Breaking News

Uncategorized

ವ್ಯಾಪಕ ಮಳೆ: ನದಿತೀರದ ಗ್ರಾಮಗಳು, ಪರಿಹಾರ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಹಿರೇಮಠ ಭೇಟಿ, ಪರಿಶೀಲನೆ

ಬೆಳಗಾವಿ, ಆ.17 : ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಲಪ್ರಭಾ ನದಿ ತೀರದ ವಿವಿಧ ಗ್ರಾಮಗಳು ಮತ್ತು ಮುಂಜಾಗ್ರತಾ ಕ್ರಮವಾಗಿ ಆರಂಭಿಸಲಾಗಿರುವ ಪರಿಹಾರ(ಕಾಳಜಿ) ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸವದತ್ತಿ ತಾಲ್ಲೂಕಿನ ನವೀಲುತೀರ್ಥ ಜಲಾಶಯಕ್ಕೆ ಮೊದಲು‌ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ನೀರಿನ ಒಳ ಹರಿವು ಮತ್ತು ಹೊರ ಹರಿವು ಪ್ರಮಾಣದ ಮಾಹಿತಿಯನ್ನು ಪಡೆದುಕೊಂಡರು. ಜಲಾಶಯದ ನೀರಿನ ಮಟ್ಟದ ಮೇಲೆ ನಿರಂತರವಾಗಿ ನಿಗಾ ವಹಿಸಬೇಕು. …

Read More »

ರಸ್ತೆ, ಗಲ್ಲಿ, ಓಣಿಯಲ್ಲಿ ಗಣಪತಿ ಪ್ರತಿಷ್ಠಾಪನೆ ನಿಷೇಧ: ಗಣೇಶೋತ್ಸವ ಆಚರಣೆಗೆ ಮಾರ್ಗಸೂಚಿ ಪ್ರಕಟ

ಧಾರವಾಡ: ಕೋವಿಡ್ -19 ಸೋಂಕು ನಿಯಂತ್ರಿಸಲು ಈ ಬಾರಿ ಆಗಸ್ಟ್ 22 ರಂದು ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣೇಶೋತ್ಸವ ಆಚರಿಸಲು ಕೇಂದ್ರ ಗೃಹ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರ ಹೊರಡಿಸಿರುವ ನಿರ್ದೇಶನಗಳ ಅನುಸಾರವಾಗಿ ಧಾರವಾಡ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿರುವ ಮಾರ್ಗಸೂಚಿಗಳನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಿಸಿದ್ದಾರೆ. ಗಣೇಶ ಚತುರ್ಥಿ ಹಬ್ಬವನ್ನು ಸರಳವಾಗಿ ಹಾಗೂ ಭಕ್ತಿಪೂರ್ವಕವಾಗಿ ದೇವಸ್ಥಾನಗಳ ಒಳಗೆ ಅಥವಾ ಮನೆಗಳಲ್ಲಿ ಆಚರಿಸುವುದು. ಗಣೇಶ ಚತುರ್ಥಿ …

Read More »

ಕೊಪ್ಪ ತಾಲ್ಲೂಕು ಅತಿವೃಷ್ಟಿಯಿಂದ ಸಂಕಷ್ಟದಲ್ಲಿದ್ದವರ ಅಳಲು ಜಿಲ್ಲಾ ಪತ್ರಕರ್ತರ ಸಂಘ ಸ್ಪಂದನೆ .

ಕೊಪ್ಪ ತಾಲ್ಲೂಕಿನ ಜಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿನಾಯಕ ನಗರದ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಗುಡ್ಡ ರಸ್ತೆ ಮೇಲೆ ಕುಸಿದು 10 ದಿನದಿಂದ ಜನರು ಸಂಕಷ್ಟದಲ್ಲಿದ್ದರು . ಸ್ಥಳೀಯರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ದೂರು ನೀಡಿದ್ದರು ಇದನ್ನು ಗಮನಿಸಿ ಚಿಕ್ಕಮಗಳೂರಿಂದ ಪ್ರಯಾಣ ಬೆಳೆಸಿದ ಜಿಲ್ಲಾ ಸಂಘದ ಪದಾಧಿಕಾರಿಗಳು ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಕೊಪ್ಪ ತಹಸೀಲ್ದಾರ್. ತಾಲೂಕು ಪಂಚಾಯಿತಿ ಇಒ ಹಾಗೂ ಪಿಡಿಒ ಗಮನಕ್ಕೆ ತರಲಾಯಿತು ಆದರೂ .ತೆರವು ಕಾರ್ಯದ ವಿಳಂಬಕ್ಕೆ …

Read More »

