಭ ಕೋರಿ ಆರ್ಶಿವದಿಸಿದರು. ಈ ಸಮಾರಂಭದಲ್ಲಿ ಪೂಜ್ಯರು ಹಾಗೂ ಗಣ್ಯರು ನಗರದ ಪೌರ ಕಾರ್ಮಿಕರಿಗೆ ಗೌರವ ಸನ್ಮಾನ ಮಾಡಿ ಪ್ರಶೌಂಶನಾ ಪತ್ರ ನೀಡಿ ಅಭಿನಂದಿಸಲಾಯಿತು , ಈ ಸಂದರ್ಭದಲ್ಲಿ ಕಾರ್ಯಕ್ರಮ ಉಧ್ಘಾಟಿಸಿದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶ್ರೀ ಮಹಾಂತೇಶ ಹಟ್ಟಿ ಮುಖ್ಯ ಥಿತಿಗಾಳಾದ ಜಿಲ್ಲಾ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ಡಿ ಬಿ ವಿಜಯಶಂಕರ್ ಮತ್ತು ಶ್ರೀ ಕನಕಪ್ಪ ಶಾಂತಗೇರಿ
ಅಧ್ಯಕ್ಷರು ಕಾನಿಪ ಧ್ವನಿ ಬದಾಮಿ

ಶ್ರೀ ಬಸವರಾಜ್ ಚಂಚಿ ಮಾಲೀಕರು “ಬಿ ನ್ಯೂಸ್ ಅಲರ್ಟ್ ಬದಾಮಿ,
ಶ್ರೀ ರುದ್ರೇಶ ಹುಣಸಿಗಿಡದ
ಶ್ರೀ ಹುಲಗಪ್ಪ ಭೋವಿ
ಶ್ರೀ ಶಹಜ್ ಪವಾರ್
ಶ್ರೀ ಸ್ನೇಕ್ ಮಾಂತೇಶ ಸೇರಿದಂತೆ ಅನೇಕರು ಉಪಸ್ಥಿತಿ ಇದ್ದರು ಕಾರ್ಯಕ್ರಮದ ನಿರೂಪಣೆಯನ್ನು ಓಂ ಕಾರ್ ಶಟ್ಟಿ ನಡೆಸಿ ಕೊಟ್ಟರು.

About vijay_shankar

Check Also

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕನ್ನಡ ಜನಪದ ರಾಜ್ಯೋತ್ಸವ ಸಂಭ್ರಮ ೨೦೨೫

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕನ್ನಡ ಜನಪದ ರಾಜ್ಯೋತ್ಸವ ಸಂಭ್ರಮ ೨೦೨೫

ಮುದ್ದೇಬಿಹಾಳ : ಜನರಿಂದ ಜನರ ಬಾಯಿಂದ ಬಾಯಿಗೆ ಹರಡಿ ಹಾಡುವ ಪ್ರತಿಯೊಂದು ಪದಗಳು ಅವು ನಮ್ಮ ಒಊರ್ವಜರು ಕೊಟ್ಟ ಜನಪದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.