ಹುಬ್ಬಳ್ಳಿ :‘ಮಾರಿಗಡ’ ಚಲನಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವದು ಎಂದು ಚಿತ್ರದ ನಿರ್ದೇಶಕ ವಿಶ್ವನಾಥ ಎಂ ಹೇಳಿದರು.ಹುಬ್ಬಳ್ಳಿಯ ಪತ್ರಿಕಾಭವನದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಯುವ ಕಲಾವಿದರೇ ಸೇರಿಕೊಂಡು ನಿರ್ಮಿಸಿರುವ ‘ಮಾರಿಗಡ’ ಚಲನಚಿತ್ರದಲ್ಲಿ ಮಾರೇಶ, ಅನನ್ಯ,ರೂಪಾ, ಶಶಿಕುಮಾರ್, ಮಹೇಶ್, ಅಂಬಿಕಾ ಸೇರಿದಂತೆ ಮುಂತಾದ ಕಲಾವಿದರು ಬಣ್ಣ ಹಚ್ಚಿದ್ದಾರೆ. ವಿಶೇಷವಾಗಿ ಇದರಲ್ಲಿ ನಾಯಕನಾಗಿ ಅಭಿನಯಿಸಿರುವ ಮಾರೇಶ್ ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಕುದರಿಮೋತಿ ಗ್ರಾಮದ ಬಹುರೂಪಿ ಕಲಾವಿದರ (ವೇಷಗಾರ) ಕುಟುಂಬದವರಾಗಿದ್ದು ಭಿಕ್ಷಾಟನೆ …
Read More »ನವಲಗುಂದ ನಗರದಲ್ಲಿ ತಾಜ್ ಮಹಲ್-೨ ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ *
ನವಲಗುಂದ : ನವಲಗುಂದ ನಗರದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ “ತಾಜ್ ಮಹಲ್-೨” ಕನ್ನಡ ಚಲನಚಿತ್ರದ ಧ್ವನಿಸುರುಳಿಯೊಂದು ಬಿಡುಗಡೆಗೊಂಡು ಹೊಸದೊಂದು ಇತಿಹಾಸವೇ ನಿರ್ಮಾಣವಾಯಿತು. ಇದರ ಕೇಂದ್ರಬಿಂದುವಾಗಿದ್ದ ಮನ್ವರ್ಷಿ ನವಲಗುಂದ ತಮ್ಮ ಊರಿನ ಬಗೆಗೆ ಇರುವ ಅಭಿಮಾನವೇ ಇದಕ್ಕೆಲ್ಲ ಕಾರಣವಾದದ್ದು.ಗ್ರಾಮದ ಮುಖ್ಯ ಅತಿಥಿಗಳಾಗಿ ಸಕ್ಕರೆ ,ಕೈಮಗ್ಗ ಮತ್ತು ಜವಳಿ ಖಾತೆ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಆಗಮಿಸಿ ಧ್ವನಿಸುರುಳಿ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಕೋರಿ ತಮ್ಮೂರ ಹುಡುಗ ಮನ್ವರ್ಷಿ ಅವರ ಸಾಧನೆಗೆ ಮೆಚ್ಚುಗೆ …
Read More »ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಛೇರಿಯಲ್ಲಿ”ಉತ್ತರದ ಸಿಂಹ” ಪೋಸ್ಟರ್ ಬಿಡುಗಡೆ
ಧಾರವಾಡ : “ಉತ್ತರದ ಸಿಂಹ” ಕನ್ನಡ ಚಲನಚಿತ್ರ ಸೆಟ್ಟೇರಲು ತಯಾರಿ ನಡೆಯುತ್ತಿದ್ದು ಮೊದಲ ಹೆಜ್ಜೆಯಾಗಿ ಚಿತ್ರ ತಂಡ ಪೋಸ್ಟರ್ ಮತ್ತು ಶೀರ್ಷಿಕೆಯನ್ನು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಛೇರಿಯಲ್ಲಿ ಸರಳ ಸಮಾರಂಭದ ಮೂಲಕ ಬಿಡುಗಡೆಗೊಳಿಸಲಾಯಿತು.ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಶಂಕರ್ ಸುಗತೆ, ಕಾರ್ಯದರ್ಶಿ ಮಂಜುನಾಥ ಹಗೆದಾರ, ಕಲಾಸಂಗಮ ಅಧ್ಯಕ್ಷ ಪ್ರಭು ಹಂಚಿನಾಳ, ಮಾಜಿ ಯೋಧ ರುದ್ರಪ್ಪ ಚಿನಿವಾಲ, ಮೂರ್ತಿ ಮಾಳದ್ಕರ, ನಿರ್ಮಾಪಕ ವೀರನಗೌಡ ಸಿದ್ಧಾಪೂರ, ಚಿತ್ರದ …
Read More »ಭರದಿಂದ ಸಾಗಿದ ಬಾಬು ನಿದರ್ಶನದ ವಿನೂತನ ಅನಿಮೇಷನ್ ಚಲನಚಿತ್ರ “ಹುಬ್ಬಳಿಯವ.
