
ಕೂಡಲಸಂಗಮ : ಹುನಗುಂದ ತಾಲೂಕಿನ ಸುಕ್ಷೇತ್ರ ಕೂಡಲಸಂಗಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹ ಕರಾದ, ಶ್ರೀ ಶಿವಪ್ಪ ನಿಂಗಪ್ಪ ಮಾಟೂರು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀ ಐ,ಎನ್ ಹುದ್ದಾರ ಇವರ ಕರ್ತವ್ಯವನ್ನು ಮೆಚ್ಚಿ ಪ್ರಸಕ್ತ ೨೦೨೧ನೇ ಸಾಲಿನ ಈ ರಾಜ್ಯ ಪ್ರಶಸ್ತಿ ಕಳೆದ ಕರೋನಾ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೋರೆದು ಸಾರ್ವಜನಿಕ ರಂಗದಲ್ಲಿ ಮುಂಜಾಗ್ರತಾ ಕ್ರಮ ಹಾಗೂ ಕೂಡಲಸಂಗಮದ ಅಭಿವೃದ್ಧಿ ಸಲುವಾಗಿ ನಿರಂತರ ೪ ಸಲ ಗಾಂಧಿ ಪುರಸ್ಕಾರವನ್ನು ಪಡೆದ ಕೀರ್ತಿ ಕೂಡಲಸಂಗಮ ಗ್ರಾಮ ಪಂಚಾಯತಿಗೆ ಸಲ್ಲುತ್ತದೆ.

ತಮ್ಮ ಪ್ರಾಮಾಣಿಕ ಸೇವೆಯಿಂದ ಜನಮನ ಗೆದ್ದ ದಕ್ಷ ಅಭಿವೃದ್ಧಿ ಅಧಿಕಾರಿ ಐ,ಎನ್ ಹುದ್ದಾರ ಅವರ ಈ ಕರ್ತವ್ಯ ನಿಷ್ಟೇಯನ್ನು ಗುರುತಿಸಿ ಇವರ ಅಭಿವೃದ್ಧಿ ಕಾರ್ಯವನ್ನು ಗಮನಿಸಿ ಈ ” ಅತ್ಯುತ್ತಮ ಕರ್ತವ್ಯಪಾಲನೆ, ರಾಜ್ಯ ಪ್ರಶಸ್ತಿಯನ್ನು ಕರ್ನಾಟಕ ಪತ್ರಕರ್ತರ ಸಂಘದಿಂದ ನೀಡಲಾಯಿತು, ಅಲ್ಲದೆ ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಶಿವಪ್ಪ ನಿಂದಪ್ಪ ಮಾಟೂರು ಅವರಿಗೂ ಸಹ ಈ ಪ್ರಶಸ್ತಿಯನ್ನು ನೀಡಲಾಯಿತು, ರೈತರ ಜೀವನಾಡಿಯಾಗಿ ನೀರಂತರ ೩ಂ ವರ್ಷಗಳಿಂದ ಒಂದು ಕಪ್ಪು ಚುಕ್ಕೆ ಇಲ್ಲದೆ ಸಂಘದ ಸರ್ವತೋಮುಖ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.

ಬಡವ,ಶ್ರೀಮಂತ ಎನ್ನದೆ ,ಯಾವುದೇ ಜಾತಿ ರಾಜಕಾರಣ ಮಾಡದೇ, ಜಾತ್ಯಾತೀತವಾಗಿ,ಸಂಘದ ಎಲ್ಲಾ ರೈತರಿಗೆ ಸಾಲ,ವಿಮೆ,ಸರಕಾರದ ಹತ್ತು ಹಲವು ಯೋಜನೆಯನ್ನು ರೈತರಿಗೆ ತಲುಪಿಸಿ ಇಂದು ೨೦೨೦ – ೨೧ ನೇ ಸಾಲಿನಲ್ಲಿ ೧೪ ಲಕ್ಷ ೮೦ ಸಾವಿರ ರೂಪಾಯಿ ಲಾಭವನ್ನು ಸಂಘಕ್ಕೆ ಮಾಡಿದ್ದು ಶ್ಲಾಘನೀಯ, ಅವರ ಈ ಕರ್ತವ್ಯವನ್ನು ಮೆಚ್ಚಿ ಇಂದು ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ,ಬಿ,ವಿಜಯಶಂಕರ ಹಾಗೂ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಜಿಲ್ಲಾ ಅಧ್ಯಕ್ಷ ಶ್ರೀ ದಾನಯ್ಯಸ್ವಾಮಿ ಹಿರೇಮಠ ಹಾಗೂ ಕ,ಪ,ಸಂ,ರಾಷ್ಟ್ರೀಯ ಮಂಡಳಿ ನಿರ್ದೇಶಕ ಶ್ರೀ ಎಸ್,ಎಚ್,ಗೌಡರ,

ಹಾಗೂ ಕೂಡಲಸಂಗಮ ಗ್ರಾಮದ ಹಿರಿಯ ಮುಖಂಡರಾದ ಶ್ರೀ ಗಂಗಣ್ಣ ಬಾಗೇವಾಡಿ, ಪ್ರಾ,ಕೃ,ಪ,ಸ,ಸಂಘದ ಅಧ್ಯಕ್ಷರಾದ ಶ್ರೀ ಶೇಖರಗೌಡ ಗೌಡರ, ಸಂಘದ ನಿದೇಶಕರಾದ ಶ್ರೀ ಗಿರೀಶಗೌಡ ಗೌಡರ ಫಕೀರಪ್ಪ ಎಸ್,ಗುಗ್ಗರಿ, ಸಂಘದ ಉಪಾಧ್ಯಕ್ಷ ಶ್ರೀಮತಿ ಯಲ್ಲವ್ವ ವಾಲೀಕಾರ ಶ್ರೀ ಅಶೋಕ ಗು ಗೌಡರ, ಶ್ರೀ ನಿರಂಜನ ಎಸ್,ಕೊಟೂರು, ಹಾಗೂ ಸಂಘದ ಸರ್ವ ಸದಸ್ಯರು ಸೇರಿ ಇಬ್ಬರಿಗೂ ಈ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಶೇಖರಗೌಡ ಗೌಡರ ಹಾಗೂ ಸಂಘದ ಉಪಾಧ್ಯಕ್ಷೆ ಶ್ರೀಮತಿ ಯಲ್ಲಮ್ಮ ವಾಲೀಕಾರ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.
ವರದಿ: ಶ್ರೀ ಮಂಜುನಾಥ