Breaking News
ಅಟಲ್ ಜಿ ಅಚರ ಜನ್ಮ   ದಿನವನ್ನು ಉತ್ತಮ ಆಡಳಿತ ದಿನವಾಗಿ ಆಚರಿಸುತ್ತಿದ್ದೇವೆ!   ಲಕ್ಷ್ಮಣ್ ಅಡಿಹುಡಿ ಅಭಿಮತ

ಅಟಲ್ ಜಿ ಅಚರ ಜನ್ಮ ದಿನವನ್ನು ಉತ್ತಮ ಆಡಳಿತ ದಿನವಾಗಿ ಆಚರಿಸುತ್ತಿದ್ದೇವೆ! ಲಕ್ಷ್ಮಣ್ ಅಡಿಹುಡಿ ಅಭಿಮತ

ಮೂಡಲಗಿ : ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರು ದೇಶಕ್ಕೆ ನೀಡಿದಂತ ಉತ್ತಮ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳು ಅಪಾರವಾಗಿದ್ದು, ಅವರ ಜನ್ಮದಿನವನ್ನು ಉತ್ತಮ ಆಡಳಿತ ದಿನವಾಗಿ ಆಚರಿಸುತ್ತಿದ್ದೇವೆ ಎಂದು ಮಂಜುನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲಕ್ಷ್ಮಣ್ ಅಡಿಹುಡಿ ಹೇಳಿದರು.

ಮೂಡಲಗಿ ಪಟ್ಟಣದ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಸಭಾ ಭವನದಲ್ಲಿ ಭಾರತ ಸರ್ಕಾರದ ಮೈ ಭಾರತ ಕೇಂದ್ರ ಬೆಳಗಾವಿ ಹಾಗೂ ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘ ಮೂಡಲಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಅಂಗವಾಗಿ ಉತ್ತಮ ಆಡಳಿತ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಹೆಸರು ಅಜರಾಮರ ಎಂದು ಬಣ್ಣಿಸಿದರು. ಬಿಜೆಪಿ ಅರಬಾವಿ ಮಂಡಲದ ಅಧ್ಯಕ್ಷರಾದ ಮಹಾದೇವ ಶೇಕ್ಕಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ ರಾಜ್ಯಶಾಸ್ತ್ರದಲ್ಲಿ ಎಂಎ ಪದವಿ ಗಳಿಸಿದ್ದ ಅಟಲ್ ಬಿಹಾರಿ ವಾಜಪೇಯಿಯವರು, ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯರಾಗಿ ಕಾರ್ಯ ನಿರ್ವಹಿಸಿ ನಂತರ ಭಾರತೀಯ ಜನತಾ ಪಕ್ಷದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದರು. ಅವರ ಜೀವನದ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವು ನಡೆಯುತ್ತಿರುವ ಕ್ಷೇತ್ರದ ಮೂಲಕ ಸಮಾಜ ಸೇವೆ ಸಲ್ಲಿಸಬೇಕೆಂದರು.

ಮೂಡಲಗಿ ಗವಿತೋಟ ಶಾಲೆಯ ಶಿಕ್ಷಕರಾದ ಸಂತೋಷ್ ಪಾಟೀಲ ಮಾತನಾಡಿ ಪೊಖ್ರಾನ್ ಅಣು ಪರೀಕ್ಷೆ ನಡೆಸುವುದರ ಮೂಲಕ ಭಾರತ ದೇಶವನ್ನು ಪರಮಾಣು ಶಕ್ತಿ ಹೊಂದಿದ ರಾಷ್ಟ್ರವಾನ್ನಾಗಿ ಮಾಡಿ, ಅಮೆರಿಕದಂತ ಬಲಾಢ್ಯ ರಾಷ್ಟ್ರಗಳು ಭಾರತ ದೇಶದತ್ತ ತಿರುಗಿ ನೋಡುವಂತಾಗಿ ಮಾಡಿದ ಕೀರ್ತಿ ಭಾರತ ರತ್ನ ಪುರಸ್ಕೃತ ಅಟಲ್ ಜೀಯವರಿಗೆ ಸಲ್ಲುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಆಡಳಿತ ಅಧಿಕಾರಿ ಮಹಾಂತೇಶ ಕೋಟವಾಗಿ, ಪಾಂಡುರಂಗ ಮಹೇಂದ್ರಕರ್, ಸಾಹಿತ್ಯ ರತ್ನ ಮಹಾರಾಜ್ ಸಿದ್ದು ಹಳ್ಳೂರ, ಚಂದ್ರಶೇಖರ ಪತ್ತಾರ, ಮಂಜುನಾಥ್ ರೇಳೆಕರ ಹಾಗೂ ಕಾರ್ಯಕರ್ತರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಸುಭಾಸ ಗೊಡ್ಯಾಗೋಳ ನಿರೂಪಿಸಿ, ವಂದಿಸಿದರು.

About vijay_shankar

Check Also

ಶೂಲೀಭಾವಿ ಗ್ರಾಮದಲ್ಲಿ ಶ್ರೀ ಬನಶಂಕರಿ ದೇವಿಯ ೫೧ ನೇ ವರ್ಷದ ಸುವರ್ಣ ಸಂಭ್ರಮ ಜಾತ್ರಾ ಮಹೋತ್ಸ ಜನೇವರಿ:೨೭ ರಿಂದ ಆರಂಭ

ಅಮೀನಗಡ : ರಾಜ್ಯದಲ್ಲಿಯೇ ಸೂಳೇಭಾವಿ ಗ್ರಾಮ ಭಾವೈಕ್ಯತೆಗೆ ಮಾದರಿಯಾದ ಗ್ರಾಮ ಎಂದರೆ ತಪ್ಪಾಗಲಾರದು, ನಮ್ಮ ಪೂರ್ವಜರು ಹಾಕಿ ಕೊಟ್ಟ ಈ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.