ರೋಣ : ತಾಲ್ಲೂಕಿನ ಉಪ ಕೃಷಿ ನಿರ್ದೇಶಕರು ೨ ಕಾರ್ಯಾಲಯ ರೋಣ ಸದರಿ ಇಲಾಖೆಯ ವತಿಯಿಂದ ಇಂದು ತಾಲೂಕಿನ RSK ಹೊಳೆ ಆಲೂರು ನಗರದಲ್ಲಿ ಸಹಾಯಕ ಕೃಷಿ ಅಧಿಕಾರಿಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಬಸವರಾಜ,ಭಜಂತ್ರಿ ಅವರು ಇಂದು ತಮ್ಮ ಉದ್ದೆಯಿಂದ ನಿವೃತ್ತಿ ಹೊಂದಿದರು ೧೯೮೬ ರಿಂದ ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ಗ್ರಾಮ ಸೇವಕರಾಗಿ ಸುಧೀರ್ಘ ೧೧ ವರ್ಷ ಕೆಲಸ ಮಾಡಿ ಅಲ್ಲಿಂದ ಯಲಬುರ್ಗಾ ತಾಲ್ಲೂಕಿನಲ್ಲಿ ೧೬ ವರ್ಷ ಸೇವೆ ಮಾಡಿ ನಂತರ

ಈಗ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ೦೭ ವರ್ಷ ದಿಂದ ತಮ್ಮ ಪ್ರಾಮಾಣಿಕ ಸೇವೆಯನ್ನು ಮಾಡಿ ಅಪಾರ ರೈತರ ಹಾಗೂ ಜನ ಮಾನಸದಲ್ಲಿ ಉಳಿದ ಸ್ನೇಹ ಜೀವಿ ಬಸವರಾಜ್ ಅವರು, ತಮ್ಮ ೩೫ ವರ್ಷಗಳ ಈ ವೃತ್ತಿ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಬಾರದೇ ಇಲಾಖೆ ಘನತೆಯನ್ನು ಎತ್ತಿ ಹಿಡಿದು ರೈತರ ಜೀವನಾಡಿಯಾಗಿದ್ದ ಬಸವರಾಜ್ ಅವರ ಈ ನಿವೃತ್ತಿ ಹೊಂದುತ್ತಿರುವ ವಿಷಯ ತಿಳಿದು ಅವರು ಈ ವರೆಗೂ ಎಲ್ಲಲ್ಲೀ ಕೆಲಸ ಮಾಡಿದ್ರೊ ಗಂಗಾವತಿ, ಯಲಬುರ್ಗಾ, ದಿಂದ ಅವರ ಅಭಿಮಾನಿ ಬಳಗ ಬಂದು ಬಸವರಾಜ್ ಅವರ ಕರ್ತವ್ಯವನ್ನು,
ಅವರ ಪ್ರಾಮಾಣಿಕ ಸೇವಾ ಗುಣಗಳನ್ನು ಬಣ್ಣಿಸಿ ಗೌರವ ಸನ್ಮಾನ ಮಾಡುವ ಮೂಲಕ ಇಂದು ಇಂತಹ ಪ್ರಾಮಾಣಿಕ ಅಧಿಕಾರಿಗಳು ನಿವೃತ್ತಿ ಹೊಂದುತ್ತಿರುವುದರಿಂದ ಕೃಷಿ ಇಲಾಖೆ ಬಡವ ಆಗತ್ತಿದೆ ,ಇತ್ತೀಚಿನ ದಿನಗಳಲ್ಲಿ ಬರುವ ಅಧಿಕಾರಿಗಳಲ್ಲಿ ಸಹನೆ,ಅನುಭವ,ಸ್ಪಷ್ಟವಾಗಿ ಮಾಹಿತಿ ಕೊರತೆ ಇದೆ ೧೯೮೪ ರಿಂದ ಸೇವೆ ಮಾಡುತ್ತಿರುವ ಎಲ್ಲ ಬ್ಯಾಚ್ ಖಾಲಿ ಆಗುತ್ತಿದೆ ಇಂತಹ ಸಮಾನ,ಮನಸ್ಕರ ಇರೊ ಅಧಿಕಾರಿಗಳು ಮುಂದೆ ಬರೊದು ಬಹಳ ವಿರಳ ಆ ನಿಟ್ಟಿನಲ್ಲಿ ಬಸವರಾಜ ಅವರು ಸರಳ ವ್ಯಕ್ತಿತ್ವದ ಮನುಷ್ಯ ,ಅವರ ಸೇವೆ ಇಲಾಖೆಗೆ ಅನನ್ಯ ,ಅವರಿಗೆ ಆ ಭಗವಂತ ಉತ್ತಮ ಆರೋಗ್ಯ ಕರುಣಿಸಲಿ ಎಂದು ಎಲ್ಲಾ ಅಧಿಕಾರಿ ಶಾಹಿ, ಹಾಗೂ ರೈತ ಮುಖಂಡರು ಶುಭ ಕೋರಿದರು,

