ಕೊಪ್ಪಳ:ಆ28, ಜಿಲ್ಲೆಯ ಕುಷ್ಟಗಿ ತಹಶಿಲ್ದಾರ ಗುರುಬಸ್ಯಾನ ವಿರುದ್ಧ ನೊಂದ ಮಹಿಳೆ ದೂರು ದಾಖಲಿಸಿದ್ದಾರೆ,ಮೊನ್ನೆ ವೈರಲ್ ಆಗಿತ್ತು ಸಿಸಿಟಿವಿ ದೃಶ್ಯ,ಕಾಮುಕ ತಹಶಿಲ್ದಾರ ಗುರುಬಸ್ಯಾ ಕಛೇರಿ ಮಹಿಳಾ ಸಿಬ್ಬಂದಿಗೆ ಕಿಸ್ಸ್ ಕೊಟ್ಟ ಪ್ರಕರಣ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿವೆ. ಈ ಗುರುಬಸ್ಯಾನ ಕಾಟ ಹೇಗಿತ್ತು ಗೊತ್ತೆ..?ತನ್ನ ಕಛೇರಿಯ ಮಹಿಳಾ ಸಿಬ್ಬಂದಿಗೆ ಪ್ರತಿ ದಿನಾಲು ಪೋನ್ ಕರೆ ಮಾಡಿ ಅವಾಚ್ಯ ಶಬ್ದಗಳನ್ನು ಬಳಸಿ ಟಾರ್ಚರ್ ಕೊಡುತ್ತಿದ್ದನಂತೆ ಈ ಹಲ್ಕಟ್ ಗುರುಬಸ್ಯಾ, 2018 ಸೆಪ್ಟೆಂಬರ್ ನಲ್ಲಿ …
Read More »ಮಹಾ ಅಘಾಡಿಯಲ್ಲಿ ಕಿತ್ತಾಟ – ಶಿವಸೇನೆ ಸಂಸದ ರಾಜೀನಾಮೆ
ಮುಂಬೈ: ಮಹಾರಾಷ್ಟ್ರ ಅಭಿವೃದ್ಧಿಗೆ ರಚನೆಯಾಗಿರುವ ‘ಮಹಾ ವಿಕಾಸ್ ಅಘಾಡಿʼ ಸಮ್ಮಿಶ್ರ ಸರ್ಕಾರದ ಆಂತರಿಕ ಕಿತ್ತಾಟ ಮತ್ತಷ್ಟು ಜಾಸ್ತಿಯಾಗಿದ್ದು ಮೊದಲ ವಿಕೆಟ್ ಪತನಗೊಂಡಿದೆ. ಪರಭಾನಿ ಕ್ಷೇತ್ರದ ಶಿವಸೇನೆ ಸಂಸದ ಸಂಜಯ್ ಜಾಧವ್ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ರವಾನಿಸಿದ್ದಾರೆ. ಪರಭಾನಿ ಜಿಲ್ಲೆಯ ಜಿಂತೂರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ಸರ್ಕಾರೇತರ ಆಡಳಿತಾಧಿಕಾರಿಯನ್ನಾಗಿ ರಾಷ್ಟ್ರೀಯವಾದಿ ಕಾಂಗ್ರೆಸ್(ಎನ್‌ಸಿಪಿ) ಪಕ್ಷದ …
Read More »ಬೆಳಗಾವಿಯಲ್ಲಿ ಪ್ರತಿಮೆ ಪಾಲಿಟಿಕ್ಸ್- ರಾಯಣ್ಣ ಪ್ರತಿಮೆ ಸ್ಥಳದಲ್ಲೇ ಶಿವಾಜಿ ಪ್ರತಿಮೆ ಸ್ಥಾಪಿಸಲು ಯತ್ನ
ಬೆಳಗಾವಿ: ರಾಯಣ್ಣ ಪ್ರತಿಮೆ ವಿವಾದ ತೀವ್ರ ಸ್ವರೂಪ ಪಡೆದಿದೆ. ಬೆಳಗಾವಿಯ ಪೀರನವಾಡಿಯಲ್ಲಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಕನ್ನಡಪರ ಹೋರಾಟಗಾರರು ಮತ್ತು ರಾಯಣ್ಣನ ಅಭಿಮಾನಿಗಳು ಪೀರನವಾಡಿಗೆ ತೆರಳಿ ಪ್ರತಿಮೆ ಸ್ಥಾಪನೆ ಮಾಡಿ, ರಾಯಣ್ಣನಿಗೆ ಜೈಕಾರ ಹಾಕಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಿನ್ನೆ ರಾಯಣ್ಣ ಅಭಿಮಾನಿಗಳು ಬೆಳಗಾವಿ ಚಲೋ ಹಮ್ಮಿಕೊಂಡಿದ್ದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಿರಲಿಲ್ಲ. ನಿನ್ನೆ ಜಿಲ್ಲಾ ಉಸ್ತುವಾರಿ …
