ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕಾಗಿ 4 ವರ್ಷಗಳಿಂದ ಜೈಲು ಶಿಕ್ಷೆಗೆ ಗುರಿಯಾಗಿದ್ದ ಎಐಎಡಿಎಂಕೆ ಪಕ್ಷದ ಉಚ್ಚಾಟಿತ ನಾಯಕಿ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತ ಆಪ್ತೆ ವಿ.ಕೆ. ಶಶಿಕಲಾ ಸೋಮವಾರ (ಇಂದು) ತಮಿಳುನಾಡಿಗೆ ತೆರಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ತಮಿಳುನಾಡು-ಕರ್ನಾಟಕ ಗಡಿಯಲ್ಲಿ ಸುಮಾರು 1,500 ಪೊಲೀಸರನ್ನು ನಿಯೋಜಿಸಲಾಗಿದೆ. ಜನವರಿ 27 ರಂದು ಜೈಲಿನಿಂದ ಬಿಡುಗಡೆಗೊಂಡಿದ್ದ ಶಶಿಕಲ ಅವರಿಗೆ ಕೊರೊನಾ ಸೋಂಕು ತಗುಲಿದ್ದರಿಂದಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅದರ …
Read More »ಜಗತ್ತಿನ ಸರ್ವಾಧಿಕಾರಿಗಳ ಹೆಸರು ‘M’ ಅಕ್ಷರದಿಂದಲೇ ಏಕೆ ಆರಂಭವಾಗುತ್ತದೆ: ರಾಹುಲ್ ಗಾಂಧಿ
ಜಗತ್ತಿನಲ್ಲಿನ ಬಹುಪಾಲು ಸರ್ವಾಧಿಕಾರಿಗಳ ಹೆಸರು “M” ಅಕ್ಷರದಿಂದಲೇ ಏಕೆ ಪ್ರಾರಂಭವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ಮೋದಿಯ ಹೆಸರು ಹೇಳದೇ ಕಾಲೆಳೆದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಹಲವರು ಸರ್ವಾಧಿಕಾರಿಗಳ ಹೆಸರನ್ನು ಟ್ವೀಟ್ ಮಾಡಿದ್ದಾರೆ. “ಜಗತ್ತಿನ ಬಹುಪಾಲು ಸರ್ವಾಧಿಕಾರಿಗಳ ಹೆಸರಿನ ಮೊದಲ ಅಕ್ಷರ “M” ಆಗಿರುತ್ತದೆ ಯಾಕೆ? ಮಾರ್ಕೋಸ್, ಮುಸಲೋನಿ, ಮಿಲೊಸೇವಿಚ್, ಮುಬಾರಕ್, ಮೊಬುಟು, ಮುಶರಫ್, ಮಿಕೊಂಬೆರೋ” Why do so many dictators …
Read More »ಹರಿಯಾಣ: ರೈತ ಹೋರಾಟ ಬೆಂಬಲಿಸಿ ಜೆಜೆಪಿ ಪಕ್ಷ ತೊರೆದ ಮುಖಂಡ
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮತ್ತು ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ಹರಿಯಾಣದ ಜನನಾಯಕ್ ಜನತಾ ಪಾರ್ಟಿ (ಜೆಜೆಪಿ) ಪಕ್ಷದ ಕರ್ನಾಲ್ ಜಿಲ್ಲಾಧ್ಯಕ್ಷ ಇಂದರ್ಜಿತ್ ಸಿಂಗ್ ಗೋರಾಯ ಪಕ್ಷ ತೊರೆದಿದ್ದಾರೆ. ಈ ಕುರಿತು ಪಿಟಿಐ ವರದಿ ಮಾಡಿದೆ. ಜೆಜೆಪಿಯು ಹರಿಯಾಣದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. Haryana: JJP's Karnal district president Inderjit Singh Goraya quits the party in solidarity with #FarmersProtests over agri …
