
ಬಾಗಲಕೋಟೆ: ರಾಜ್ಯದ ಯಾವುದೇ ಮೂಲೆಗೆ ತಲುಪಲು ಇದು ಮುಖ್ಯದ್ವಾರ ನಿತ್ಯಸಾವಿರಾರು ಪ್ರಯಾಣಿಕರು ಇಲ್ಲಿ ಸಂಚಾರ ಮಾಡುತ್ತಾರೆ. ಆದರೆ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಕಳೆದ ಮೂರು ವರ್ಷಗಳಿಂದ ಸಾರ್ವಜನಿಕರಿಗೆ ಕುಡಿಯಲು ಶುದ್ದ ನೀರು ಸಿಗುತ್ತಿಲ್ಲ ೨೦೧೯ ರಿಂದ ಈ ನಿಲ್ದಾಣದಲ್ಲಿ ೨ ಶುದ್ದ ನೀರಿನ ಘಟಕಗಳು ಸಂಪೂರ್ಣವಾಗಿ ಬಂದ್ ಆಗಿವೆ ಕೇವಲ ೫ ರೂಪಾಯಿಗೆ ೧ ಲೀಟರ್ ನೀರು ಕೋಡಬೇಕು ಆದರೆ ಕಾಟಚಾರಕ್ಕೆ ಸರಕಾರ ಇಂತಹ ಟೆಂಡರಗಳನ್ನು ನೀಡಿ ಕೋಟಿ ಗಟ್ಟಲೆ ಹಣ ಹಾಕಿ ಈಗ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳದೆ ಸುಮ್ಮನಾಗಿದೆ.

ಬಾಗಲಕೋಟೆಯ ಜಿಲ್ಲಾ ಉಸ್ತುವಾರಿ ಸಚಿವರು ,ಶಾಸಕರು,ಸಾರ್ವಜನಿಕರ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ಜನರು ಅರ್ಥ ಮಾಡಿಕೊಳ್ಳಬೇಕು ರೈಲ್ವೆ ಸಚಿವರು ಮೊದಲು ಇತ್ತ ಗಮನ ಹರಿಸಿ ಸಾರ್ವಜನಿಕರ ಈ ತೊಂದರೆಗೆ ಈ ಕ್ಷಣ ಸ್ಪಂದಿಸಬೇಕು.ಉತ್ತರ ಕರ್ನಾಟಕದಲ್ಲಿ ಹೆಚ್ವುತ್ತಿರುವ ಬೇಸಿಗೆ ಆರ್ಭಟಕ್ಕೆ ಜನ ಮೊದಲೆ ಹೈರಾನಾಗಿದ್ದಾರೆ,ಒಂದು ಲೀಟರ್ ನೀರಿನ ಬಾಟಲಿಗೆ ೨೦ ರೂಪಾಯಿ ಕೊಟ್ಟು ಕರಿದಿ ಮಾಡಿ ಕುಡಿಯುವಷ್ಟು ಶ್ರಿಮಂತರು ರೈಲು ಪ್ರಯಾಣ ಮಾಡಲ್ಲ ಕಡು ಬಡವರಿಗೆ ಇದರಿಂದ ಬಹಳ ಅನಾನುಕೂಲವಾಗಿದೆ,ರೈಲ್ವೆ ಅಧಿಕಾರಿಗಳು ಈ ಬಗ್ಗೆ ಇದರ ಬಗ್ಗೆ ಸಮಗ್ರ ವರದಿ ತಯಾರಿಸಿ ತಕ್ಷಣ ಸಾರ್ವಜನಿಕರಿಗೆ ಇಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ನಮ್ಮ BB News ಕಳಕಳಿ.

Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News