Read More »ನ್ಯಾಯಾಂಗ ನಿಂದನೆ ಪ್ರಕರಣ: ವಿಜಯ ಮಲ್ಯ ಅರ್ಜಿಯ ತೀರ್ಪು ಕಾಯ್ದಿರಿಸಿದ ಸುಪ್ರೀಂ
ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ ಮಲ್ಯ ಸಲ್ಲಿಸಿದ್ದ ಪುನರ್‌ಪರಿಶೀಲನಾ ಅರ್ಜಿ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿದೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿ ತಮ್ಮ ಮಕ್ಕಳಿಗೆ ₹295.415 ಕೋಟಿ(4ಕೋಟಿ ಡಾಲರ್) ವರ್ಗಾವಣೆ ಮಾಡಿದ ಪ್ರಕರಣದಲ್ಲಿ ವಿಜಯ ಮಲ್ಯ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು 2017ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪು ಪುನರ್ ಪರಿಶೀಲಿಸುವಂತೆ ಮಲ್ಯ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಯು.ಯು. ಲಲಿತ್ …
Read More »ಬೆಂಗಳೂರು; ಚಿಕಿತ್ಸೆ ಸಿಗದೇ ವ್ಯಕ್ತಿ ಸಾವು; ತನಿಖೆಗೆ ಹೈಕೋರ್ಟ್ ಆದೇಶ
ಬೆಂಗಳೂರು, ಆಗಸ್ಟ್ 27: ಬೆಂಗಳೂರು ನಗರದ 70 ವರ್ಷದ ವ್ಯಕ್ತಿ ಬರೆದ ಪತ್ರವನ್ನು ಪರಿಶೀಲನೆ ನಡೆಸಿದ ಕರ್ನಾಟಕ ಹೈಕೋರ್ಟ್ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ಅಳಿಯ ಸಾವನ್ನಪ್ಪಿದರು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ಅವರಿಗೆ ಬೆಂಗಳೂರಿನ ಕೋಮಲನಗರದ ನಿವಾಸಿಯೊಬ್ಬರು ಪತ್ರ ಬರೆದಿದ್ದರು. ‘ಪತ್ರದಲ್ಲಿ ಹೇಳಿರುವ ಅಂಶಗಳು ಸರಿಯಾಗಿದ್ದರೆ ಅದು ಅಘಾತಕಾರಿ ಸ್ಥಿತಿಯನ್ನು ಬಹಿರಂಗಪಡಿಸುತ್ತದೆ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. …
Read More »ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷ ಸೆ.1ರಿಂದ ಆರಂಭ