Read More »ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಓವೈಸಿ ಬಿಜೆಪಿಗೆ ನೆರವಾಗಲಿದ್ದಾರೆ: ಸ್ಪೋಟಕ ಹೇಳಿಕೆ ನೀಡಿದ ಸಾಕ್ಷಿ ಮಹರಾಜ್
“ಪಶ್ಚಿಮಬಂಗಾಳ ಚುನಾವಣೆಯಲ್ಲಿ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಸ್ಪರ್ಧಿಸಿದರೆ ಅದು ಬಿಜೆಪಿಗೆ ನೆರವಾಗಲಿದೆ. ಈ ಮೂಲಕ ನಾವು ಚುನಾವಣೆಯನ್ನು ಗೆಲ್ಲುತ್ತೇವೆ” ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಓವೈಸಿ ಉತ್ತರಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸುವ ಕುರಿತು ಪ್ರಶ್ನಿಸಿದಾಗ, “ಇದು ದೇವರ ಅನುಗ್ರಹ. ದೇವರು ಅವರಿಗೆ ಶಕ್ತಿ ನೀಡಲಿ. ಅವರು ನಮಗೆ ಬಿಹಾರದಲ್ಲಿ ಸಹಾಯ ಮಾಡಿದ್ದರು. ಉತ್ತರಪ್ರದೇಶ ಹಾಗೂ ಪಶ್ಚಿಮಬಂಗಾಳದಲ್ಲೂ ಗೆಲ್ಲಲು ಅವರು ನಮಗೆ ಸಹಾಯ …
Read More »ಬಿಜೆಪಿ ಭ್ರಷ್ಟಾಚಾರಿಗಳ ಪಕ್ಷ ಎಂದು ಸ್ವಪಕ್ಷದವರೇ ಹೇಳಿದ್ದಾರೆ – ಇಡಿ, ಸಿಬಿಐ ಈಗೇನು ಮಾಡುತ್ತಿದೆ..? ಡಿ.ಕೆ.ಶಿವಕುಮಾರ್. ವಾಗ್ದಾಳಿ
ಬೆಂಗಳೂರು: ಬಿಜೆಪಿ ಬ್ಲಾಕ್ ಮೇಲರ್ಸ್, ಭ್ರಷ್ಟಾಚಾರಿಗಳ ಪಕ್ಷ. ಹಾಗಂತ ನಾನು ಹೇಳುತ್ತಿಲ್ಲ, ಸ್ವತ: ಭಾರತೀಯ ಜನತಾ ಪಕ್ಷದ ಶಾಸಕರು, ಸಚಿವರೇ ಹೇಳಿಕೆ ನೀಡುತ್ತಿದ್ದಾರೆ. ಇಡಿ, ಸಿಬಿಐ, ಎಸಿಬಿ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಿ ಎಂದು ತನಿಖಾ ಸಂಸ್ಥೆಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಹಿಂದೆ ಕಾರವಾರದಲ್ಲಿ ಹೆಳಿದಾಗ ಸಿಡಿ ಏನೂ ಇಲ್ಲ ಅಂದಿದ್ದರು. ಈಗ ಅವರದೇ ಪಕ್ಷದ ನಾಯಕರು ಸಿಡಿ ವಿಚಾರ …
Read More »ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ : ಯಾರಿಗೆ ಸಿಗಲಿದೆ ಸಚಿವ ಸ್ಥಾನ?
ಬೆಂಗಳೂರು : ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಜನವರಿ 13 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ದಿಢೀರ್ ದೆಹಲಿಗೆ ಹೋಗಿ ಬಂದಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಂಕ್ರಾಂತಿ ಸಿಹಿ ತಂದಿದ್ದಾರೆ. ಖಾಲಿ ಇರುವ ಏಳು ಸ್ಥಾನಗಳ ಭರ್ತಿಗೆ ವರಿಷ್ಠರು ಹಸಿರು ನಿಶಾನೆ ತೋರಿಸಿದ್ದು, ಯಾರೆಲ್ಲಾ ಶಾಸಕರಿಗೆ ಅದೃಷ್ಟ ಖುಲಾಯಿಸಿದೆ ಎನ್ನುವುದು ಇಂದು …
Read More »ಸೊಳೇಭಾವಿ ಗ್ರಾಮದಲ್ಲಿ BJP ಪಕ್ಷದ ಕಾರ್ಯಕರ್ತರಿಂದ “ಜನ ಸೇವಕ, ಕಾರ್ಯಕ್ರಮದ ಪೂರ್ವಭಾವಿ ಸಭೆ.