ಈ ಸಂಧರ್ಭದಲ್ಲಿ ಸೊಳೇಭಾವಿ ಗ್ರಾಮದ ಕೊರಮ ಸಮಾಜದ ವತಿಯಿಂದ ಗಾಯತ್ರಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರೋಮಣ್ಣ ಭಜಂತ್ರಿ ಹಾಗೂ ಸಮಾಜದ ಅಧ್ಯಕ್ಷ ಬಸಪ್ಪ ಭಜಂತ್ರಿ, ಹಾಗೂ ಪತ್ರಕರ್ತ ಹನಮಂತ ಹಿರೇಮನಿ,ಸಂಪಾದಕ ಡಿ,ಬಿ,ವಿಜಯಶಂಕರ್,ಮುಸ್ತಫಾ ಮಾಸಾಪತಿ , ಬಸವರಾಜ್ ಅವರಿಗೆ ಗೌರವ ಸತ್ಕಾರ ಸನ್ಮಾನ ಮಾಡಿ ನೆನಪಿನ ಕಾಣಿಕೆ ನೀಡಿ ಶುಭ ಕೋರಲಾಯಿತು,

ಸದರಿ ಈ ನಿವೃತ್ತಿ ಬಿಳ್ಕೋಡಿಗೆ ಸನ್ಮಾನ ಸಮಾರಂಭದ ಘನ ಅಧ್ಯಕ್ಷತೆಯನ್ನು ಶ್ರೀ ರುದ್ರೇಶ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು
ಹಾಗೂ ಕಾರ್ಯಕ್ರಮದ ಮುಖ್ಯ ಅಥಿತಿ ಸ್ಥಾನ ಶ್ರೀ ವಿರೇಶ ಹುನಗುಂದ DDA ,1 ಶ್ರೀ ನಾಗನಗೌಡ್ರ ರಡ್ಡಿ DDA 2 ರೋಣ,ಶ್ರೀ ರವೀಂದ್ರಗೌಡ ಪಾಟೀಲ ADA ರೋಣ ಉಪಸ್ಥಿತಿ ಇದ್ದರು ಇದೇ ಸಂದರ್ಭದಲ್ಲಿ ಇವತ್ತು ಶ್ರೀಮತಿ ಗಂಗಾದೇವಿ ಪಾಟೀಲ DDA 2, ರೋಣ ಅವರು ಸಹ ನಿವೃತ್ತಿ ಹೊಂದಿದರು ಅಪಾರ ರೈತರ ಅಭಿಮಾನ ಗೆದ್ದು ಇಲಾಖೆಯಲ್ಲಿ ಒಳ್ಳೆಯ ಹೆಸರು ಮಾಡಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ನಾವು ನಿವೃತ್ತಿ ಹೊಂದುತ್ತಿರುವುದು ಬಹಳ ಸಂತೋಷದ ವಿಷಯ ಎಂದು ಬಸವರಾಜ್ ಅವರು ಅಂದಿನ ತಮ್ಮ ಜೀವನದ ಅನುಭವ

ಹಾಗೂ ಇಲಾಖೆಯ ಕಠಿನ ಅಧಿಕಾರಿಯ ಘತ್ತಿನ ಬಗ್ಗೆ ಎಚ್ಚಿರಿಸುವ ಜೊತೆ ಯತಾ ರಾಜ ,ತತಾ ಪ್ರಜೆ ,ಎಂದು ಇಲಾಖೆಗೆ ಕಿವಿ ಮಾತು ಹೇಳಿ ಸನ್ಮಾನಿಸಿದ ಅಪಾರ ರೈತ ಬಾಂದವರಿಗೆ,ಇಲಾಖೆ ಅಧಿಕಾರಿಗಳಿಗೆ ಧನ್ಯವಾದ ಹೇಳಿದರು, ಬಸವರಾಜ್ ಅವರ ಬಗ್ಗೆ ಶ್ರೀ ವ್ಹಿ ,ಎಸ್ ಶಾಂತಗೇರಿ,ಹಾಗೂ ಶ್ರೀಮತಿ ಸಾವಿತ್ರಿಬಾಯಿ ಹೊಸಗೌಡ್ರ, ಶ್ರೀ ಪಲ್ಲೇದ ಎ,ಜಿ, ಶ್ರೀ ಡಿ ಬಿ ವಿಜಯಶಂಕರ್, ಶ್ರೀ ವೀರಣ್ಣ,ಗಡಾದ,ಹಾಗೂ ರೈತರಾದ ಕಳಕಪ್ಪ ಅವರು ಬಸವರಾಜ್ ಅವರ ಕರ್ತವ್ಯ ನಿಷ್ಟೇಯನ್ನ ಸ್ಮರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಶಿವಪುತ್ರಪ್ಪ ಆರ್ ದೊಡ್ಡಮನಿ AAO ರೋಣ ಹಾಗೂ ವಂದನಾರ್ಪಣೆಯನ್ನು ಶ್ರೀಮತಿ ಸಾವಿತ್ರಿಬಾಯಿ ಹೊಸಗೌಡ್ರು ವಂದಿಸಿದರು.