ಬೆಂಗಳೂರು ; ಸೆಪ್ಟೆಂಬರ್ 1ರಿಂದಲೇ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವನ್ನು ಆನ್ ಲೈನ್ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಆರಂಭ ಮಾಡಲಾಗುತ್ತಿದ್ದು, ಅಕ್ಟೋಬರ್ ನಿಂದ ನೇರ (ಆಫ್‌ಲೈನ್) ತರಗತಿಗಳು ಶುರುವಾಗಲಿವೆ ಎಂದು ಸಚಿವ ಡಾ ಅಶ್ವಥ್ ನಾರಾಯಣ್ ಹೇಳಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು ತರಗತಿಗಳನ್ನು ಆರಂಭಿಸುವ ಬಗ್ಗೆ ಈಗಾಗಲೇ ಯುಜಿಸಿ ಮಾರ್ಗಸೂಚಿಯಂತೆ ರಾಜ್ಯ ಸರಕಾರ ಎಲ್ಲ ರೀತಿಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೇಂದ್ರ ಸರಕಾರದ ಆದೇಶ ಬರುತ್ತಿದ್ದಂತೆಯೇ ಈ ನಿಟ್ಟಿನಲ್ಲಿ …
Read More »ಕುಷ್ಟಗಿ:ಸರ್ಕಾರಿ ಕಾರ್ಯಾಲಯದಲ್ಲಿ ಅಧಿಕಾರಿಯೊಬ್ಬ ಲವ್ವಿಡವ್ವಿ
ಕುಷ್ಟಗಿ :ತಹಶೀಲ್ದಾರ್ ಕಾರ್ಯಾಲಯದಲ್ಲಿ ಎರಡು ತಿಂಗಳು ಹಿಂದೆ ಈ ಘಟನೆ ನಡೆದಿದೆ. ಈ ಹಿಂದೆ ಕುಷ್ಟಗಿ ತಹಶೀಲ್ದಾರ್ ಆಗಿದ್ದ ಗುರುಬಸವರಾಜ್ ಕಿಸ್ಸಿಂಗ್ ವಿಡಿಯೋ ವೈರಲ್ ಆಗಿದೆ. ಗುರುಬಸವರಾಜ ತಹಶೀಲ್ದಾರ್ ಆಗಿದ್ದಾಗ ತಮ್ಮ ಸಹೋದ್ಯೋಗಿ ಕಚೇರಿಯಲ್ಲಿ ಕಿಸ್ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಮ್ಮ ಕಚೇರಿಯಲ್ಲಿ ಬಂದು ನಿಂತಿದ್ದ ಮಹಿಳಾ ಸಿಬ್ಬಂದಿಯನ್ನು ಕಿಸ್ ಮಾಡಿ ಕಚೇರಿಯ ಘನತೆಯನ್ನ ಮಣ್ಣು ಪಾಲು ಮಾಡಿದ್ದಾರೆ ಎಂದು ಕೆಲ ಸಂಘಟನೆಗಳು ಆಕ್ರೋಶ …
Read More »ಮಗುವನ್ನು ಏಕಾಂಗಿಯಾಗಿ ಬಿಟ್ಟು ಬಾಯ್ಫ್ರೆಂಡ್ ನೋಡಲು ಹೋದ ಮಹಿಳೆಗೆ ಕಾದಿತ್ತು ಶಾಕ್!
ಲಂಡನ್: ಮಗುವನ್ನು ಬಿಟ್ಟು ಜೈಲಿನಲ್ಲಿದ್ದ ತನ್ನ ಬಾಯ್ಫ್ರೆಂಡ್ ನೋಡಲು ಹೋಗಿದ್ದ ಮಹಿಳೆ ಇದೀಗ ಶಿಕ್ಷೆಗೆ ಗುರಿಯಾಗುವ ಭೀತಿಯಲ್ಲಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾಳೆ. ಕಳೆದ ವರ್ಷ ಡಿಸೆಂಬರ್ 30ರಲ್ಲಿ ಈ ಘಟನೆ ನಡೆದಿತ್ತು. ಜೈಲು ವಾಸಿಯಾಗಿದ್ದ ತನ್ನ ಬಾಯ್ಫ್ರೆಂಡ್ನನ್ನು ನೋಡಲು ಮಗುವನ್ನು ಫ್ಲ್ಯಾಟ್ನಲ್ಲೇ ಬಿಟ್ಟು ಹೋಗಿದ್ದಳು. ಈ ವೇಳೆ ಮಗು ಫ್ಲ್ಯಾಟ್ನಿಂದ ಆಚೆ ಬಂದು ಜನರಿರುವ ಪ್ರದೇಶದಲ್ಲಿ ಏಕಾಂಗಿಯಾಗಿ ತೆವಳುವುದನ್ನು ನೋಡಿ ಹೌಸಿಂಗ್ ಆಫೀಸರ್ ನೋಡಿ ಮಗುವನ್ನು ಎತ್ತಿಕೊಂಡಿದ್ದರು. ಮಹಿಳೆಯ ಹೆಸರು ಎಬ್ಟಿಸ್ಸಮ್ …
Read More »ಸ್ನೇಹಿತೆಯ ನಿಶ್ಚಿತಾರ್ಥಕ್ಕೆ ಬಂದ ಯುವತಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ಲು!