ಹುಬ್ಬಳ್ಳಿ: ‘ಹುಬ್ಬಳ್ಳಿಯವ’ ಅನಿಮೇಶನ್ ಚಲನಚಿತ್ರ ‘ಹುಬ್ಬಳ್ಳಿಯವ’ ಎಂಬ ಹೆಸರಿನಲ್ಲಿಯೇ ಸಿನಿ ರಂಗವನ್ನು ಆಕರ್ಷಿಸುವಲ್ಲಿ ಹುಬ್ಬಳ್ಳಿಯ ನಿರ್ದೇಶಕ ಬಾಬಾ ಯಶಸ್ವಿಯಾಗಿದ್ದಾರೆ.ಉತ್ತರ ಕರ್ನಾಟಕದ ಜನ ಹೊಸತನದಲ್ಲಿ ಯಾವಾಗಲೂ ಮುಂದೆ ಇರುತ್ತಾರೆ ಎನ್ನುವುದನ್ನು ಸಾಬೀತು ಪಡಿಸಲು ಬಾಬಾ ಮುಂದಾಗಿದ್ದಾರೆ. ಅನಿಮೇಶನ್ ಸಿನಿಮಾ ಮಾಡುವುದು ಬಹಳ ಕಷ್ಟದ ಕೆಲಸ. ಇದನ್ನು ಮಾಡಲು ತಾಳ್ಮೆ ಹೆಚ್ಚು ಬೇಕು.ಈ ಸಿನಿಮಾ ಮಾಡಲು ಸಮಯವೂ ಹೆಚ್ಚು ಬೇಕು. ನಮ್ಮ ಜನ ಇಂತಹ ಸಿನಿಮಾ ಮಾಡಿ ಜಾಗತಿಕ ಮಟ್ಟದಲ್ಲಿ ಸೈ ಎನಿಸಿಕೊಳ್ಳಬೇಕು …
Read More »ಬೆಳದಿಂಗಳು ಸಿನಿ ಕಂಬೈನ್ಸ್ ನಿರ್ಮಿಸುತ್ತಿರುವ ಪ್ರಥಮ ಕನ್ನಡ ಚಲನಚಿತ್ರ ‘ನಿನ್ನ ನೆನಪಿನಲಿ’ ಚಿತ್ರೀಕರಣ ಮುಕ್ತಾಯ
“ನಿನ್ನ ನೆನಪಿನಲಿ ” ಚಿತ್ರೀಕರಣ ಮುಕ್ತಾಯಹುಬ್ಬಳ್ಳಿ : ಬೆಳದಿಂಗಳು ಸಿನಿ ಕಂಬೈನ್ಸ್ ಹುಬ್ಬಳ್ಳಿ ಅವರು ನಿರ್ಮಿಸುತ್ತಿರುವ ಪ್ರಥಮ ಕನ್ನಡ ಚಲನಚಿತ್ರ ‘ನಿನ್ನ ನೆನಪಿನಲಿ’ ಚಿತ್ರೀಕರಣ ಸಂಪೂರ್ಣ ಮುಕ್ತಾಯಗೊಂಡು ಪೋಸ್ಟ್ ಪ್ರೊಡಕ್ಷನ್ ಕಾರ್ಯ ಭರದಿಂದ ಸಾಗಿದೆ .ಚಿತ್ರವು 45 ದಿನಗಳವರೆಗೆ ಎರಡು ಹಂತದಲ್ಲಿ ಬ್ಯಾಡಗಿ, ಕಾಗಿನೆಲೆ, ಹಾವೇರಿ ಜಿಲ್ಲೆ ಯ ಸುತ್ತ- ಮುತ್ತ ಚಿತ್ರೀಕರಿಸಲಾಗಿದೆ. ಹಾಡಿನ ಚಿತ್ರೀಕರಣ ವನ್ನು ಮುಂಡಗೋಡ ಸುತ್ತಮುತ್ತಲಿನ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ನೈಜ ಪ್ರೇಮ ಕಥೆ …
Read More »ಬೊಮ್ಮಸಾಗರ ದುರ್ಗಾದೇವಿ ಪ್ರೊಡಕ್ಷನ್‌ರವರ ‘ವಿಜಯ ಪತಾಕೆ’ ಚಲನಚಿತ್ರದ ಟೈಟಲ್ ಅನಾವರಣ