ಗದ್ದೆಯಲ್ಲಿ ಟಿಲ್ಲರ್ ಮೇಲೆ ಧ್ವಜ ಹಾರಿಸಿ ಸ್ವಾತಂತ್ರ್ಯ ದಿನ ಆಚರಿಸಿದ ರೈತ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ರೈತರೊಬ್ಬರು ತಮ್ಮ ಜಮೀನಿನಲ್ಲಿ ಟಿಲ್ಲರ್ ಗೆ ರಾಷ್ಟ್ರ ದ್ವಜ ಹಾಕಿಕೊಂಡು ಪೂಜೆ ನೆರವೇರಿಸಿ ದೇಶಭಿಮಾನ ಮೆರೆದಿದ್ದಾರೆ. ಶಿಕಾರಿಪುರ ಪಟ್ಟಣ ಮಂಜುನಾಥ ಜಮೀನ್ದಾರ್ ಎಂಬ ಯುವಕ‌ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಗದ್ದೆಯಲ್ಲಿ ಟಿಲ್ಲರ್ ಗೆ ರಾಷ್ಟ್ರಧ್ವಜ ಹಾಕಿ, ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿ ಗದ್ದೆಯಲ್ಲಿಯೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ಪದವೀಧರನಾಗಿರುವ ಈ ಯುವಕ, 30 ಎಕರೆ ಜಮೀನಿನಲ್ಲಿ ಉಳುಮೆ‌ ಕೈಗೊಂಡಿದ್ದಾರೆ. “ಕೃಷಿ ದೇಶದ …

Read More »

13 ವರ್ಷದ ಬಾಲಕಿಯ ಅತ್ಯಾಚಾರ ಮಾಡಿ, ಕಣ್ಣು ಕಿತ್ತು, ನಾಲಿಗೆ ಕತ್ತರಿಸಿದ ದುರುಳರು

ಲಕ್ನೋ: 13 ವರ್ಷದ ಬಾಲಕಿಯೊಬ್ಬಳನ್ನು ಅತ್ಯಾಚಾರ ಮಾಡಿ, ಆಕೆಯ ಕಣ್ಣು ಕಿತ್ತು ನಾಲಗೆ ಕತ್ತರಿಸಿ ವಿಕೃತವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಲಖೀಂ ಪುರದಲ್ಲಿ ನಡೆದಿದೆ. ಈ ಭೀಕರ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಪಟ್ಟಣದ ಹೊರ ವಲಯದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಯಾರೂ ನೋಡಲಾರದ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿ ಶುಕ್ರವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದಳು. ಪೋಷಕರು ಬಾಲಕಿಗಾಗಿ ಎಲ್ಲಡೆ ಹುಡುಕಾಟ ನಡೆಸಿದ್ದಾರೆ. ಆದರೆ ಶನಿವಾರ ಆಕೆಯ ಮೃತದೇಹ ಊರಾಚೆಗಿನ …

Read More »

ಹಿರಿಯ ಧುರೀಣ ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್ ನಿಧನ

ಮಂಗಳೂರು : ಶೈಕ್ಷಣಿಕ ಕ್ಷೇತ್ರದ ಅದ್ವಿತೀಯ ಸಾಧಕ, ಹಿರಿಯ ಉದ್ಯಮಿ, ಸಮಾಜ ಸೇವಕ, ಸಮುದಾಯದ ಹಿರಿಯ ನಾಯಕ, ಪ್ರತಿಷ್ಠಿತ ಬಿ.ಎ. ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್ (89) ಅವರು ರವಿವಾರ ಪೂರ್ವಾಹ್ನ 11.30ಕ್ಕೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅಹ್ಮದ್ ಹಾಜಿ ಅವರ ಪಾರ್ಥಿವ ಶರೀರವನ್ನು ಅಪರಾಹ್ನ 3 ಗಂಟೆಗೆ ತುಂಬೆಯಲ್ಲಿರುವ ತುಂಬೆ ಪಿಯು ಕಾಲೇಜಿನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಡಲಾಗುವುದು. 4 …

Read More »

ನಿವೃತ್ತಿ ಘೋಷಿಸಿದ ಧೋನಿ: ಭಾವುಕರಾದ ಕೊಹ್ಲಿ

ಕೂಲ್ ಕ್ಯಾಪ್ಟನ್ ಎಂದೇ ಹೆಸರಾಗಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಧೋನಿ ನಿವೃತ್ತಿ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾವುಕರಾಗಿದ್ದಾರೆ. ಮಾಜಿ ನಾಯಕ ಧೋನಿ ಮಾಡಿದ ಕೆಲಸ ಅಚ್ಚಳಿಯದೆ ಉಳಿಯುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ. ಇನ್ಸ್ಟ್ರಾಗ್ರಾಮ್ ನಲ್ಲಿ ಪ್ರತಿಕ್ರಿಯೆ ನೀಡಿದ ಕೊಹ್ಲಿ, ಧೋನಿ ಕೆಲಸವನ್ನು ಹೊಗಳಿದ್ದಾರೆ. ಹಾಗೆ ಧೋನಿಯನ್ನು ಎಂದೂ ಮರೆಯಲು ಸಾಧ್ಯವಿಲ್ಲವೆಂದಿದ್ದಾರೆ. ಪ್ರತಿಯೊಬ್ಬ …

Read More »

ಬಾದಾಮಿ ಕ್ಷೇತ್ರ ಮುಳುಗಡೆ ಭೀತಿ.