** ಕಾರ್ಯಕ್ರಮದ ಸಭೆ ಉದ್ದೇಶಿಸಿ ಮಾತನಾಡುತ್ತಿರುವ ಶ್ರೀ ನಾಗೇಶ ಗಂಜಿಹಾಳ. ನೂತನ ಸದಸ್ಯರಾದ ಹನಮಂತ ಮೀನಜಗಿ ಅವರಿಗೆ ಶ್ರೀ ಸುರೇಶ ಜವಳಿ ಅವರು ಸ್ವಾಮಿ ವಿವೇಕಾನಂದ ಅವರ ಪುಸ್ತಕ ನೀಡಿ ಅಭಿನಂದಿಸಿದರು, ** ನೂತನ ಸೊಳೇಭಾವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಆನಂದ ಮೊಕಾಶಿ ಅವರಿಗೆ ಸ್ವಾಮಿ ವಿವೇಕಾನಂದ ಅವರ ವೀರ ಕೇಸರಿ ಪುಸ್ತಕ ನೀಡಿ ಅಭಿನಂದಿಸಿದರು. ಅಮೀನಗಡ : ಇಂದು ಸೊಳೇಭಾವಿ ಗ್ರಾಮದ ಶ್ರೀ …
Read More »ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಯಮಾವಳಿ ಪ್ರಕಟ
ಮೊನ್ನೇ ಅಷ್ಟೇ ಗ್ರಾಮ ಪಂಚಾಯಿತಿ ಚುನಾವಣೆ ಅಂತ್ಯವಾಗಿದ್ದು, ಇದೀಗ ಗ್ರಾಮಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಚರ್ಚೆಗಳು ಶುರುವಾಗಿವೆ. ಇದರ ಬೆನ್ನಲ್ಲೇ ಮೀಸಲಾತಿ ನಿಯಮಾವಳಿ ಬಿಡುಗಡೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಯಮಾವಳಿಯನ್ನು ರಾಜ್ಯ ಸರ್ಕಾರ ಚುನಾವಣಾ ಆಯೋಗದ ನಿರ್ದೇಶನದಂತೆ ಅಧಿಸೂಚನೆ ಹೊರಡಿಸಿದೆ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಲಾ 30 ತಿಂಗಳ ಅಧಿಕಾರವಧಿ ಹಂಚಿಕೆ ಮಾಡಿ ಇಂದು (ಶನಿವಾರ) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಮೀಸಲಾತಿ ಪ್ರಕಟಿಸುವುದನ್ನು ಆಯಾ ಜಿಲ್ಲಾಧಿಕಾರಿಗಳಿಗೆ …
Read More »ರೈಲಿಗೆ ತಲೆಕೊಟ್ಟು ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ
ಚಿಕ್ಕಮಗಳೂರು: ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೆಡಿಎಸ್ ಪಕ್ಷದಿಂದ ವಿಧಾನಪರಿಷತ್ ಸದಸ್ಯರಾಗಿದ್ದ ಅವರು ಚಿಕ್ಕಮಗಳೂರು ಜಿಲ್ಲೆ ಗುಣಸಾಗರದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇವೇಗೌಡರ ಕುಟುಂಬಕ್ಕೆ ಧರ್ಮೇಗೌಡರು ಆಪ್ತರಾಗಿದ್ದರು. ರಾತ್ರಿ 11:30 ರ ಸುಮಾರಿಗೆ ಘಟನೆ ನಡೆದಿದೆ. ರಾತ್ರಿ 10 ಗಂಟೆಗೆ ಒಬ್ಬರೇ ಮನೆಯಿಂದ ಕಾರ್ ನಲ್ಲಿ ತೆರಳಿದ್ದ ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Read More »ಜ. 1 ರಿಂದ ಶಾಲಾ ಆರಂಭಿಸುವ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದೇನು?
ಬೆಂಗಳೂರು : ಬ್ರಿಟನ್ ನ ಹೊಸ ತಳಿಯ ಕೊರೊನಾ ಸೋಂಕು ರಾಜ್ಯಕ್ಕೆ ಕಾಲಿಟ್ಟಿದೆ ಎನ್ನಲಾಗಿದ್ದು, ಕರುನಾಡಲ್ಲಿ ಆತಂಕದ ಛಾಯೆ ಮೂಡಿದೆ. ಇದರ ನಡುವೆ ರಾಜ್ಯ ಸರ್ಕಾರ ಶಾಲೆ ಆರಂಭಕ್ಕೆ ದಿನಾಂಕ ನಿಗದಿ ಮಾಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಾವು ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ, ಸುದ್ದಿಗಾರರ ಜೊತೆ ಮಾತನಾಡಿದ ಸುರೇಶ್ ಕುಮಾರ್ ನಾವು ಇನ್ನು ಡಿಸೆಂಬರ್ 22 ನೇ …
Read More »