ಕೊಪ್ಪಳ : ಬೊಮ್ಮಸಾಗರ ದುರ್ಗಾದೇವಿ ಪ್ರೊಡಕ್ಷನ್‌ರವರು ನಿರ್ಮಿಸುತ್ತಿರುವ ‘ವಿಜಯ ಪತಾಕೆ’ ಕನ್ನಡ ಚಲನಚಿತ್ರದ ಟೈಟಲ್ ಪೋಸ್ಟರ್ ಅನಾವರಣ ಕಾರ್ಯಕ್ರಮ ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಜರುಗಿತು.ಶ್ರೀ ಮ.ನಿ.ಪ್ರ ಜಗದ್ಗುರು ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ತಮ್ಮ ಅಮೃತ ಹಸ್ತದಿಂದ ಟೈಟಲ್ ಪೋಸ್ಟರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಚಿತ್ರದ ನಟ, ನಿರ್ಮಾಪಕ, ನಿರ್ದೇಶಕ ಆರ್.ಶೈನ್ , ನಾಯಕಿ ನಟಿ ಪೂಜಾ ಕೊಟ್ಟೂರ, ಹರೀಶ ಪತ್ತಾರ, ಸಂಗನಗೌಡ ಕುರುಡಗಿ, ರವಿವರ್ಮ, …
Read More »
ಗದಗಿನ ಚಿನ್ಮಯಿ ಗಾಯತ್ರಿ ಕ್ರಿಯೇಷನ್ ಅರ್ಪಿಸುವ “ಸಾವಿರ ದಾರಿ’ ಕಿರುಚಿತ್ರ ಬಿಡುಗಡೆ
‘ಸಾವಿರ ದಾರಿ’ ಕಿರುಚಿತ್ರ ಬಿಡುಗಡೆಗದಗ : ಚಿನ್ಮಯಿ ಗಾಯತ್ರಿ ಕ್ರಿಯೇಷನ್ ಅರ್ಪಿಸುವ ಗದಗ ನಗರದ ಕಲಾವಿದರೆ ಅಭಿನಯಿಸಿರುವ ‘ಸಾವಿರ ದಾರಿ’ ಕಿರುಚಿತ್ರ ಬಿಡುಗಡೆಯನ್ನು ನಿವೃತ್ತ ಪ್ರಾಧ್ಯಾಪಕರಾದ ಡಾ.ಎ.ಕೆ.ನಾಶಿ ಅವರು ಲ್ಯಾಪಿಯಲ್ಲಿ ಬಟನ್ ಒತ್ತುವ ಮೂಲಕ ಬಿಡುಗಡೆ ಮಾಡಿದರು.ಅವರು ನಗರದ ಶ್ರೀ ಚಿನ್ಮಯಿ ಸಾಂಸ್ಕೃತಿಕ ಅಕಾಡೆಮಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಗದಗ ಇವರ ಪ್ರಾಯೋಜಕತ್ವದಲ್ಲಿ ಮರಾಠಾ ವಾಙ್ಮಯ ಪ್ರೇಮಿ ಮಂಡಳಿಯಲ್ಲಿ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ನಡೆದ ರಂಗಸೌರಭ ಕಾರ್ಯಕ್ರಮದಲ್ಲಿ ಬಿಡುಗಡೆ …
Read More »
ವಿಜಯಪುರ ಜಿಲ್ಲೆಯ ನಟ ವಿಶ್ವಪ್ರಕಾಶ ಟಿ ಮಲಗೊಂಡ ಅಭಿನಯದ ಪ್ರಾಮಿಸ್’ ಚಿತ್ರದ ಪೋಸ್ಟರ್ ಬಿಡುಗಡೆ
ವಿಜಯಪುರ : ಜಿಲ್ಲೆಯ ನಟ ವಿಶ್ವಪ್ರಕಾಶ ಟಿ ಮಲಗೊಂಡ ಅಭಿನಯದ ಹೊಸ ಚಿತ್ರ ‘ಪ್ರಾಮಿಸ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನು ಸುಕ್ಷೇತ್ರ ಇಂಚಗೇರಿ ಮಠದ ಪೀಠಾಧ್ಯಕ್ಷ ಶ್ರೀ ಸ.ಸ.ರೇವಣಸಿದ್ದೇಶ್ವರ ಮಹಾರಾಜರು ಬಿಡುಗಡೆಗೊಳಿಸಿದರು.ನಂತರ ಮಾತನಾಡಿದ ಅವರು ನಟ ವಿಶ್ವಪ್ರಕಾಶ ಟಿ ಮಲಗೊಂಡ ಅತ್ಯುತ್ತಮ ಚಿತ್ರ ನಟ, ಅಭಿನಯದಲ್ಲಿಯೂ ಪಳಗಿದ್ದಾರೆ , ಹಿಂದೂ ಧಾರ್ಮಿಕ ಹೊಸ ವರ್ಷ ಯುಗಾದಿ ಹಬ್ಬದ ಪ್ರಯುಕ್ತ ಪ್ರಾಮಿಸ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದು …
