
ಬಾಗಲಕೋಟೆ: ಹುನಗುಂದ ತಾಲೂಕಿನ ಗಂಜಿಹಾಳ ಸಮೀಪದ ಹಿರೇಮಳಗಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಸಂಗಪ್ಪ ಬಸಪ್ಪ ಕನಕನ್ನವರ ಅವರಿಗೆ ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೇಟೆ ಹಾಗೂ BB News ಸುದ್ದಿವಾಹಿನಿ ಸಹಯೋಗದೊಂದಿಗೆ ಕನ್ನಡ ರಾಜೋತ್ಸವದ ಅಂಗವಾಗಿ ಸಂಗಪ್ಪನವರಿಗೆ ” ಅತ್ಯುತ್ತಮ ಸಮಾಜ ಸೇವಾ ರತ್ಬ ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಈ ಪ್ರಶಸ್ತಿಯನ್ನು ಪ್ರಧಾನ ಮಾಡಿ ಮಾತನಾಡಿದ ಶಾಸಕ ದೊಡ್ಡನಗೌಡ ಜಿ ಪಾಟೀಲ ಅವರು ಈ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷನಿಗೆ ಈ ಪ್ರಶಸ್ತಿಯನ್ನು ನೀಡಿದ್ದು ಬಹಳ ಯೋಗ್ಯವಾಗಿದೆ, ನಿಜಕ್ಕೂ ಅವರು ಈ ಪ್ರಶಸ್ತಿಗೆ ಅರ್ಹರು, ಬಹಳ ವರ್ಷಗಳಿಂದ ಅವರ ಪ್ರಾಮಾಣಿಕ ಸೇವೆಯನ್ನು ನಾನು ನೋಡಿದ್ದೇನೆ ೧೯೮೫ ರಿದ ಒಬ್ಬ ಸೈನಿಕರಾಗಿ,ದೇಶ ಸೇವೆ ಮಾಡಿದವರು.

ಇಂದು ಗ್ರಾಮದ ಹಾಗೂ ಶಾಲೆಯ ಮಕ್ಕಳ ಕಲಿಕೆಗೆ ಬೇಕಾದ ಸೂಕ್ತವಾದ ಉತ್ತಮವಾದ ಪರಿಸರ,ಶಾಲೆ ಅಭಿವೃದ್ಧಿ ಮಾಡಿದ ಫಲವಾಗಿ ಇಂದು ಈ ಪ್ರಶಸ್ತಿ ಬಂದಿದೆ ನಿಜಕ್ಕೂ ಅವರ ಈ ಸೇವೆಯನ್ನು ನಾನು ಗೌರವಿಸುತ್ತೇನೆ ಈ ಶಾಲೆಗೆ ಬೇಕಾದ ಎಲ್ಲಾ ಅನುಕೂಲತೆಗಳನ್ನು ನಾನು ಕೂಡ ಮಾಡುತ್ತೇನೆ,ಈ ತಕ್ಷಣ ಈ ಶಾಲೆಗೆ ಕೊರತೆ ಇರುವ ಶಿಕ್ಷಕರನ್ನು ಸರಿ ಪಡಿಸಲು ತಾಲೂಕು ಕ್ಷೇತ್ರ ಶಿಕ್ಷಣಾಧಿರಿ M G ಬೆಳ್ಳೆನವರ ಇಲ್ಲೆ ಇದ್ದಾರೆ ಅವರಿಗೆ ಹೇಳಿದಿನಿ ಮತ್ತು ಇಲ್ಲಿ ರೂಮಗಳ ಕೊರತೆಯನ್ನು ಮಾಹಿತಿ ಪಡೆದು ಮಂಜೂರು ಮಾಡುತ್ತೇನೆ ಸಂಗಪ್ಪನವರ ಈ ಸೇವೆ ಹೀಗೆ ಮುಂದುವರಿಯಲಿ ಅವರಿಗೆ ಆ ದೇವರು ಇನ್ನೂ ಹೆಚ್ಚಿನ ಆರೋಗ್ಯ ಸಂಪತ್ತು ನೀಡಿ ಕಾಪಾಡಲಿ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಡಿ,ಬಿ,ವಿಜಯಶಂಕರ ಮಾತನಾಡಿ ಸಂಗಪ್ಪ ನವರು ಈ ಶಾಲೆಯ ಅಧ್ಯಕ್ಷರಾಗಿ ತಮ್ಮ ಸ್ವಂತ ಹಣ ೫೦ ಸಾವಿರ ರೂಪಾಯಿ ಖರ್ಚ ಮಾಡಿ ಶಾಲೆಗೆ ಬಣ್ಣ ಹಚ್ಚಿ, ಸುಂದರವಾಗಿ ಕಾಣುವಂತೆ ಮಾಡಿ ಮಕ್ಕಳ ಕಲಿಕೆಗೆ ಸೂಕ್ತ ಪರಿಸರ ನಿರ್ಮಾಣ ಮಾಡಲು ಹಾಗೂ ಗ್ರಾಮದಲ್ಲಿ ಶಾಂತಿ,ಸು-ವ್ಯವಸ್ಥೆಯನ್ನು ಕಾಪಾಡಲು ಸದಾ ಜಾತ್ಯಾತೀತವಾಗಿ ಗುರುತಿಸಿಕೊಂಡವರು, ಸಂಗಪ್ಪನವರಿಗೆ ಈ ಕನ್ನಡ ಶಾಲೆ ಉಳಿಸಿ – ಕನ್ನಡ ಶಾಲೆ ಬೆಳಿಸಿ BB News ಅಭಿಯಾನದಡಿ ಮಕ್ಕಳ ಶಾಲಾ ದಾಖಲೆ ಹೆಚ್ಚು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ, ಹೀಗಾಗಿ ಈ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಕೊಡಮಾಡಿದ್ದೇವೆ, ಅದನ್ನು ಮಾನ್ಯ ಶಾಸಕರು ಪ್ರದಾನ ಮಾಡಿದ್ದು ಇಂತಹ ದಾನಿಗಳಿಗೆ ,ಸಮಾಜ ಸೇವಕರಿಗೆ ಸಂದ ಗೌರವ ಎಂದರು ,ಈ ಶಾಲೆಯ ಮುಖ್ಯ ಗುರುಗಳಾದ SK ಮಡಿವಾಳ ಸರ್ ಬಹಳ ಹಠವಾದಿ,ಅವರ ನಿರಂತರ ಶ್ರಮದಿಂದ ಉತ್ತಮ ಕೆಲಸ ತೆಗೆದುಕೊಂಡು ಈ ಶಾಲೆಯ ಸಮಗ್ರ ಅಭಿವೃದ್ಧಿಗೆ ಅವರು ಶ್ರಮಿಸುತ್ತಿದ್ದಾರೆ,ಈ ಸಂದರ್ಭದಲ್ಲಿ ಅವರಿಗೂ ಗೌರವ ಸತ್ಕಾರವನ್ನು ಮಾನ್ಯ ಶಾಸಕರು ಮಾಡಬೇಕು ಎಂದು ಸನ್ಮಾನ ಮಾಡಿದರು,

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಮ್,ಜಿ,ಬೇಳ್ಳೆನವರ,ಮಾತನಾಡಿ ನಾನು ಮೊಟ್ಟ ಮೊದಲು ಈ ಶಾಲೆಗೆ ಬಂದಾಗ ಇಲ್ಲಿ ಕಾಲು ಇಡಲು ಜಾಗ ಇರಲಿಲ್ಲ ಈ ಶಾಲೆಯ ಸ್ಥಿತಿಯನ್ನು ನೋಡಿ ನೋಟಿಸ್ ನೀಡಿದ್ದೆ ಇಂದು ಬಾಗಲಕೋಟೆಯ ಕರ್ನಾಟಕ ಪತ್ರಕರ್ತರ ಸಂಘದಿಂದ ಈ ಶಾಲೆಯ ಅಭಿವೃದ್ಧಿ ಕಂಡು ಸಂಗಪ್ಪನವರಿಗೆ ಈ ಪ್ರಶಸ್ತಿಯನ್ನು ನೀಡುತ್ತಿರುವುದು ಬಹಳ ಖುಷಿಯಾಗಿದೆ , ಅದರಲ್ಲಿ ಇಲಕಲ್ಲ ತಾಲೂಕಿನ ಚಿಕನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ, ಅಂತಹ ಉತ್ತಮ ವಾತಾರಣದ ಜೊತೆಗೆ ಮಕ್ಕಳ ಭವಿಷ್ಯ ರೂಪಿಸಲು ಗ್ರಾಮದ ಎಲ್ಲಾ ಜನತೆ ಸಂಗಪ್ಪ ನವರಂತೆ ಶಾಲೆಯ ಅಭಿವೃದ್ಧಿಗೆ ಶ್ರಮಿಸಬೇಕು ಇಲ್ಲಿ ನಿಮ್ಮ ಮಕ್ಕಳು ಉತ್ತಮ ಭವಿಷ್ಯ ರೂಪಿಸಲು ಸಾಧ್ಯ ಎಂದರು. ಈ ಸರಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾನ್ಯ ಶಾಸಕ ದೊಡ್ಡನಗೌಡ ಜಿ ಪಾಟೀಲ ,ಜಿಲ್ಲಾ ,ಕ,ಪ,ಸಂ,ಅಧ್ಯಕ್ಷ ,ಡಿ,ಬಿ,ವಿಜಯಶಂಕರ, ತಾ,ಕ್ಷೇತ್ರ ಶಿಕ್ಷಣಾಧಿಕಾ ರಿ,ಎಮ್, ಜಿ,ಬೆಳ್ಳೆ ನವರ,ಶಾಲಾ ಮುಖ್ಯ ಅಧಿಕಾರಿ KV ಮಡಿವಾಳರ, ಹಾಗೂ ಶಾಲೆಯ SDMC ಸರ್ವ ಸದಸ್ಯರು ಗ್ರಾಮದ ಗ್ರಾಮ,ಪಂ,ಸದಸ್ಯರು ಉಪಸ್ಥಿತಿ ಇದ್ದರು,ಶಾಲೆಯ ಶಿಕ್ಷಕರಾದ ಶ್ರೀ ಬಿ,ಎಮ್,ಅಂಗಡಿ,ಸ್ವಾಗತಿಸಿದರು,ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಎನ್,ಎಚ್,ಪೂಜಾರಿ ಶಿಕ್ಷಕರು ನೇರವೇರಿಸಿದರು.