ಮೈಸೂರು: ಸ್ನೇಹಿತೆಯ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಆಕೆಯ ಮನೆಗೆ ಬಂದ ಯುವತಿ ಅಲ್ಲೇ ಉಂಡುತಿಂದು ಬಳಿಕ ಮಾಡಬಾರದ್ದನ್ನು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಆ.23ರಂದು ಕುಂಬಾರಕೊಪ್ಪಲು ನಿವಾಸಿ ರಮೇಶ್ ಅವರ ಮಗಳ ಮದುವೆ ನಿಶ್ಚಿತಾರ್ಥ ನಡೆದಿತ್ತು. ನಿಶ್ಚಿತಾರ್ಥದ ವೇಳೆ ಮಗಳು ಚಿನ್ನಾಭರಣ ಧರಿಸಿದ್ದಳು. ಕಾರ್ಯಕ್ರಮ ಮುಗಿದ ನಂತರ ಒಡವೆಗಳನ್ನು ಬಿಚ್ಚಿ ಅಲ್ಟ್ರಾದಲ್ಲಿ ಇಟ್ಟಿದ್ದಳು. ಅದೇ ದಿನ ಸಂಜೆ ಸಂಬಂಧಿಕರೆಲ್ಲ ಮನೆಯಿಂದ ಹೋದ ಮೇಲೆ ಒಡವೆಗಳು ಕಾಣೆಯಾಗಿದ್ದವು. ಮನೆಯಲ್ಲಿ ಚಿನ್ನಾಭರಣ ಕಾಣೆಯಾದ ಬಗ್ಗೆ …
Read More »“ಚೀನ ಸೋಂಕ’ನ್ನು ಹೊರಹಾಕುವ ಕಾರ್ಯ ನಡೆಯುತ್ತಿದೆ : ಡೊನಾಲ್ಡ್ ಟ್ರಂಪ್
ಟ್ರಂಪ್ ಕೋವಿಡ್ ಸಾಂಕ್ರಮಿಕ ಪಿಡುಗು ಪ್ರಾರಂಭ ವಾದಾಗಿನಿಂದಲೂ ಡ್ರ್ಯಾಗನ್ ದೇಶದ ವಿರುದ್ಧ ವಾಗ್ಧಾಳಿ ನಡೆಸುತ್ತಲ್ಲೇ ಬಂದಿದ್ದಾರೆ. ನ್ಯೂಯಾರ್ಕ್: ಕೋವಿಡ್ ಹರಡುವಿಕೆಯ ಕಾರಣಕ್ಕೆ ಅಮೆರಿಕ ಹಾಗೂ ಚೀನದ ಮಧ್ಯೆ ಶೀತಲ ಸಮರ ನಡೆಯುತ್ತಲೇ ಇದೆ. ಇದೀಗ ಮತ್ತೆ ಚೀನದ ಮೇಲೆ ಕಿಡಿಕಾರಿರುವ ಯುಎಸ್‌ಎ ಅಧ್ಯಕ್ಷ ಟ್ರಂಪ್ “ಚೀನ ಎಂಬ ವೈರಾಣುವನ್ನು ಹೊರಹಾಕುವಲ್ಲಿ ಅಮೆರಿಕದ ನಾಗರಿಕರು ಶ್ರಮಿಸಬೇಕು’ ಎಂದು ಹೇಳಿದ್ದಾರೆ. ಕೋವಿಡ್ ಸೋಂಕಿಗೆ “ಚೀನ ವೈರಸ್’ ಎಂದೇ ಕರೆಯುತ್ತಿರುವ ಟ್ರಂಪ್ ಕೋವಿಡ್ ಸಾಂಕ್ರಮಿಕ ಪಿಡುಗು …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News