Breaking News
ಅಮೀನಗಡ  ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಾನಂದ ಕಟ್ಟಿಮನಿ ಅವರಿಗೆ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಯುಕ್ತ ಅಭಿನಂದನ ಕಾರ್ಯಕ್ರಮ

ಅಮೀನಗಡ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಾನಂದ ಕಟ್ಟಿಮನಿ ಅವರಿಗೆ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಯುಕ್ತ ಅಭಿನಂದನ ಕಾರ್ಯಕ್ರಮ

ಅಮೀನಗಡ : ಇಂದು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಜ ಯುವ ಸಂಘಗಳ ಒಕ್ಕೂಟ ವಿಜಯಪುರ ಹಾಗೂ ಮುದ್ದೇಬಿಹಾಳ ಘಟಕದಿಂದ ಸ್ವಾಮಿ ವಿವೇಕಾನಂದವರ 1963 ನೇ ಜಯಂತೋತ್ಸವವನ್ನು ಡಿಸೆಂಬರ 31 ರಂದು ಆರ್ಚರಣೆ ಮಾಡಲಾಯಿತು . ಇದರ ಪ್ರಯುಕ್ತ ರಾಜ್ಯ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಸ್ವಾಮಿ ವಿವೇಕಾನಂದ ಅವರ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಸಾಧನೆಗೈತ ವಿವಿಧ ರಾಜ್ಯಮಟ್ಟದ ಪ್ರಶಸ್ತಿಯನ್ನು ಕೂಡ ನೀಡಲಾಯಿತು ಇಂದು ಅಮೀನಗಡ ನಗರದ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ಶ್ರೀ ಶಿವಕುಮಾರ್ ಎಂ ಕಟ್ಟಿಮನಿ ರವರಿಗೆ ಸ್ವಾಮಿ ವಿವೇಕಾನಂದ ಅವರ ಸದ್ಭಾವನ ರಾಜ್ಯ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ್ ಬಿಸಿಲದಿನ್ನಿ ಅವರು ಕಟ್ಟಿಮನಿಯವರು ನಗರದಲ್ಲಿ ಉತ್ತಮ ಸಾರ್ವಜನಿಕ ಕೆಲಸಗಳನ್ನು ಮಾಡುತ್ತಾ ತಮ್ಮಣ್ಣ ತಾವು ಗುರುತಿಸಿಕೊಂಡವರು ಅಲ್ಲದೆ ಹುನಗುಂದ ತಾಲೂಕನ್ನು ಕರ್ನಾಟಕದಲ್ಲಿಯೇ ನಂಬರ್ ಒನ್ ಸ್ಥಾನದಲ್ಲಿ ತಂದು ನಿಲ್ಲಿಸಿದ್ದಾರೆ ಇಂತಹ ಉತ್ತಮ ಕರ್ತವ್ಯ ನಿರ್ವಹಿಸುತ್ತಿರುವ ಶಿವಕುಮಾರ್ ಅವರಿಗೆ ಸ್ವಾಮೀ ವಿವೇಕಾನಂದ ಅವರ ಸದ್ಭಾವನ ರಾಜ್ಯಪ್ರಶಸ್ತಿಯನ್ನು ನೀಡಿದ್ದು ಶ್ಲಾಘನೀಯ ಅಮಿನಗಡ ನಗರದ ಜನತೆ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಎಂದರು. ಈ ಸರಳ ಅಭಿನಂದನ ಸಮಾರಂಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ತುಕಾರಾಂ ಪವರ್ ಹಾಗೂ ಅಂಬರೀಶ್ ಮಡ್ಡಿಕಟ್ಟಿ ಮಾತನಾಡಿ ನಗರದಲ್ಲಿ ಅತ್ಯುತ್ತಮವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ ಪ್ರಾಮಾಣಿಕ ಸೇವೆಯನ್ನು ಮಾಡುತ್ತಿರುವ ಕಟ್ಟಿಮನಿಯವರಿಗೆ ಈ ಸದ್ಭಾವನ ಪ್ರಶಸ್ತಿ ಸಿಕ್ಕಿದ್ದು ಶ್ಲಾಘನೀಯ

ನಮ್ಮ ಪಕ್ಷದ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಶುಭ ಕೋರಿದರು ಮತ್ತು ನಗರದ ನಾಡ ಕಾರ್ಯಾಲಯದ ಉಪಸಹಸೀಲ್ದರಾದ ಶ್ರೀ ಮೋಹನ್ ಹೆಬ್ಬಳ್ಳಿ ಅವರು ಹಾಗೂ ಈ ಸಂಘದ

ಜಿಲ್ಲಾಧ್ಯಕ್ಷರಾದ ಪುಂಡಲೀಕ ಮುರಾಳ ಹಾಗೂ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಡಿ ಬಿ ವಿಜಯಶಂಕರ್ ಹಾಗೂ ಕಿರಣ್ ಕಾಳಗಿ ಮತ್ತು ಭೀಮಸಿಂಗ್ ರಾಥೋಡ್ ಹಾಗೂ ನಾರಾಯಸಾ ಕಂಚಿ ಉಪಸ್ಥಿತರಿದ್ದರು

ವರದಿ: ಕಿರಣ್ ಎಂ ಕಾಳಗಿ

About vijay_shankar

Check Also

ಕೈಯಲ್ಲಿ ಲಾಠಿ,ಬಾಯಲ್ಲಿ ಬಸವಣ್ಣ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ  ನಡೆಗೆ ಬೇಸರ ವ್ಯಕ್ತ ಪಡಿಸಿದ                 ನಿಂಗಪ್ಪ ಪಿರೋಜಿ !

ಕೈಯಲ್ಲಿ ಲಾಠಿ,ಬಾಯಲ್ಲಿ ಬಸವಣ್ಣ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನಡೆಗೆ ಬೇಸರ ವ್ಯಕ್ತ ಪಡಿಸಿದ ನಿಂಗಪ್ಪ ಪಿರೋಜಿ !

ಮೂಡಲಗಿ: ಇದೆ ಡಿ,೩೦-ಪಂಚಮಸಾಲಿ ಸಮಾಜದ ಮೇಲೆ ಲಾಠಿ ನಡೆಸಿದ, ಕೈಯಿಂದಲೇವಿಜಯಪುರದಲ್ಲಿ ರಾಣಿ ಚೆನ್ನಮ್ಮಳ ಪುತ್ತಳಿ ಅನಾವರಣ ಮಾಡುತ್ತಿರೋದುಗೌರವವಲ್ಲ, ಶುದ್ಧ ದ್ವಂದ್ವ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.