ವಿಜಯಪುರ ಜಿಲ್ಲಾ ತಳವಾರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು, ಹಾಗೂ ‘ಸೈಕಲ್ ಸವಾರಿ’ ಚಿತ್ರದ ಖಳ ನಾಯಕ ನಟ ಶಿವಾಜಿ ಮೆಟಗಾರ ಅವರ ಹುಟ್ಟು ಹಬ್ಬದ ಪ್ರಯುಕ್ತ ಸಿಂದಗಿ ನಗರದ ಮಾಂಗಲ್ಯ ಭವನದಲ್ಲಿ ‘ಸೈಕಲ್ ಸವಾರಿ’ ಚಿತ್ರದ ಪ್ರೊಮೋ ಬಿಡುಗಡೆ ಮಾಡಲಾಯಿತು. ಪ್ರೊಮೋ ಬಿಡುಗಡೆ ನಂತರ ಶಿವಾಜಿ ಮೆಟಗಾರ ಅವರಿಗೆ ಸೈಕಲ್ ಸವಾರಿ ಚಿತ್ರ ತಂಡದಿಂದ ಹುಟ್ಟು ಹಬ್ಬದ ಶುಭ ಕೋರಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ‘ಸೈಕಲ್ ಸವಾರಿ’ ನಟ ನಿರ್ದೇಶಕ ದೇವು ಅಂಬಿಗ ಹಾಗೂ ನಟಿ ದೀಕ್ಷಾ ಭೀಸೆ ಹಾಗೂ ಖಳ ನಟ ಶಿವಾಜಿ ಮೆಟಗಾರ ಅವರ ಜೊತೆಗೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಅಭಿಮಾನಿಗಳನ್ನು ಸಮಾಧಾನ ಮಾಡಲು ಹರಸಾಹಸ ಪಡಬೇಕಾಯಿತು. ಚಿತ್ರ ಬಿಡುಗಡೆ ಮುನ್ನವೇ ‘ಸೈಕಲ್ ಸವಾರಿ’ ಚಿತ್ರಕ್ಕೆ ಅಭಿಮಾನಿಗಳು ಈ ಮಟ್ಟಕ್ಕೆ ಪ್ರೀತಿ ತೋರಿಸಿದ್ದಕ್ಕೆ ಚಿತ್ರ ತಂಡ ಪತ್ರಿಕೆಯ
ಮುಖಾಂತರ ಧನ್ಯವಾದಗಳನ್ನು ಹೇಳುತ್ತಿದ್ದಾರೆ.ನಟ ನಿರ್ದೇಶಕ ದೇವು ಅಂಬಿಗ, ನಟಿ ದೀಕ್ಷಾ ಭೀಸೆ , ಪಾಲಕರು, ಚಿತ್ರದ ಕಲಾವಿದರು ಹಾಗೂ ರಾಜಕೀಯದ ಅನೇಕ ಗಣ್ಯ ವ್ಯಕ್ತಿಗಳು ಸೇರಿದಂತೆ ಪಾಲ್ಗೊಂಡಿದ್ದರು.
ಕಲಾರಂಗ ಫಿಲ್ಮ್ ಸ್ಟುಡಿಯೋ ಬ್ಯಾನರಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ನಾಯಕ ನಟರಾಗಿ ದೇವು ಕೆ ಅಂಬಿಗ ನಟಿಸುವದರೊಂದಿಗೆ
ಕಥೆ,ಚಿತ್ರಕಥೆ,ಸಂಭಾಷಣೆ,ಸಾಹಿತ್ಯ, ಜೊತೆಗೆ ನಿರ್ದೇಶನ ಹೊಣೆ ಹೊತ್ತಿದ್ದಾರೆ. ನಾಯಕಿಯಾಗಿ ಭರತನಾಟ್ಯದಲ್ಲಿ ಸಾಧನೆಗೈದ ವಿಜಯಪುರದ ಅಪ್ಪಟ ಪ್ರತಿಭೆ ದೀಕ್ಷಾ ಭೀಸೆ, ವಿಲನ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ ಶಿವಾಜಿ ಮೇಟೆಗಾರ, ಲೋಕೇಶ, ಆನಂದ ಕಾಂಬ್ಳೆ, ಅಶೋಕ ಭಜಂತ್ರಿ, ಕಲ್ಮೇಶ ಮತ್ತು ತಂಡ, ಕಲಾವಿದರಾದ ನಾಗರಾಜ ದೊಡಮನಿ,ರಾಮಚಂದ್ರ ಕಾಂಬ್ಳೆ, ಶೀವಲಿಲಾ, ನ್ಯಾಸಾ, ಕಾವ್ಯ,ರಂಜು, ಗೀತಾ, ಜಾನು, ಜಯಶ್ರೀ, ಮೋಹನ, ಪ್ರಭು,ಹಬೀಬ, ಹಾಸ್ಯಕಲಾವಿದ ದೇವುಕುಮಾರ ಸಾತಲಗಾಂವ್, ಸಚೀನ, ಮಾಂತು, ಶಿವಾನಂದ ಕಂಕಣವಾಡಿ, ಆರ್.ಜಿ ಮೇಡೆಗಾರ್ ಮುಂತಾದವರು ಅಭಿನಯಿಸಿದ್ದು ,ಛಾಯಾಗ್ರಹಣ ರೋಹನ್ ದೇಸಾಯಿ,ಗೀತ ಸಂಯೋಜನೆ ವಿನೋದ ಹಿರೇಮಠ,ಕಲಾನಿರ್ದೇಶನ ಮಾಂತು ದಳವಾಯಿ,ಭೀಮರಾಯ,ಸಾಹಸ ದುರ್ಗೇಶ, ಕಾರಜೋಳ,ಸಹಾಯಕ ನಿರ್ದೇಶನ ಮಾಂತು ದಳವಾಯಿ,ತಿರುಪತಿ,ಸಚಿನ್, ಸಹನಿರ್ದೇಶನ ಷಣ್ಮುಖ ಕೊಟ್ಟಲಗಿ, ವಿನೋದ ರಾಠೋಡ, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಗಿ ,ಪ್ರಚಾರ ಕಲೆ ವಿಶ್ವಪ್ರಕಾಶ ಮಾಳಗೊಂಡ ಅವರದಿದೆ. ಸುರೇಶ ಶಿವೂರ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಭರದಿಂದ ಸಾಗಿದ್ದು ಅತೀ ಶೀಘ್ರದಲ್ಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವದಾಗಿ ನಿರ್ದೇಶಕ ದೇವು ಅಂಬಿಗ ತಿಳಿಸಿದರು.