ಉತ್ತರ ಕರ್ನಾಟಕದ ಕೆಲವು ಕಡೆ ಭಾರಿ ಮಳೆಯಿಂದ ಮಲಪ್ರಭಾ ನದಿ ತಟದಲ್ಲಿ ನೆರೆಯ ಭೀತಿ ಸೃಷ್ಟಿಯಾಗಿದೆ. ನದಿ ತಟದಲ್ಲಿ ಬರುವ ರಾಮದುರ್ಗಾ, ಬಾದಾಮಿ ಹಾಗೂ ಹುನುಗಂದ ತಾಲೂಕಿನ ಹಲವು ಗ್ರಾಮಗಳಲ್ಲಿ ಮಳೆ ಇಲ್ಲದಿದ್ದರೂ ನೆರೆಯ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬಾದಾಮಿ ಕ್ಷೇತ್ರದ ಶಾಸಕರು ಆಗಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಿಲ್ಲಾಡಳಿತಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆಯನ್ನು ನೀಡಿದ್ದಾರೆ. ಈ ಬಗ್ಗೆ ಟ್ವೀಟರ್​ನಲ್ಲಿ ತಿಳಿಸಿರುವ ಸಿದ್ದರಾಮಯ್ಯ ಬಾದಾಮಿ ವಿಧಾನಸಭಾ …

Read More »

ವಿಮಾನ ಪ್ರಯಾಣದ ವೇಳೆ ಜನಿಸಿದ ಮಗುವಿನ ಹೆಸರೇನು ಗೊತ್ತಾ.?

ಅಲಾಸ್ಕಾದ ಮಹಿಳೆ ಕ್ರಿಸ್ಟಲ್ ಹಿಕ್ಸ್‌ ಎಂಬಾಕೆಗೆ 18,000 ಅಡಿ ಎತ್ತರದಲ್ಲಿ ವಿಮಾನದಲ್ಲಿ ಹಾರಾಟ ಮಾಡುತ್ತಿದ್ದ ವೇಳೆ ಹೆರಿಗೆಯಾಗಿದ್ದು, ತನ್ನ ಮಗನಿಗೆ ‘ಸ್ಕೈ’ ಎಂದೇ ಹೆಸರಿಟ್ಟಿದ್ದಾರೆ. ತುಂಬು ಗರ್ಭಿಣಿಯಾಗಿದ್ದ ಹಿಕ್ಸ್‌ರನ್ನು ಡೆಲಿವರಿಗೆಂದು ಆಂಕರೇಜ್‌ಗೆ ವಿಮಾನದಲ್ಲಿ ಹೊತ್ತೊಯ್ಯುತ್ತಿದ್ದ ಸಂದರ್ಭದಲ್ಲಿ ಮಾರ್ಗಮಧ್ಯದಲ್ಲೇ ಹೆರಿಗೆಯಾಗಿದೆ. ವಿಮಾನವನ್ನೇರಿದ ಒಂದು ಗಂಟೆ ಅವಧಿಯೊಳಗೇ ಮಗುವಿಗೆ ಜನ್ಮವಿತ್ತಿದ್ದಾರೆ ಹಿಕ್ಸ್‌. ಆಗಸ್ಟ್‌ 5ರಂದು ಬೆಳಗ್ಗಿನ ಜಾವ 1 ಗಂಟೆಗೆ ಜನ್ಮವಿತ್ತ ಈ ಮಗುವಿಗೆ ‘ಸ್ಕೈ ಐರಾನ್ ಹಿಕ್ಸ್‌’ ಎಂದು ಹೆಸರಿಡಲಾಗಿದೆ. ಮಗುವಿನ …

Read More »

74ನೇ ಸ್ವಾತಂತ್ರೋತ್ಸವದ‌ ಧ್ವಜಾರೋಹಣ ನೇರವೇರಿಸಿದ ಡಿಸಿಎಂ ಗೋವಿಂದ‌ ಕಾರಜೋಳ

ಬಾಗಲಕೋಟೆ: ಇಲ್ಲಿನ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 74ನೇ ಸ್ವಾತಂತ್ರೋತ್ಸವದ‌ ಧ್ವಜಾರೋಹಣವನ್ನು ಶನಿವಾರ ಉಪ ಮುಖ್ಯಮಂತ್ರಿ ಗೋವಿಂದ‌ ಕಾರಜೋಳ ನೆರವೇರಿಸಿದರು. ಕೋವಿಡ್ ಸಂಕಷ್ಟದ ಕಾರಣ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕರ ಸಹಭಾಗಿತ್ವ ಇಲ್ಲದೇ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯಿತು. ಖಾಲಿ ಕ್ರೀಡಾಂಗಣದಲ್ಲಿ ಸಮಾರಂಭ ನಡೆಯಿತು. ಸ್ವಾತಂತ್ರ್ಯೋತ್ಸವದ ನಿಮಿತ್ತ ಈ ಬಾರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರ ಬದಲಿಗೆ 40 ಮಂದಿ ಕೊರೊನಾ ವಾರಿಯರ್ಸ್‌ ಗಳನ್ನು ಗೌರವಿಸಲಾಯಿತು. ಇವರಲ್ಲಿ ಆರೋಗ್ಯ ಇಲಾಖೆಯ …

Read More »