Read More »ಅಮೀನಗಡ ನಗರದಲ್ಲಿ ಅಪ್ಪು ಅಭಿಮಾನಿಗಳಿಂದ ಆಟೊರೊಡ ಶೋ ! “ಜೇಮ್ಸ್ ,ಚಿತ್ರಕ್ಕೆ ಶುಕ್ರ ದೆಸೆ
ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದಲ್ಲಿ ಇಂದು ಕರ್ನಾಟಕದ ಯುವರತ್ನ ಡಾ: ಪುನಿತರಾಜಕುಮಾರ ಅವರ ೪೭ ನೇ ಹುಟ್ಟು ಹಬ್ಬ ಹಾಗೂ ಅವರ ಬಹು ನೀರಿಕ್ಷೀತ “ಜೇಮ್ಸ್ , ಕನ್ನಡ ಚಲನಚಿತ್ರ ಇಂದು ಅದ್ದೂರಿಯಾಗಿ ಬೆಳ್ಳಿ ಪರದೆಯ ಮೇಲೆ ಮೂಡಿ ಬರುತ್ತಿದೆ. ಇದೆ ರಾಜ್ಯಾದ್ಯಂತ ಅಪ್ಪು ಅವರ ಅಭಿಮಾನಿಗಳು ಪ್ರತಿ ಗ್ರಾಮದಲ್ಲಿ ಹಬ್ಬದ ಹಬ್ಬದ ವಾತಾರಣ ಸೃಷ್ಟಿ ಮಾಡಿದ್ದಾರೆ. ಮೂವಿ ನೋಡಲು ಬರುವ ಪಸ್ಟ ಶೂಗೆ ಇಂದ ಹಿಡಿದು …
Read More »ಶ್ರೀಗುರು ಮಹಾಂತ್ ಕ್ರಿಯೇಷನ್ಸ್ ಬೈಲಹೊಂಗಲ್ ವತಿಯಿಂದ ನಿರ್ಮಾಣವಾಗುತ್ತಿರುವ ‘ಸ್ಕೂಲ್ ಡೇಸ್’ ಚಿತ್ರೀಕರಣ ಮುಕ್ತಾಯ,
‘ಸ್ಕೂಲ್ ಡೇಸ್’ ಚಿತ್ರೀಕರಣ ಮುಕ್ತಾಯ*ಬೆಂಗಳೂರ : ಶ್ರೀಗುರು ಮಹಾಂತ್ ಕ್ರಿಯೇಷನ್ಸ್ ಬೈಲಹೊಂಗಲ್ ವತಿಯಿಂದ ನಿರ್ಮಾಣವಾಗುತ್ತಿರುವ ಪ್ರಥಮ ಚಿತ್ರ ‘ಸ್ಕೂಲ್ ಡೇಸ್’ ಕನ್ನಡ ಚಲನಚಿತ್ರದ ಅಂತಿಮ ಹಂತದ ಚಿತ್ರೀಕರಣ ಬೆಂಗಳೂರಿನ ವಿಜಯನಗರ ಸುತ್ತಮುತ್ತ ನಡೆದು ಮುಕ್ತಾಯಗೊಂಡಿದೆ.ಸುಮಾರು ಮೂವತ್ತು ದಿನಗಳ ಕಾಲ ಬೆಳಗಾವಿ, ಹಿರೇಬಾಗೇವಾಡಿ, ಬಿ.ಕೆ.ಇಟಗಿ, ಅನಂತಮ್ ಅಗ್ರೊ ಅರಣ್ಯ ರೆಸಾರ್ಟ ಬೆಳದಡಿ, ಸಿದೊಳ್ಳಿ ಮತ್ತು ಪ್ರೇಕ್ಷಣಿಯ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು ಅಂತಿಮ ಹಂತದ ಚಿತ್ರೀಕರಣವನ್ನು ಮಾತ್ರ ಬೆಂಗಳೂರಲ್ಲಿ ಮಾಡುತ್ತಿದ್ದೇವೆ . …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News